ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಶಿಯೋಮಿ ಒಡೆತನದ ಸೆಗ್ವೇ-ನೈನ್ ಬಾಟ್ ಕಂಪನಿಯು ತನ್ನ ಮೊದಲ ಹೈಡ್ರೋಜನ್-ಎಲೆಕ್ಟ್ರಿಕ್ ಹೈಬ್ರಿಡ್ ಬೈಕ್ ಅನ್ನು ಅನಾವರಣಗೊಳಿಸಿದೆ. ಕಂಪನಿಯು ಈ ಬೈಕ್ ಅನ್ನು ಮೂಲ ಮಾದರಿಯಾಗಿ ಪರಿಚಯಿಸಿದೆ.

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಕಂಪನಿಯು ಈ ಬೈಕಿಗೆ ಸೆಗ್ವೇ ಅಪೆಕ್ಸ್ ಹೆಚ್ 2 ಎಂದು ಹೆಸರಿಟ್ಟಿದೆ. ಶಿಯೋಮಿ ಕಂಪನಿಯು ಈ ಬೈಕ್ ಅನ್ನು ತನ್ನ ತವರು ನೆಲವಾದ ಚೀನಾದಲ್ಲಿ ಪ್ರದರ್ಶಿಸಿದೆ.ಪ್ರದರ್ಶನದ ಮೊದಲ ದಿನವೇ 99 ಜನರು ಈ ಬೈಕ್ ಅನ್ನು ನೋಂದಾಯಿಸಿದ್ದಾರೆ. ಬೈಕಿನ ಉತ್ಪಾದನೆ ಆರಂಭವಾಗುವ ಮುನ್ನವೇ ಈ ಬೈಕ್ ಅನ್ನು ಪ್ರೀ ಬುಕ್ಕಿಂಗ್ ಮಾಡಿರುವುದು ಗಮನಾರ್ಹ.

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಈ ಹೈಬ್ರಿಡ್ ದ್ವಿಚಕ್ರ ವಾಹನದ ಬೆಲೆ ಚೀನಾದಲ್ಲಿ 69,999 ಯುವಾನ್'ಗಳಾಗಿರಲಿದೆ ಎಂದು ವರದಿಯಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.7.84 ಲಕ್ಷಗಳಾಗುತ್ತದೆ. ಹೆಚ್ಚು ಬೆಲೆಯನ್ನು ಹೊಂದಿರುವ ಕಾರಣಕ್ಕೆ ಈ ಬೈಕ್ ಹೈ ಎಂಡ್ ಟೆಕ್ನಾಲಜಿಯನ್ನು ಹೊಂದಿರುವ ಸಾಧ್ಯತೆಗಳಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಸೆಗ್ವೇ-ನೈನ್ ಬಾಟ್ ಕಂಪನಿಯು ಈ ಬೈಕ್ ಅನ್ನು 2023ರಲ್ಲಿ ಬಿಡುಗಡೆಗೊಳಿಸಲಿದೆ. ಕಂಪನಿಯು ಶೀಘ್ರದಲ್ಲಿಯೇ ಈ ಬೈಕಿನ ಉತ್ಪಾದನೆಯನ್ನು ಆರಂಭಿಸಲಿದೆ. ಈ ಬೈಕ್ ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗುತ್ತದೆ.

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಈ ರೀತಿಯ ಹೈಬ್ರಿಡ್ ದ್ವಿಚಕ್ರ ವಾಹನಗಳು ಮಾರುಕಟ್ಟೆಯಲ್ಲಿಲ್ಲ ಎಂಬುದು ಗಮನಾರ್ಹ. ಈ ಹೈಬ್ರಿಡ್ ದ್ವಿಚಕ್ರ ವಾಹನವು 80.35 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ. ಈ ಹೈಬ್ರಿಡ್ ವಾಹನವು ಕೇವಲ 4 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಈ ಹೈಬ್ರಿಡ್ ದ್ವಿಚಕ್ರ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 150 ಕಿ.ಮೀಗಳಾಗಿದೆ. ಹೈಡ್ರೋಜನ್ ತುಂಬಾ ಅಪಾಯಕಾರಿ ವಸ್ತುವಾಗಿದ್ದು, ಅದನ್ನು ಸಂಗ್ರಹಿಸಿಡುವ ಸ್ಟೋರೇಜ್ ಕಂಟೇನರ್'ಗಳು ಸಣ್ಣ ಹಾನಿಯಾದರೂ ಸಹ ಸ್ಫೋಟಗೊಳ್ಳುತ್ತವೆ.

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಈ ಕಾರಣಕ್ಕೆ ಹೈಡ್ರೋಜನ್ ಅನ್ನು ಸುರಕ್ಷಿತವಾಗಿಡಲು ವಾಟರ್ ಬಾಟಲಿಗಳಂತಹ ದೊಡ್ಡ ಕಬ್ಬಿಣದ ಸಿಲಿಂಡರ್‌ಗಳನ್ನು ಅಳವಡಿಸಲಾಗಿದೆ. ಈ ಹೈಬ್ರಿಡ್ ವಾಹನವು ಪ್ರತಿ ಗ್ರಾಂ ಹೈಡ್ರೋಜನ್‌ಗೆ 1 ಕಿ.ಮೀಗಳವರೆಗೆ ಚಲಿಸುತ್ತದೆ. ಹೈಡ್ರೋಜನ್ ಇಂಧನವನ್ನು ಸುಲಭವಾಗಿ ಫಿಲ್ ಮಾಡಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಈ ವಾಹನದಲ್ಲಿ ಸ್ಲೀಕ್ ಆಗಿರುವ ಸಾಲಿಡ್ ವ್ಹೀಲ್'ಗಳನ್ನು ಬಳಸಲಾಗುತ್ತದೆ. ಈ ವ್ಹೀಲ್'ಗಳು ವಾಹನವನ್ನು ಸುಗಮವಾಗಿ ಚಲಿಸಲು ನೆರವಾಗುತ್ತವೆ. ಇನ್ನು ಈ ವಾಹನದ ಬಾಡಿ ಪ್ಯಾನೆಲ್'ಗಳು ವಿಭಿನ್ನವಾದ ವಿನ್ಯಾಸವನ್ನು ಹೊಂದಿವೆ. ಉತ್ಪಾದನಾ ಮಾದರಿಯಲ್ಲಿ ಸ್ವಲ್ಪ ಮಾಡಿಫೈನೊಂದಿಗೆ ಸಿಕ್ಯೂ ಬಳಸಲಾಗುತ್ತದೆ.

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಈ ಹೈಬ್ರಿಡ್ ವಾಹನದ ಮುಂಭಾಗದಲ್ಲಿ ಇನ್ ವರ್ಟೆಡ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಬಳಸಲಾಗುತ್ತದೆ. ಇವುಗಳು ಉತ್ತಮ ಸಸ್ಪೆಂಷನ್'ಗೆ ನೆರವಾಗುತ್ತವೆ. ಈ ವಾಹನದಲ್ಲಿ 7 ಇಂಚಿನ ಸ್ಕ್ರೀನ್, ಪೂರ್ಣ ಎಲ್ಇಡಿ ಹೆಡ್‌ಲೈಟ್‌ಗಳಂತಹ ವಿವಿಧ ಪ್ರೀಮಿಯಂ ಫೀಚರ್'ಗಳನ್ನು ನೀಡಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ಈ ಹೈಬ್ರಿಡ್ ವಾಹನವನ್ನು ಮಾರುಕಟ್ಟೆಯಲ್ಲಿರುವ ದ್ವಿಚಕ್ರ ವಾಹನಗಳಿಗಿಂತ ಹೆಚ್ಚಿನ ಫೀಚರ್'ಗಳೊಂದಿಗೆ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಮೊಬೈಲ್ ತಯಾರಕ ಕಂಪನಿಯಾದ ಶಿಯೋಮಿ ಇತ್ತೀಚೆಗಷ್ಟೇ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು.

ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್'ನಿಂದ ಚಾಲನೆಯಾಗಲಿದೆ ಈ ಹೈಬ್ರಿಡ್ ಬೈಕ್

ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಗ್ರೇಟ್ ವಾಲ್ ಮೋಟಾರ್ಸ್ ವಾಹನ ಉತ್ಪಾದನಾ ಘಟಕವನ್ನು ಬಳಸಿಕೊಳ್ಳುವುದಾಗಿ ಕಂಪನಿ ತಿಳಿಸಿತ್ತು. ಶಿಯೋಮಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ತೊಡಗಿರುವುದು ಇತರ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿಗೆ ನಡುಕವನ್ನುಂಟು ಮಾಡಿರುವುದು ಸುಳ್ಳಲ್ಲ.

Most Read Articles

Kannada
English summary
Segway Ninebot unveils hybrid vehicle that moves with hydrogen and electric. Read in Kannada.
Story first published: Friday, April 9, 2021, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X