ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಸರಣಿಯಲ್ಲಿರುವ ಬೈಕುಗಳ ಬೆಲೆಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಷ್ಕರಿಸಿದೆ. ಇದರ ಪರಿಣಾಮವಾಗಿ ಜನಪ್ರಿಯ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಿವೆ.

ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ರಾಯಲ್ ಎನ್‍ಫೀಲ್ಡ್ ಕಂಪನಿಯು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳನ್ನು 2018ರ ನವೆಂಬರ್‌ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಈ ಎರಡೂ ಬೈಕುಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಿಸಿಯಾಗಿದೆ. ಈ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳ ಹೊಸ ತಲೆಮಾರಿನ ಮಾದರಿಗಳನ್ನು ಕೂಡ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ವರದಿಗಳ ಪ್ರಕಾರ, ರಾಯಲ್ ಎನ್‍ಫೀಲ್ಡ್ ತನ್ನ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳ ಬೆಲೆಗಳನ್ನು ರೂ.3,009 ದಿಂದ ರೂ.3,379 ಗಳವರೆಗೆ ಹೆಚ್ಚಿಸಲಾಗಿದೆ. ಇತ್ತೀಚಿನ ಬೆಲೆ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ಈ ಟ್ವಿನ್ ಬೈಕುಗಳ ಇಂಜಿನ್ ಸಾಮರ್ಥ್ಯ ಮತ್ತು ಹಲವಾರು ಫೀಚರ್ ಗಳಿಂದ ಕೂಡಿರುವ ಕಾರಣ ದೇಶಿಯ ಮಾರುಕಟ್ಟೆ ಗ್ರಾಹಕರು ಈ ಬೈಕ್‍‍ಗೆ ಫಿದಾ ಆದರು. ಎರಡೂ ಬೈ‍ಕ್‍‍ಗಳು ಪ್ಯಾರೆಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿವೆ.

Model / Variant Colours New Price Old Price Difference
Interceptor 650 Mark Three/ Orange Crush/ Silver Spectre Rs2,69,764 Rs2,66,755 Rs3,009
Interceptor 650 Ravishing Red/ Baker Express/ Rs2,77,732 Rs2,74,643 Rs3,089
Interceptor 650 Glitter and Dust Rs2,91,007 Rs2,87,787 Rs3,220
Continental GT 650 Ventura Blue/ Black Magic Rs2,85,680 Rs2,82,513 Rs3,167
Continental GT 650 Ice Queen / Dr. Mayhem Rs2,93,648 Rs2,90,401 Rs3,247
Continental GT 650 Mr. Clean Rs3,06,923 Rs3,03,544 Rs3,379
ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ಇಂಟರ್‍‍ಸೆಪ್ಟೆರ್ 650 ಮತ್ತು ಕಾಂಟಿ‍ನೆಂಟಲ್ ಜಿಟಿ 650 ಎಂಬ ಎರಡು ಟ್ವಿನ್ ಬೈಕ್‍‍ಗಳು 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಮೂಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿವೆ.

ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ಈ ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿವೆ. ರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್, 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ಕಳೆದ ಬಾರಿ ರಾಯಲ್ ಎನ್‍‍ಫೀಲ್ಡ್ 650 ಸಿಸಿ ಬೈಕ್‍‍ಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿತ್ತು. ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಟಲ್ ಜಿಟಿ 650 ಬೈಕ್‍‍ಗಳ ಹೆಡ್‍‍ಲೈ‍ಟ್‍‍ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು.

ದುಬಾರಿಯಾಯ್ತು ಜನಪ್ರಿಯ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕುಗಳು

ಕಾಂಟಿನೆಂಟಲ್ ಜಿಟಿ 650 ಕೆಫೆ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ. ಶೀಘ್ರದಲ್ಲೇ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಟ್ವಿನ್ ಬೈಕುಗಳಿಗೆ ಹೊಸ ಟ್ರಿಪ್ಪರ್ ನ್ಯಾವಿಗೇಷನ್ ಅಸಿಸ್ಟ್ ಫೀಚರ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ

Most Read Articles

Kannada
English summary
Royal Enfield Interceptor 650, Continental GT 650 Prices Hiked. Read In Kannada,
Story first published: Monday, January 11, 2021, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X