ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಸ್ಕೂಟರ್ ಮಾದರಿಯಾದ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ಆವೃತ್ತಿಯೊಂದನ್ನು ಬಿಡುಗಡೆ ಮಾಡಿದ್ದು, ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಹೊಸದಾಗಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಪರಿಚಯಿಸಲಾಗಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಎನ್‌ಟಾರ್ಕ್ 125 ಆವೃತ್ತಿಯ ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಪರಿಚಯಿಸಲಾಗಿರುವ ಹೊಸ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್ ಮಾದರಿಗಳು ಸ್ಪ್ರೋಟಿ ಗ್ರಾಫಿಕ್ಸ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿಯೇ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಹಾಲಿವುಡ್‌ನ ಸೂಪರ್ ಆಕ್ಷನ್ ಚಿತ್ರಗಳ ಪರಿಕಲ್ಪನೆಯನ್ನು ಆಧರಿಸಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಹೊಸ ಆವೃತ್ತಿಗಳು ಆಕರ್ಷಕ ಗ್ರಾಫಿಕ್ಸ್ ಡಿಸೈನ್‌ನೊಂದಿಗೆ ಸ್ಪೋರ್ಟಿ ಲುಕ್ ಇಷ್ಟಪಡುವ ಗ್ರಾಹಕರ ಆಯ್ಕೆಗೆ ಉತ್ತಮವಾಗಿದ್ದು, ಹೊಸ ಆವೃತ್ತಿಗಳು ಸ್ಟ್ಯಾಂಡರ್ಡ್ ಮಾರ್ವೆಲ್ ಸೂಪರ್‌ಸ್ಕ್ವಾಡ್ ಮಾದರಿಯಲ್ಲಿಯೇ ಬೆಲೆ ಹೊಂದಿರಲಿವೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಹೊಸ ಮಾದರಿಯಲ್ಲಿ ಎಲ್ಇಡಿ ಹೆಡ್‌ಲೈಟ್, 12-ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಪೆಟಲ್ ಫ್ರಂಟ್ ಡಿಸ್ಕ್ ಬ್ರೇಕ್, ಸ್ಪ್ಲಿಟ್ ಗ್ರಾಬ್ ರೈಲ್, ಯುಎಸ್‌ಬಿ ಚಾರ್ಜರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕನೆಕ್ಟ್ ಎಕ್ಸ್ ಬ್ಲೂಟೂಥ್ ಸಂಪರ್ಕ ಮತ್ತು ಟಿವಿಎಸ್ ಎನ್‌ಟಾರ್ಕ್ 3ಡಿ ಲೋಗೋವನ್ನು ಹೊಂದಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್ ಮಾದರಿಗಳು ಮುಂದಿನ ಕೆಲ ದಿನವರೆಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಇನ್ನುಳಿದಂತೆ ಎನ್‌ಟಾರ್ಕ್ 125 ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಳಿಗಳು ಎಂದಿನಂತೆ ಖರೀದಿಗೆ ಲಭ್ಯವಿರಲಿವೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್, ಸೂಪರ್ ಸ್ಕ್ವಾಡ್ ಎಡಿಷನ್ ಮತ್ತು ರೇಸ್ ಎಕ್ಸ್‌ಪಿ ಎನ್ನುವ ಐದು ವೆರಿಯೆಂಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಆವೃತ್ತಿಗಳು ಸೂಪರ್ ಸ್ಕ್ವಾಡ್ ಎಡಿಷನ್‌ನಲ್ಲಿ ಖರೀದಿಗೆ ಲಭ್ಯವಿವೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಹೊಸ ಆವೃತ್ತಿಯೊಂದಿಗೆ ಎನ್‌ಟಾರ್ಕ್ 125 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡ್ರಮ್ ಬ್ರೇಕ್ ಮಾದರಿಯು ರೂ.79,257 , ಡಿಸ್ಕ್ ಮಾದರಿಯು ರೂ. 84,999, ರೇಸ್ ಎಡಿಷನ್ ಮಾದರಿಯು ರೂ. 88,499, ಸೂಪರ್ ಸ್ಕ್ವಾಡ್ ಎಡಿಷನ್ ರೂ. 91,072 ಮತ್ತು ರೇಸ್ ಎಕ್ಸ್‌ಪಿ ಎಡಿಷನ್ ರೂ.92,317 ಬೆಲೆ ಹೊಂದಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಗ್ರಾಫಿಕ್ಸ್ ಮತ್ತು ಪವರ್‌ಫುಲ್ ಎಂಜಿನ್ ಟೋನ್‌ನೊಂದಿಗೆ ಸ್ಪೋರ್ಟಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಮಾದರಿಯಲ್ಲಿ ಸ್ಮಾರ್ಟ್‌ಕನೆಕ್ಟ್ ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಸೂಪರ್ ಸ್ಕ್ವಾಡ್ ಮತ್ತು ರೇಸ್ ಎಕ್ಸ್‌ಪಿ ಎಡಿಷನ್‌ನಲ್ಲಿ ಎನ್‌ಟಾರ್ಕ್ 125 ಮಾದರಿಯಲ್ಲಿ ಇತರೆ ವೆರಿಯೆಂಟ್‌ಗಳಲ್ಲಿ ಇರುವಂತೆ 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಬಳಕೆ ಮಾಡಿದ್ದು, ಹೊಸ ಆವೃತ್ತಿಯು ಇತರೆ ಆವೃತ್ತಿಗಿಂತಲೂ ಹೆಚ್ಚು ಹಾರ್ಸ್ ಪವರ್ ಹೊಂದಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಸ್ಟ್ಯಾಂಡರ್ಡ್ ಮಾದರಿಗಳು 9.17-ಬಿಎಚ್‌ಪಿ ಹೊಂದಿದ್ದರೆ ರೇಸ್ ಎಕ್ಸ್‌ಪಿ ಮಾದರಿಯು 10-ಬಿಎಚ್‌ಪಿ ಸಾಮರ್ಥ್ಯ ಹೊಂದಿದ್ದು, ಈ ಹಿಂದಿನಂತಯೇ 10.5-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಜೊತೆಗೆ ಹೊಸ ಎನ್‌ಟಾರ್ಕ್ 125 ಸೂಪರ್ ಸ್ಕ್ವಾಡ್ ಮತ್ತು ರೇಸ್ ಎಕ್ಸ್‌ಪಿ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ರೇಸ್ ಮತ್ತು ಸ್ಟ್ರೀಟ್ ರೈಡ್ ಮೋಡ್‌ಗಳನ್ನು ಜೋಡಿಸಿದ್ದು, ರೇಸ್ ಮೋಡ್ ಪರ್ಫಾಮೆನ್ಸ್‌ಗಾಗಿ ಮತ್ತು ಸ್ಟ್ರೀಟ್ ಮೋಡ್ ಇಂಧನ ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಜೊತೆಗೆ ಹೊಸ ವೆರಿಯೆಂಟ್‌ನಲ್ಲಿ ಟಿವಿಎಸ್ ಕಂಪನಿಯು ಉನ್ನತೀಕರಿಸಲಾದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದು, ಟಿ ಆಕಾರದ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಏಂಜಿನ್ ಕಿಲ್ ಸ್ವಿಚ್, 5.8 -ಲೀಟರ್ ಫ್ಯೂಲ್ ಟ್ಯಾಂಕ್ ನೀಡಿದೆ.

ಎನ್‌ಟಾರ್ಕ್ 125 ಮಾರ್ವೆಲ್ ಸೂಪರ್‌ಸ್ಕ್ವಾಡ್ ಆವೃತ್ತಿಯಲ್ಲಿ ಸ್ಪೈಡರ್‌ಮ್ಯಾನ್ ಮತ್ತು ಥೋರ್ ಥೀಮ್‌ ಬಿಡುಗಡೆ

ಉನ್ನತೀಕರಿಸಿದ ಸ್ಮಾರ್ಟ್‌ಕನೆಕ್ಸ್ ಫೀಚರ್ಸ್‌ನಲ್ಲಿ ಲೈವ್ ಡ್ಯಾಶ್‌ಬೋರ್ಡ್ ಮೂಲಕ ರೈಡಿಂಗ್ ಮೋಡ್ ಮಾಹಿತಿ ಸೌಲಭ್ಯ, ಬದಲಾವಣೆ ಮಾಡಲಾದ ಯುಐ ಮತ್ತು ಯುಎಕ್ಸ್, ಉಳಿಸಿಕೊಳ್ಳಬಹುದಾದ ನ್ಯಾವಿಗೇಷನ್ ಅಡ್ರೆಸ್ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಆಕರ್ಷಕವಾಗಿದೆ.

Most Read Articles

Kannada
English summary
Tvs launched spiderman and thor themed variants in ntorq 125 scooter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X