ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವಾಹನಗಳನ್ನು ಆಯಾ ಕಂಪನಿಗಳು ನಿರಂತರವಾಗಿ ಅಪ್ ಡೇಟ್ ಮಾಡುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ವಾಹನ ತಯಾರಕ ಕಂಪನಿಗಳು ಹೊಸ ಫೀಚರ್'ಗಳೊಂದಿಗೆ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಈ ಫೀಚರ್'ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸಹ ಸೇರಿದೆ. ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಈ ಫೀಚರ್ ಅನ್ನು ತಮ್ಮ ಕೆಲವು ವಾಹನಗಳಲ್ಲಿ ನೀಡುತ್ತಿವೆ. ಬ್ಲೂಟೂತ್ ಕನೆಕ್ಟಿವಿಟಿ ಅಡ್ವಾನ್ಸ್ದ್ ಫೀಚರ್ ಆಗಿದ್ದು, ಈ ಫೀಚರ್ ಮೂಲಕ ಸ್ಮಾರ್ಟ್‌ಫೋನ್ ಅನ್ನು ದ್ವಿಚಕ್ರ ವಾಹನಗಳ ಕ್ಲಸ್ಟರ್‌ಗೆ ಕನೆಕ್ಟ್ ಮಾಡಬಹುದು.

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಬ್ಲೂಟೂತ್ ಕನೆಕ್ಟಿವಿಟಿ ಮೂಲಕ ವಾಹನದ ಹಲವು ಫೀಚರ್'ಗಳನ್ನು ಆಕ್ಸೆಸ್ ಮಾಡಬಹುದು. ಭಾರತದಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ನೀಡುವ ಟಾಪ್ 5 ದ್ವಿಚಕ್ರ ವಾಹನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

1. ಟಿವಿಎಸ್ ಎನ್‌ಟಾರ್ಕ್ 125

ದೇಶಿಯ ಮಾರುಕಟ್ಟೆಯಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಬಿಡುಗಡೆಯಾದ ಮೊದಲ ಸ್ಕೂಟರ್ ಟಿವಿಎಸ್ ಎನ್‌ಟಾರ್ಕ್ 125. ಈ ಸ್ಕೂಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಅತ್ಯಾಧುನಿಕ ಕನ್ಸೋಲ್ ಹೊಂದಿದೆ. ಈ ಸ್ಕೂಟರ್ 5 ಇಂಚಿನ ಎಲ್‌ಸಿ‌ಡಿ ಡಿಸ್'ಪ್ಲೇ ಹೊಂದಿದೆ.

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಈ ಡಿಸ್'ಪ್ಲೇ ಲ್ಯಾಪ್ ಟೈಮರ್, ಗಂಟೆಗೆ 0-60 ಕಿ.ಮೀ ರೆಕಾರ್ಡರ್, ಟಾಪ್ ಸ್ಪೀಡ್ ರೆಕಾರ್ಡರ್, ಎಂಜಿನ್ ಟೆಂಪರೇಚರ್ ಗೇಜ್, ಸರಾಸರಿ ಸ್ಪೀಡ್ ಇಂಡಿಕೇಟರ್, ಸರ್ವೀಸ್ ರಿಮ್ಯಾಂಡರ್ ಮುಂತಾದವುಗಳನ್ನು ಪ್ರದರ್ಶಿಸುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಎನ್‌ಟಾರ್ಕ್ 125 ಸ್ಕೂಟರಿನಲ್ಲಿ ಕಂಪನಿಯ ಸ್ಮಾರ್ಟ್ ಕನೆಕ್ಟ್ ಟೆಕ್ನಾಲಜಿಯನ್ನು ನೀಡಲಾಗಿದೆ. ಈ ಸ್ಕೂಟರಿನ ಬೆಲೆ ರೂ.70,555ರಿಂದ ರೂ.79,535ಗಳಾಗಿದೆ.

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

2. ಸುಜುಕಿ ಆಕ್ಸೆಸ್ 125 / ಬರ್ಗ್‌ಮನ್ ಸ್ಟ್ರೀಟ್

2020ರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಕನ್ಸೋಲ್‌ಗಳೊಂದಿಗೆ ಸುಜುಕಿ ಆಕ್ಸೆಸ್ 125 ಹಾಗೂ ಬರ್ಗ್‌ಮನ್ 125 ಸ್ಕೂಟರ್'ಗಳನ್ನು ಅಪ್ ಡೇಟ್ ಮಾಡಲಾಯಿತು.ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡ್ರಮ್ ಬ್ರೇಕ್ ಮಾದರಿಯ ಆಕ್ಸೆಸ್ 125 ಸ್ಕೂಟರಿನ ಬೆಲೆ ರೂ.78,200ಗಳಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡಿಸ್ಕ್ ಬ್ರೇಕ್ ಮಾದರಿಯ ಆಕ್ಸೆಸ್ 125 ಸ್ಕೂಟರಿನ ಬೆಲೆ ರೂ.80,200ಗಳಾದರೆ, ಬರ್ಗ್‌ಮನ್ ಸ್ಕೂಟರಿನ ಬೆಲೆ ರೂ.86,200ಗಳಾಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಹೊಂದಿಲ್ಲದ ಸ್ಕೂಟರ್‌ಗಳ ಬೆಲೆ ರೂ.4,000ಗಳಷ್ಟು ಕಡಿಮೆಯಾಗಿದೆ.

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

3. ಯಮಹಾ ಎಫ್‌ಜೆಡ್‌ಎಸ್-ಎಫ್‌ಐ

ಯಮಹಾ ಎಫ್‌ಜೆಡ್‌ಎಸ್-ಎಫ್‌ಐ ಬೈಕ್ ಅನ್ನು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಅಪ್ ಡೇಟ್ ಮಾಡಲಾಗಿದೆ. ಕನೆಕ್ಟ್ ಎಕ್ಸ್ ಆ್ಯಪ್ ಮೂಲಕ ಈ ಬೈಕ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡುತ್ತದೆ. ಈ ಬೈಕ್ ಪ್ರಯಾಣದ ದೂರ, ಬ್ಯಾಟರಿ ವೋಲ್ಟೇಜ್ ಹಾಗೂ ಸರಾಸರಿ ವೇಗದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಇದರ ಜೊತೆಗೆ ಈ ಬೈಕ್ ಲೊಕೇಟ್ ಮೈ ಬೈಕ್ ಹಾಗೂ ಆನ್ಸರ್ ಬ್ಯಾಕ್ ಫೀಚರ್ ಹೊಂದಿದೆ. ಈ ಫೀಚರ್'ಗಳು ವಾಹನದ ಸ್ಥಳವನ್ನು ತಿಳಿಯಲು ನೆರವಾಗುತ್ತವೆ. ಇದರ ಜೊತೆಗೆ ಈ ಬೈಕ್ ಹಜಾರ್ಡ್ ಮೋಡ್ ಅನ್ನು ಸಹ ಹೊಂದಿದೆ. ಈ ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1.08 ಲಕ್ಷಗಳಾಗಿದೆ.

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

4. ಹೀರೋ ಎಕ್ಸ್‌ಟ್ರೀಮ್ 200 ಎಸ್, ಎಕ್ಸ್‌ಪಿಎಸ್ 200 ಮತ್ತು ಎಕ್ಸ್‌ಪಿಎಸ್ 200 ಟಿ

ಹೀರೋ ಮೊಟೊಕಾರ್ಪ್‌ನ ಮೂರು 200 ಸಿಸಿ ಬೈಕ್‌ಗಳಾದ ಎಕ್ಸ್‌ಟ್ರೀಮ್ 200 ಎಸ್, ಎಕ್ಸ್‌ಪ್ಲಸ್ 200 ಹಾಗೂ ಎಕ್ಸ್‌ಪ್ಲಸ್ 200 ಟಿ ಬೈಕ್'ಗಳು ಸರಳ ವಿನ್ಯಾಸದ ಎಲ್‌ಸಿಡಿ ಡಿಸ್'ಪ್ಲೇ ಹೊಂದಿವೆ. ಈ ಬೈಕ್'ಗಳು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಹೀರೋ ರೈಡ್‌ಗೈಡ್ ಆ್ಯಪ್ ಮೂಲಕ ಈ ಫೀಚರ್ ಅನ್ನು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದು. ಎಕ್ಸ್‌ಟ್ರೀಮ್ 200 ಎಸ್ ಬೈಕಿನ ಬೆಲೆ ರೂ.1.20 ಲಕ್ಷಗಳಾದರೆ, ಎಕ್ಸ್‌ಪಲ್ಸ್ 200 ಟಿ ಬೈಕಿನ ಬೆಲೆ ರೂ.1.16 ಲಕ್ಷ ಹಾಗೂ ಎಕ್ಸ್‌ಪಲ್ಸ್ 200 ಬೈಕಿನ ಬೆಲೆ ರೂ.1.18 ಲಕ್ಷಗಳಾಗಿದೆ.

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

5. ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ

ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ, ಈ ಸೆಗ್'ಮೆಂಟಿನಲ್ಲಿ ಹೆಚ್ಚು ಫೀಚರ್ ಹೊಂದಿರುವ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿರುವ ಬ್ಲೂಟೂತ್-ಪ್ಯಾರೆಬಲ್ ಇನ್ಸ್'ಟ್ರೂಮೆಂಟ್, ಕ್ಲಸ್ಟರ್ ಲ್ಯಾಪ್ ಟೈಮ್, ಟಾಪ್ ಸ್ಪೀಡ್, ಇನ್ ಕಮಿಂಗ್ ಕಾಲರ್ ಹೆಸರು ಹಾಗೂ ಇನ್ನಿತರ ಹಲವು ಮಾಹಿತಿಯನ್ನು ನೀಡುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಟಾಪ್ 5 ದ್ವಿಚಕ್ರ ವಾಹನಗಳಿವು

ಡೆಡಿಕೇಟೆಡ್ ಫೋನ್ ಆ್ಯಪ್ ಮೂಲಕ ಬೈಕ್ ಸವಾರ ತನ್ನ ರೈಡ್ ಟೆಲಿಮೆಟ್ರಿ, ಗರಿಷ್ಠ ನೇರ ಕೋನವನ್ನು ಟ್ರ್ಯಾಕ್ ಮಾಡಬಹುದು. ಈ ಬೈಕಿನ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1.28 ಲಕ್ಷಗಳಾಗಿದೆ.

Most Read Articles

Kannada
English summary
Top five two wheelers in Indian market with bluetooth features. Read in Kannada.
Story first published: Wednesday, April 7, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X