ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

ದೇಶಿಯ ವಾಹನ ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಬೈಕ್‌ಗಳ ಜೊತೆಗೆ ಕೈಗೆಟುಕುವ, ಬಜೆಟ್ ಬೆಲೆಯ ಬೈಕ್‌ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಪ್ರತಿ ತಿಂಗಳು ಕೈಗೆಟುಕುವ ಬೆಲೆಯ ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್ 5 ಬೈಕುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

5. ಬಜಾಜ್ ಪ್ಲಾಟಿನಾ 100

ಬಜಾಜ್ ಆಟೋದ ಪ್ಲಾಟಿನಾ 100 ಬೈಕ್ ಅನ್ನು ಡ್ರಮ್ ಬ್ರೇಕ್ ಹಾಗೂ ಡಿಸ್ಕ್ ಬ್ರೇಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಡ್ರಮ್ ಬ್ರೇಕ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.59,859ಗಳಾದರೆ, ಡಿಸ್ಕ್ ಬ್ರೇಕ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.63,578ಗಳಾಗಿದೆ.

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

ಈ ಬೈಕಿನಲ್ಲಿ ಬಜಾಜ್ ಆಟೋ ಕಂಪನಿಯು 102 ಸಿಸಿಯ 4-ಸ್ಟ್ರೋಕ್, ಡಿಟಿಎಸ್-ಐ, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.8 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 8.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

4. ಟಿವಿಎಸ್ ಸ್ಪೋರ್ಟ್

ಟಿವಿಎಸ್ ಮೋಟಾರ್ ಕಂಪನಿಯು ಈ ಬೈಕ್ ಅನ್ನು ಕಿಕ್ ಸ್ಟಾರ್ಟ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡುತ್ತದೆ. ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.56,100ಗಳಾದರೆ, ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.62,950ಗಳಾಗಿದೆ. ಈ ಬೈಕಿನಲ್ಲಿ ಅಳವಡಿಸಿರುವ 109.7 ಸಿಸಿ ಎಂಜಿನ್ 8.2 ಬಿಹೆಚ್‌ಪಿ ಪವರ್ ಹಾಗೂ 8.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

3. ಬಜಾಜ್ ಸಿಟಿ 110

ಬಜಾಜ್ ಸಿಟಿ 110, ಸಿಟಿ 100 ಬೈಕಿನ ಪ್ರೀಮಿಯಂ ಆವೃತ್ತಿಯಾಗಿದ್ದು, ಕೆಲವು ಹೆಚ್ಚುವರಿ ಫೀಚರ್'ಗಳನ್ನು ಹೊಂದಿದೆ. ಈ ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.54,138ಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

ಈ ಬೈಕ್‌ನಲ್ಲಿ ಬಜಾಜ್ ಆಟೋ ಕಂಪನಿಯು 115.45 ಸಿಸಿಯ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 8.5 ಬಿಹೆಚ್‌ಪಿ ಪವರ್ ಹಾಗೂ 5,000 ಆರ್‌ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

2. ಹೀರೋ ಹೆಚ್ಎಫ್ ಡೀಲಕ್ಸ್

ಹೆಚ್‌ಎಫ್ ಡೀಲಕ್ಸ್ ಹೆಚ್ಚು ಮಾರಾಟವಾಗುವ ಹೀರೋ ಮೋಟೊಕಾರ್ಪ್ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ 2020ರ ಡಿಸೆಂಬರ್‌ ತಿಂಗಳಿನಲ್ಲಿ 1.4 ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. ಈ ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.51,200 ರಿಂದ ರೂ.61,225ಗಳಾಗಿದೆ. ಈ ಬೈಕಿನಲ್ಲಿ 97.2 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

1. ಬಜಾಜ್ ಸಿಟಿ 100

ಭಾರತದಲ್ಲಿ ಸದ್ಯಕ್ಕೆ ಕಡಿಮೆ ಬೆಲೆಯನ್ನು ಹೊಂದಿರುವ ಬೈಕ್ ಬಜಾಜ್ ಸಿಟಿ 100 ಮಾತ್ರ. ಈ ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.47,654ಗಳಾಗಿದೆ. ಈ ಬೈಕ್ ಅನ್ನು ಕಿಕ್ ಸ್ಟಾರ್ಟ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು

ಈ ಬೈಕಿನಲ್ಲಿ 102 ಸಿಸಿಯ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.8 ಬಿಹೆಚ್‌ಪಿ ಪವರ್ ಹಾಗೂ 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 4-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

Article Published On: Wednesday, January 27, 2021, 10:01 [IST]
English summary
Top five most affordable bikes available in Indian market. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+