ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಕ್ಲಾಸಿಕ್ ಲೆಜೆಂಡ್ ಕಂಪನಿಯು ಜಾವಾ ಮೋಟಾರ್‌ಸೈಕಲ್‌ಗಳ ಬಿಡುಗಡೆಯ ಯಶಸ್ವಿ ನಂತರ ಶೀಘ್ರದಲ್ಲಿಯೇ ಯಜ್ಡಿ ಬೈಕ್‌ಗಳಿಗೂ ಹೊಸ ರೂಪ ನೀಡುವ ಬೃಹತ್ ಯೋಜನೆ ರೂಪಿಸಿದ್ದು, ಹೊಸ ಬೈಕ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿರುವ ಯಜ್ಡಿ ಕಂಪನಿಯು ಹೊಸ ವರ್ಷದ ಆರಂಭದಲ್ಲಿಯೇ ಬಹುನೀರಿಕ್ಷಿತ ಬೈಕ್ ಮಾದರಿಯನ್ನು ರಸ್ತೆಗಿಳಿಸುತ್ತಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಜಾವಾ ಮೋಟಾರ್‌ಸೈಕಲ್‌ಗಳ ಬಿಡುಗಡೆ ನಂತರ ಇದೀಗ ಯಜ್ಡಿ ಬೈಕ್‌ ಮಾದರಿಗಳನ್ನು ಸಹ ಹೊಸ ಎಂಜಿನ್ ಮತ್ತು ನವೀಕರಿಸಿದ ವಿನ್ಯಾಸದೊಂದಿಗೆ ಬಿಡುಗಡೆಗೊಳಿಸುತ್ತಿರುವ ಕ್ಲಾಸಿಕ್ ಲೆಜೆಂಡ್ ಕಂಪನಿಯು ಕ್ಲಾಸಿಕ್ ಮತ್ತು ಅಡ್ವೆಂಚರ್ ಬೈಕ್ ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ. ಹೊಸ ಬೈಕ್ ಬಿಡುಗಡೆ ಸಿದ್ದತೆ ನಡೆಸಿರುವ ಯಜ್ಡಿ ಕಂಪನಿಯು ಜನವರಿ 13ರಂದು ಹೊಸ ಬೈಕ್ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಹೊಸ ಯಜ್ಡಿ ಬೈಕ್‌ ಮಾದರಿಗಳನ್ನು ಕ್ಲಾಸಿಕ್ ಲೆಜೆಂಡ್ ಕಂಪನಿಯು ನವೀಕೃತ ವಿನ್ಯಾಸ ಮತ್ತು ಸುಧಾರಿತ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹಳೆಯ ಬೈಕ್ ಮಾದರಿಯಲ್ಲಿಯೇ ಕ್ಲಾಸಿಕ್ ಕ್ರೂಸರ್ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಅಡ್ವೆಂಚರ್ ಟೂರರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಯಜ್ಡಿ ಹೊಸ ಬೈಕ್ ಬಿಡುಗಡೆಯ ಕುರಿತಂತೆ ಸರಣಿ ಟ್ವಿಟ್‌ಗಳನ್ನು ಮಾಡುತ್ತಿರುವ ಕ್ಲಾಸಿಕ್ ಲೆಜೆಂಡ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ ಅವರು ಹೊಸ ಬೈಕ್ ಬಗೆಗೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ಸಿದ್ದತೆಯಲ್ಲಿದ್ದು, ಹೊಸ ಬೈಕ್‌ ಬಿಡುಗಡೆಗೂ ಮುನ್ನ ಕಂಪನಿಯು ನ್ಯೂ ಜನರೇಷನ್ ಮಾದರಿಗಳ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುತ್ತಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಹೊಸ ಬೈಕ್ ಉತ್ಪಾದನಾ ಮಾದರಿಗಳ ಪರ್ಫಾಮೆನ್ಸ್ ಕುರಿತಾದ ಟಿವಿ ಜಾಹೀರಾತು ಚಿತ್ರೀಕರಣವು ಈಗಾಗಲೇ ಜೋರಾಗಿಯೇ ನಡೆದಿದ್ದು, ಯಜ್ಡಿ ನಿರ್ಮಾಣದ ರೋಡ್‌ಕಿಂಗ್ ಆಧರಿಸಿರುವ ಹೊಸ ಕ್ಲಾಸಿಕ್ ಅಡ್ವೆಂಚರ್ ಟೂರರ್ ಮಾದರಿಯೊಂದಿಗೆ ಕ್ಲಾಸಿಕ್ ಕ್ರೂಸರ್, ಸ್ಕ್ಲ್ಯಾಂಬರ್ ಮತ್ತು ಕಫೆ ರೇಸರ್ ಮಾದರಿಗಳನ್ನು ಪರಿಚಯಿಸಬಹುದಾಗಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಯಜ್ಡಿ ಕಂಪನಿಯ ಹಳೆಯ ಬೈಕ್ ಮಾದರಿಗಳನ್ನು ಆಧರಿಸಿ ಹೊಸ ಬೈಕ್ ಮಾದರಿಗಳು ರಸ್ತೆಗಿಳಿಯುವ ಸಾಧ್ಯತೆಗಳಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ ಅಡ್ವೆಂಚರ್ ಮತ್ತು ಕ್ಲಾಸಿಕ್ ಕ್ರೂಸರ್ ಮಾದರಿಗಳು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಪ್ರಮುಖ ಬೈಕ್ ಮಾದರಿಗೆ ಭರ್ಜರಿ ಪೈಪೋಟಿ ನೀಡಲಿವೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಯಜ್ಡಿ ಹೊಸ ಬೈಕ್ ಮಾದರಿಗಳು ಜಾವಾ ಪೆರಾಕ್ ಮಾದರಿಯಲ್ಲಿರುವ 6 ಸ್ಪೀಡ್ ಗೇರ್‌ಬಾಕ್ಸ್ ಪ್ರೇರಿತ 30 ಬಿಎಚ್‌ಪಿ ಪ್ರೇರಿತ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಎರವಲು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದು ಪರ್ಫಾಮೆನ್ಸ್ ಮತ್ತು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಜೊತೆಗೆ ಹೊಸ ಬೈಕ್ ಮಾದರಿಗಳಲ್ಲಿ ಅಡ್ವೆಂಚರ್ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳನ್ನು ನೀಡಲು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ಹೈ ಸೆಟ್ ಹ್ಯಾಂಡಲ್‌ಬಾರ್, ಫುಲ್ ಎಲ್ಇಡಿ ಲೈಟಿಂಗ್ಸ್, ಫ್ರಂಟ್ ಮಡ್‌ಗಾರ್ಡ್, ಫ್ರಂಟ್ ವಿಂಡ್‌ಸ್ಕ್ರೀನ್, ನಾಕಲ್ ಗಾರ್ಡ್, ಲಗೇಜ್ ರಾಕ್, ಹೆಚ್ಚುವರಿ ಪೆಟ್ರೋಲ್ ಟ್ಯಾಂಕ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಫೀಚರ್ಸ್ ಹೊಂದಿರಲಿವೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಜೊತೆಗೆ ಹೊಸ ಬೈಕ್ ಮಾದರಿಗಳು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಕನೆಕ್ಟ್ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಹೊಸ ಬೈಕ್‌ಗಳು ಮುಂದಿನ ವರ್ಷದ ಆರಂಭದಲ್ಲಿ ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಸದ್ಯ ಮಾರುಕಟ್ಟೆಯಲ್ಲಿರುವ ಜಾವಾ, ಜಾವಾ 42 ಮತ್ತು ಪೆರಾಕ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯೇ ಅಭಿವೃದ್ದಿಗೊಳಿಸಿ ನಿರ್ಮಾಣ ಮಾಡುತ್ತಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಅಸಲಿಗೆ ಜಾವಾ ಮತ್ತು ಯೆಜ್ಡಿ ಕಂಪನಿಗಳು 90ರ ದಶಕದಲ್ಲೇ ಬಿಎಸ್ಎ ಮೋಟಾರ್‌‌ಸೈಕಲ್ ಕಂಪನಿಯ ಪಾಲಾಗಿದ್ದು, ಬಿಎಸ್ಎ ಮೋಟಾರ್‌‌ಸೈಕಲ್ ಕಂಪನಿಯು ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಮಾರಾಟ ಜಾಲವನ್ನು ಹೊಂದಿದೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಹಲವು ಪ್ರಯತ್ನಗಳ ನಂತರ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಬಿಎಸ್ಎ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಾವಾ ನಂತರ ಯಜ್ಡಿ ಬೈಕ್‌ಗಳನ್ನು ಸಹ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯ ಅನುಸಾರ ಉತ್ಪಾದನೆ ಪುನಾರಂಭಿಸುವ ಬಗ್ಗೆ ಯೋಜನೆ ರೂಪಿಸಿವೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಜಾವಾ ಹೊಸ ಕ್ಲಾಸಿಕ್ ಬೈಕ್‌ಗಳು 300ಸಿಸಿ ವಿಭಾಗದಲ್ಲಿ ಸದ್ದು ಮಾಡಲಿದ್ದರೆ ಯಜ್ಡಿ ಹೊಸ ಬೈಕ್ ಮಾದರಿಗಳು 250ಸಿಸಿಯಿಂದ 650 ಸಿಸಿ ಸಾಮರ್ಥ್ಯ ಎಂಜಿನ್‌‌ನೊಂದಿಗೆ ಮಾರುಕಟ್ಟೆ ಲಗ್ಗೆಯಿಡಲಿದ್ದು, ರೆಟ್ರೋ ಲುಕ್‌ನೊಂದಿಗೆ ಸುಧಾರಿತ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಜನವರಿ 13ರಂದು ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಯಜ್ಡಿ ಹೊಸ ಅಡ್ವೆಂಚರ್ ಬೈಕ್

ಇದಷ್ಟೇ ಅಲ್ಲದೇ ಮಾತೃಸಂಸ್ಥೆಯಾದ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯು ಸಹ ಕೆಲವು ಪ್ರೀಮಿಯಂ ಬೈಕ್‌ಗಳನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಕಂಪನಿಯ 550ಸಿಸಿ, 750ಸಿಸಿ ಬೈಕ್‌ಗಳನ್ನೇ ಭಾರತದಲ್ಲೂ ಮಾರಾಟ ಆರಂಭಿಸುವ ಚಿಂತನೆ ನಡೆಸಿದೆ.

Most Read Articles

Kannada
Read more on ಯಜ್ಡಿ yezdi
English summary
Yezdi new adventure bike official unveil date details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X