1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಈಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಬೈಕ್‌ ಹಾಗೂ ಸ್ಕೂಟರ್‌ಗಳು ಅತ್ಯಾಧುನಿಕ ಟೆಕ್ನಾಲಜಿ, ಕನೆಕ್ಟಿವಿಟಿ, ಪ್ಲಗ್ ಇನ್ ತಂತ್ರಜ್ಞಾನಗಳನ್ನು ಹೊಂದಿರುತ್ತವೆ. ಈ ದ್ವಿಚಕ್ರ ವಾಹನಗಳು ಸವಾರರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಡಿಜಿಟಲ್ ಕನ್ಸೋಲ್ ಮೂಲಕ ನೀಡುತ್ತವೆ.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಆದರೆ 1990 ರ ದಶಕದಲ್ಲಿ ದ್ವಿಚಕ್ರ ವಾಹನಗಳನ್ನು ನೋಡಿದವರಿಗೆ ಹಾಗೂ ಆ ವಾಹನಗಳನ್ನು ಚಾಲನೆ ಮಾಡಿದವರಿಗೆ ಈಗ ಬಿಡುಗಡೆಯಾಗುತ್ತಿರುವ ವಾಹನಗಳು ಹೊಸ ಅನುಭವವನ್ನು ನೀಡುತ್ತವೆ. ಆ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದ ದ್ವಿಚಕ್ರ ವಾಹನಗಳು ಟೂ ಸ್ಟ್ರೋಕ್‌ ಆಗಿದ್ದು, ಪೆಟ್ರೋಲ್ - ಆಯಿಲ್ ಮಿಶ್ರಣದೊಂದಿಗೆ ಚಾಲನೆಯಾಗುತ್ತಿದ್ದವು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಆಗ ಮಾರುಕಟ್ಟೆಯಲ್ಲಿದ್ದ ದ್ವಿಚಕ್ರ ವಾಹನಗಳು ಆರೇಟೆಡ್ ಹ್ಯಾಲೊಜೆನ್ ಬಲ್ಬ್, ಸ್ಪಾರ್ಕ್ ಪ್ಲಗ್‌ಗಳ ಬೆಳಕಿಗೆ ಸ್ಥಳೀಯ ಮೆಕ್ಯಾನಿಕ್ ಮಾಡಿದ ಎಕ್ಸಾಸ್ಟ್ ಟಿಪ್ ಗಳನ್ನು ಹೊಂದಿರುತ್ತಿದ್ದವು. 1990 ರ ದಶಕದಲ್ಲಿ ಭಾರತದಲ್ಲಿದ್ದ ಟು ಸ್ಟ್ರೋಕ್ ಐಕಾನಿಕ್ ಬೈಕ್‌ಗಳು ಹಾಗೂ ಸ್ಕೂಟರ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

Yamaha RX -100:

ಈ ಬೈಕ್ ಬಗ್ಗೆ ಹೇಳದಿದ್ದರೆ, ಈ ಪಟ್ಟಿ ಪೂರ್ಣವಾಗುವುದಿಲ್ಲ. ಈ ಬೈಕ್ ಈಗಲೂ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಜಪಾನ್‌ನಲ್ಲಿ ತಯಾರಾಗಿ ಭಾರತದಲ್ಲಿ ಜೋಡಿಸಲಾದ ಶಕ್ತಿಯುತ ಟೂ ಸ್ಟ್ರೋಕ್ ಎಂಜಿನ್‌ನಿಂದ ಬರುವ ಸದ್ದು ಇಂದಿಗೂ ಜನಪ್ರಿಯವಾಗಿದೆ. ಇಂದಿಗೂ ಈ ಬೈಕ್ ಯುವ ಜನರ ನೆಚ್ಚಿನ ಬೈಕುಗಳಲ್ಲಿ ಒಂದಾಗಿದೆ.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಈ ಬೈಕ್ ಆಗ ಬಹಳ ಜನಪ್ರಿಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಈಗಲೂ ಸಹ ಈ ಬೈಕ್ ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ. ಈ ಬೈಕಿನಲ್ಲಿ ಅಳವಡಿಸಿದ್ದ 98 ಸಿಸಿ 2 ಸ್ಟ್ರೋಕ್ ಎಂಜಿನ್ 11 ಬಿ‌ಹೆಚ್‌ಪಿ ಪವರ್ ಹಾಗೂ 10.39 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ 4 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದೆ.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

Bajaj Chetak

1990 ರ ದಶಕದಲ್ಲಿ Bajaj Chetak ಭಾರತೀಯರ ನೆಚ್ಚಿನ ಸ್ಕೂಟರ್ ಆಗಿತ್ತು. ಕೈಗೆಟುಕುವ ಬೆಲೆ ಹೊಂದಿದ್ದ ಕಾರಣಕ್ಕೆ ಈ ಸ್ಕೂಟರ್ ಲಕ್ಷಾಂತರ ಭಾರತೀಯ ಕುಟುಂಬಗಳ ಸಾರಿಗೆ ಸಾಧನವಾಗಿತ್ತು. ಆ ಸಂದರ್ಭದಲ್ಲಿ ಹಮಾರಾ ಬಜಾಜ್ ಎಂಬ ಜಾಹೀರಾತು ಹೆಚ್ಚು ಜನಪ್ರಿಯವಾಗಿತ್ತು. Bajaj ಕಂಪನಿಯು ವೀರ ಯೋಧ ರಾಣಾ ಪ್ರತಾಪ ಸಿಂಹನ ಕುದುರೆಯ ಹೆಸರನ್ನು ಈ ಸ್ಕೂಟರಿಗೆ ಇಟ್ಟಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಈ ಸ್ಕೂಟರಿನಲ್ಲಿ 150 ಸಿಸಿ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 2002 ರಿಂದ ಟೂ ಸ್ಟ್ರೋಕ್ ಹಾಗೂ 2002 ರಿಂದ 2005 ರವರೆಗೆ ಫೋರ್ ಸ್ಟ್ರೋಕ್ ಆಗಿತ್ತು. ಈ ಎಂಜಿನ್ 7.5 ಬಿ‌ಹೆಚ್‌ಪಿ ಪವರ್ ಹಾಗೂ 10.8 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಈ ಸ್ಕೂಟರ್ 4 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿತ್ತು. ಈ ಸ್ಕೂಟರಿನ ಗೇರ್ ಗಳನ್ನು ಎಡಗೈನಿಂದ ಬದಲಿಸಬೇಕಾಗಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

Hero Honda CD 100

CD 100 ಭಾರತದ ಮೊದಲ ಮೈಲೇಜ್ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ Chetak ನಂತಹ ಸ್ಕೂಟರ್, Bullet, Yezdiಯಂತಹ ಬೈಕುಗಳನ್ನು ಖರೀದಿಸಲು ಇಷ್ಟಪಡದ ಮಧ್ಯಮ ವರ್ಗದವರ ಮೊದಲ ಆಯ್ಕೆಯಾಗಿತ್ತು. ಈ ಬೈಕ್ ಹೆಚ್ಚು ಸಾಂದ್ರತೆಯನ್ನು ಹೊಂದಿ ಹಗುರವಾಗಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಕಿತ್ನಾ ದೇತಿ ಹೈ ಎಂಬ ಜಾಹೀರಾತಿನೊಂದಿಗೆ ಈ ಬೈಕ್ ಭಾರತೀಯರನ್ನು ಆಕರ್ಷಿಸಿತ್ತು. ಈ ಬೈಕಿನಲ್ಲಿದ್ದ 97 ಸಿಸಿ 4-ಸ್ಟ್ರೋಕ್ ಎಂಜಿನ್ 8,000 ಆರ್‌ಪಿ‌ಎಂನಲ್ಲಿ 7.5 ಬಿ‌ಹೆಚ್‌ಪಿ ಪವರ್ ಹಾಗೂ 5,000 ಆರ್‌ಪಿ‌ಎಂನಲ್ಲಿ 7.2 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಈ ಬೈಕ್ 4 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

Kinetic Honda

ಈ ಸ್ಕೂಟರ್ ಎಲೆಕ್ಟ್ರಿಕ್ ಸ್ಟಾರ್ಟ್ ಬಟನ್ ಹೊಂದಿದ ಭಾರತದ ಮೊದಲ ಸ್ಕೂಟರ್ ಹಾಗೂ ಸಿವಿಟಿ ಟ್ರಾನ್ಸ್‌ಮಿಷನ್ ಹೊಂದಿದ ಮೊದಲ ಸ್ಕೂಟರ್ ಎಂಬ ಹಿರಿಮೆಯನ್ನು ಹೊಂದಿದೆ. Bajaj Chetak ಸ್ಕೂಟರ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದ ದಿನಗಳಲ್ಲಿ Kinetic Honda ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಅನಿರೀಕ್ಷಿತವಾಗಿ Kinetic Honda ಜನಪ್ರಿಯತೆಯನ್ನು ಸಹ ಪಡೆಯಿತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹಾಗೂ ಆ ಸಮಯದಲ್ಲಿದ್ದ ಶಕ್ತಿಶಾಲಿ ಎಂಜಿನ್ ನಿಂದಾಗಿ ಈ ಸ್ಕೂಟರ್ ಜನಪ್ರಿಯವಾಯಿತು. ವಿಶಾಲವಾದ ರೆಕ್ಟಾಂಗ್ಯುಲರ್ ಹೆಡ್ ಲ್ಯಾಂಪ್ ಹಾಗೂ ವಿಶಿಷ್ಟ ಶೈಲಿಯ ಫ್ರಂಟ್ ಲುಕ್ ನಿಂದ ಈ ಸ್ಕೂಟರ್ ಜನಪ್ರಿಯತೆಯನ್ನು ಪಡೆಯಿತು. ಈ ಸ್ಕೂಟರಿನಲ್ಲಿದ್ದ 98 ಸಿಸಿ 2-ಸ್ಟ್ರೋಕ್ ಎಂಜಿನ್ 5,600 ಆರ್‌ಪಿ‌ಎಂನಲ್ಲಿ 7.7 ಬಿ‌ಹೆಚ್‌ಪಿ ಪವರ್ ಹಾಗೂ 5,000 ಆರ್‌ಪಿ‌ಎಂನಲ್ಲಿ 9.8 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಈ ಸ್ಕೂಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

Yamaha RD 350

Yamaha ಕಂಪನಿಯ ಈ ಬೈಕ್ 1990 ರ ದಶಕದಲ್ಲಿ ಯಜ್ಡಿ ಹಾಗೂ ಜಾವಾ ಬೈಕುಗಳಿಗೆ ಪೈಪೋಟಿ ನೀಡುತ್ತಿತ್ತು. ದುರದೃಷ್ಟವಶಾತ್, ಈ ಬೈಕಿನ ಉತ್ಪಾದನೆಯು 1990 ರಲ್ಲಿ ಕೊನೆಗೊಂಡಿತು. ಉಳಿದ ಘಟಕಗಳನ್ನು 1991 ರವರೆಗೆ ಮಾರಾಟ ಮಾಡಲಾಯಿತು. ಈ ಬೈಕ್ ಟೂ ಸ್ಟ್ರೋಕ್ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

Yamaha ಕಂಪನಿಯು ಈ ಬೈಕಿನಲ್ಲಿ ತನ್ನ ಟಾರ್ಕ್ ಇಂಡಕ್ಷನ್ ಸಿಸ್ಟಂ, ರೀಡ್ ವಾಲ್ವ್‌, ಆರು ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್, ಆಟೋ ಲ್ಯೂಬ್ ಸಿಸ್ಟಂ, ಮೆಕ್ಯಾನಿಕಲ್ ಟ್ಯಾಕೋಮೀಟರ್, 12 ವೋಲ್ಟ್ ಎಲೆಕ್ಟ್ರಿಕ್‌ಗಳನ್ನು ನೀಡಿತ್ತು. ಈ ಬೈಕ್ 4.0 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ಅಕ್ಸಲರೇಟ್ ಮಾಡುತ್ತಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಈ ಬೈಕ್ ಕಡಿಮೆ ಮೈಲೇಜ್, ಹೆಚ್ಚು ಬೆಲೆ, ದುಬಾರಿ ಬಿಡಿ ಭಾಗಗಳ ಅಲಭ್ಯತೆ, ತರಬೇತಿ ಪಡೆದ ಸೇವಾ ತಂತ್ರಜ್ಞರ ಕೊರತೆ ಸೇರಿದಂತೆ ಕೆಲವು ಅನಾನುಕೂಲತೆಗಳನ್ನು ಹೊಂದಿತ್ತು. ಈ ಬೈಕಿನಲ್ಲಿ 347 ಸಿಸಿ, 2 ಸ್ಟ್ರೋಕ್, ಪ್ಯಾರಾಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿತ್ತು. ಹೈ ಟಾರ್ಕ್ ಮಾದರಿಯು 30.5 ಬಿ‌ಹೆಚ್‌ಪಿ ಪವರ್ ಉತ್ಪಾದಿಸಿದರೆ, ಲೋ ಟಾರ್ಕ್ ಮಾದರಿ 27 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತಿತ್ತು. ಇನ್ನು ಟಾರ್ಕ್ ಬಗ್ಗೆ ಹೇಳುವುದಾದರೆ ಹೈ ಟಾರ್ಕ್ ಮಾದರಿ 37.2 ಎನ್ಎಂ ಟಾರ್ಕ್ ಹಾಗೂ ಲೋ ಟಾರ್ಕ್ ಮಾದರಿ 32.3 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಈ ಬೈಕ್ 6 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

Bajaj Sunny

Bajaj Sunny ಬಿಡುಗಡೆಯಾದ ಸಂದರ್ಭದಲ್ಲಿ ಯುವ ಜನರ ನೆಚ್ಚಿನ ವಾಹನವಾಗಿತ್ತು. ಈ ಹಗುರವಾದ ಪೆಪ್ಪಿ ಸ್ಕೂಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದ್ದ ಸಣ್ಣ 50 ಸಿಸಿ 2-ಸ್ಟ್ರೋಕ್ ಪೆಟ್ರೋಲ್ ಎಂಜಿನ್‌ ಹೊಂದಿತ್ತು. ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಈ ಸ್ಕೂಟರ್ 3.5 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿತ್ತು.

1990ರ ದಶಕದಲ್ಲಿ ಭಾರತದಲ್ಲಿ ಜನಪ್ರಿಯವಾಗಿದ್ದ ದ್ವಿಚಕ್ರ ವಾಹನಗಳಿವು

ಈ ಸ್ಕೂಟರ್ ಪ್ರತಿ ಲೀಟರ್‌ ಪೆಟ್ರೋಲಿಗೆ 50 ಕಿ.ಮೀ ಮೈಲೇಜ್ ನೀಡುತ್ತಿತ್ತು. 120 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದ ಈ ಸ್ಕೂಟರ್ ಅತ್ಯಂತ ವಿಶ್ವಾಸಾರ್ಹ ಸ್ಕೂಟರ್ ಸಹ ಆಗಿತ್ತು. TVS Scooty ಹಾಗೂ Kinetic ಮೊಪೆಡ್‌ಗಳಂತಲ್ಲದೆ ಈ ಸ್ಕೂಟರ್ ಆಟೋ ಎಂಗೇಜ್ ಗೇರ್ ಸಿಸ್ಟಂ ಹೊಂದಿತ್ತು. ಈ ಸ್ಕೂಟರಿನಲ್ಲಿದ್ದ 49 ಸಿಸಿ, 2-ಸ್ಟ್ರೋಕ್ ಎಂಜಿನ್ 6,000 ಆರ್‌ಪಿ‌ಎಂನಲ್ಲಿ 2.8 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತಿತ್ತು. ಈ ಸ್ಕೂಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿತ್ತು.

Most Read Articles

Kannada
English summary
Popular two wheelers which ruled the indian roads during 1990 decade details
Story first published: Saturday, August 28, 2021, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X