Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆ
- News
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
- Sports
ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಂದ್ ಆಗಲಿದೆ ಲ್ಯಾಂಬ್ರೆಟ್ಟಾ, ವಿಜಯ್ ಸೂಪರ್ ಸ್ಕೂಟರ್ ತಯಾರಕ ಕಂಪನಿ
ಜನಪ್ರಿಯ ಲ್ಯಾಂಬ್ರೆಟ್ಟಾ ಹಾಗೂ ವಿಜಯ್ ಸೂಪರ್ ಸ್ಕೂಟರ್‌ಗಳನ್ನು ತಯಾರಿಸುವ ಸಾರ್ವಜನಿಕ ವಲಯದ ಆಟೋಮೊಬೈಲ್ ಕಂಪನಿಯಾದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಶೀಘ್ರದಲ್ಲೇ ಮುಚ್ಚಲಿದೆ.

ಈ ಕಂಪನಿಯನ್ನು ಮುಚ್ಚುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ. ಮೂಲಗಳ ಪ್ರಕಾರ, ಬುಧವಾರ ನಡೆದ ಸಭೆಯಲ್ಲಿ ಲಕ್ನೋ ಮೂಲದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯನ್ನು ಮುಚ್ಚಲು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಅನುಮೋದನೆ ನೀಡಿದೆ.

ಸ್ಕೂಟರ್ಸ್ ಇಂಡಿಯಾದ ಜನಪ್ರಿಯ ಸ್ಕೂಟರ್'ಗಳು
ಲ್ಯಾಂಬ್ರೆಟ್ಟಾ, ವಿಜಯ್ ಸೂಪರ್ ನಂತಹ ಜನಪ್ರಿಯ ಸ್ಕೂಟರ್'ಗಳನ್ನು ಮಾರಾಟ ಮಾಡುವ ಸ್ಕೂಟರ್ಸ್ ಇಂಡಿಯಾದ ಬ್ರಾಂಡ್ ಹೆಸರನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಕ್ರಮ್ ಬ್ರಾಂಡ್ ಅಡಿಯಲ್ಲಿ ಕಂಪನಿಯು ಹಲವಾರು ರೀತಿಯ ತ್ರಿಚಕ್ರ ವಾಹನಗಳನ್ನು ತಯಾರಿಸುತ್ತದೆ. ಕಂಪನಿಯನ್ನು ಮುಚ್ಚುವ ಪ್ರಸ್ತಾಪಕ್ಕೆ ಸರ್ಕಾರವು ಅನುಮೋದನೆಯನ್ನು ನೀಡಿದ ನಂತರ ಭಾರೀ ಕೈಗಾರಿಕಾ ಇಲಾಖೆಯು ಕಂಪನಿಯನ್ನು ಮುಚ್ಚುವ ಪ್ರಕ್ರಿಯೆಯನ್ನು ಆರಂಭಿಸಲಿದೆ.

ಕಂಪನಿಯನ್ನು ಮುಚ್ಚಲು ರೂ.65 ಕೋಟಿ
ಸ್ಕೂಟರ್ಸ್ ಇಂಡಿಯಾ ಕಂಪನಿಯನ್ನು ಮುಚ್ಚಲು ಕೇಂದ್ರ ಸರ್ಕಾರವು ರೂ.65.12 ಕೋಟಿಗಳನ್ನು ನೀಡಲಿದೆ. ಕೇಂದ್ರ ಸರ್ಕಾರವು ಈ ಮೊತ್ತವನ್ನು ಕಂಪನಿಗೆ ಸಾಲ ರೂಪದಲ್ಲಿ ನೀಡಲಿದ್ದು, ಅದರ ಮೇಲೆ ಬಡ್ಡಿ ಕೂಡ ವಿಧಿಸಲಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಂಪನಿಯನ್ನು ಮುಚ್ಚುವ ಪ್ರಸ್ತಾವನೆಯಡಿಯಲ್ಲಿ ಹಣವು ಲಭ್ಯವಾದ ನಂತರ ಸ್ವಯಂಪ್ರೇರಿತ ನಿವೃತ್ತಿ ಯೋಜನೆ / ಸ್ವಯಂಪ್ರೇರಿತ ಪ್ರತ್ಯೇಕತೆ ಯೋಜನೆಯಡಿಯಲ್ಲಿ (ವಿಆರ್ಎಸ್ / ವಿಎಸ್ಎಸ್) ಕಂಪನಿಯ ಕಾಯಂ ಉದ್ಯೋಗಿಗಳಿಗೆ ನೀಡಲಾಗುವುದು. ಕಂಪನಿಯ ಲಕ್ನೋ ಪ್ರಧಾನ ಕಚೇರಿಯಲ್ಲಿ ಸುಮಾರು 100 ಉದ್ಯೋಗಿಗಳಿದ್ದಾರೆ.

ಮಾಹಿತಿಯ ಪ್ರಕಾರ ವಿಆರ್ಎಸ್ / ವಿಎಸ್ಎಸ್ ಆಯ್ಕೆ ಮಾಡಿಕೊಳ್ಳದ ನೌಕರರನ್ನು ಕೈಗಾರಿಕಾ ವಿವಾದ ಕಾಯ್ದೆ 1947ರ ಅಡಿಯಲ್ಲಿ ಕೆಲಸದಿಂದ ತೆಗೆದುಹಾಕಲಾಗುತ್ತದೆ. ಕಂಪನಿಯ 147.49 ಎಕರೆ ಭೂಮಿಯನ್ನು ಸೂಕ್ತವಾದ ಬೆಲೆಗೆ ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾರಾಟ ಮಾಡಲಾಗುವುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಎಲ್ಲಾ ಪ್ರಕ್ರಿಯೆಗಳಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಕಂಪನಿ ಕಾಯ್ದೆಯಡಿ, ಅದರ ಎಲ್ಲಾ ಷೇರುಗಳನ್ನು ಮುಚ್ಚುವ ಮೊದಲು ಷೇರು ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತದೆ.

ಕಂಪನಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರವು ಪಾಲುದಾರರನ್ನು ಹುಡುಕುತ್ತಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ಕಾರಣದಿಂದಾಗಿ ಅಂತಿಮವಾಗಿ ಕಂಪನಿಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯನ್ನು 1972ರಲ್ಲಿ ತ್ರಿಚಕ್ರ ವಾಹನ ತಯಾರಕ ಕಂಪನಿಯನ್ನಾಗಿ ಆರಂಭಿಸಲಾಯಿತು. 1975ರಲ್ಲಿ ಕಂಪನಿಯು ವಾಣಿಜ್ಯ ಸ್ಕೂಟರ್'ಗಳ ತಯಾರಿಕೆಯನ್ನು ಆರಂಭಿಸಿತು.

ಈ ಸ್ಕೂಟರ್‌ಗಳನ್ನು ಲ್ಯಾಂಬ್ರೆಟ್ಟಾ ಹೆಸರಿನಲ್ಲಿ ರಫ್ತು ಮಾಡಲಾದರೆ, ಭಾರತದಲ್ಲಿ ಅವುಗಳನ್ನು ವಿಜಯ್ ಸೂಪರ್ ಹೆಸರಿನಲ್ಲಿ ಮಾರಾಟ ಮಾಡಲಾಯಿತು. 1997ರಲ್ಲಿ ಕಂಪನಿಯು ದ್ವಿಚಕ್ರ ವಾಹನ ತಯಾರಿಕೆಯನ್ನು ಸ್ಥಗಿತಗೊಳಿಸಿತು.