Just In
- 12 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 13 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 14 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 15 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಫುಲ್-ಫೇಸ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್
ಸ್ಟಡ್ಸ್ ಕಂಪನಿಯು ತನ್ನ ಜನಪ್ರಿಯ ಥಂಡರ್ ಡಿ ಸರಣಿಯಲ್ಲಿ ಹೊಸದಾಗಿ ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಫುಲ್-ಫೇಸ್ ಹೆಲ್ಮೆಟ್ ಬಿಡುಗಡೆ ಮಾಡಿದ್ದು, ಹೊಸ ವಿನ್ಯಾಸ ಹೊಂದಿರುವ ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಬಿಎಸ್ಐ ಸ್ಟ್ಯಾಂಡರ್ಡ್ ನಿಯಮಾನುಸಾರವಾಗಿ ಅಭಿವೃದ್ದಿ ಹೊಂದಿದೆ.
ಸ್ಟಡ್ಸ್ ಕಂಪನಿಯ ಥಂಡರ್ ಡಿ ಸರಣಿಯಲ್ಲಿರುವ ಪ್ರಮುಖ ಹೆಲ್ಮೆಟ್ ಮಾದರಿಗಳಲ್ಲೇ ತುಸು ವಿಭಿನ್ನ ವಿನ್ಯಾಸ ಹೊಂದಿರುವ ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಉತ್ತಮ ಬೆಲೆಯೊಂದಿಗೆ ಬೈಕ್ ಸವಾರರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿದ್ದು, ಹೆಲ್ಮೆಟ್ ಬಳಕೆಯು ಸುಲಭವಾಗಿಸಲು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಹೊಸತನ ಪರಿಚಯಿಸುವ ಮೂಲಕ ಬೈಕ್ ಸವಾರರನ್ನು ಸೆಳೆಯುತ್ತಿದೆ.
ಮತ್ತೊಂದು ಪ್ರಮುಖ ವಿಚಾರವೆಂದರೆ ಥಂಡರ್ ಡಿ ಸರಣಿಯಲ್ಲಿ ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಥಂಡರ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಥಂಡರ್ ಡಿ6 ಡಿಕೋರ್ ಮಾದರಿಗಿಂತಲೂ ಕೆಲವು ಹೆಚ್ಚುವರಿ ಫೀಚರ್ಸ್ ಪಡೆದುಕೊಂಡಿದೆ.
ಫುಲ್ ಫೇಸ್ ವೈಶಿಷ್ಟ್ಯತೆಯ ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಪ್ರತಿಸ್ಪರ್ಧಿ ಕಂಪನಿಗಳ ಹೆಲ್ಮೆಟ್ ಮಾದರಿಗಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಹೆಲ್ಮೆಟ್ ಬೆಲೆಯನ್ನು ಆರಂಭಿಕವಾಗಿ ರೂ. 1,595 ನಿಗದಿಪಡಿಸಿದೆ.
ಸ್ಟಡ್ಸ್ ಕಂಪನಿಯು ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯನ್ನು ಮೀಡಿಯಂ, ಲಾರ್ಜ್ ಮತ್ತು ಎಕ್ಸ್ಟಾ ಲಾರ್ಜ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಬೈಕ್ ಸವಾರರು ತಮ್ಮ ಬೇಡಿಕೆಗೆ ಅನುಗುಣವಾಗಿ ಮೀಡಿಯಂ(570-ಎಂಎಂ), ಲಾರ್ಜ್(580-ಎಂಎಂ) ಮತ್ತು ಎಕ್ಸ್ಟಾ ಲಾರ್ಜ್(600-ಎಂಎಂ) ಮಾದರಿಗಳನ್ನು ಖರೀದಿ ಮಾಡಬಹುದು.
ಜೊತೆಗೆ ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಹೆಲ್ಮೆಟ್ ಒಟ್ಟು ಹತ್ತು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬ್ಲ್ಯಾಕ್ ಎನ್2, ಬ್ಲ್ಯಾಕ್ ಎನ್4, ಬ್ಲ್ಯಾಕ್, ಎನ್5, ಬ್ಲ್ಯಾಕ್ ಎನ್10, ಮ್ಯಾಟ್ ಬ್ಲ್ಯಾಕ್ ಎನ್1, ಮ್ಯಾಟ್ ಬ್ಲ್ಯಾಕ್ ಎನ್2, ಮ್ಯಾಟ್ ಬ್ಲ್ಯಾಕ್ ಎನ್3, ಮ್ಯಾಟ್ ಬ್ಲ್ಯಾಕ್ ಎನ್4, ಮ್ಯಾಟ್ ಬ್ಲ್ಯಾಕ್ ಎನ್5 ಮತ್ತು ಮ್ಯಾಟ್ ಬ್ಲ್ಯಾಕ್ ಎನ್10 ಬಣ್ಣಗಳೊಂದಿಗೆ ಗ್ಲಾಸ್ ಮತ್ತು ಮ್ಯಾಟೆ ಫಿನಿಶ್ ಹೊಂದಿರುತ್ತವೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ
ಇನ್ನು ಹೊಸ ನಿಂಜಾ ಎಲೈಟ್ ಸೂಪರ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಯುವಿ ರೆಸಿಸ್ಟೆಂಟ್ ಪೇಂಟ್, ಚಿನ್ ಸ್ಟ್ಯಾಪ್ನೊಂದಿಗೆ ಗಲ್ಲದ ಭಾಗಕ್ಕೆ ಪೂರ್ಣ ಪ್ರಮಾಣದ ಸುರಕ್ಷತೆ ನೀಡಲಿದ್ದು, ಒಳಭಾಗದಲ್ಲಿ ಪ್ರೀಮಿಯಂ ಫ್ರ್ಯಾಬಿಕ್ ಬಟ್ಟೆಯನ್ನು ಬಳಕೆ ಮಾಡಿರುವುದರಿಂದ ಲಾಂಗ್ ರೈಡ್ ಸಂದರ್ಭದಲ್ಲೂ ಹೆಲ್ಮೆಟ್ ಬಳಕೆ ಕಿರಿಕಿರಿ ಉಂಟು ಮಾಡುವುದಿಲ್ಲ.
ಹಾಗೆಯೇ ಹೊಸ ಹೆಲ್ಮೆಟ್ ಸ್ಕ್ರ್ಯಾಚ್ ಫ್ರೀ ವೈಶಿಷ್ಟ್ಯತೆ ಹೊಂದಿರುವುದರಿಂದ ಹೆಲ್ಮೆಟ್ ಯಾವಗಲೂ ಹೊಸರಂತೆ ಕಾಣಲಿದ್ದು, ಬಿಸಿಲು, ಮಳೆಗಾಲ ಸಂದರ್ಭದಲ್ಲೂ ಈ ಹೆಲ್ಮೆಟ್ ಅನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!
ಈ ಮೂಲಕ ಗುಣಮಟ್ಟ, ವಿಶ್ವಾಸಾರ್ಹತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಸ್ಟಡ್ಸ್ ಕಂಪನಿಯು ಈಗಾಗಲೇ ಹಲವಾರು ಮಾದರಿಯ ಹೆಲ್ಮೆಟ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇತ್ತೀಚೆಗೆ ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಸೂಚಿಸಿರುವ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಹೊಸ ಹೆಲ್ಮೆಟ್ಗಳನ್ನು ಮರು ವಿನ್ಯಾಸಗೊಳಿಸಿ ಬಿಡುಗಡೆ ಮಾಡುತ್ತಿದೆ.