ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳು
ಭಾರತದ ಗ್ರಾಹಕರ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬೈಕ್‌ಗಳ ಆಯ್ಕೆಗಳಿವೆ. ಪ್ರತಿ ವಿಭಾಗದಲ್ಲಿಯು ಹಲವು ವಿಧದ ಆಯ್ಕೆಗಳಿವೆ. ಪ್ರತಿ ಖರೀದಿದಾರನು ವಿಭಿನ್ನ ಅವಶ್ಯಕತೆಗಳನ್ನು ಹೊಂದಿರಬಹುದು. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ವಿಭಿನ್ನ ಆಯ್ಕೆಗಳಿವೆ.

ಇತ್ತೀಚೆಗೆ ಬಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದ ಮತ್ತು ಅತಿ ಹೆಚ್ಚು ಮೈಲೇಜ್ ಅನ್ನು ಒದಗಿಸುವ ಬೈಕ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಮಾಧ್ಯಮ ವರ್ಗದವರಿಗೂ ಕಡಿಮೆ ಬೆಲೆಯಲ್ಲಿ ಖರೀಸಬಹುದಾದ ಜನಪ್ರಿಯ ಬೈಕ್‌ಗಳ ಆಯ್ಕೆಗಳಿವೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬಜಾಜ್ ಪಲ್ಸರ್ ಎನ್ಎಸ್125
ಪಲ್ಸರ್ ಎನ್ಎಸ್ ಮಾದರಿಗಳು ಪ್ರೀಮಿಯಂ ಬೈಕ್ ಸರಣಿಯಲ್ಲಿ ತಮ್ಮದೆ ಆದ ಜನಪ್ರಿಯತೆ ಹೊಂದಿದೆ. ಎನ್ಎಸ್ ಸರಣಿಯಲ್ಲಿ ಎನ್ಎಸ್125 ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ಬಜಾಜ್ ಪಲ್ಸರ್ ಎನ್ಎಸ್125 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.99,347 ಆಗಿದೆ.

ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯನ್ನು ಪಲ್ಸರ್ ಎನ್ಎಸ್ 160 ಮಾದರಿಯನ್ನು ಆಧರಿಸಿ ಅಭಿವೃದ್ದಿಪಡಿಸಿರುವ ಬಜಾಜ್ ಆಟೋ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ನೀಡಿದ್ದಾರೆ. ಫೀಚರ್ಸ್ ಮತ್ತು ಪರ್ಫಾಮೆನ್ಸ್‌ನಲ್ಲಿ ಈ ಬೈಕ್ ತನ್ನ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಈ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಬರ್ನ್ಟ್ ರೆಡ್, ಪ್ಯೂಟರ್ ಗ್ರೇ, ಸ್ಯಾಫೈರ್ ಬ್ಲೂ ಮತ್ತು ಆರೆಂಜ್ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಎನ್ಎಸ್125 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಇನ್ನು ಈ ಹೊಸ ಪಲ್ಸರ್ ಎನ್ಎಸ್125 ಬೈಕಿನಲ್ಲಿ 124.45 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 11.6 ಬಿಹೆಚ್ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 11 ಎನ್ಎಂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಬೈಕಿನ ಸೀಟ್ 805 ಎಂಎಂ ಎತ್ತರದಲ್ಲಿ ಇರಿಸಲಾಗಿದೆ. ಇನ್ನು ಈ ಬೈಕ್ 144 ಕೆಜಿ ತೂಕವನ್ನು ಹೊಂದಿದೆ.

ಹೋಂಡಾ ಎಸ್‌ಪಿ 125
ಈ ಹೋಂಡಾ ಎಸ್‌ಪಿ 125 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.78,810 ಆಗಿದೆ. ಈ ಹೋಂಡಾ ಎಸ್‌ಪಿ 125 ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್ಪಿ ಪವರ್ ಹಾಗೂ 9,000 ಆರ್‌ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಈ ಎಸ್‌ಪಿ 125 ಬೈಕಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಬೈಕಿನ ಸರಾಸರಿ ಮೈಲೇಜ್, ಚಲಿಸಿರುವ ದೂರ, ಗೇರ್ ಪೊಸಿಷನ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‍ಗಳ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಎಸ್‌ಪಿ 125 ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಂಜಿನ್ ಸ್ಟಾರ್ಟ್/ಸ್ಟಾಪ್, ಇಂಟಿಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್, ಪಾಸಿಂಗ್ ಸ್ವಿಚ್, ಸ್ಪೋರ್ಟಿ ಅಲಾಯ್ ವ್ಹೀಲ್ಸ್ ಹಾಗೂ ಕ್ರೋಮ್ ಎಕ್ಸಾಸ್ಟ್ ಮಫ್ಲರ್ ಕವರ್‍ಗಳನ್ನು ಸಹ ಹೊಂದಿದೆ.

ಈ ಹೋಂಡಾ ಎಸ್‍ಪಿ 125 ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಟ್ಯಾಂಕ್ ವಿನ್ಯಾಸವನ್ನು ಹೊಂದಿದೆ. ಈ ಬೈಕ್ ಸ್ಟ್ರೈಕಿಂಗ್ ಗ್ರೀನ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹೀರೋ ಗ್ಲ್ಯಾಮರ್
ಗ್ಲ್ಯಾಮರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರಯಾಣಿಕರ ಬೈಕುಗಳಲ್ಲಿ ಒಂದಾಗಿದೆ. ಈ ಹೀರೋ ಗ್ಲ್ಯಾಮರ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.75,900 ಆಗಿದೆ. ಈ ಬೈಕಿಗೆ ಹೀರೋ ಮೋಟೋಕಾರ್ಪ್‌ನ ವ್ಯಾಪಕ ಡೀಲರ್‌ಶಿಪ್ ಮತ್ತು ಸೇವಾ ನೆಟ್‌ವರ್ಕ್ ಸಹ ಬೆಂಬಲಿಸುತ್ತದೆ

ಹೀರೋ ಗ್ಲ್ಯಾಮರ್ ಬೈಕನ್ನು ಬಿಎಸ್-6 ಆಗಿ ಬಿಡುಗಡೆಗೊಳಿಸವಾಗ ಕೆಲವು ನವೀಕರಣಗಳೊಂದಿಗೆ ಪರಿಚಯಿಸಿದ್ದರು. ಈ ಬೈಕ್ ಫ್ರಂಟ್ ಎಂಡ್, ಫ್ಯೂಯಲ್ ಟ್ಯಾಂಕ್, ಮತ್ತು ಟ್ಯಾಲ್ ಲ್ಯಾಂಪ್ ಗಳ ವಿನ್ಯಾಸವನ್ನು ನವೀಕರಿಸಿದ್ದರು. ಇದು ಮೊದಲಿಗಿಂತ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತದೆ. ಇನ್ನು ಈ ಹೀರೋ ಗ್ಲ್ಯಾಮರ್ ಬೈಕ್ ಎಲ್ಇಡಿ ಡಿಆರ್ಎಲ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ.

ಹೀರೋ ಗ್ಲ್ಯಾಮರ್ ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ (ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ) ಅನ್ನು ಹೊಂದಿದೆ. ಹೀರೋ ಗ್ಲ್ಯಾಮರ್ ಬ್ಲೇಜ್ ಬೈಕ್ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಅನ್ನು ಹೊಂದಿರುತ್ತದೆ.

ಬಜಾಜ್ ಪಲ್ಸರ್ 150
ಪಲ್ಸರ್ 150 ಬಜಾಜ್ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ಈ ಬಜಾಜ್ ಪಲ್ಸರ್ 150 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.99,418 ಆಗಿದೆ.

ಬಜಾಜ್ ಪಲ್ಸರ್ 150 ಬೈಕಿನಲ್ಲಿ 149.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ವಾಲ್ವ್ ಏರ್-ಕೂಲ್ಡ್ ಹೊಂದಿರುವ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 13.8 ಬಿಹೆಚ್ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 13.25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಾದರಿಯು ಬಜಾಜ್ ಆಟೋದ ಪೇಟೆಂಟ್ ಪಡೆದ ಡಿಟಿಎಸ್-ಐ (ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನಿಷನ್) ತಂತ್ರಜ್ಞಾನವನ್ನು ಹೊಂದಿರುತ್ತದೆ. ಇದು ಬೈಕ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.


Click it and Unblock the Notifications