ಭಾರತದಲ್ಲಿ ವಿಶ್ವದ ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಆಟೋ ಉತ್ಪಾದನಾ ಕ್ಷೇತ್ರಕ್ಕೆ ಅಧಿಕೃತವಾಗಿ ಪ್ರವೇಶಿಸಿರುವ ಕ್ಯಾಬ್ ಸೇವಾ ಕಂಪನಿ ಓಲಾ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆದಲ್ಲೂ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಭಾರತದಲ್ಲಿ ವಿಶ್ವದ ಅತಿ ದೊಡ್ಡ ಇವಿ ವಾಹನಗಳ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ.

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

2022ರ ವೇಳೆಗೆ ಮೊದಲ ಹಂತವಾಗಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವ ಓಲಾ ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿ ಹೊಸ ವಾಹನ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿದ್ದು, ಹೊಸ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡುವುದರ ಜೊತೆಗೆ ಮೊದಲ ಹಂತದ ನಿರ್ಮಾಣದ ಪ್ರಕ್ರಿಯೆಗಳನ್ನು ಆರಂಭಿಸಿದೆ.

ಹೊಸ ಯೋಜನೆಗಾಗಿ ನೇದರ್ಲ್ಯಾಂಡ್ ಮೂಲದ ಎಟರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯೊಂದಿಗೆ ಜೊತೆಗೂಡಿಸಿರುವ ಓಲಾ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಹೊಸ ಇವಿ ವಾಹನಗಳನ್ನು ರಫ್ತು ಮಾಡಲಿದೆ.

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಹೊಸ ವಾಹನ ಉತ್ಪಾದನಾ ಘಟಕವನ್ನು ಓಲಾ ಕಂಪನಿಯು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಮೂಲಕ ಹೊಸ ಘಟಕವು ದೇಶದ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಗಳಲ್ಲಿ ಒಂದಾಗಲಿದೆ.

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಿಗಳೊಂದಿಗೆ ವಿವಿಧ ಕಾರ್ಯಗಳಿಗಾಗಿ ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲು ನಿರ್ಧರಿಸಲಾಗುತ್ತಿದ್ದು, 500 ಏಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ಮಾಣದ ಗುರಿಹೊಂದಲಾಗಿದೆ.

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಆರಂಭಿಕವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾತ್ರ ನಿರ್ಮಾಣ ಮಾಡಲಿರುವ ಓಲಾ ಮತ್ತು ಎಟರ್ಗೋ ಕಂಪನಿಯು ಉತ್ಪಾದನಾ ಘಟಕದ ವಿಸ್ತರಣೆಯೊಂದಿಗೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಸಹ ಉತ್ಪಾದನೆ ಮಾಡುವ ಯೋಜನೆ ಹೊಂದಿದ್ದು, ಹೊಸ ಯೋಜನೆಯಿಂದ ಸುಮಾರು 10 ಸಾವಿರ ಉದ್ಯೋಗಗಳು ಸೃಷ್ಠಿಯಾಗಲಿವೆ ಎನ್ನಲಾಗಿದೆ. ಹೊಸ ಯೋಜನೆಗಾಗಿ ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡುತ್ತಿರುವ ಓಲಾ ಕಂಪನಿಯು ಗ್ರಾಹಕರ ಬೇಡಿಕೆ ಹಲವು ಹೊಸ ಇವಿ ವಾಹನಗಳನ್ನು ಅಭಿವೃದ್ದಿಪಡಿಸಲಿದೆ.

ಹೊಸ ವಾಹನಗಳ ಅಭಿವೃದ್ದಿಗಾಗಿ ಎಟರ್ಗೋ ಕೈ ಜೋಡಿಸಿರುವ ಓಲಾ ಕಂಪನಿಯು ರೋಬೋಟ್‌ ತಂತ್ರಜ್ಞಾನ ನಿರ್ವಹಣೆಯನ್ನು ಸೀಮನ್ಸ್ ಕಂಪನಿಗೆ ಉಸ್ತುವಾರಿ ವಹಿಸಿದ್ದು, ಮಾರುಕಟ್ಟೆ ಮತ್ತು ಮಾರಾಟ ವಿಭಾಗವನ್ನು ಓಲಾ ನಿರ್ವಹಿಸಲಿದೆ.

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಇವಿ ವಾಹನ ಉತ್ಪಾದನಾ ಘಟಕದೊಂದಿಗೆ ಓಲಾ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಪ್ರವೇಶ ಪಡೆಯಲಿದ್ದು, ಓಲಾ ಕಂಪನಿಯು ಘಟಕದಲ್ಲಿ ಉತ್ಪಾದಿಸುವ ಸ್ಕೂಟರ್‌ಗಳನ್ನು ಭಾರತದಲ್ಲಿ ಮಾತ್ರವಲ್ಲದೇ ಯುರೋಪ್, ಇಂಗ್ಲೆಂಡ್, ಲ್ಯಾಟಿನ್ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡುವ ಯೋಜನೆಯಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಇನ್ನು ಓಲಾ ಜೊತೆಗೂಡಿರುವ ಎಟರ್ಗೋ ಕಂಪನಿಯು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯೊಂದಿಗೆ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಆ್ಯಪ್‌ ಸ್ಕೂಟರ್ ಮಾದರಿಯನ್ನೇ ಓಲಾ ಕಂಪನಿಯು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಭಾರತದಲ್ಲೂ ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಎಟರ್ಗೋ ಆ್ಯಪ್‌ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ತೆಗೆದು ಹಾಕಬಹುದಾದ ಬ್ಯಾಟರಿ ಸೌಲಭ್ಯದೊಂದಿಗೆ ಕೇವಲ 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅತಿದೊಡ್ದ ಇವಿ ವಾಹನ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಓಲಾ

ಜೊತೆಗೆ ಸಿಟಿ ರೈಡಿಂಗ್‌ಗಾಗಿ ಅತ್ಯುತ್ತಮ ವಿನ್ಯಾಸ ಪಡೆದುಕೊಂಡಿರುವ ಎಟರ್ಗೋ ಆ್ಯಪ್‌ಸ್ಕೂಟರ್ ಮಾದರಿಯು ಕನೆಕ್ಟೆಡ್ ಫೀಚರ್ಸ್‌ನೊಂದಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ಪ್ರತಿ ಗಂಟೆಗೆ 45 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಅತ್ಯುತ್ತಮ ರೈಡಿಂಗ್ ಅನುಭವ ಒದಗಿಸಲಿದೆ. ಇದೇ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನೇ ಇದೀಗ ಓಲಾ ಕಂಪನಿಯು ಸಹಭಾಗೀತ್ವದ ಯೋಜನೆ ಅಡಿ ಭಾರತದಲ್ಲೇ ನಿರ್ಮಾಣ ಮಾಡಿ ಮಾರಾಟ ಮಾಡಲಿದ್ದು, ಮಾಹಿತಿಗಳ ಪ್ರಕಾರ ಓಲಾ ಹೊಸ ಸ್ಕೂಟರ್ ಮಾದರಿಯು ಈ ವರ್ಷದ ಕೊನೆಯಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ.

More from DriveSpark

Article Published On: Friday, February 26, 2021, 15:40 [IST]
English summary
Ola Electric Scooter Manufacturing Plant Construction Starts. Read in Kannada.
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+