ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್
ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಹಲವ್ವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದೀಗ ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‍ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬ್ರ್ಯಾಂಡ್‌ನ ಜನಪ್ರಿಯ ಬರ್ಗ್‌ಮನ್ ಸ್ಟ್ರೀಟ್ 125 ಮ್ಯಾಕ್ಸಿ-ಸ್ಕೂಟರ್ ಆಧರಿಸಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ದಿ ಪಡಿಸುತ್ತಿದೆ. ಸುಜುಕಿ ಮೋಟಾರ್‍ಸೈಕಲ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಸ್ಫಾಟ್ ಟೆಸ್ಟ್ ನಡೆಸಿದೆ.ಈ ಹೊಸ ಸುಜುಕಿ ಬರ್ಗ್‌ಮನ್ ಎಲೆಕ್ಟ್ರಿಕ್ ಸ್ಕೂಟರ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ಗಾಡಿವಾಡಿ ಬಹಿರಂಗಪಡಿಸಿದೆ.

ಸ್ಪೈ ಚಿತ್ರದಲ್ಲಿ ಕಂಡುಬಂದತೆ ಸುಜುಕಿ ಬರ್ಗ್‌ಮನ್ ಎಲೆಕ್ಟ್ರಿಕ್ ಸ್ಕೂಟರ್ ಬಹುತೇಕೆ ತನ್ನ ಪೆಟ್ರೋಲ್ ಮಾದರಿಯ ವಿನ್ಯಾಸವನ್ನು ಹೊಂದಿಕೊಂಡಿದೆ. ಆದರೆ ಎಲೆಕ್ಟ್ರಿಕ್ ಮಾದರಿಯಲ್ಲಿ ವಿನ್ಯಾಸದಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಸುಜುಕಿ ಬರ್ಗ್‌ಮನ್ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ರೀತಿಯ ಹೆಡ್‌ಲ್ಯಾಂಪ್, ಫ್ರಂಟ್ ಕೌಲ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಫ್ರಂಟ್ ಏಪ್ರನ್ ಮತ್ತು ಸೈಡ್ ಮತ್ತು ರಿಯರ್ ಪ್ಯಾನೆಲ್‌ಗಳನ್ನು ಒಳಗೊಂಡಿವೆ.

ಮತ್ತೊಂದು ವ್ಯತ್ಯಾಸವೆಂದರೆ ಹಿಂದಿನ ವ್ಹೀಲ್ ಬಳಿ ಎಕ್ಸಾಸ್ಟ್ ಪೈಪ್ ಆಗಿದೆ, ಸ್ಕೂಟರ್‌ನ ಬಲಭಾಗವನ್ನು ಈಗ ಸ್ವಿಂಗಾರ್ಮ್-ಮೌಂಟಡ್ ಸಸ್ಪೆಂಕ್ಷನ್ ಸೆಟಪ್ ನೊಂದಿಗೆ ಕಾಣಬಹುದು. ಇನ್ನು ಎಡಭಾಗದಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಸುಜುಕಿ ಹೊಸ ಬರ್ಗ್‌ಮನ್ ಸ್ಟ್ರೀಟ್ 125 ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯೊಂದಿರುವ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪರಿಚಯಿಸಿತು. ಹೊಸ ಎಲೆಕ್ಟ್ರಿಕ್ ಮಾದರಿಯಲ್ಲಿಯು ಅದೇ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾದ ಹೊಸ ಕ್ಲಸ್ಟರ್ ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮೆಸೇಜ್ & ಕಾಲ್ ಅಲರ್ಟ್‌ಗಳು ಮತ್ತು ಇತರ ವಾಹನ ಅಂಕಿಅಂಶಗಳನ್ನು ಸಹ ಪ್ರದರ್ಶಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್ ಮೋಟಾರ್ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗಗೊಂಡಿಲ್ಲ. ಆದರೆ ಇದರ ಮೋಟಾರ್ ತನ್ನ ಪ್ರತಿಸ್ಪರ್ಧಿಗಳಾದ ಬಜಾಜ್ ಚೇತಕ್ ಎಲೆಕ್ಟ್ರಿಕ್, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಮತ್ತು ಅಥರ್ 450 ಎಕ್ಸ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಈ ವರ್ಷದ ಕೊನೆಯಲ್ಲಿ ಸುಜುಕಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸುಜುಕಿ ಕಂಪನಿಯು ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ.


Click it and Unblock the Notifications








