ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಕಳೆದ ಕೆಲವು ತಿಂಗಳುಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕಾರಣಕ್ಕೆ ವಾಹನ ತಯಾರಕ ಕಂಪನಿಗಳು ವಿಭಿನ್ನ ಸರಣಿಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಈಗ ಮೈಸೂರು ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಕಂಪನಿಯಾದ ಟೂಷೆ, ಹೆಲಿಯೊ ಹೆಚ್ 100 ಎಂಬ ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಹೆಲಿಯೊ ಹೆಚ್ 100 ಎಲೆಕ್ಟ್ರಿಕ್ ಸೈಕಲ್'ನ ಬೆಲೆ ರೂ.48,900ಗಳಾಗಿದೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಈ ಎಲೆಕ್ಟ್ರಿಕ್ ಸೈಕಲ್'ಗಾಗಿ ಜುಲೈ 5ರಿಂದ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ ಎಂದು ಕಂಪನಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಹೆಲಿಯೊ ಹೆಚ್ 100 ಎಲೆಕ್ಟ್ರಿಕ್ ಸೈಕಲ್ ಅನ್ನು ಸ್ಪ್ರಿಂಗ್ ಗ್ರೀನ್ ಹಾಗೂ ಫೆಟಾ ವೈಟ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮೊದಲನೇ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 60 ಕಿ.ಮೀಗಳವರೆಗೆ ಚಲಿಸುತ್ತದೆ. ಎರಡನೇ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 80 ಕಿ.ಮೀಗಳವರೆಗೆ ಚಲಿಸುತ್ತದೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಹೆಲಿಯೊ ಹೆಚ್ 100 ದೇಶಿಯ ಮಾರುಕಟ್ಟೆಯಲ್ಲಿರುವ ಲಘು ತೂಕದ ಎಲೆಕ್ಟ್ರಿಕ್ ಹೈಬ್ರಿಡ್ ಸೈಕಲ್'ಗಳಲ್ಲಿ ಒಂದಾಗಿದೆ. ಫಿಟ್‌ನೆಸ್‌ನ ಭಾಗವಾಗಿ ಈ ಸೈಕಲ್ ಅನ್ನು ಎಲೆಕ್ಟ್ರಿಕ್ ಸಿಸ್ಟಂ ಸಹಾಯವಿಲ್ಲದೇ ಸವಾರಿ ಮಾಡಬಹುದು.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಇದಕ್ಕಾಗಿ ಈ ಸೈಕಲ್'ನಲ್ಲಿ 7 ಸ್ಪೀಡ್ ಶಿಮಾನೋ ಗೇರ್ ನೀಡಲಾಗಿದೆ. ಹೆಲಿಯೊ ಹೆಚ್ 100 ಎಲೆಕ್ಟ್ರಿಕ್ ಸೈಕಲ್ ಪೆಡಲ್ ಅಸಿಸ್ಟ್ ಹಾಗೂ ಥ್ರೊಟಲ್ ಮೂಲಕವೂ ಕಾರ್ಯ ನಿರ್ವಹಿಸುತ್ತದೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಎಲೆಕ್ಟ್ರಿಕ್ ಮೋಡ್ ಅನ್ನು ಐದು ಹಂತದ ಪವರ್ ಅಸಿಸ್ಟ್ ಹಾಗೂ ಬಲಭಾಗದಲ್ಲಿರುವ ಥ್ರೊಟಲ್ ಮೂಲಕ ನಡೆಸಲಾಗುತ್ತದೆ. ಮೈಸೂರಿನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಹೆಲಿಯೊ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಉತ್ಪಾದಿಸಲಾಗುತ್ತದೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಟೂಷೆ ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್ ಬ್ಯಾಟರಿ, ಎಲೆಕ್ಟ್ರಿಕ್ ಮೋಟರ್‌ ಹಾಗೂ ಕಂಟ್ರೋಲರ್'ಗಳ ಮೇಲೆ 18 ತಿಂಗಳ ಹಾಗೂ ಫ್ರೇಮ್‌ ಮೇಲೆ 2 ವರ್ಷಗಳ ವಾರಂಟಿಯನ್ನು ನೀಡುತ್ತದೆ. ಟೂಷೆ ಕಂಪನಿಯು ಭಾರತದ 18 ನಗರಗಳಲ್ಲಿ ಸರ್ವಿಸ್ ಸೆಂಟರ್'ಗಳನ್ನು ಹೊಂದಿದೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಮೈಸೂರು ಮೂಲದ ಕಂಪನಿ

ಹೊಸ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಟೂಷೆ ಎಲೆಕ್ಟ್ರಿಕ್ ಸಿಇಒ ಹಾಗೂ ಸ್ಥಾಪಕ ರಘು ಕೇರಕಟ್ಟಿ, ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಯಲ್ಲಿ ಕಂಪನಿಯು ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಹೇಳಿದರು.

Most Read Articles

Kannada
English summary
Toutche launches new generation electric bicycle in Indian market. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X