ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಖ್ಯಾತ ಬೈಕ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ (TVS Motor) ಅಕ್ಟೋಬರ್ ತಿಂಗಳ ತನ್ನ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಟಿವಿಎಸ್ ಮೋಟಾರ್ ಕಂಪನಿಯು ಕಳೆದ ತಿಂಗಳು 3,55,033 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ಅಕ್ಟೋಬರ್ ತಿಂಗಳಿನಲ್ಲಿ 3,94,724 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಕಂಪನಿಯ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 10% ನಷ್ಟು ಕುಸಿದಿದೆ. ಕಂಪನಿಯ ದ್ವಿಚಕ್ರ ವಾಹನ ಮಾರಾಟದ ಬಗ್ಗೆ ಹೇಳುವುದಾದರೆ, ಟಿವಿಎಸ್ ಮೋಟಾರ್ ಕಳೆದ ತಿಂಗಳು ಒಟ್ಟು 3,41,513 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಟ್ಟು 3,41,513 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಈ ವರ್ಷ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 10.6% ನಷ್ಟು ಕುಸಿತ ಕಂಡು ಬಂದಿದೆ. ಟಿವಿಎಸ್ ಮೋಟಾರ್ ಕಂಪನಿಯ ದೇಶಿಯ ಮಾರುಕಟ್ಟೆಯ ದ್ವಿಚಕ್ರ ವಾಹನಗಳ ಮಾರಾಟದ ಬಗ್ಗೆ ಹೇಳುವುದಾದರೆ, ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 2,58,777 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಟ್ಟು 3,01380 ಯುನಿಟ್‌ ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 14% ನಷ್ಟು ಕುಸಿದಿದೆ. ಹಬ್ಬದ ಋತುವಿನ ಆರಂಭದಲ್ಲಿ ಕರೋನಾ ನಿಯಮಗಳನ್ನು ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಮಾರಾಟವು ಗಮನಾರ್ಹವಾಗಿ ಸುಧಾರಿಸಲಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ನಂಬಿದೆ. ಕಂಪನಿಯು ಕಳೆದ ತಿಂಗಳು 72,361 ಯುನಿಟ್‌ ಬೈಕುಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

2020ರ ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು 1,73,263 ಯುನಿಟ್ ಬೈಕ್‌ಗಳನ್ನು ಮಾರಾಟ ಮಾಡಿತ್ತು. ಸ್ಕೂಟರ್ ಮಾರಾಟದ ಬಗ್ಗೆ ಹೇಳುವುದಾದರೆ, ಟಿವಿಎಸ್ ಮೋಟಾರ್ ಕಳೆದ ತಿಂಗಳು 1,13,124 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ಅಕ್ಟೋಬರ್'ನಲ್ಲಿ 1,27,138 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಆದರೆ ಕಳೆದ ತಿಂಗಳು ಟಿವಿಎಸ್ ಮೋಟಾರ್ ಕಂಪನಿಯ ರಫ್ತಿನಲ್ಲಿ ಹೆಚ್ಚಳ ಕಂಡುಬಂದಿದೆ. ಕಂಪನಿಯು ನೀಡಿರುವ ಮಾಹಿತಿಗಳ ಪ್ರಕಾರ, ಟಿವಿಎಸ್ ಮೋಟಾರ್ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 95,191 ಯುನಿಟ್ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು ಒಟ್ಟು 92,520 ಯುನಿಟ್‌ ವಾಹನಗಳನ್ನು ರಫ್ತು ಮಾಡಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಟಿವಿಎಸ್ ಮೋಟಾರ್ ಕಂಪನಿಯ ರಫ್ತು ಪ್ರಮಾಣದಲ್ಲಿ ಕಳೆದ ತಿಂಗಳು 3% ನಷ್ಟು ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ. ದ್ವಿಚಕ್ರ ವಾಹನಗಳ ರಫ್ತು ಬಗ್ಗೆ ಹೇಳುವುದಾದರೆ ಟಿವಿಎಸ್ ಮೋಟಾರ್ ಕಂಪನಿ ಕಳೆದ ತಿಂಗಳು 82,736 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು 80,741 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿತ್ತು. ಈ ಬಾರಿ ದ್ವಿಚಕ್ರ ವಾಹನ ರಫ್ತು ಪ್ರಮಾಣವು 3% ನಷ್ಟು ಏರಿಕೆ ಕಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಟಿವಿಎಸ್ ಮೋಟಾರ್‌ ಕಂಪನಿಯ ತ್ರಿಚಕ್ರ ವಾಹನ ವಿಭಾಗದ ಬಗ್ಗೆ ಹೇಳುವುದಾದರೆ, ಕಂಪನಿಯು ಅಕ್ಟೋಬರ್‌ನಲ್ಲಿ ಒಟ್ಟು 13,520 ಯುನಿಟ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು 12,603 ​​ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯ ತ್ರಿಚಕ್ರ ವಾಹನ ವಿಭಾಗವು ಈ ವರ್ಷ ಮಾರಾಟದಲ್ಲಿ 7% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಟಿವಿಎಸ್ ಮೋಟಾರ್ ಕಂಪನಿಯು ಕಳೆದ ತಿಂಗಳು ತನ್ನ ಹೊಸ ಜೂಪಿಟರ್ 125 125 ಸಿಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಕಂಪನಿಯು ತನ್ನ ಹೊಸ ರೈಡರ್ 125 ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈ ಮೂಲಕ ಹಬ್ಬದ ಸಂದರ್ಭದಲ್ಲಿ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಿದೆ. ಟಿವಿಎಸ್ ಮೋಟಾರ್ ಕಂಪನಿಯು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೂ ಗಮನಹರಿಸುತ್ತಿದೆ.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಕಂಪನಿಯು ಇವಿ ವಾಹನ ಉತ್ಪಾದನೆಗಾಗಿ ಪ್ರತ್ಯೇಕ ಕಂಪನಿಯೊಂದನ್ನು ತೆರೆಯುವ ಸಿದ್ದತೆಯಲ್ಲಿದೆ. ಟಿವಿಎಸ್ ಮೋಟಾರ್ ಕಂಪನಿಯು ಸದ್ಯಕ್ಕೆ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ ಕುಸಿತ ಕಂಡ TVS Motor ಕಂಪನಿ ಮಾರಾಟ ಪ್ರಮಾಣ

ಕಂಪನಿಯು ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ಪ್ರತ್ಯೇಕ ಕಂಪನಿಯನ್ನು ತೆರೆಯಲು ಮುಂದಾಗಿದ್ದು, ಹೊಸ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನಂತರ ಮತ್ತೆ ಯಾವುದೇ ಎಲೆಕ್ಟ್ರಿಕ್ ವಾಹನವನು ಬಿಡುಗಡೆ ಮಾಡದೇ ಇರುವ ಟಿವಿಎಸ್ ಮೋಟಾರ್ ಕಂಪನಿಯು ಸಹ ಭಾಗಿತ್ವದ ಕಂಪನಿಯ ಬ್ಯಾಡ್ಜ್‌ನೊಂದಿಗೆ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ.

Most Read Articles

Kannada
English summary
Tvs motor sells 355033 units in october 2021 details
Story first published: Wednesday, November 3, 2021, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X