Just In
- 12 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 13 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 14 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 14 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ತಿಂಗಳು 13ರಂದು ಅನಾವರಣಗೊಳ್ಳಲಿದೆ ಯಜ್ಡಿ ಹೊಸ ಅಡ್ವೆಂಚರ್ ಬೈಕ್
ಜಾವಾ ಮೋಟಾರ್ಸೈಕಲ್ಗಳ ಬಿಡುಗಡೆಯ ಯಶಸ್ವಿ ನಂತರ ಕ್ಲಾಸಿಕ್ ಲೆಜೆಂಡ್ ಕಂಪನಿಯು ಶೀಘ್ರದಲ್ಲಿಯೇ ಯಜ್ಡಿ ಬೈಕ್ಗಳಿಗೂ ಹೊಸ ರೂಪ ನೀಡುವ ಬೃಹತ್ ಯೋಜನೆ ರೂಪಿಸಿದ್ದು, ಹೊಸ ಬೈಕ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿರುವ ಕ್ಲಾಸಿಕ್ ಲೆಜೆಂಡ್ ಕಂಪನಿಯು ಸಂಕ್ರಾಂತಿ ವಿಶೇಷವಾಗಿ ಇದೇ ತಿಂಗಳು 13ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳಿಸಲು ಸಜ್ಜಾಗಿದೆ.
ಕ್ಲಾಸಿಕ್ ಲೆಜೆಂಡ್ ಕಂಪನಿಯು ನ್ಯೂ ಜನರೇಷನ್ ಯಜ್ಡಿ ಮಾದರಿಯೊಂದಿಗೆ ಕ್ಲಾಸಿಕ್ ಮತ್ತು ಅಡ್ವೆಂಚರ್ ಬೈಕ್ ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದು, ಹೊಸ ಬೈಕ್ ಬಿಡುಗಡೆ ಸಿದ್ದತೆ ನಡೆಸಿರುವ ಕಂಪನಿಯು ಈ ತಿಂಗಳು 13ರಂದು ಹೊಸ ಬೈಕ್ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಅಧಿಕೃತ ಮಾರಾಟ ಆರಂಭಿಸಲಿದೆ.
ಹೊಸ ಯಜ್ಡಿ ಬೈಕ್ ಮಾದರಿಗಳನ್ನು ಕ್ಲಾಸಿಕ್ ಲೆಜೆಂಡ್ ಕಂಪನಿಯು ನವೀಕೃತ ವಿನ್ಯಾಸ ಮತ್ತು ಸುಧಾರಿತ ಎಂಜಿನ್ನೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹಳೆಯ ಬೈಕ್ ವಿನ್ಯಾಸದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಕ್ಲಾಸಿಕ್ ಕ್ರೂಸರ್ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಅಡ್ವೆಂಚರ್ ಟೂರರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ.
ಯಜ್ಡಿ ಹೊಸ ಬೈಕ್ ಬಿಡುಗಡೆಯ ಕುರಿತಂತೆ ಸರಣಿ ಟ್ವಿಟ್ಗಳನ್ನು ಮಾಡುತ್ತಿರುವ ಕ್ಲಾಸಿಕ್ ಲೆಜೆಂಡ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ ಈಗಾಗಲೇ ಹೊಸ ಬೈಕಿಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದು, ಜನವರಿ 13ರಂದು ಹೊಸ ಬೈಕ್ ಉತ್ಪಾದನಾ ಮಾದರಿಯ ಬಗೆಗೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ಸಿದ್ದತೆಯಲ್ಲಿದ್ದಾರೆ.
ಹೊಸ ಬೈಕ್ ಬಿಡುಗಡೆಗೂ ಮುನ್ನ ಕಂಪನಿಯು ನ್ಯೂ ಜನರೇಷನ್ ಮಾದರಿಗಳ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದ್ದು, 80ರ ದಶಕದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದ ರೋಡ್ಕಿಂಗ್ ಆಧರಿಸಿರುವ ಹೊಸ ಕ್ಲಾಸಿಕ್ ಅಡ್ವೆಂಚರ್ ಟೂರರ್ ಮಾದರಿಯೊಂದಿಗೆ ಕ್ಲಾಸಿಕ್ ಕ್ರೂಸರ್, ಸ್ಕ್ಲ್ಯಾಂಬರ್ ಮತ್ತು ಕಫೆ ರೇಸರ್ ಮಾದರಿಗಳನ್ನು ಪರಿಚಯಿಸಬಹುದಾಗಿದೆ.
ಯಜ್ಡಿ ಕಂಪನಿಯ ಹಳೆಯ ಬೈಕ್ ಮಾದರಿಗಳನ್ನು ಆಧರಿಸಿ ಹೊಸ ಬೈಕ್ ಮಾದರಿಗಳು ರಸ್ತೆಗಿಳಿಯುವ ಸಾಧ್ಯತೆಗಳಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ ಅಡ್ವೆಂಚರ್ ಮತ್ತು ಕ್ಲಾಸಿಕ್ ಕ್ರೂಸರ್ ಮಾದರಿಗಳು ರಾಯಲ್ ಎನ್ಫೀಲ್ಡ್ ನಿರ್ಮಾಣದ ಪ್ರಮುಖ ಬೈಕ್ ಮಾದರಿಗೆ ಭರ್ಜರಿ ಪೈಪೋಟಿ ನೀಡಲಿವೆ.
ಯಜ್ಡಿ ಹೊಸ ಬೈಕ್ ಮಾದರಿಗಳು ಜಾವಾ ಪೆರಾಕ್ ಮಾದರಿಯಲ್ಲಿರುವ 6 ಸ್ಪೀಡ್ ಗೇರ್ಬಾಕ್ಸ್ ಪ್ರೇರಿತ 30 ಬಿಎಚ್ಪಿ ಪ್ರೇರಿತ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಎರವಲು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದು ಪರ್ಫಾಮೆನ್ಸ್ ಮತ್ತು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ.
ಜೊತೆಗೆ ಹೊಸ ಬೈಕ್ ಮಾದರಿಗಳಲ್ಲಿ ಅಡ್ವೆಂಚರ್ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳನ್ನು ನೀಡಲು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ಹೈ ಸೆಟ್ ಹ್ಯಾಂಡಲ್ಬಾರ್, ಫುಲ್ ಎಲ್ಇಡಿ ಲೈಟಿಂಗ್ಸ್, ಫ್ರಂಟ್ ಮಡ್ಗಾರ್ಡ್, ಫ್ರಂಟ್ ವಿಂಡ್ಸ್ಕ್ರೀನ್, ನಾಕಲ್ ಗಾರ್ಡ್, ಲಗೇಜ್ ರಾಕ್, ಹೆಚ್ಚುವರಿ ಪೆಟ್ರೋಲ್ ಟ್ಯಾಂಕ್, ಅಪ್ಸ್ವೆಪ್ಟ್ ಎಕ್ಸಾಸ್ಟ್ ಫೀಚರ್ಸ್ ಹೊಂದಿರಲಿವೆ.
ಹೊಸ ಬೈಕ್ ಮಾದರಿಗಳು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಕನೆಕ್ಟ್ ಫೀಚರ್ಸ್ಗಳನ್ನು ಹೊಂದಿರಲಿದ್ದು, ಹೊಸ ಬೈಕ್ಗಳು ಮುಂದಿನ ವರ್ಷದ ಆರಂಭದಲ್ಲಿ ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ.
ಸದ್ಯ ಮಾರುಕಟ್ಟೆಯಲ್ಲಿರುವ ಜಾವಾ, ಜಾವಾ 42 ಮತ್ತು ಪೆರಾಕ್ ಬೈಕ್ಗಳನ್ನು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯೇ ಅಭಿವೃದ್ದಿಗೊಳಿಸಿ ನಿರ್ಮಾಣ ಮಾಡುತ್ತಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಬಿಎಸ್ಎ ಮೋಟಾರ್ಸೈಕಲ್ ಕಂಪನಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅಸಲಿಗೆ ಜಾವಾ ಮತ್ತು ಯೆಜ್ಡಿ ಕಂಪನಿಗಳು 90ರ ದಶಕದಲ್ಲೇ ಬಿಎಸ್ಎ ಮೋಟಾರ್ಸೈಕಲ್ ಕಂಪನಿಯ ಪಾಲಾಗಿದ್ದು, ಬಿಎಸ್ಎ ಮೋಟಾರ್ಸೈಕಲ್ ಕಂಪನಿಯು ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಮಾರಾಟ ಜಾಲವನ್ನು ಹೊಂದಿದೆ.
ಹಲವು ಪ್ರಯತ್ನಗಳ ನಂತರ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಬಿಎಸ್ಎ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಾವಾ ನಂತರ ಯಜ್ಡಿ ಬೈಕ್ಗಳನ್ನು ಸಹ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯ ಅನುಸಾರ ಉತ್ಪಾದನೆ ಪುನಾರಂಭಿಸುವ ಬಗ್ಗೆ ಯೋಜನೆ ರೂಪಿಸಿವೆ.
ಜಾವಾ ಹೊಸ ಕ್ಲಾಸಿಕ್ ಬೈಕ್ಗಳು 300ಸಿಸಿ ವಿಭಾಗದಲ್ಲಿ ಸದ್ದು ಮಾಡಲಿದ್ದರೆ ಯಜ್ಡಿ ಹೊಸ ಬೈಕ್ ಮಾದರಿಗಳು 250ಸಿಸಿಯಿಂದ 650 ಸಿಸಿ ಸಾಮರ್ಥ್ಯ ಎಂಜಿನ್ನೊಂದಿಗೆ ಮಾರುಕಟ್ಟೆ ಲಗ್ಗೆಯಿಡಲಿದ್ದು, ರೆಟ್ರೋ ಲುಕ್ನೊಂದಿಗೆ ಸುಧಾರಿತ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.
ಇದಷ್ಟೇ ಅಲ್ಲದೇ ಮಾತೃಸಂಸ್ಥೆಯಾದ ಬಿಎಸ್ಎ ಮೋಟಾರ್ಸೈಕಲ್ ಕಂಪನಿಯು ಸಹ ಕೆಲವು ಪ್ರೀಮಿಯಂ ಬೈಕ್ಗಳನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಕಂಪನಿಯ 550ಸಿಸಿ, 750ಸಿಸಿ ಬೈಕ್ಗಳನ್ನೇ ಭಾರತದಲ್ಲೂ ಮಾರಾಟ ಆರಂಭಿಸುವ ಚಿಂತನೆ ನಡೆಸಿದೆ.