ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ವಿಶ್ವದ ಜನಪ್ರಿಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ Toyota ಬ್ಯಾಟರಿ ಚಾಲಿತ ತ್ರಿ ಚಕ್ರ ವಾಹನವನ್ನು ಅಭಿವೃದ್ಧಿಪಡಿಸಿದೆ. ನಗರವಾಸಿಗಳನ್ನು ಗಮನದಲ್ಲಿಟ್ಟು ಕೊಂಡು ಈ ವಾಹನವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜೊತೆಗೆ ಈ ತ್ರಿ ಚಕ್ರ ವಾಹನವನ್ನು ವಿಶೇಷ ಚೇತನರಿಗೆ ನೆರವಾಗುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಈ ವಾಹನಕ್ಕೆ C Plus Walk T ಎಂದು ಹೆಸರಿಡಲಾಗಿದೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಹೊಸ C Plus Walk T ಬ್ಯಾಟರಿ ಚಾಲಿತ ವಾಹನವು ಸ್ಕೇಟಿಂಗ್ ರಿಂಗ್ ಆಗಿದ್ದು, ಅಡಿಪಾಯವು ಸಮತಟ್ಟಾಗಿದೆ. ಈ ವಾಹನವನ್ನು ಒಬ್ಬ ವ್ಯಕ್ತಿ ನಿಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. ಈ ವಾಹನದ ಕೆಳ ಭಾಗದಲ್ಲಿ ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. C Plus Walk T ವಾಹನದಲ್ಲಿ ಹೆಚ್ಚಿನ ವೇಗದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಈ ವಾಹನವು ಒಬ್ಬ ವ್ಯಕ್ತಿ ನಡೆಯುವ ವೇಗದಲ್ಲಿ ಚಲಿಸುತ್ತದೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಈ ಕಾರಣಕ್ಕೆ ಈ ತ್ರಿ ಚಕ್ರ ವಾಹನವನ್ನು ಸಾಮಾನ್ಯ ಪಾದಚಾರಿ ಮಾರ್ಗಗಳಲ್ಲಿಯೂ ಬಳಸಬಹುದು. C Plus Walk T ವಾಹನವು ಯಾವುದಾದರೂ ರಸ್ತೆ ತಡೆ ಇದ್ದರೆ, ಅದನ್ನು ಪತ್ತೆ ಹಚ್ಚಿ ಆಟೋಮ್ಯಾಟಿಕ್ ಆಗಿ ನಿಧಾನವಾಗುತ್ತದೆ. ಈ ವಾಹನದಲ್ಲಿ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚುವಂತಹ ತಂತ್ರಜ್ಞಾನವನ್ನು ಹೊಂದಿದೆ. C Plus Walk T ವಾಹನದಲ್ಲಿ ಬ್ರಷ್ ಲೆಸ್ ಡಿಸಿ ಮೋಟಾರ್ ಅನ್ನು ಅಳವಡಿಸಲಾಗಿದೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

C Plus Walk T ವಾಹನದಲ್ಲಿ ಅಳವಡಿಸಿರುವ ಹೊರ ತೆಗೆಯಲಾಗದ ಲಿಥಿಯಂ ಐಯಾನ್ ಬ್ಯಾಟರಿ ಈ ವಾಹನಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಈ ಬ್ಯಾಟರಿ 2.5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಈ ಬ್ಯಾಟರಿಯನ್ನು ಎಸಿ 100 ವೋಲ್ಟ್ ಚಾರ್ಜಿಂಗ್ ಸಿಸ್ಟಂನಿಂದಲೂ ಚಾರ್ಜ್ ಮಾಡಬಹುದು. ಈ ವಾಹನದಲ್ಲಿ ಆಕ್ಸಲರೇಟರ್ ಲಿವರ್ ಹಾಗೂ ಸ್ಟೀಯರಿಂಗ್ ಸಿಸ್ಟಂ ಬ್ರೇಕ್ ಲಿವರ್‌ಗಳನ್ನು ಒದಗಿಸಲಾಗಿದೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಈ ವಾಹನದಲ್ಲಿರುವ ಅಳವಡಿಸಿರುವ ಡಿಸ್ ಪ್ಲೇ ವಾಹನದ ವೇಗ, ಬ್ಯಾಟರಿಯ ಚಾರ್ಜ್ ಮಟ್ಟ ಸೇರಿದಂತೆ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. Toyota C Plus Walk T ವಾಹನದ ಬೆಲೆ 3,41,000 ಯೆನ್ ಗಳಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ. 2.27 ಲಕ್ಷಗಳಾಗಿದೆ. ವಯಸ್ಸಾದವರಿಗೆ ಹಾಗೂ ವಿಶೇಷ ಚೇತನರಿಗೆ ನೆರವಾಗುವ ಸಲುವಾಗಿ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು Toyota ಕಂಪನಿ ಹೇಳಿದೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಈ ವಾಹನವು ವಿಶೇಷವಾಗಿ ಹೆಚ್ಚು ದೂರ ನಡೆಯಲು ಕಷ್ಟ ಪಡುವವರಿಗೆ ನೆರವಾಗುತ್ತದೆ. ಈ ವಾಹನವು ಪ್ರವಾಸಿಗರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಕಂಪನಿ ಹೇಳಿದೆ. ಅದೇ ರೀತಿ ಕಾರ್ಖಾನೆಗಳು ಹಾಗೂ ಉತ್ಪಾದನಾ ಘಟಕಗಳಿಗೆ ಭೇಟಿ ನೀಡುವ ಅಧಿಕಾರಿಗಳಿಗೆ ಈ ವಾಹನವು ಹೆಚ್ಚು ನೆರವಾಗುತ್ತದೆ ಎಂಬುದು ಕಂಪನಿಯ ಅಭಿಪ್ರಾಯ. ಈ ವಾಹನದ ಮೂಲಕ ಚಲನೆಯನ್ನು ಕಡಿಮೆ ಮಾಡಬಹುದು.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ವಿಶ್ವದ ಅತಿ ದೊಡ್ಡ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ Toyota ಈ ವಿಶಿಷ್ಟ ವಾಹನವನ್ನು ಅಭಿವೃದ್ಧಿಪಡಿಸಿದೆ. ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ವಿಶಿಷ್ಟ ಎಲೆಕ್ಟ್ರಿಕ್ ವಾಹನಗಳು ವಾಹನ ಪ್ರಿಯರ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಇರುವ ಏಕೈಕ ತೊಂದರೆ ಎಂದರೆ ಸಮರ್ಪಕ ಮೂಲ ಸೌಕರ್ಯಗಳ ಕೊರತೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಮೂಲ ಸೌಕರ್ಯಗಳ ಕೊರತೆಯ ಕಾರಣಕ್ಕೆ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಇವಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಿವೆ. ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸರ್ಕಾರದ ಜೊತೆಗೆ ಕೆಲವು ಕಂಪನಿಗಳೂ ಸಹ ಕೈ ಜೋಡಿಸಿವೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಎಲೆಕ್ಟ್ರಿಕ್ ವಾಹನ ಸವಾರರನ್ನು ಕಾಡುವ ಮತ್ತೊಂದು ಸಮಸ್ಯೆಯೆಂದರೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಅವಧಿ. ಎಲೆಕ್ಟ್ರಿಕ್ ವಾಹನಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಸಾಮಾನ್ಯವಾಗಿ 3 - 4 ಗಂಟೆ ಕಾಯ ಬೇಕಾಗುತ್ತದೆ. ಕೆಲವೊಮ್ಮೆ ಇದಕ್ಕಿಂತ ಹೆಚ್ಚು ಅವಧಿ ಕಾಯ ಬೇಕಾಗುತ್ತದೆ. ಈಗ ಕೆಲವು ಕಂಪನಿಗಳು ಅತಿ ವೇಗದ ಚಾರ್ಜಿಂಗ್ ಸಾಧನಗಳನ್ನು ಬಿಡುಗಡೆಗೊಳಿಸುತ್ತಿವೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಈ ಸಾಧನಗಳು ಕೆಲವೇ ನಿಮಿಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿರುವ ಬ್ಯಾಟರಿಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಜನರನ್ನು ಆಕರ್ಷಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ವಿಶಿಷ್ಟ ಬಗೆಯ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಬಿಡುಗಡೆಗೊಳಿಸಿದ Toyota

ಭಾರತದಲ್ಲಿ ಹಲವು ಸ್ಟಾರ್ಟ್ ಅಪ್ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿವೆ. ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್, ಡೀಸೆಲ್ ಮೇಲೆ ಖರ್ಚು ಮಾಡುವ ಹಣವನ್ನು ಉಳಿಸಬಹುದು. ಜೊತೆಗೆ ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
Toyota launches unique three wheeled electric vehicle details
Story first published: Saturday, October 2, 2021, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X