ಬೆಲೆ ಏರಿಕೆ ಪಡೆದುಕೊಂಡ ಸುಜುಕಿ ಆಕ್ಸೆಸ್ 125 ಸ್ಕೂಟರ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ತನ್ನ ಸರಣಿಯಲ್ಲಿರುವ ಆಕ್ಸೆಸ್ 125 ಸ್ಕೂಟರ್‌ನ ಬೆಲೆಯನ್ನು ಪರಿಷ್ಕರಿಸಿದೆ. ಇದರಿಂದಾಗಿ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಸುಜುಕಿ ಆಕ್ಸೆಸ್ 125 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದಾಗಿದೆ. ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಏಳು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಬೆಲೆ ಏರಿಕೆಯ ಬಳಿಕ ಎಲ್ಲಾ ರೂಪಾಂತರಗಳ ಅನುಗುಣವಾಗಿ ಹೇಳುವುದಾದರೆ, ಸುಜುಕಿ ಆಕ್ಸೆಸ್ 125 ಸ್ಕೂಟರ್ ಡ್ರಮ್ ವಿತ್ ಸ್ಟೀಲ್ ರೂಪಾಂತರದ ಬೆಲೆಯು ರೂ.74,270, ಡ್ರಮ್ ವಿತ್ ಅಲಾಯ್ ರೂಪಾಂತರದ ಬೆಲೆಯು ರೂ.75,971 ಗಳಾದರೆ, ಡಿಸ್ಕ್ ವಿಥ್ ಅಲಾಯ್ ರೂಪಾಂತರದ ಬೆಲೆಯು ರೂ.77,971 ಗಳಾಗಿದೆ.

ಇನ್ನು ಸುಜುಕಿ ಆಕ್ಸೆಸ್ 125 ಸ್ಕೂಟರ್ ಸ್ಪೆಷಲ್ ಎಡಿಷನ್ ಡ್ರಮ್ ವಿತ್ ಅಲಾಯ್ ರೂಪಾಂತರದ ಬೆಲೆಯು ರೂ.77,670, ಸ್ಪೆಷಲ್ ಎಡಿಷನ್ ಡಿಸ್ಕ್ ವಿತ್ ಅಲಾಯ್ ರೂಪಾಂತರದ ಬೆಲೆಯು ರೂ.79,671, ಬ್ಲೂಟೂತ್ ಫೀಚರ್ ಒಳಗೊಂಡಿರುವ ಡ್ರಮ್/ಅಲಾಯ್ ರೂಪಾಂತರದ ಬೆಲೆಯು ರೂ.81,471 ಗಳಾದರೆ, ಬ್ಲೂಟೂತ್ (ಡಿಸ್ಕ್ / ಅಲಾಯ್) ರೂಪಾಂತರದ ಬೆಲೆಯು ರೂ.83,472 ಗಳಾಗಿದೆ.

ಈ ಎಲ್ಲಾ ಬೆಲೆಗಳು ಮುಂಬೈ ಎಕ್ಸ್ ಶೋರೂಂ ಪ್ರಕಾರವಾಗಿದೆ. ಎಂಟ್ರಿ ಲೆವೆಲ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ನಲ್ಲಿ ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಸುಜುಕಿ ಆಕ್ಸೆಸ್ 125 ಸ್ಕೂಟರ್‌ನಲ್ಲಿ 124 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8.6 ಬಿಹೆಚ್‌ಪಿ ಪವರ್ ಮತ್ತು 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಟಾರ್ಕ್ ಅಂಕಿ ಅಂಶದಲ್ಲಿ 0.2 ಎನ್ಎಂ ಟಾರ್ಕ್ ಕಡಿಮೆಯಾಗಿದೆ.

ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ಎಲ್ಲಾ ರೂಪಾಂತರಗಳು ಎಲ್‌ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಟಾಪ್ ಸ್ಪೆಕ್ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದನ್ನು ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಜೋಡಿಸಲಾಗಿದೆ.

ಸುಜುಕಿ ಆಕ್ಸೆಸ್ 125 ಸ್ಕೂಟರ್ ಪರ್ಲ್ ಸುಜುಕಿ ಡೀಪ್ ಬ್ಲೂ, ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್, ಪರ್ಲ್ ಮಿರಾಜ್ ವೈಟ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಸ್ಕೂಟರ್ 1,870 ಎಂಎಂ ಉದ್ದ, 690 ಎಂಎಂ ಅಗಲ ಮತ್ತು 1,160 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಸ್ಕೂಟರ್ 1,265 ಎಂಎಂ ವ್ಹೀಲ್ ಬೇಸ್ ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಸುಜುಕಿ ಆಕ್ಸೆಸ್ 125 ಮಾದರಿಯು ಭಾರತೀಯ ಮಾರರುಕಟ್ಟೆಯಲ್ಲಿ ಆಕ್ಟಿವಾ 125 ಮತ್ತು ಹೀರೋ ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ. ಸುಜುಕಿ ಆಕ್ಸೆಸ್ 125 ಸ್ಕೂಟರ್ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ.


Click it and Unblock the Notifications








