ಮೊಟೊ ಜಿಪಿಯ ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಹಲವಾರು ಹೊಸ ಬಗೆಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ಇಂಧನ ದರಗಳಲ್ಲಿ ನಿರಂತರ ಏರಿಕೆ ಪರಿಣಾಮ ಮತ್ತು ವಾಯು ಮಾಲಿನ್ಯಕ್ಕೆ ತಡೆ ಉದ್ದೇಶದಿಂದ ವಿಶ್ವಾದ್ಯಂತ ಪ್ರಮುಖ ವಾಹನ ಕಂಪನಿಗಳು ವಿದ್ಯುತ್ ಚಾಲಿತ ವಾಹನಗಳತ್ತ ಹೆಚ್ಚಿನ ಗಮನಹರಿಸಿದ್ದು, ಹೊಸ ಮಾದರಿಯ ಎಲೆಕ್ಟ್ರಿಕ್ ವಾಹಗಳ ಸಾಮಾನ್ಯ ಸೆಗ್ಮೆಂಟ್‌ಗಳಲ್ಲಿ ಮಾತ್ರವಲ್ಲ ರೇಸ್ ಟ್ರ್ಯಾಕ್‌ನಲ್ಲೂ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ಟ್ರ್ಯಾಕ್ ರೇಸಿಂಗ್ ಉದ್ದೇಶಗಳಿಗಾಗಿ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಹಲವು ಹೊಸ ಮಾದರಿಯ ವಾಹನಗಳನ್ನು ಉತ್ಪಾದನೆ ಮಾಡುತ್ತಿದ್ದು, ಯುಕೆ ಮೂಲದ ವೈಟ್ ಮೋಟಾರ್‌ಸೈಕಲ್ ಕಂಪನಿಯು ಮೊಟೊ ಜಿಪಿ ದಾಖಲೆಯನ್ನು ಸರಿಗಟ್ಟಲು ಹೈ ಸ್ಪೀಡ್ ಸೂಪರ್ ಬೈಕ್ ಮಾದರಿಯೊಂದನ್ನು ಸಿದ್ದತೆಪಡಿಸಿದೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ವೈಟ್ ಮೋಟಾರ್‌ಸೈಕಲ್ ಕಂಪನಿಯು ಮೊಟೊ ಜಿಪಿಯ ದಾಖಲೆಯನ್ನು ಸರಿಗಟ್ಟುವ ಉದ್ದೇಶದೊಂದಿಗೆ ತನ್ನ WMC250EV ಕಾನ್ಸೆಪ್ಟ್ ಎಲೆಕ್ಟ್ರಿಕ್ ಸೂಪರ್ ಬೈಕ್ ಮಾದರಿಯನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಸದ್ದು, ಪ್ರಮುಖ ಟೆಸ್ಟಿಂಗ್ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಹೊಸ ಹೆಸರಿನೊಂದಿಗೆ ಉತ್ಪಾದನಾ ಆವೃತ್ತಿ ಪಡೆದುಕೊಳ್ಳಲಿದೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ಮೊಟೊ ಜಿಪಿಯಲ್ಲಿನ 367 ಕಿ.ಮೀ ಟಾಪ್ ಸ್ಪೀಡ್ ದಾಖಲೆಯನ್ನು ಸುಲಭವಾಗಿ ಅಳಿಸಿಹಾಕಿದ್ದ ವೊಕ್ಸಾನ್ ವ್ಯಾಟ್‌ಮನ್ 400ಕಿ.ಮೀ ಟಾಪ್ ಸ್ಪೀಡ್ ಅನ್ನು ಇದೀಗ ವೈಟ್ ಮೋಟಾರ್‌ಸೈಕಲ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಅಳಿಸಿ ಹಾಕಲು ಸಿದ್ದವಾಗಿದ್ದು, ಹೊಸ ಬೈಕ್ ಸುಜುಕಿ ಕಂಪನಿಯ 2ನೇ ತಲೆಮಾರಿನ ಹಯಾಬುಸಾ ಬೈಕ್ ಮಾದರಿಯಲ್ಲಿ ವಿನ್ಯಾಸ ಪಡೆದುಕೊಂಡಿದೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ಸದ್ಯ ಫೋಟೋಟೈಪ್ ಮಾದರಿಯಾಗಿ ಪರೀಕ್ಷೆಗೆ ಒಳಪಟ್ಟಿರುವ ವೈಟ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಏರ್ ಡೈನಾಮಿಕ್ ವಿನ್ಯಾಸದೊಂದಿಗೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, 134-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ಹೊಸ ಎಲೆಕ್ಟ್ರಿಕ್ ಬೈಕಿನ ಮುಂಭಾಗದ ಚಕ್ರಕ್ಕಾಗಿ 30kW ಮೋಟಾರ್ ಮತ್ತು ಹಿಂಭಾಗದ ಚಕ್ರಕ್ಕಾಗಿ 20kW ಮೋಟಾರ್ ಜೋಡಣೆ ಮಾಡಲಾಗಿದ್ದು, 2022ರಲ್ಲಿ ಬೊಲಿವಿಯಾದಲ್ಲಿ ನಡೆಯಲಿರುವ ಫ್ಲ್ಯಾಟ್ ರನ್ ಮೊಟೊ ಜಿಪಿಯಲ್ಲಿ ಭಾಗಿಯಾಗಲಿದೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ಬೊಲಿವಿಯಾ ಮೊಟೊ ಜಿಪಿ ಹೊತ್ತಿಗೆ ಇನ್ನಷ್ಟು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ ವೈಟ್ ಮೋಟಾರ್‌ಸೈಕಲ್ ಕಂಪನಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿದೆ.

ವಿಶ್ವ ದಾಖಲೆಯ ವೇಗವನ್ನು ಸರಿಗಟ್ಟಲಿದೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್

ಸ್ವಿಂಗ್ ಆರ್ಮ್‌ನೊಂದಗೆ ಹಲವಾರು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ವೈಟ್ ಎಲೆಕ್ಟ್ರಿಕ್ ಸೂಪರ್ ಬೈಕ್ ಮಾದರಿಯು ಬರೋಬ್ಬರಿ 300 ಕಿ.ಮೀ ತೂಕ ಹೊಂದಿದ್ದು, 17 ಇಂಚಿನ ಪೆರೆಲಿ ಟೈರ್‌ನೊಂದಿಗೆ ವಿಶೇಷವಾಗಿ ಟ್ರ್ಯಾಕ್ ರೇಸಿಂಗ್ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗಲಿದೆ.

Most Read Articles

Kannada
English summary
White Electric Bike Aims To Break Land Speed Record At 400 kmph. Read in kannada.
Story first published: Monday, June 28, 2021, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X