ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

2021ರ ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟದ ವರದಿ ಬಹಿರಂಗವಾಗಿದೆ. ಆದರೆ ಕಳೆದ ತಿಂಗಳು ದೇಶದ ಹಲವು ಕಡೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿತ್ತು. ಇನ್ನು ಕರೋನಾ ಭೀತಿಯ ನಡುವೆ ಹಲವು ದ್ವಿಚಕ್ರ ವಾಹನಗಳು ಉತ್ತಮ ಮಾರಾಟವನ್ನು ಕಂಡಿದೆ. ಕಳೆದ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳ ಮಾಹಿತಿ ಈ ಕೆಳಗಿವೆ.

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಹೀರೋ ಸ್ಪ್ಲೆಂಡರ್

ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವಾಗಿದೆ. ವರದಿಗಳ ಪ್ರಕಾರ 2021ರ ಏಪ್ರಿಲ್ ತಿಂಗಳಲ್ಲಿ ಸ್ಪ್ಲೆಂಡರ್ ಮಾದರಿಯ 1,93,508 ಯುನಿಟ್‌ಗಳು ಮಾರಾಟಾವಾಗಿವೆ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ 1,43,736 ಸ್ಪ್ಲೆಂಡರ್ ಬೈಕುಗಳು ಮಾರಾಟವಾಗಿತ್ತು. ಕಳೆದ ತಿಂಗಳ ಮಾರಾಟವನ್ನು ಇದೇ ವರ್ಷದ ಮಾರ್ಚ್ ತಿಂಗಳ ಮಾರಟಕ್ಕೆ ಹೋಲಿಸಿದರೆ ಮಾಸಿಕ ಮಾರಾಟದಲ್ಲಿ ಶೇ.34.63 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಆದರೆ ಕಳೆದ ವರ್ಷದ ಏಪ್ರಿಲ್ ತಿಂಗಳ ಮಾರಾಟಕ್ಕೆ ಹೋಲಿಸಲು ಸಾಧ್ಯವಿಲ್ಲ. ಯಾಕೆಂದರೆ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿತ್ತು.

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಹೋಂಡಾ ಆಕ್ಟಿವಾ

ಹಾಗಯೇ ಹೋಂಡಾ ಆಕ್ಟಿವಾ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿ ಮುಂದುವರೆದಿದೆ. ಈ ಪಟ್ಟಿಯಲ್ಲಿ ಜನಪ್ರಿಯ ಆಕ್ಟಿವಾ ಸ್ಕೂಟರ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹೋಂಡಾ ಕಂಪನಿಯು ಕಳೆದ ತಿಂಗಳು ಆಕ್ಟಿವಾದ 1,09,678 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ತಿಂಗಳಿಂದ ತಿಂಗಳಿಗೆ ಮಾರಾಟದಲ್ಲಿ ಶೇ.4.43 ಕುಸಿತ ಕಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಹೋಂಡಾ ಶೈನ್

ಜಪಾನಿನ ಬ್ರ್ಯಾಂಡ್‌ನ ಪ್ರೀಮಿಯಂ ಕಮ್ಯೂಟರ್ ಬೈಕ್ ಹೋಂಡಾ ಸಿಬಿ ಶೈನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಸಿಬಿ ಶೈನ್ ಮಾದರಿಯ 79,416 ಯುನಿಟ್‌ಗಳು ಮಾರಾಟವಾಗಿವೆ.

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಹೀರೋ ಹೆಚ್ಎಫ್ ಡಿಲಕ್ಸ್

ಇನ್ನು ಈ ಪಟ್ಟಿಯಲ್ಲಿ ಹೀರೋ ಕಮ್ಯೂಟರ್ ಬೈಕ್ ಹೆಚ್ಎಫ್ ಡಿಲಕ್ಸ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳಿನಲ್ಲಿ ಹೀರೋ ಹೆಚ್ಎಫ್ ಡಿಲಕ್ಸ್ 71,294 ಯುನಿಟ್‌ಗಳು ಮಾರಾಟವಾಗಿವೆ. ತಿಂಗಳಿಂದ ತಿಂಗಳಿಗೆ ಮಾರಾಟದಲ್ಲಿ ಹೀರೋ ಹೆಚ್ಎಫ್ ಡಿಲಕ್ಸ್ ಶೇ.37.99 ಕುಸಿತ ಕಂಡಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಬಜಾಜ್ ಪಲ್ಸರ್

ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಬಜಾಜ್ ಪಲ್ಸರ್ ಸರಣಿಯು ಆಕ್ರಮಿಸಿಕೊಂಡಿದೆ. ಬಜಜ್ ಪಲ್ಸರ್ 66,586 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿವೆ. ಪಲ್ಸರ್ ಸರಣಿಯು ಪಲ್ಸರ್ 125 ದಿಂದ 220ಎಫ್ ವರೆಗೆ ಲಭ್ಯವಿದೆ. ಸರಣಿಯ ಪ್ರಮುಖ ಮಾದರಿಗಳು 200ಎನ್ಎಸ್ ಮತ್ತು 200ಆರ್‍ಎಸ್ ಮಾದರಿಗಳಾಗಿವೆ.

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಸುಜುಕಿ ಆಕ್ಸೆಸ್

ಕಳೆದ ತಿಂಗಳ ಸುಜುಕಿ ಆಕ್ಸೆಸ್ 53,285 ಯುನಿಟ್ ಗಳು ಮಾರಾಟವಾಗಿವೆ, ಇಡೆ ವರ್ಷದ ಮಾರ್ಚ್ ತಿಂಗಳಿನಲ್ಲಿ ಆಕ್ಸೆಸ್ 26,476 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.101.26 ರಷ್ಟುಬೆಳವಣಿಗೆಯನ್ನು ಸಾಧಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಬಜಾಜ್ ಪ್ಲಾಟಿನಾ

ಈ ಜನಪ್ರಿಯ ಬಜಾಜ್ ಪ್ಲಾಟಿನಾ ಬೈಕ್ ಕಳೆದ ತಿಂಗಳ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಬಜಾಜ್ ಪ್ಲಾಟಿನಾ ಮಾದರಿಯ 35,467 ಯುನಿಟ್‌ಗಳು ಮಾರಾಟವಾಗಿವೆ.

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಟಿವಿಎಸ್ ಅಪಾಚೆ

ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಟಿವಿಎಸ್ ಅಪಾಚೆ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು ಟಿವಿಎಸ್ ಅಪಾಚೆಯ 29,458 ಯುನಿಟ್‌ಗಳು ಮಾರಾಟವಾಗಿವೆ.

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಟಿವಿಎಸ್ ಎಕ್ಸ್‌ಎಲ್

ಟಿವಿಎಸ್ ಮೋಟಾರ್ ಕಂಪನಿಯ ಎಕ್ಸ್‌ಎಲ್ ಮಾದರಿಯ 25,977 ಯುನಿಟ್‌ಗಳು ಮಾರಾಟವಾಗಿ ಈ ಪಟ್ಟಿಯಲ್ಲಿ ಏಳನೇ ಒಂಬತನೇ ಸ್ಥಾನವನ್ನು ಪಡೆದುಕೊಂಡಿದೆ. ಟಿವಿಎಸ್ ಕ್ಸ್‌ಎಲ್ ಸೂಪರ್ ಮಾದರಿಯ ಮಾರಾಟದಲ್ಲಿ ಶೇ.20.82 ರಷ್ಟು ಕುಸಿತವಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

ಟಿವಿಎಸ್ ಜೂಪಿಟರ್

ಇನ್ನು ಈ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿರುವ ಟಿವಿಎಸ್ ಜೂಪಿಟರ್ ಮಾರಾಟದಲ್ಲಿ ಶೇ.21.76 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು ಟಿವಿಎಸ್ ಜೂಪಿಟರ್ ಮಾದರಿಯ 25,570 ಯುನಿಟ್‌ಗಳು ಮಾರಾಟವಾಗಿವೆ.

Article Published On: Thursday, May 20, 2021, 18:09 [IST]
English summary
Top-Selling Two-Wheelers In India In April 2021. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+