2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಮುಂದಿನ ವರ್ಷ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದರ ಮೂಲಕ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಾರಾಟದ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕ್‌ಗಳ ಮಾಹಿತಿ ಇಲ್ಲಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411

ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಮಾದರಿಗಳಲ್ಲಿ ಹಿಮಾಲಯನ್ ಬೈಕಿನ ಹೊಸ ಸ್ಕ್ರ್ಯಾಂಬ್ಲರ್ ವೆರಿಯೆಂಟ್ ಕೂಡ ಒಂದಾಗಿದೆ. ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಪರೀಕ್ಷಿಸುವಾಗ ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ. ರಸ್ತೆ-ಆಧಾರಿತ ಮತ್ತು ಹೆಚ್ಚು ಕೈಗೆಟುಕುವ ಮಾದರಿಯು ವಿನ್ಯಾಸದಂತಹ ಹೆಚ್ಚು ಸ್ಕ್ರ್ಯಾಂಬ್ಲರ್ ಮಾದರಿಯನ್ನು ಹೊಂದಿರುತ್ತದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತದೆ. ಇತ್ತೀಚೆಗೆ, ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಮಾರುಕಟ್ಟೆಯ ಬಿಡುಗಡೆಯು ಸನಿಹದಲ್ಲಿ ಎಂದು ಸೂಚಿಸುವ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಕಂಡುಬಂದಿದೆ. ಇದು ಹಿಮಾಲಯನ್ ಬೈಕ್ ಸ್ಟೈಲಿಂಗ್ ಮತ್ತು ಬಾಡಿ ಪ್ಯಾನೆಲ್‌ಗಳನ್ನು ಎರವಲು ಪಡೆಯಲಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ಈ ಸ್ಕ್ರಾಮ್ 411 ಮೂಲಭೂತವಾಗಿ ಹಿಮಾಲಯನ್‌ನ ಸ್ಟ್ರಿಪ್ಡ್-ಡೌನ್ ಆವೃತ್ತಿಯಾಗಿದೆ ಏಕೆಂದರೆ ಇದರಲ್ಲಿ ಜೆರ್ರಿ ಕ್ಯಾನ್ ಹೋಲ್ಡರ್‌ಗಳು, ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಲಗೇಜ್ ರ್ಯಾಕ್ ಇಲ್ಲ.ಇನ್ನು ದೊಡ್ಡದಾದ 21-ಇಂಚಿನ ಮುಂಭಾಗದ ಚಕ್ರದ ಬದಲಿಗೆ, 18-ಇಂಚಿನ ಒಂದು ಜೊತೆ ಬರುತ್ತದೆ. ಬೈಕ್ ಮುಂಭಾಗದ ಫೋರ್ಕ್ ಗೈಟರ್‌ಗಳನ್ನು ಹೊಂದಿರುವುದಿಲ್ಲ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ಈ ಬದಲಾವಣೆಗಳ ಹೊರತಾಗಿ, ಹೊಸ ಸ್ಕ್ರಾಮ್ 411 ಮಾದರಿಯು ಹಿಮಾಲಯದ ಬೈಕಿನ ಅಡ್ವೆಂಚರ್ ಆವೃತ್ತಿಯಿಂದ ತನ್ನ ಮೆಕ್ಯಾನಿಕಲ್ ಮತ್ತು ಇತರ ಟ್ರಿಮ್‌ಗಳನ್ನು ಎರವಲು ಪಡೆಯುತ್ತದೆ. ಇನ್ನು ಆನ್-ರೋಡ್ ಆಧಾರಿತ ಮಾದರಿಯಲ್ಲಿ ಎಕ್ಸಾಸ್ಟ್ ಮತ್ತು ಎತ್ತರ ಹ್ಯಾಂಡಲ್‌ಬಾರ್‌ನೊಂದಿಗೆ ನೇರವಾಗಿ ಕುಳಿತುಕೊಳ್ಳುವಂತಹ ಸೀಟ್ ಪೋಷಿಸನ್ ಅನ್ನು ಒಳಗೊಂಡಿರುತ್ತದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಹಂಟರ್ 350

ರಾಯಲ್ ಎನ್‍ಫೀಲ್ಡ್ ತನ್ನ ಹೊಸ ಹಂಟರ್ 350 ಎಂಬ ಹೆಸರಿನ ರೋಡ್‌ಸ್ಟರ್ ಬೈಕನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಬ್ರ್ಯಾಂಡ್‌ನ 350ಸಿಸಿ ವಿಭಾಗದಲ್ಲಿ ಇರಿಸಲಾಗುತ್ತದೆ.ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕನ್ನು ಬ್ರ್ಯಾಂಡ್‌ನ ಹೊಸ ಜೆ-ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ಈ ಬೈಕಿನ ವೃತಕಾರದ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಇಂಡಿಗೇಟರ್ ಗಳನ್ನು ಒಳಗೊಂಡಿವೆ. ಇದರ ವೃತ್ತಾಕಾರದ ಹೆಡ್‌ಲ್ಯಾಂಪ್ ಕ್ಲಸ್ಟರ್ ಸಂಯೋಜಿತ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸ್ಕಲಪಡಡ್ ಫ್ಯೂಯಲ್ ಟ್ಯಾಂಕ್, ಮೆತ್ತನೆಯ ಸ್ಪ್ಲಿಟ್-ಸೀಟುಗಳು, ವಿಶಾಲವಾದ ಹ್ಯಾಂಡಲ್‌ಬಾರ್, ಅಪ್-ಸ್ವಿಪ್ಟ್ ಎಕ್ಸಾಸ್ಟ್ ಮತ್ತು ಸೈಡ್ ಕವರ್‌ಗಳನ್ನು ಮಿಟಿಯೊರ್ 350 ಬೈಕಿನಲ್ಲಿರುವಂತೆ ಇರುತ್ತದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ಇನ್ನು ಈ ಬೈಕಿನಲ್ಲಿ ಸಣ್ಣ-ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಹೊಂದಿರುತ್ತದೆ. ಇನ್ನು ಈ ಹೊಸ ಬೈಕಿನಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಒಳಗೊಂಡಿರಲಿದೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನಲ್ಲಿ ಮಿಟಿಯೊರ್ 350 ಮಾದರಿಯಲ್ಲಿರುವ ಅದೇ ಎಂಜಿನ್ ಅನ್ನು ಅಳವಡಿಸಬಹುದು, ಇದು ಹೊಸ ಎಸ್‌ಒಹೆಚ್‌ಸಿ 349ಸಿಸಿ ಸಿಂಗಲ್ ಸಿಲಿಂಡರ್ ಏರ್-ಆಯಿಲ್ ಕೂಲ್ಡ್ ಎಸ್‌ಒಹೆಚ್‌ಸಿ ಎಂಜಿನ್ ಆಗಿರುತ್ತದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ಶಾಟ್‌ಗನ್ 650 (ಎಸ್‌ಜಿ65)

ಯಲ್ ಎನ್‌ಫೀಲ್ಡ್ ಇತ್ತೀಚೆಗೆ ನಡೆದ EICMA ನಲ್ಲಿ ಎಸ್‌ಜಿ65 ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿತು. ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಕಾನ್ಸೆಪ್ಟ್ ಪರಂಪರೆ-ಪ್ರೇರಿತ ಪಾಲಿಶ್ ಮಾಡಿದ ಅಲ್ಯೂಮಿನಿಯಂ ಮುಂಭಾಗವನ್ನು ಒಳಗೊಂಡಿದೆ. ಪರಿವರ್ತನೆಯನ್ನು ಪ್ರದರ್ಶಿಸಲು ಫ್ಯೂಯಲ್ ಟ್ಯಾಂಕ್‌ನಲ್ಲಿ ಡಿಜಿಟಲ್ ಗ್ರಾಫಿಕ್ ಇದೆ. ಕಾನ್ಸೆಪ್ಟ್ ಹಲವಾರು ಅಂಶಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಎಸ್‌ಜಿ 650 ಟ್ವಿನ್ ಕಾನ್ಸೆಪ್ಟ್ ಚೆನ್ನೈ ಮೂಲದ ತಯಾರಕರಿಂದ ಮುಂಬರುವ 650 ಸಿಸಿ ಕ್ರೂಸರ್‌ನ ಉತ್ಪಾದನೆಯ ಸಮೀಪವಿರುವ ಮೂಲಮಾದರಿಯಾಗಿದೆ ಮತ್ತು ಇದು ಈಗಾಗಲೇ ಹಲವು ತಿಂಗಳುಗಳಿಂದ ಸಾರ್ವಜನಿಕ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿವು..

ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಸ್ಕ್ರ್ಯಾಮ್, ಶಾಟ್‌ಗನ್, ಹಂಟರ್, ಫ್ಲೈಯಿಂಗ್ ಫ್ಲಿಯಾ, ಶೆರ್ಪಾ ಮತ್ತು ರೋಡ್ಸ್ಟರ್ ಸೇರಿದಂತೆ ಮುಂಬರುವ ಮಾದರಿಗಳಿಗಾಗಿ ಅನೇಕ ನೇಮ್‌ಪ್ಲೇಟ್‌ಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಇದರೊಂದಿಗೆ 2022ಕ್ಕೆ ಹಲವಾರು ನವೀಕರಣಗಳನೊಂದಿಗೆ ತಮ್ಮ ಜನಪ್ರಿಯ ಮಾದರಿಗಳನ್ನು ಪರಿಚಯಿಸುತ್ತದೆ. ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ನ್ಯೂ ಜನರೇಷನ್ ಬುಲೆಟ್ 350 ಅನ್ನು 2022 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ನ್ಯೂ ಜನರೇಷನ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರುತ್ತದೆ.

Most Read Articles

Kannada
English summary
Upcoming new royal enfield motorcycles in india in 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X