ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಜನಪ್ರಿಯ ಕ್ಯಾಬ್ ಕಂಪನಿಯಾದ Ola ಕಳೆದ ವರ್ಷ ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮಕ್ಕೆ ಕಾಲಿಟ್ಟಿತ್ತು. Ola ಎಲೆಕ್ಟ್ರಿಕ್ ಕಂಪನಿಯು ತನ್ನ S 1 ಹಾಗೂ S 1 Pro ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅನ್ನು ಆಗಸ್ಟ್ 15 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಗಳನ್ನು ಆರಂಭಿಸಿತ್ತು.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಸೆಪ್ಟೆಂಬರ್ 8 ರಿಂದ ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಲಭ್ಯವಿರಲಿದೆ. ಈ ಸ್ಕೂಟರ್‌ಗಳನ್ನು ಬುಕ್ ಮಾಡುವಾಗ, ಗ್ರಾಹಕರು ಸ್ಕೂಟರ್‌ನ ಬಣ್ಣ ಹಾಗೂ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಸಾಲ ಅಥವಾ ಮುಂಗಡ ಪಾವತಿಯನ್ನು ಆಯ್ಕೆ ಮಾಡಿಕೊಂಡು ವಿತರಣಾ ದಿನಾಂಕವನ್ನು ಪಡೆಯಬೇಕು.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ಮಾತನಾಡಿ, ಈ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯನ್ನು ಹೋಮ್ ಡೆಲಿವರಿ ಆಧಾರದ ಮೇಲೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದರು. Ola S 1 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸೆಪ್ಟೆಂಬರ್ 8 ರಂದು ಈ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಿದ ಗ್ರಾಹಕರಿಗಾಗಿ ಆರಂಭಿಸಲಾಗುವುದು.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಮೊದಲು ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಆದ್ಯತೆ ನೀಡಲಾಗುವುದು. ಅವರಿಗೆ ಮೊದಲು ಸ್ಕೂಟರ್ ಅನ್ನು ತಲುಪಿಸಲಾಗುತ್ತದೆ. ಸ್ಟಾಕ್ ಮುಗಿಯುವವರೆಗೆ ಮಾತ್ರ ಈ ಮಾರಾಟವು ತೆರೆದಿರುತ್ತದೆ. ಕಂಪನಿಯ ವೆಬ್‌ಸೈಟ್‌ನಲ್ಲಿ Ola ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬ್ಯಾಚ್‌ಗಳಲ್ಲಿ ಮಾರಾಟ ಮಾಡಲಾಗುವುದು. ನಿಗದಿತ ದಿನಾಂಕಗಳ ಆಧಾರದ ಮೇಲೆ ಗ್ರಾಹಕರಿಗೆ ಸ್ಕೂಟರ್ ಗಳನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಸ್ಕೂಟರಿನ ಟೆಸ್ಟ್ ಡ್ರೈವ್ ಅನ್ನು ಅಕ್ಟೋಬರ್ ತಿಂಗಳಿನಿಂದ ಆರಂಭಿಸಲಾಗುವುದು ಎಂದು Ola ಕಂಪನಿಯು ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಸ್ಕೂಟರ್ ಅನ್ನು ವಿತರಿಸುವ ಮೊದಲು ಬುಕ್ಕಿಂಗ್ ಅನ್ನು ರದ್ದುಗೊಳಿಸಬಹುದು. Ola ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯು ತನ್ನ ಗ್ರಾಹಕರಿಗೆ ಹಣಕಾಸು ಸೌಲಭ್ಯವನ್ನು ಸಹ ಒದಗಿಸುತ್ತಿದೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಇತ್ತೀಚೆಗಷ್ಟೇ Ola ಎಲೆಕ್ಟ್ರಿಕ್ ಕಂಪನಿಯು ತನ್ನ ಗ್ರಾಹಕರಿಗೆ ಹಣಕಾಸಿನ ನೆರವು ಒದಗಿಸಲು ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಪ್ರೈಮ್ ಟಾಟಾ ಕ್ಯಾಪಿಟಲ್ ಸೇರಿದಂತೆ ಹಲವು ಪ್ರಮುಖ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸ ಬಯಸುವ ಗ್ರಾಹಕರಿಗೆ ಅನುಕೂಲವಾಗುತ್ತದೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

Ola ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರಿಗೆ ಹಣಕಾಸು ನೆರವು ಒದಗಿಸಲು ಕೆಲವು ಪ್ರಮುಖ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್ ಇಂದ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಜಾನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ಗಳು ಸೇರಿವೆ. ಈ ಬಗ್ಗೆ Ola ಎಲೆಕ್ಟ್ರಿಕ್ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ವರುಣ್ ದುಬೆ ಮಾಹಿತಿ ನೀಡಿದ್ದಾರೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

Ola ಎಲೆಕ್ಟ್ರಿಕ್ ಕಂಪನಿಯು ತನ್ನ S 1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ತಿಂಗಳಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಮೂಲ ಮಾದರಿಯ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 99,999 ಗಳಾಗಿದೆ. ಇನ್ನು S 1 Pro ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,29,999 ಗಳಾಗಿದೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

Ola ಎಲೆಕ್ಟ್ರಿಕ್ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರಿನ ಖರೀದಿಗಾಗಿ ಶೋರೂಂಗಳ ಬದಲಿಗೆ ಆನ್‌ಲೈನ್ ಪ್ಲ್ಯಾಟ್‌ಫಾರಂಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸ್ಕೂಟರ್ ಖರೀದಿ ಪ್ರಕ್ರಿಯೆ, ವಿತರಣೆ ಹಾಗೂ ಮಾರಾಟ ನಂತರದ ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಲ್ಲೇ ನೀಡುವುದಾಗಿ Ola ಕಂಪನಿ ತಿಳಿಸಿದೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

Ola ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗಾಗಿ ದೇಶಾದ್ಯಂತ ಪ್ರಮುಖ ನಗರಗಳ ಸುಮಾರು 1 ಲಕ್ಷಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ಈ ಗ್ರಾಹಕರನ್ನು Ola ಕಂಪನಿಯು ಆನ್‌ಲೈನ್ ಮೂಲಕ ಹಾಗೂ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಸ್ಕೂಟರ್ ಗಳನ್ನು ತಲುಪಿಸಲಿದೆ. ಆಸಕ್ತ ಗ್ರಾಹಕರಿಗಾಗಿ Ola ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಟೆಸ್ಟ್ ರೈಡ್ ಅನ್ನು ಸಹ ಆರಂಭಿಸುತ್ತಿದೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

Ola ಕಂಪನಿಯು ತನ್ನ ಈ ಹೊಸ ಎಲೆಕ್ಟ್ರಿಕ್ ಸ್ಕೂಟರಿಗೆ ಒಂದು ವರ್ಷದ ಪರ್ಸನಲ್ ಡ್ಯಾಮೇಜ್ ಹಾಗೂ 5 ವರ್ಷಗಳ ಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಅನ್ನು ನೀಡಲಿದೆ. ಈ ಹಿನ್ನೆಲೆಯಲ್ಲಿ Ola ಕಂಪನಿಯು ಐಸಿಐಸಿಐ ಲೊಂಬಾರ್ಡ್ ಕಂಪನಿ ಜೊತೆಗೆ ಕೈ ಜೋಡಿಸಿದೆ.

ಇಂದಿನಿಂದ ಆರಂಭವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

Ola S 1 ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಅಳವಡಿಸಿರುವ 2.98 ಕಿ.ವ್ಯಾ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 121 ಕಿ.ಮೀಗಳವರೆಗೆ ಚಲಿಸಿದರೆ, S 1 Pro ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಅಳವಡಿಸಿರುವ 3.97 ಕಿ.ವ್ಯಾ ಲೀಥಿಯಂ ಅಯಾನ್ ಬ್ಯಾಟರಿ ಪೂರ್ತಿಯಾಗಿ ಚಾರ್ಜ್‌ ಆದ ನಂತರ 181 ಕಿ.ಮೀಗಳವರೆಗೆ ಚಲಿಸಲಿದೆ.

Most Read Articles

Kannada
English summary
Ola to start electric scooter sale from today details
Story first published: Wednesday, September 8, 2021, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X