ಒಕಿ100 ಎಲೆಕ್ಟ್ರಿಕ್ ಬೈಕ್ ಟೀಸರ್ ಚಿತ್ರ ಬಿಡುಗಡೆ ಮಾಡಿದ ಒಕಿನಾವ
ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿರುವ ಒಕಿನಾವ ಕಂಪನಿಯು 2021ರಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಒಕಿ100 ಇವಿ ಬೈಕ್ ಸೇರಿದಂತೆ ಒಟ್ಟು ನಾಲ್ಕು ಹೊಸ ಇವಿ ವಾಹನಗಳನ್ನು ರಸ್ತೆಗಿಳಿಸುತ್ತಿದೆ.

ಒಕಿನಾವ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ವಿವಿಧ ಬ್ಯಾಟರಿ ರೇಂಜ್‌ವುಳ್ಳ ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ ಮತ್ತು ಐ-ಪ್ರೈಸ್ ಪ್ರೊ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಭವಿಷ್ಯ ಯೋಜನೆಗಳಲ್ಲಿ ಒಕಿ100 ಇವಿ ಮೋಟಾರ್‌ಸೈಕಲ್ ಸೇರಿದಂತೆ ಒಂದು ಮ್ಯಾಕ್ಸಿ ಸ್ಕೂಟರ್ ಮತ್ತು ಎರಡು ಹೈ ಸ್ಪೀಡ್ ಎಲೆಕ್ಟ್ರಿಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ವಾಹನಗಳ ಪೈಕಿ ಶೀಘ್ರದಲ್ಲಲೇ ಒಕಿ100 ಮಾದರಿಯು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಕಂಪನಿಯು ಹೊಸ ಇವಿ ಬೈಕಿನ ಮೊದಲ ಟೀಸರ್ ಚಿತ್ರವನ್ನು ಪ್ರಕಟಿಸುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಒಕಿ100 ಇವಿ ಬೈಕಿನ ಟೀಸರ್ ಹೊರತುಪಡಿಸಿ ಯಾವುದೇ ತಾಂತ್ರಿಕ ಅಂಶಗಳನ್ನು ಹಂಚಿಕೊಳ್ಳದ ಒಕಿನಾವ ಕಂಪನಿಯು ಬಜೆಟ್ ಬೆಲೆಯಲ್ಲಿ ಉತ್ತಮ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆಯ ಸುಳಿವು ನೀಡಿದ್ದು, 125 ಸಿಸಿ ಸಾಮರ್ಥ್ಯದ ಸಾಮಾನ್ಯ ಬೈಕ್‌ಗಳಿಗೆ ಸಮನಾಗಿರುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಮಾದರಿಗೆ ಪೈಪೋಟಿ ನೀಡಲಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ಬ್ಯಾಟರಿ ರೇಂಜ್ ಆಧಾರದ ಮೇಲೆ 120ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ ಎನ್ನಲಾಗಿದ್ದು, ಹೊಸ ಬೈಕ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ.1 ಲಕ್ಷದಿಂದ ರೂ.1.20 ಲಕ್ಷ ಬೆಲೆ ಅಂತರದೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ಒಕಿನಾವ ಕಂಪನಿಯು ಇಂಧನ ಚಾಲಿತ ವಾಹನಗಳಿಂದ ಇವಿ ವಾಹನಗಳತ್ತ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ವಾಹನಗಳ ಉತ್ಪಾದನೆಗಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಜೊತೆಗೆ ಹೊಸ ಇವಿ ಬೈಕ್ ಮಾದರಿಯನ್ನು ಸ್ಥಳೀಯವಾಗಿ ಅಭಿವೃದ್ದಿ ಹೊಂದಿರುವ ಗರಿಷ್ಠ ಬಿಡಿಭಾಗಗಳನ್ನು ಪಡೆದುಕೊಂಡಿರುವುದು ಸಹ ಉತ್ತಮ ಬೆಲೆ ನಿರ್ಧಾರಕ್ಕೆ ಸಹಕಾರಿಯಾಗಲಿದ್ದು, ಮುಂಬರುವ ಯುಗಾದಿ ಹೊತ್ತಿಗೆ ಹೊಸ ಇವಿ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇನ್ನು ಹೊಸ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಒಕಿನಾವ ಕಂಪನಿಯು ಹೊಸ ವಾಹನಗಳ ಜೊತೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳನ್ನು ಸಹ ಉನ್ನತೀಕರಿಸು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹೊಸ ಉತ್ಪನ್ನ ಬಿಡುಗಡೆ ಯೋಜನೆಗೆ ಪೂರಕವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿರುವ ಒಕಿನಾವ ಕಂಪನಿಯು ರಾಜಸ್ತಾನದಲ್ಲೇ ಎರಡನೇ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಘಟಕದ ನಿರ್ಮಾಣಕ್ಕಾಗಿ ಬರೋಬ್ಬರಿ ರೂ. 150 ಕೋಟಿ ಹೂಡಿಕೆ ಮಾಡುತ್ತಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಒಕಿನಾವ ಕಂಪನಿಯ ಹೊಸ ಯೋಜನೆಗಾಗಿ ಪ್ರಮುಖ ಕಂಪನಿಗಳು ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಆಸಕ್ತಿ ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಒಕಿನಾವ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.


Click it and Unblock the Notifications