ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಕ್ಲಾಸಿಕ್ ಲೆಜೆಂಡ್ ಕಂಪನಿಯು ಯಜ್ಡಿ ಬೈಕ್‌ಗಳನ್ನು ಹೊಸ ರೂಪದೊಂದಿಗೆ ಮರುಬಿಡುಗಡೆ ಮಾಡಲು ಬೃಹತ್ ಯೋಜನೆ ರೂಪಿಸಿದ್ದು, ಸಂಕ್ರಾಂತಿ ವಿಶೇಷವಾಗಿ ಇದೇ ತಿಂಗಳು 13ರಂದು ಯಜ್ಡಿ ಹೊಸ ಬೈಕ್ ಉತ್ಪಾದನಾ ಮಾದರಿಗಳು ಅನಾವರಣಗೊಳ್ಳಲಿವೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ನ್ಯೂ ಜನರೇಷನ್ ಯಜ್ಡಿ ಬೈಕ್ ಮಾದರಿಯೊಂದಿಗೆ ಕ್ಲಾಸಿಕ್ ಲೆಜೆಂಡ್ ಕಂಪನಿಯು ಕ್ಲಾಸಿಕ್ ಮತ್ತು ಅಡ್ವೆಂಚರ್ ಬೈಕ್ ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದು, ಹೊಸ ಬೈಕ್ ಬಿಡುಗಡೆ ಸಿದ್ದತೆ ನಡೆಸಿರುವ ಕಂಪನಿಯು ಈ ತಿಂಗಳು 13ರಂದು ಹೊಸ ಬೈಕ್ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲು ಅಂತಿಮ ಸಿದ್ದತೆ ನಡೆಸಿದೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಹೊಸ ಯಜ್ಡಿ ಬೈಕ್‌ ಮಾದರಿಗಳನ್ನು ಕ್ಲಾಸಿಕ್ ಲೆಜೆಂಡ್ ಕಂಪನಿಯು ನವೀಕೃತ ವಿನ್ಯಾಸ ಮತ್ತು ಸುಧಾರಿತ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹಳೆಯ ಬೈಕ್ ವಿನ್ಯಾಸದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಕ್ಲಾಸಿಕ್ ಕ್ರೂಸರ್ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಅಡ್ವೆಂಚರ್ ಟೂರರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಕ್ಲಾಸಿಕ್ ಲೆಜೆಂಡ್ ಕಂಪನಿಯು ಹಂಚಿಕೊಂಡಿರುವ ಹೊಸ ಟೀಸರ್ ವಿಡಿಯೋದಲ್ಲಿ ಯಜ್ಡಿ ಬ್ಯಾಡ್ಜ್ ಅಡಿ ಒಟ್ಟು ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ಸಿಕ್ಕಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಕ್ಲಾಸಿಕ್, ಸ್ಟ್ರೀಟ್ ಮತ್ತು ಅಡ್ವೆಂಚರ್ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಯಜ್ಡಿ ಹೊಸ ಬೈಕ್ ಬಿಡುಗಡೆಯ ಕುರಿತಂತೆ ಸರಣಿ ಟ್ವಿಟ್‌ಗಳನ್ನು ಮಾಡುತ್ತಿರುವ ಕ್ಲಾಸಿಕ್ ಲೆಜೆಂಡ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ ಈಗಾಗಲೇ ಹೊಸ ಬೈಕಿಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ತಿಂಗಳು 13ರಂದು ನಡೆಯಲಿರುವ ಅನಾವರಣ ಕಾರ್ಯಕ್ರಮದಲ್ಲಿ ಹೊಸ ಬೈಕ್ ಉತ್ಪಾದನಾ ಮಾದರಿಯ ಬಗೆಗೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಹೊಸ ಬೈಕ್‌ ಬಿಡುಗಡೆಗೂ ಮುನ್ನ ಕಂಪನಿಯು ನ್ಯೂ ಜನರೇಷನ್ ಮಾದರಿಗಳ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದ್ದು, 80ರ ದಶಕದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದ ರೋಡ್‌ಕಿಂಗ್ ಆಧರಿಸಿರುವ ಹೊಸ ಕ್ಲಾಸಿಕ್ ಅಡ್ವೆಂಚರ್ ಟೂರರ್ ಮಾದರಿಯೊಂದಿಗೆ ಕ್ಲಾಸಿಕ್ ಕ್ರೂಸರ್, ಸ್ಕ್ಲ್ಯಾಂಬರ್, ಕಫೆ ರೇಸರ್ ಮಾದರಿಗಳನ್ನು ಪರಿಚಯಿಸಬಹುದಾಗಿದೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಯಜ್ಡಿ ಕಂಪನಿಯ ಹಳೆಯ ಬೈಕ್ ಮಾದರಿಗಳನ್ನು ಆಧರಿಸಿ ಹೊಸ ಬೈಕ್ ಮಾದರಿಗಳು ರಸ್ತೆಗಿಳಿಯುವ ಸಾಧ್ಯತೆಗಳಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ ಅಡ್ವೆಂಚರ್ ಮತ್ತು ಕ್ಲಾಸಿಕ್ ಕ್ರೂಸರ್ ಮಾದರಿಗಳು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಪ್ರಮುಖ ಬೈಕ್ ಮಾದರಿಗೆ ಭರ್ಜರಿ ಪೈಪೋಟಿ ನೀಡಲಿವೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಯಜ್ಡಿ ಹೊಸ ಬೈಕ್ ಮಾದರಿಗಳು ಜಾವಾ ಪೆರಾಕ್ ಮಾದರಿಯಲ್ಲಿರುವ 6 ಸ್ಪೀಡ್ ಗೇರ್‌ಬಾಕ್ಸ್ ಪ್ರೇರಿತ 30 ಬಿಎಚ್‌ಪಿ ಪ್ರೇರಿತ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಎರವಲು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದು ಪರ್ಫಾಮೆನ್ಸ್ ಮತ್ತು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಜೊತೆಗೆ ಹೊಸ ಬೈಕ್ ಮಾದರಿಗಳಲ್ಲಿ ಅಡ್ವೆಂಚರ್ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳನ್ನು ನೀಡಲು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ಹೈ ಸೆಟ್ ಹ್ಯಾಂಡಲ್‌ಬಾರ್, ಫುಲ್ ಎಲ್ಇಡಿ ಲೈಟಿಂಗ್ಸ್, ಫ್ರಂಟ್ ಮಡ್‌ಗಾರ್ಡ್, ಫ್ರಂಟ್ ವಿಂಡ್‌ಸ್ಕ್ರೀನ್, ನಾಕಲ್ ಗಾರ್ಡ್, ಲಗೇಜ್ ರಾಕ್, ಹೆಚ್ಚುವರಿ ಪೆಟ್ರೋಲ್ ಟ್ಯಾಂಕ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಫೀಚರ್ಸ್ ಹೊಂದಿರಲಿವೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಹೊಸ ಬೈಕ್ ಮಾದರಿಗಳು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಕನೆಕ್ಟ್ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಹೊಸ ಬೈಕ್‌ಗಳು ಇದೇ ವರ್ಷದಲ್ಲಿ ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಸದ್ಯ ಮಾರುಕಟ್ಟೆಯಲ್ಲಿರುವ ಜಾವಾ, ಜಾವಾ 42 ಮತ್ತು ಪೆರಾಕ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯೇ ಅಭಿವೃದ್ದಿಗೊಳಿಸಿ ನಿರ್ಮಾಣ ಮಾಡುತ್ತಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಜಾವಾ ಮತ್ತು ಯೆಜ್ಡಿ ಕಂಪನಿಗಳು 90ರ ದಶಕದಲ್ಲೇ ಬಿಎಸ್ಎ ಮೋಟಾರ್‌‌ಸೈಕಲ್ ಕಂಪನಿಯ ಪಾಲಾಗಿದ್ದು, ಬಿಎಸ್ಎ ಮೋಟಾರ್‌‌ಸೈಕಲ್ ಕಂಪನಿಯು ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಮಾರಾಟ ಜಾಲವನ್ನು ಹೊಂದಿದೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಹಲವು ಪ್ರಯತ್ನಗಳ ನಂತರ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಬಿಎಸ್ಎ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಾವಾ ನಂತರ ಯಜ್ಡಿ ಬೈಕ್‌ಗಳನ್ನು ಸಹ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯ ಅನುಸಾರ ಉತ್ಪಾದನೆ ಪುನಾರಂಭಿಸುವ ಬಗ್ಗೆ ಯೋಜನೆ ರೂಪಿಸಿವೆ.

ಭಾರತದಲ್ಲಿ ಮೂರು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಯಜ್ಡಿ

ಇದಷ್ಟೇ ಅಲ್ಲದೇ ಮಾತೃಸಂಸ್ಥೆಯಾದ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯು ಸಹ ಕೆಲವು ಪ್ರೀಮಿಯಂ ಬೈಕ್‌ಗಳನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಕಂಪನಿಯ 550ಸಿಸಿ, 750ಸಿಸಿ ಬೈಕ್‌ಗಳನ್ನೇ ಭಾರತದಲ್ಲೂ ಮಾರಾಟ ಆರಂಭಿಸುವ ಚಿಂತನೆ ನಡೆಸಿದೆ.

Most Read Articles

Kannada
Read more on ಯಜ್ಡಿ yezdi
English summary
Classic legends launch 3 yezdi bikes tomorrow released new teaser
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X