ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ದ್ವಿಚಕ್ರ ವಾಹನ ಸವಾರರಿಗಾಗಿ ಹೆಲ್ಮೆಟ್ ಹಾಗೂ ಹ್ಯಾಂಡ್ ಗ್ಲೌಸ್'ಗಳನ್ನು ತಯಾರಿಸುವ ಸ್ಟೀಲ್‌ಬರ್ಡ್ ಕಂಪನಿಯು ಈಗ ದ್ವಿಚಕ್ರ ವಾಹನಗಳಿಗಾಗಿ ಹೊಸ ಸರಣಿಯ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದೆ.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ಕಂಪನಿಯು ಇನ್ನು ಮುಂದೆ ಲೂಬ್ರಿಕಂಟ್ ಆಯಿಲ್ ಸಹ ಮಾರಾಟ ಮಾಡಲಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಉತ್ಪನ್ನಗಳು ಬೈಕ್ ಹಾಗೂ ಸ್ಕೂಟರ್‌ಗಳ ಬಳಕೆಗೆ ಸೂಕ್ತವಾಗಿವೆ.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ಸ್ಟೀಲ್‌ಬರ್ಡ್ ಕಂಪನಿಯ ವರದಿಗಳ ಪ್ರಕಾರ ಈ ಹೊಸ ಉತ್ಪನ್ನಗಳು ವಿಶ್ವ ದರ್ಜೆಯ ಮಾನದಂಡಗಳಿಗೆ ಸೂಕ್ತವಾಗಿವೆ. ಜೊತೆಗೆ ಭಾರತೀಯ ಮಾನದಂಡಗಳಿಗೆ ಅನುಗುಣವಾಗಿ ಮುಂದುವರಿಯುವುದಾಗಿ ಸ್ಟೀಲ್‌ಬರ್ಡ್ ಕಂಪನಿ ತಿಳಿಸಿದೆ.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ಬೆಲೆ:

4 ಡಿ ಎಂಜಿನ್ ಆಯಿಲ್ ಎಸ್‌ಇಇ 20 ಡಬ್ಲ್ಯೂ 40 ಎಪಿಐ ಎಸ್ಎಲ್ 900 ಎಂಎಲ್ ಬೆಲೆ ರೂ.366ಗಳಾದರೆ, 4 ಡಿ ಎಂಜಿನ್ ಆಯಿಲ್ ಎಸ್‌ಇಇ 20 ಡಬ್ಲ್ಯೂ 40 ಎಪಿಐ ಎಸ್‌ಎಲ್ 1 ಲೀಟರ್ ಬೆಲೆ ರೂ.394ಗಳಾಗಿದೆ.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

4 ಡಿ ಎಂಜಿನ್ ಆಯಿಲ್ ಎಸ್‌ಇಇ 15 ಡಬ್ಲ್ಯು 50 ಎಪಿಐ ಸೆಮಿ ಸಿಂಥೆಟಿಕ್ 2.5 ಲೀಟರ್ ಬೆಲೆ ರೂ.1,075ಗಳಾಗಿದೆ. ಈ ಬಗ್ಗೆ ಸ್ಟೀಲ್‌ಬರ್ಡ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮನವ್ ಕಪೂರ್ ಮಾಹಿತಿ ನೀಡಿದ್ದಾರೆ.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ನಮ್ಮ ಉತ್ಪನ್ನಗಳನ್ನು ಬಲವಾದ ಆರ್ ಅಂಡ್ ಡಿ ಬ್ಯಾಕಪ್‌ಗಳೊಂದಿಗೆ ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಎಲ್ಲಾ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ಈ ಹೊಸ ಸರಣಿಯ ಎಂಜಿನ್ ಆಯಿಲ್ ನಮ್ಮ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ನಂಬಿಕೆಯಿದೆ ಎಂದು ಅವರು ಹೇಳಿದರು. ಸ್ಟೀಲ್‌ಬರ್ಡ್ ಕಂಪನಿಯು ಹೆಲ್ಮೆಟ್‌ಗಳಂತಹ ಉತ್ಪನ್ನಗಳ ಜೊತೆಗೆ ಎಂಜಿನ್ ಆಯಿಲ್ ಉತ್ಪಾದನೆಯಲ್ಲೂ ತೊಡಗಿದೆ.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ಇದರ ಜೊತೆಗೆ ಸ್ಟೀಲ್‌ಬರ್ಡ್ ಕಂಪನಿಯು ಫೇಸ್ ಮಾಸ್ಕ್'ಗಳ ಉತ್ಪಾದನೆಯಲ್ಲೂ ತೊಡಗಿಸಿಕೊಂಡಿದೆ. ಕರೋನಾ ವೈರಸ್ ಎರಡನೇ ಅಲೆ ವೇಳೆ ಸ್ಟೀಲ್‌ಬರ್ಡ್ ಕಂಪನಿಯ ಫೇಸ್ ಮಾಸ್ಕ್'ಗಳು ದಿನಕ್ಕೆ ಸರಾಸರಿ 6 ಸಾವಿರಗಳಷ್ಟು ಮಾರಾಟವಾಗುತ್ತಿದ್ದವು.

ದ್ವಿಚಕ್ರ ವಾಹನಗಳಿಗಾಗಿ ಎಂಜಿನ್ ಆಯಿಲ್ ಬಿಡುಗಡೆಗೊಳಿಸಿದ ಸ್ಟೀಲ್‌ಬರ್ಡ್ ಕಂಪನಿ

ಈ ಫೇಸ್ ಮಾಸ್ಕ್'ಗಳು ಕರೋನಾ ವೈರಸ್'ನಿಂದ ಗರಿಷ್ಠ ರಕ್ಷಣೆಯನ್ನು ನೀಡುತ್ತವೆ ಎಂದು ಸ್ಟೀಲ್‌ಬರ್ಡ್ ಕಂಪನಿ ಹೇಳಿಕೊಂಡಿದೆ. ಸ್ಟೀಲ್‌ಬರ್ಡ್ ಕಂಪನಿ ಮಕ್ಕಳಿಗಾಗಿಯೂ ಫೇಸ್ ಮಾಸ್ಕ್'ಗಳನ್ನು ಮಾರಾಟ ಮಾಡುತ್ತದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Steelbird launches engine oil for two wheelers. Read in Kannada.
Story first published: Thursday, July 8, 2021, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X