ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಹೆಲ್ಮೆಟ್ ಹಾಗೂ ರೈಡಿಂಗ್ ಪರಿಕರ ತಯಾರಕ ಕಂಪನಿಯಾದ ಸ್ಟೀಲ್‌ಬರ್ಡ್ ಎರಡು ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿರುವುದಾಗಿ ತಿಳಿಸಿದೆ. ಈ ಗ್ಲೌಸ್‌ಗಳು ಸವಾರನಿಗೆ ಮೊಬೈಲ್ ತೆಗೆಯದೆಯೇ ಟಚ್‌ಸ್ಕ್ರೀನ್ ಕಾರ್ಯಾಚರಣೆಯನ್ನು ಮಾಡಲು ನೆರವಾಗುತ್ತವೆ. ಹೊಸ ರೈಡಿಂಗ್ ಗ್ಲೌಸ್‌ಗಳು ಪೂರ್ಣ ಬೆರಳು (ಫುಲ್ ಫಿಂಗರ್) ಹಾಗೂ ಅರ್ಧ ಬೆರಳಿನ (ಹಾಫ್ ಫಿಂಗರ್) ಮಾದರಿಗಳಲ್ಲಿ ಮಾರಾಟವಾಗಲಿವೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಪೂರ್ಣ ಬೆರಳಿನ ಗ್ಲೌಸ್‌ ಬೆಲೆ ರೂ. 599 ಗಳಾದರೆ, ಅರ್ಧ ಬೆರಳಿನ ಗ್ಲೌಸ್‌ ಬೆಲೆ ರೂ. 529 ಗಳಾಗಿದೆ. ಈ ರೈಡಿಂಗ್ ಗ್ಲೌಸ್‌ಗಳು ಟಚ್‌ಸ್ಕ್ರೀನ್‌ಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ ಎಂದು ಕಂಪನಿ ಹೇಳಿದೆ. ಇವುಗಳ ಮೂಲಕ ಬೈಕ್ ಅಥವಾ ಸ್ಕೂಟರ್ ಸವಾರಿ ಮಾಡುವ ಸವಾರನಿಗೆ ಉತ್ತಮ ಪ್ರಮಾಣದ ರಕ್ಷಣೆಯನ್ನು ಒದಗಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಫುಲ್ ಫಿಂಗರ್ ರೈಡಿಂಗ್ ಗ್ಲೌಸ್ ಉತ್ತಮ ಹಿಡಿತಕ್ಕಾಗಿ ಮೆತ್ತನೆಯ ಪಾಮ್ ರೆಸ್ಟ್ ಹಾಗೂ ಆ್ಯಂಟಿ ಸ್ಕಿಡ್ ಫ್ಯಾಬ್ರಿಕ್‌ ಹೊಂದಿದೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಇನ್ನು ಹಾಫ್ ಫಿಂಗರ್ ಗ್ಲೌಸ್‌ ಸ್ಯೂಡ್ ಪಾಲಿಯೆಸ್ಟರ್ ಫ್ಯಾಬ್ರಿಕ್, ಉತ್ತಮ ಚಲನೆಗಾಗಿ ಹಿಂಭಾಗದಲ್ಲಿ ರಿಬ್ಬಡ್ ಫ್ಯಾಬ್ರಿಕ್, ಉತ್ತಮ ಹಿಡಿತಕ್ಕಾಗಿ ಸಿಂಥೆಟಿಕ್ ಹೋಲ್ ಗಳನ್ನು ಹೊಂದಿರಲಿದೆ ಎಂದು ಕಂಪನಿ ಹೇಳಿದೆ. ಈ ರೈಡಿಂಗ್ ಗ್ಲೌಸ್‌ಗಳ ವಿವರಗಳಿಗೆ ಹೆಚ್ಚು ಗಮನ ನೀಡಲಾಗಿದೆ ಎಂದು ಸ್ಟ್ರೀಲ್‌ಬರ್ಡ್ ಕಂಪನಿ ಹೇಳಿಕೊಂಡಿದೆ. ಈ ಹಗುರವಾದ ರೈಡಿಂಗ್ ಗ್ಲೌಸ್‌ಗಳು ಗಾಳಿಯ ಪ್ರಸರಣ ಹಾಗೂ ವಾತಾಯನವನ್ನು ವರ್ಧಿಸುವ ಗಾಳಿಯಾಡಬಲ್ಲ ಮೆಶ್ ಫ್ಯಾಬ್ರಿಕ್ ಅನ್ನು ಬಳಸುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಈ ಗ್ಲೌಸ್ ಗಳನ್ನು ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿಯೂ ಬಳಸಬಹುದು ಎಂದು ಹೇಳಲಾಗಿದೆ. ಬೈಕ್ ಅಥವಾ ಸ್ಕೂಟರ್ ಸವಾರಿ ಮಾಡುವುದು ಮಾತ್ರವಲ್ಲದೆ, ಈ ಗ್ಲೌಸ್‌ಗಳನ್ನು ಜಿಮ್ ಹಾಗೂ ಕ್ಲೈಂಬಿಂಗ್‌ಗೂ ಸಹ ಬಳಸಬಹುದು. ಇದಲ್ಲದೆ ಈ ಗ್ಲೌಸ್‌ಗಳು ಹೈಕಿಂಗ್, ಸೈಕ್ಲಿಂಗ್ ಹಾಗೂ ಕ್ಯಾಂಪಿಂಗ್ ಮುಂತಾದ ಚಟುವಟಿಕೆಗಳಿಗೆ ಸೂಕ್ತವಾಗಿವೆ. ಸ್ಟೀಲ್‌ಬರ್ಡ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಕಪೂರ್ ಈ ರೈಡಿಂಗ್ ಗ್ಲೌಸ್‌ಗಳ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಈ ರೈಡಿಂಗ್ ಗ್ಲೌಸ್‌ಗಳನ್ನು ಅತ್ಯುತ್ತಮವಾದ ಬಟ್ಟೆ ಹಾಗೂ ಸಂಬಂಧಿತ ವಸ್ತುಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಇವು ಆರಾಮದಾಯಕವಾದ ನಿರ್ಮಾಣ, ಉಸಿರಾಡುವ ಸ್ವಭಾವವನ್ನು ಹೊಂದಿದ್ದು, ಸಾಗಿಸಲು ಸುಲಭವಾಗಿವೆ ಎಂದು ಹೇಳಿದರು. ಈ ರೈಡಿಂಗ್ ಗ್ಲೌಸ್‌ಗಳು ಕಡಿಮೆ ತೂಕವನ್ನು ಹೊಂದಿದ್ದು, ಹೆಚ್ಚು ಬಾಳಿಕೆ ನೀಡುತ್ತವೆ. ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಮೋಟಾರ್‌ಸೈಕಲ್‌ಗಳು ಹೆಚ್ಚಿನ ಪಾಲನ್ನು ಹೊಂದಿವೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಇದರ ಪರಿಣಾಮವಾಗಿ ಇದು ಬೈಕಿಂಗ್ ಗೇರ್‌ಗೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಎಂದು ರಾಜೀವ್ ಕಪೂರ್ ಹೇಳಿದರು. ರೈಡರ್‌ಗಳು ಸಾಕಷ್ಟು ಬ್ರ್ಯಾಂಡೆಡ್ ಹಾಗೂ ಬ್ರ್ಯಾಂಡೆಡ್ ಅಲ್ಲದ ಉತ್ಪನ್ನಗಳನ್ನು ಖರೀದಿಸಲು ಬಯಸಿದರೂ, ಅಂತರರಾಷ್ಟ್ರೀಯ ಗುಣಮಟ್ಟದ ರೈಡಿಂಗ್ ಗೇರ್‌ಗಳಿಗೆ ಯಾವುದೇ ಪರ್ಯಾಯವಿಲ್ಲ. ಅದಕ್ಕಾಗಿಯೇ ನಾವು ಈ ಗ್ಲೌಸ್‌ಗಳನ್ನು ಪರಿಚಯಿಸಿದ್ದೇವೆ ಎಂದು ಅವರು ಹೇಳಿದರು.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಸ್ಟೀಲ್ ಬರ್ಡ್ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಕಡಿಮೆ ಬೆಲೆಯ ಹೊಸ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಹೆಲ್ಮೆಟ್ ಬೆಲೆಯನ್ನು ಕಂಪನಿಯು ರೂ. 2,589 ಗಳಿಗೆ ನಿಗದಿಪಡಿಸಿದೆ. ಈ ಮೂಲಕ ಹ್ಯಾಂಡ್ಸ್ ಫ್ರೀ ಸೌಲಭ್ಯವಿರುವ ಹೆಲ್ಮೆಟ್ ಅನ್ನು ಇಷ್ಟು ಕಡಿಮೆ ಬೆಲೆಗೆ ಬಿಡುಗಡೆಗೊಳಿಸಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಸ್ಟೀಲ್ ಬರ್ಡ್ ಪಾತ್ರವಾಗಿದೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಈ ಬೆಲೆಯಲ್ಲಿ ಹ್ಯಾಂಡ್ಸ್ ಫ್ರೀ ಟೆಕ್ನಾಲಜಿಯನ್ನು ಹೊಂದಿರುವ ಹೆಲ್ಮೆಟ್ ಅನ್ನು ಬೇರೆ ಯಾವುದೇ ಕಂಪನಿ ಬಿಡುಗಡೆಗೊಳಿಸಿಲ್ಲವೆಂದು ವರದಿಯಾಗಿದೆ. ಸ್ಟೀಲ್‌ ಬರ್ಡ್ ಕಂಪನಿಯು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸುತ್ತಿದೆ. ದೂರದಿಂದ ಈ ಹೆಲ್ಮೆಟ್ ನೋಡುವವರಿಗೆ ನಿರಾಶೆ ಮೂಡಿಸುತ್ತದೆ. ಈ ಹೆಲ್ಮೆಟ್'ನ ಹೊರಭಾಗವನ್ನು ಸರಳವಾಗಿ ವಿನ್ಯಾಸಗೊಳಿಸಿರುವುದೇ ಇದಕ್ಕೆ ಪ್ರಮುಖ ಕಾರಣ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಸ್ಟೀಲ್ ಬರ್ಡ್ ಕಂಪನಿಯು ಈಗ ಮಾರುಕಟ್ಟೆಯಲ್ಲಿರುವ ತನ್ನ ಜನಪ್ರಿಯ ಎಸ್‌ಬಿ‌ಎ 1 ಸರಣಿಯ ಹೆಲ್ಮೆಟ್ ಗಳನ್ನು ಆಧರಿಸಿ ಈ ಹೊಸ ಎಸ್‌ಬಿ‌ಎ 1 ಹೆಚ್‌ಎಫ್ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಿದೆ. ಈ ಹೆಲ್ಮೆಟ್‌ನಲ್ಲಿ ಬಳಸಿರುವ ಹೆಚ್‌ಎಫ್ ಪದವು ಹ್ಯಾಂಡ್ಸ್ ಫ್ರೀ ಎಂಬುದನ್ನು ಸೂಚಿಸುತ್ತದೆ. ಸೆಲ್ ಫೋನಿನಲ್ಲಿ ಕರೆ ಸ್ವೀಕರಿಸಿ, ಮಾತನಾಡಲು ಈ ಹೆಲ್ಮೆಟ್ ಬೈಕ್ ಸವಾರರಿಗೆ ನೆರವಾಗುತ್ತದೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಸ್ಟೀಲ್ ಬರ್ಡ್ ಕಂಪನಿಯು ಈ ಟೆಕ್ನಾಲಜಿಯನ್ನು ಹೆಲ್ಮೆಟ್ ಒಳಗಡೆ ಅಳವಡಿಸಿದೆ. ಇದಕ್ಕೆ ಯಾವುದೇ ಬ್ಯಾಟರಿಯ ಅಗತ್ಯವಿಲ್ಲ ಎಂಬುದು ಗಮನಾರ್ಹ ಸಂಗತಿ. ಈ ಹೆಲ್ಮೆಟ್ ಮೂಲಕ ಅನ್ ಲಿಮಿಟೆಡ್ ಮ್ಯೂಸಿಕ್ ಪಡೆಯಬಹುದು ಹಾಗೂ ಕರೆಗಳನ್ನು ಸ್ವೀಕರಿಸಬಹುದು. ಎಸ್‌ಬಿ‌ಎ 1 ಹೆಚ್‌ಎಫ್ ಹೆಲ್ಮೆಟ್ ಅನ್ನು ಎರಡು ವಿಭಿನ್ನ ಗಾತ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಎಸ್‌ಬಿ‌ಎ 1 ಹೆಚ್‌ಎಫ್ ಹೆಲ್ಮೆಟ್ 580 ಎಂಎಂ ಹಾಗೂ 600 ಎಂಎಂ ಎಂಬ ಎರಡು ಗಾತ್ರಗಳನ್ನು ಹೊಂದಿದೆ. ಇದರ ಜೊತೆಗೆ ಈ ಹೆಲ್ಮೆಟ್ ಅನ್ನು ಕಪ್ಪು, ಬಿಳಿ, ಕೆಂಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಟೀಲ್‌ ಬರ್ಡ್ ಕಂಪನಿಯು ಹ್ಯಾಂಡ್ಸ್ ಫ್ರೀ ಅಲ್ಲದ ಹೆಲ್ಮೆಟ್ ಅನ್ನು ಸಹ ಮಾರಾಟ ಮಾಡುತ್ತದೆ. ಇದರ ಬೆಲೆ ರೂ. 1,339 ಗಳಾಗಿದೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ಈ ಹೆಲ್ಮೆಟ್ ಅನ್ನು ಎಸ್‌ಬಿ‌ಎ 1 ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹೆಲ್ಮೆಟ್ ಹ್ಯಾಂಡ್ಸ್ ಫ್ರೀ ಸೌಲಭ್ಯ ಹೊಂದಿಲ್ಲದಿದ್ದರೂ ಹೆಚ್ಚು ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಎಸ್‌ಬಿ‌ಎ 1 ಹೆಚ್‌ಎಫ್ ಹಾಗೂ ಎಸ್‌ಬಿ‌ಎ 1 ಹೆಲ್ಮೆಟ್‌ಗಳನ್ನು ಹೆಚ್ಚು ಸುರಕ್ಷತಾ ಫೀಚರ್ ಗಳೊಂದಿಗೆ ಅಭಿವೃದ್ಧಿಪಡಿಸಿದೆ.

ಹೊಸ ರೈಡಿಂಗ್ ಗ್ಲೌಸ್‌ಗಳನ್ನು ಬಿಡುಗಡೆಗೊಳಿಸಿದ Steel Bird

ದ್ವಿಚಕ್ರ ಸವಾರರಿಗೆ ಹೆಚ್ಚಿನ ರಕ್ಷಣೆ ನೀಡುವ ಅಗತ್ಯವನ್ನು ಆಧರಿಸಿ ಈ ಎರಡೂ ಹೆಲ್ಮೆಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್ ಸಂಗೀತ ಆಲಿಸುವಾಗ ಅಥವಾ ಕರೆ ಮಾಡುವಾಗ ಹೊರಗಿನ ಶಬ್ದಗಳನ್ನು ಕೇಳುವ ಸಾಮರ್ಥ್ಯವನ್ನು ಹೊಂದಿದೆ. ಆಂಬ್ಯುಲೆನ್ಸ್ ಅಥವಾ ಇತರ ವಾಹನಗಳ ಶಬ್ದಗಳನ್ನು ಕೇಳಲು ಸುಲಭವಾಗುವಂತೆ ಈ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

Most Read Articles

Kannada
English summary
Steelbird launches new riding gloves for two wheeler riders details
Story first published: Wednesday, December 8, 2021, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X