ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ದ್ವಿಚಕ್ರ ವಾಹನ ತಯಾರಕರು ತಮ್ಮ ಜನಪ್ರಿಯ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಿಧದ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದೆ, ಇದರಿಂದ ಗ್ರಾಹಕರು ತಮ್ಮ ಆದ್ಯತೆಯ ಮೇರೆಗೆ ಸ್ಕೂಟರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ತಯಾರಕರು ಅನೇಕ ಗಮನಾರ್ಹ ಸ್ಕೂಟರ್‌ಗಳನ್ನು ಪರಿಚಯಿಸಿದ್ದರು. ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಹೆಚ್ಚಿನ ನಿರ್ವಹಣೆ ವೆಚ್ಚದಿಂದಾಗಿ. ಆನೇಕ ಬ್ರ್ಯಾಂಡ್‌ಗಳು ಹೈಬ್ರಿಡ್ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಹೊಸ ಸ್ಟಾರ್ಟ್‌ಅಪ್‌ಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ಬಲವಾದ ಪರಿಣಾಮವನ್ನು ಬೀರಿವೆ. ಇದರ ನಡುವೆ ಈ ವರ್ಷ ಗ್ರಾಹಕರ ಸೆಳೆದ ಜನಪ್ರಿಯ 110ಸಿಸಿ ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಹೋಂಡಾ ಆಕ್ಟಿವಾ 6ಜಿ

ಹೋಂಡಾ ಆಕ್ಟಿವಾ 6ಜಿ ತನ್ನ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್ ಕಂಪನಿಯ ಪಿಜಿಎಂ-ಫೈ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಇದರಿಂದಾಗಿ ಈ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರಿಗೆ ಉತ್ತಮ ಕಾರ್ಯಕ್ಷಮತೆ ಮತ್ತು 50 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೋಂಡಾ ಆಕ್ಟಿವಾ 6ಜಿ ಡಿಲಕ್ಸ್ ರೂಪಾಂತರದಲ್ಲಿ ಎಸಿಜಿ ಸ್ಟಾರ್ಟರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಇನ್ನು ಇದರ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಫ್ಯುಯಲ್ ಫಿಲ್ಲರ್ ಕ್ಯಾಪ್ ಅನ್ನು ಕೂಡ ಹೊಂದಿದೆ. ಇನ್ನು ಈ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೂರು ಹಂತದ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಅಂಡರ್-ಸೀಟ್ 18-ಲೀಟರ್ ಸಾಮರ್ಥ್ಯದ ಸ್ಟ್ರೋರೇಜ್ ಸ್ಪೇಸ್ ಅನ್ನು ಹೊಂದಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಹೋಂಡಾ ಡಿಯೋ

ಡಿಯೋ ಸ್ಕೂಟರ್‍ ಇಲ್ಲಿಯವರೆಗೆ 33 ಲಕ್ಷ ಹೆಚ್ಚು ಗ್ರಾಹಕರನ್ನು ಹೊಂದಿದೆ. ಹೋಂಡಾ ಡಿಯೋ ಭಾರತದಿಂದ ಅತಿ ಹೆಚ್ಚು ರಫ್ತು ಮಾಡುವ ಸ್ಕೂಟರ್ ಆಗಿದೆ. ಅಲ್ಲದೇ ದೇಶದಲ್ಲಿ ಮಾರಾಟವಾಗುವ ಟಾಪ್ 10 ಸ್ಕೂಟರ್‍‍ಗಳಲ್ಲಿ ಡಿಯೋ ಕೂಡ ಒಂದಾಗಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಈ ಹೋಂಡಾ ಡಿಯೋ ಸ್ಕೂಟರ್‍‍ನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ರೇಂಜ್, ಸರಾಸರಿ ಇಂಧನ ದಕ್ಷತೆ ಮತ್ತು ರಿಯಲ್ ಟೈಮ್ ಇಂಧನ ದಕ್ಷತೆಯ ವಿವರದ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದಲ್ಲದೆ ಇದು ಟ್ರಿಪ್ ಮೀಟರ್, ಕ್ಲಾಕ್ ಮತ್ತು ಸರ್ವಿಸ್ ಇಂಡಿಕೇಟರ್ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಈ ಹೋಂಡಾ ಡಿಯೋ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಡಿಯೋ ಸ್ಕೂಟರ್ ಮುಂಭಾಗ ಆಕ್ಟಿವಾ 6ಜಿ ಸ್ಕೂಟರ್‍‍ನಂತೆ ಫುಲ್ ಎಲ್‍ಇಡಿ ಹೆಡ್‍‍ಲ್ಯಾಂಪ್ ಮತ್ತು ಡಿ‍ಆರ್‍ಎಲ್ ಅನ್ನು ಅಳವಡಿಸಲಾಗಿದೆ. ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ. ಈ ಹೋಂಡಾ ಡಿಯೋ ಸ್ಕೂಟರ್‍‍ನಲ್ಲಿ 110 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.9 ಬಿ‍‍ಹೆಚ್‍‍ಪಿ ಪವರ್ ಮತ್ತು 8.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಹೀರೋ ಪ್ಲೆಷರ್

ಹೋಂಡಾ ಡಿಯೊದಂತೆಯೇ, ಹೀರೋ ಪ್ಲೆಶರ್ ಹಲವಾರು ವರ್ಷಗಳಿಂದ ಮಾರಾಟದಲ್ಲಿದೆ. ಆದರೆ ಕಂಪನಿಯು ಹೊಸ ಬಣ್ಣದ ಯೋಜನೆಗಳು ಮತ್ತು ವೈಶಿಷ್ಟ್ಯಗಳನ್ನು ನೀಡುವ ಮೂಲಕ ಸ್ಕೂಟರ್ ಅನ್ನು ಪ್ರಸ್ತುತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ಲೆಶರ್ ಸೀಟ್ ಎತ್ತರ ಮತ್ತು ಹಗುರವಾದ ಕರ್ಬ್ ತೂಕವು ಪ್ರಯಾಣಿಸಲು ಸುಲಭವಾದ ಸ್ಕೂಟರ್ ಅನ್ನು ನೋಡುತ್ತಿರುವ ಯುವತಿಯರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಹೊಸ ಸ್ಕೂಟರ್ 110 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ ಹೀರೊ ಕಂಪನಿಯ ಎಕ್ಸ್ ಸೆನ್ಸ್ ಟೆಕ್ನಾಲಜಿಯ ಜೊತೆಗೆ ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ 8 ಬಿ‍‍ಹೆಚ್‍‍ಪಿ ಪವರ್ ಹಾಗೂ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಟಿವಿಎಸ್ ಸ್ಕೂಟಿ ಜೆಸ್ಟ್

ಈ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್‌ನಲ್ಲಿ 109.7 ಸಿಸಿ ಏರ್ ಕೂಲ್ಡ್ ಎಂಜಿನ ಅನ್ನು ಹೊಂದಿದೆ. ಈ ಎಂಜಿನ್ 7.81 ಬಿ‌ಹೆಚ್‌ಪಿ ಪವರ್ ಹಾಗೂ 8.8 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಕೂಟರ್ 57 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಈ ವರ್ಷದ ಜನಪ್ರಿಯ 110ಸಿಸಿ ಸ್ಕೂಟರ್‌ಗಳಿವು..

ಈ ಸ್ಕೂಟರಿನಲ್ಲಿ 110 3ಡಿ ಲೋಗೋ, ಬೀಜ್ ಇಂಟೀರಿಯರ್ ಪ್ಯಾನಲ್, ಡ್ಯುಯಲ್ ಟೋನ್ ಸೀಟ್, ಎಲ್‌ಇಡಿ ಡಿ‌ಆರ್‌ಎಲ್ ಹಾಗೂ ಅಂಡರ್ ಸೀಟ್ ಸ್ಟೋರೇಜ್ ಲೈಟ್‌ನಂತಹ ಫೀಚರ್ ಗಳನ್ನು ನೀಡಲಾಗಿದೆ. ಈ ಸ್ಕೂಟರ್ ಏಪ್ರನ್ ಮೌಂಟೆಡ್ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಹೊರತುಪಡಿಸಿ 19 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹಾಗೂ ಡ್ಯುಯಲ್ ಲಗೇಜ್ ಹುಕ್‌ಗಳನ್ನು ಸಹ ಹೊಂದಿದೆ.

Most Read Articles

Kannada
English summary
Top most popular 110cc scooters in india 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X