ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಸಾರಿಗೆ ಇಲಾಖೆಯು ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದೆ. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ದ್ವಿಚಕ್ರ ವಾಹನಗಳಲ್ಲಿ ಕುಳಿತಿದ್ದರೆ ಅಂತಹ ವಾಹನಗಳ ಗರಿಷ್ಠ ವೇಗ ಗಂಟೆಗೆ 40 ಕಿ.ಮೀ ಮೀರಬಾರದು ಎಂದು ಈ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ಮಗು ಹೆಲ್ಮೆಟ್ ಧರಿಸಿರುವುದನ್ನು ದ್ವಿಚಕ್ರ ವಾಹನ ಸವಾರ ಖಚಿತಪಡಿಸಿಕೊಳ್ಳಬೇಕು ಎಂದು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಇನ್ನೊಂದು ಮಾರ್ಗಸೂಚಿಯ ಅನ್ವಯ ದ್ವಿಚಕ್ರ ವಾಹನ ಸವಾರ ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಕಷ್ಟು ರಕ್ಷಣಾತ್ಮಕ ಗೇರ್‌ಗಳನ್ನು ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ಮಕ್ಕಳಿಗೆ ಸುರಕ್ಷತಾ ಕವರ್ ವೆಸ್ಟ್‌ನಂತಿದ್ದು, ಅದನ್ನು ದ್ವಿಚಕ್ರ ಸವಾರರು ಪಟ್ಟಿಗಳ ಸಹಾಯದಿಂದ ಸೊಂಟಕ್ಕೆ ಕಟ್ಟಿ ಕೊಳ್ಳಬಹುದು. ಈ ಸುರಕ್ಷತಾ ಕವರ್ ಅಪಘಾತದ ಸಮಯದಲ್ಲಿ ಮಗುವನ್ನು ದ್ವಿಚಕ್ರ ವಾಹನದಿಂದ ಕೆಳಗೆ ಬೀಳದಂತೆ ರಕ್ಷಿಸುತ್ತದೆ. ಸುರಕ್ಷತಾ ಸರಂಜಾಮು ಕುರಿತು ವಿವರಿಸಿರುವ ಸಾರಿಗೆ ಇಲಾಖೆಯು ಈ ಸರಂಜಾಮು ದ್ವಿಚಕ್ರ ವಾಹನದಲ್ಲಿರುವ ಮಗು ಸವಾರನಿಗೆ ಸುರಕ್ಷಿತವಾಗಿ ಜೋಡಿಸಲ್ಪಟ್ಟಿರುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ರಸ್ತೆ ಸಾರಿಗೆ ಇಲಾಖೆಯು ತನ್ನ ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಆಹ್ವಾನಿಸಿ, ಸಲಹೆಗಳನ್ನು ಕೇಳಿದೆ. ಮೋಟಾರು ವಾಹನ ಕಾಯಿದೆ 1989 ರ ಅಡಿಯಲ್ಲಿ, ಬೈಕ್ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯವಾಗಿದೆ. ಇದು ಮಾತ್ರವಲ್ಲದೇ ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2016 ರಲ್ಲಿ ಭಾರತದಲ್ಲಿ 3,00,000 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅದರಲ್ಲಿ 40% ನಷ್ಟು ಜನರು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರು. ಅದೇ ರೀತಿ 2018 ರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದ 43,614 ಮಂದಿ ಸಾವನ್ನಪ್ಪಿದ್ದಾರೆ. ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ಈ ಬಗ್ಗೆ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಶೀಘ್ರದಲ್ಲೇ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಚಲಿಸುವ ವಾಹನಗಳ ವೇಗವನ್ನು ಹೆಚ್ಚಿಸುವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ. ನಾವು ವೇಗದ ಮಿತಿಯನ್ನು ಹೆಚ್ಚಿಸುವುದರ ಪರವಾಗಿದ್ದೇವೆ ಆದರೆ ಸುಪ್ರೀಂ ಕೋರ್ಟ್ ಹಾಗೂ ಕೆಲವು ಹೈಕೋರ್ಟ್‌ಗಳಿಂದ ಕೆಲವು ಅಡೆ ತಡೆಗಳಿವೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ಇದರಿಂದಾಗಿ ನಾವು ಬಯಸಿದರೂ ವೇಗದ ಮಿತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಸಂಸತ್ತಿನಲ್ಲಿ ಮಸೂದೆಯ ಮೂಲಕ ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರವು ಸಿದ್ಧತೆ ನಡೆಸುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವಾಹನಗಳ ವೇಗದ ಮಿತಿಯ ಭಾರತದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸಿದರೆ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ನಾವು ಈ ಮನಸ್ಥಿತಿಯಿಂದ ಹೊರ ಬರಬೇಕು. ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳ ವೇಗದ ಮಿತಿ ಪ್ರತಿ ಗಂಟೆಗೆ 140 ಕಿ.ಮೀ ಆಗಿರಬೇಕು ಎಂದು ತಾನು ವೈಯಕ್ತಿಕವಾಗಿ ನಂಬುತ್ತೇನೆ ಎಂದು ಗಡ್ಕರಿ ಹೇಳಿದರು. ರಾಷ್ಟ್ರೀಯ ಹೆದ್ದಾರಿಗಳ ನಾಲ್ಕು ಪಥದ ರಸ್ತೆಗಳಲ್ಲಿ ಚಲಿಸುವ ವಾಹನಗಳ ವೇಗದ ಮಿತಿ ಕನಿಷ್ಠ 100 ಕಿ.ಮೀ ಆಗಿರಬೇಕು. ಎರಡು ಪಥದ ರಸ್ತೆಗಳು 80 ಕಿ.ಮೀಗಳಿಗೆ ಹಾಗೂ ನಗರ ರಸ್ತೆಗಳ ವೇಗದ ಮಿತಿಯನ್ನು 75 ಕಿ.ಮೀಗಳಿಗೆ ಹೆಚ್ಚಿಸಬೇಕು ಎಂದು ನಿತಿನ್ ಗಡ್ಕರಿ ಹೇಳಿದರು.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಒಂದು ಬ್ಯಾರಿಕೇಡಿಂಗ್‌ ಮಾಡಲಾಗಿದ್ದು, ಒಂದು ಪ್ರಾಣಿಯೂ ಪ್ರವೇಶಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದರು. ವಿವಿಧ ವಾಹನಗಳಿಗೆ ವಿವಿಧ ರೀತಿಯ ಗರಿಷ್ಠ ವೇಗದ ಮಿತಿಯನ್ನು ನಿಗದಿಪಡಿಸಲಾಗುವುದು ಎಂದು ಗಡ್ಕರಿ ಹೇಳಿದರು. ನ್ಯಾಯಾಲಯಗಳ ಕುರಿತು ಪ್ರತಿಕ್ರಿಯೆ ನೀಡಿದ ನಿತಿನ್ ಗಡ್ಕರಿರವರು, ಪ್ರಜಾಪ್ರಭುತ್ವದಲ್ಲಿ ನಮಗೆ ಕಾನೂನುಗಳನ್ನು ಮಾಡುವ ಹಕ್ಕಿದೆ ಹಾಗೂ ನ್ಯಾಯಾಧೀಶರಿಗೆ ಕಾನೂನನ್ನು ಅರ್ಥೈಸುವ ಹಕ್ಕಿದೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ಭಾರತೀಯ ರಸ್ತೆಗಳಲ್ಲಿ ವಾಹನಗಳ ವೇಗದ ಮಿತಿಯನ್ನು ಪರಿಷ್ಕರಿಸಲು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಿದರು. ದೇಶವು ಪರಿಸರ ಮಾಲಿನ್ಯ ಹಾಗೂ ಆರ್ಥಿಕತೆಯಿಂದಾಗಿ ಹಲವು ಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರವು ಸದ್ಯಕ್ಕೆ ಇಂಧನ ಆಮದಿಗಾಗಿ ವಾರ್ಷಿಕವಾಗಿ ರೂ. 8 ಲಕ್ಷ ಕೋಟಿ ವ್ಯಯಿಸುತ್ತಿದೆ.

ಮಕ್ಕಳು ಸಂಚರಿಸುವ ದ್ವಿಚಕ್ರ ವಾಹನಗಳ ವೇಗದ ಮಿತಿ ತಗ್ಗಿಸಲು ಮುಂದಾದ ಸಾರಿಗೆ ಇಲಾಖೆ

ಈ ಪ್ರಮಾಣವು ಮುಂದಿನ ಐದು ವರ್ಷಗಳಲ್ಲಿ ರೂ. 25 ಲಕ್ಷ ಕೋಟಿಗಳಾಗುತ್ತದೆ ಎಂದು ಹೇಳಿದರು. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬಳಕೆಯಿಂದ ಮಾಲಿನ್ಯವು ಸಹ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವುದು ಸಹ ಸೇರಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Article Published On: Tuesday, October 26, 2021, 17:11 [IST]
English summary
Transport ministry to reduce speed of two wheelers to 40 kmph details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+