75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ಇಟಾಲಿಯನ್ ವಾಹನ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ತನ್ನ ಸಹ ಬ್ರಾಂಡ್ ವೆಸ್ಪಾ ದ್ವಿಚಕ್ರ ವಾಹನಗಳಲ್ಲಿ 75ನೇ ವರ್ಷಾಚರಣೆಯ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ್ದು, ಸ್ಪೆಷಲ್ ಎಡಿಷನ್‌ಗಳು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ಯುರೋಪಿನ್ ಮಾರುಕಟ್ಟೆಗಳಲ್ಲಿ ವೆಸ್ಪಾ ಮತ್ತು ಎಪ್ರಿಲಿಯಾ ಬ್ರಾಂಡ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪಿಯಾಜಿಯೊ ಕಂಪನಿಯು ವೆಸ್ಪಾ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿ 75 ವರ್ಷಗಳ ಯಶಸ್ವಿ ಉದ್ಯಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು, ಗ್ರಾಹಕರಿಗೆ ಹೊಸ ಸಂಭ್ರಮದ ಭಾಗವಾಗಿ ವಿಶೇಷ ಸೌಲಭ್ಯಗಳನ್ನು ಒಳಗೊಂಡ ಸ್ಪೆಷಲ್ ಎಡಿಷನ್‌ಗಳನ್ನು ಜಾಗತಿಕ ಮಾರುಕಟ್ಟೆಗಾಗಿ ಬಿಡುಗಡೆ ಮಾಡಿದೆ.

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ಇಟಾಲಿಯನ್ ಶೈಲಿಯೊಂದಿಗೆ ಸ್ಕೂಟರ್ ಉತ್ಪಾದನೆಯಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ವೆಸ್ಪಾ ಮಾದರಿಯು 75ನೇ ವರ್ಷದ ಮಾದರಿಯನ್ನು ತನ್ನ ಹೈ ಎಂಡ್ ಮಾದರಿಗಳಾದ ಜಿಟಿಎಸ್ ಮತ್ತು ಪ್ರಿಮಾವೆರಾ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ.

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ದುಬಾರಿ ಬೆಲೆ ಹೊಂದಿರುವ ಜಿಟಿಎಸ್ ಮತ್ತು ಪ್ರಿಮಾವೆರಾ ಸ್ಕೂಟರ್‌ಗಳು ಸದ್ಯ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಮಾತ್ರ ಲಭ್ಯವಿದ್ದು, ಈ ಎರಡು ಸ್ಕೂಟರ್‌ಗಳಲ್ಲಿ ಕಂಪನಿಯು ಆರಂಭಿಕವಾಗಿ 75ನೇ ಸಂಭ್ರಮಾಚರಣೆಯ ಮಾದರಿಗಳನ್ನು ಪರಿಚಯಿಸಿದೆ.

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

75 ನೇ ವಾರ್ಷಿಕೋತ್ಸವದ ಆವೃತ್ತಿಗಳು ಈ ವರ್ಷದ ಕೊನೆಯಲ್ಲಿ ಭಾರತದಲ್ಲೂ ಮಾರಾಟಗೊಳ್ಳುವ ನಿರೀಕ್ಷೆಗಳಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಗಂಟ್ 150, ಎಸ್ಎಕ್ಸ್ಎಲ್ ಮತ್ತು ನೊಟ್ಟೆ ಸ್ಕೂಟರ್ ಮಾದರಿಗಳಲ್ಲಿ ಹೊಸ ಆವೃತ್ತಿ ನೀಡುವ ಸಾಧ್ಯತೆಗಳಿವೆ. ಹೊಸ ಸ್ಪೆಷಲ್ ಎಡಿಷನ್‌ಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಹೊಸ ಸ್ಕೂಟರ್‌ಗಳು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರಲಿವೆ.

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ಹೊಸ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳಲ್ಲಿ 75ನೇ ವರ್ಷದ ಸಂಭ್ರಮಾಚರಣೆಯ ಬ್ಯಾಡ್ಜ್ ಜೊತೆಗೆ ವಿವಿಧ ಸ್ಕೂಟರ್‌ಗಳಿಗೆ ಅನುಗುಣವಾಗಿ ವಿವಿಧ ಬಣ್ಣಗಳ ಆಯ್ಕೆ, ಕ್ರೋಮ್ ಫಿನಿಶಿಂಗ್‌ಗಳು, ಸೈಡ್ ಪ್ಯಾನಲ್ ಸೇರಿದಂತೆ ಇಟಾಲಿಯನ್ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವ ಆಕ್ಸೆಸರಿಸ್ ಕಿಟ್ ಹೊಂದಿರಲಿವೆ.

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಸದ್ಯ ಇಟಲಿ ಮತ್ತು ಯುರೋಪಿನ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಮಾರಾಟಕ್ಕೆ ಚಾಲನೆ ನೀಡಿರುವ ವೆಸ್ಪಾ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಭಾರತದಲ್ಲೂ ವಿವಿಧ ಸ್ಕೂಟರ್ ಮಾದರಿಗಳನ್ನು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ಇನ್ನು 2017ರಲ್ಲಿ ಅನಾವರಣಗೊಂಡಿದ್ದ ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯು ಕೂಡಾ ಬಿಡುಗಡೆಯ ಹಂತದಲ್ಲಿದ್ದು, ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಎಲೆಕ್ಟ್ರಿಕಾ ಮಾದರಿಯನ್ನು ಕಾರಣಾಂತರಗಳಿಂತ ಮುಂದೂಡಿಕೆ ಮಾಡುತ್ತಾ ಬಂದಿರುವ ಕಂಪನಿಯು ಇದೀಗ ಬಿಡುಗಡೆಯ ಸಿದ್ದತೆಯಲ್ಲಿದೆ.

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ವೆಸ್ಪಾ ಕಂಪನಿಯು ಹೊಸ ಎಲೆಕ್ಟಿಕಾ ಇವಿ ಸ್ಕೂಟರ್‌ನಲ್ಲಿ 4 ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‍‌ಗೆ 100ರಿಂದ 120ಕಿ.ಮೀ ಸಾಮರ್ಥ್ಯದೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

75ನೇ ವರ್ಷದ ಸಂಭ್ರಮಾಚರಣೆ: ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ವೆಸ್ಪಾ

ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯಲ್ಲಿ ಎಪ್ರಿಲಿಯಾ ಇಎಸ್ಆರ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೂಡಾ ಉತ್ತಮ ಮೈಲೇಜ್‌ನೊಂದಿಗೆ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಶೀಘ್ರದಲ್ಲೇ ಈ ಹೊಸ ಸ್ಕೂಟರ್‌ಗಳ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

More from DriveSpark

Article Published On: Tuesday, March 9, 2021, 23:02 [IST]
English summary
Vespa 75th Anniversary Edition Scooter Unveiled. Read in Kannada.
Read more on ವೆಸ್ಪಾ vespa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+