ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಒಂದು ವಾರದ ಹಿಂದಷ್ಟೇ ಬೈಕ್‌ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್, 2021ರ ಸ್ಕ್ರ್ಯಾಂಬ್ಲರ್ 1200 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈಗ ಕಂಪನಿಯು ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಕಂಪನಿಯು ಈ ಬೈಕ್ ಅನ್ನು ಅಪ್ ಡೇಟ್ ಮಾಡಲಾದ ಎಂಜಿನ್'ನೊಂದಿಗೆ ಬಿಡುಗಡೆಗೊಳಿಸಿದೆ. ಈ ಬೈಕಿನ ಕೇವಲ 775 ಯುನಿಟ್'ಗಳನ್ನು ಮಾರಾಟ ಮಾಡಲಾಗುವುದು. ಈ ಸೀಮಿತ ಆವೃತ್ತಿಯ ಬೈಕಿಗೆ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಂಬ ಹೆಸರಿಡಲಾಗಿದೆ.

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಎರಡೂ ಬೈಕ್‌ಗಳನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಹೊಸ ಬೈಕ್ ಅನ್ನು 2017ರ ಬೈಕಿನ ಮಾದರಿಯ ಆಧಾರದ ಮೇಲೆ ನಿರ್ಮಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಹೊಸ 2021 ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಬೈಕಿನಲ್ಲಿ ಡ್ಯುಯಲ್ ಹೈ ಎಕ್ಸಾಸ್ಟ್ ಸಿಸ್ಟಂ, ಎಲ್ಇಡಿ ಹೆಡ್‌ಲೈಟ್‌ ಹಾಗೂ ಸೈಡ್ ಪ್ಲೇಟ್'ಗಳನ್ನು ನೀಡಲಾಗಿದೆ. ಇದರ ಜೊತೆಗೆ ಬ್ರಷ್ಡ್ ಅಲ್ಯೂಮಿನಿಯಂ, ಹೀಲ್ ಪ್ರೊಟೆಕ್ಟರ್‌ ಹಾಗೂ ಹೆಡ್‌ಲೈಟ್ ಬ್ರಾಕೆಟ್‌ಗಳನ್ನು ನೀಡಲಾಗಿದೆ.

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಬೈಕಿನ ಸೀಟಿನಲ್ಲಿ ಹೊಸ ಲೆದರ್ ಹಾಗೂ ಟೆಕ್ಸ್ ಟೈಲ್ ಸೀಟ್ ಅಪ್ ಹೊಲೆಸ್ಟರಿಗಳನ್ನು ಬಳಸಲಾಗಿದೆ. ಇದರ ಜೊತೆಗೆ ಬಿಯರ್‌ಟ್ರಾಪ್ ಶೈಲಿಯ ಫುಟ್‌ಪೆಗ್‌, ಲಾಕ್ ಮಾಡಬಹುದಾದ ಟ್ಯಾಂಕ್, ಫ್ರಂಟ್ ಫೆಂಡರ್'ಗಳನ್ನು ಸಹ ನೀಡಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಬೈಕ್ ಅನ್ನು ಕಸ್ಟಮೈಸ್ ಮಾಡಲು ಆಯ್ಕೆಯನ್ನು ಕೂಡ ನೀಡಲಾಗಿದೆ. ಕಸ್ಟಮೈಸ್ ಮಾಡಬಯಸುವ ಗ್ರಾಹಕರಿಗೆ ಸೈಡ್ ಕೇಸ್ ಸೇರಿದಂತೆ ಟ್ರಯಂಫ್‌ನ 120 ಮೂಲ ಪರಿಕರಗಳನ್ನು ಕಂಪನಿಯು ಬಿಡುಗಡೆಗೊಳಿಸಿದೆ.

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಕಂಪನಿಯು ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಅನ್ನು ಜೆಟ್ ಬ್ಲಾಕ್, ಅರ್ಬನ್ ಗ್ರೇ ಹಾಗೂ ಮ್ಯಾಟ್ ಐರನ್‌ಸ್ಟೋನ್ ಹೊಂದಿರುವ ಮ್ಯಾಟ್ ಖಾಕಿ ಬಣ್ಣಗಳಲ್ಲಿ ಮಾರಾಟ ಮಾಡಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಬೈಕಿನಲ್ಲಿ ಅಳವಡಿಸಿರುವ ಬೊನ್ನೆವಿಲ್ಲೆ ಎಂಜಿನ್ ಯುರೋ 5 ಹೊರಸೂಸುವಿಕೆ ನಿಯಮಗಳನ್ನು ಆಧರಿಸಿದೆ. 900 ಸಿಸಿಯ ಇನ್'ಲೈನ್ ​​ಟ್ವಿನ್ ಲಿಕ್ವಿಡ್-ಕೂಲ್ಡ್ ಎಂಜಿನ್ 3,250 ಆರ್‌ಪಿಎಂನಲ್ಲಿ 80 ಎನ್‌ಎಂ ಟಾರ್ಕ್ ಹಾಗೂ 65 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಬೈಕಿನಲ್ಲಿ ಕ್ಲಾಸಿಕ್ ಹಾಗೂ ಬಲಶಾಲಿಯಾದ ಎಕ್ಸಾಸ್ಟ್ ನೋಟ್ ಅಳವಡಿಸಲಾಗಿದೆ. ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿನಲ್ಲಿ ಬ್ರೇಕಿಂಗ್'ಗಾಗಿ ಸಿಂಗಲ್ ಫ್ರಂಟ್ ಡಿಸ್ಕ್ ಹಾಗೂ ಬ್ರೆಂಬೊ ಕ್ಯಾಲಿಪರ್‌ಗಳನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಬೈಕಿನಲ್ಲಿ 19 ಇಂಚಿನ ಸ್ಪೋಕ್ ವ್ಹೀಲ್‌ಗಳಿದ್ದು, ಮೆಟ್‌ಜೆಲ್ಲರ್ ಟೊರೆನ್ಸ್ ಟಯರ್‌ಗಳನ್ನು ಹೊಂದಿವೆ. ಕಂಪನಿಯು ಈ ಬೈಕಿನಲ್ಲಿ ರೋಡ್, ರೇನ್ ಹಾಗೂ ಆಫ್-ರೋಡ್ ಎಂಬ ಮೂರು ರೈಡಿಂಗ್ ಮೋಡ್'ಗಳನ್ನು ನೀಡಿದೆ.

ಹೊಸ 900 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಬಿಡುಗಡೆಗೊಳಿಸಿದ ಟ್ರಯಂಫ್

ಇದರ ಜೊತೆಗೆ ಎಬಿಎಸ್, ಬದಲಿಸಬಹುದಾದ ಟ್ರಾಕ್ಷನ್ ಕಂಟ್ರೋಲ್, ಇಮೊಬೈಲೈಸರ್ ಹಾಗೂ ಯುಎಸ್‌ಬಿ ಪವರ್ ಸಾಕೆಟ್'ಗಳನ್ನು ನೀಡಲಾಗಿದೆ. 2021ರ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿನ ಬೆಲೆ 10,800 ಯುರೋ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.9.79 ಲಕ್ಷಗಳಾಗಿದೆ. ಈ ಬೈಕ್ ಜುಲೈ ತಿಂಗಳಿನಿಂದ ಮಾರಾಟವಾಗಲಿದೆ.

Most Read Articles

Kannada
English summary
Triumph motorcycles launches Street Scrambler 900 and Scrambler Sandstorm bikes. Read in Kannada.
Story first published: Wednesday, April 21, 2021, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X