ಯಜ್ಡಿ ಹೊಸ ಕ್ಲಾಸಿಕ್ ಬೈಕ್‌ಗಳ ಬಿಡುಗಡೆಗೆ ಸಿದ್ದವಾದ ಕ್ಲಾಸಿಕ್ ಲೆಜೆಂಡ್
ಭಾರತದಲ್ಲಿ ಭಾರೀ ನೀರಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಜಾವಾ ಕ್ಲಾಸಿಕ್ ಬೈಕ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಜಾವಾ ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಿದ ನಂತರ ಕ್ಲಾಸಿಕ್ ಲೆಜೆಂಡ್ ಕಂಪನಿಯು ಇದೀಗ ಯಜ್ಡಿ ಬೈಕ್‌ಗಳ ಮಾರಾಟಕ್ಕೂ ಮರುಜೀವ ನೀಡುವ ಸಿದ್ದತೆಯಲ್ಲಿದೆ.

ಹೌದು, ಭಾರತದಲ್ಲಿ ಜಾವಾ ಬೈಕ್‌ಗಳನ್ನು ಈಗಾಗಲೇ ಹೊಸ ರೂಪದೊಂದಿಗೆ ಬಿಡುಗಡೆ ಮಾಡಿರುವ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಯಜ್ಡಿ ಕ್ಲಾಸಿಕ್ ಬೈಕ್‌ಗಳನ್ನು ಸಹ ಹೊಸ ಎಂಜಿನ್ ಮತ್ತು ನವೀಕರಿಸಿದ ವಿನ್ಯಾಸದಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಕ್ಲಾಸಿಕ್ ಲೆಜೆಂಡ್ ಕಂಪನಿಯು ಹೊಸ ಬೈಕ್‌ಗಳನ್ನು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಮಾತ್ರವಲ್ಲದೇ ಎಲೆಕ್ಟ್ರಿಕ್ ಮಾದರಿಯಲ್ಲೂ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮತ್ತೊಮ್ಮೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಹೌದು, ಭಾರತದಲ್ಲಿ ಜಾವಾ ಬೈಕ್‌ಗಳನ್ನು ಹೊಸ ರೂಪದೊಂದಿಗೆ ಬಿಡುಗಡೆ ಮಾಡಿರುವ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಮುಂದಿನ ದೀಪಾವಳಿ ಹೊತ್ತಿಗೆ ಯಜ್ಡಿ ರೋಡ್ ಕಿಂಗ್ ಬೈಕ್ ಮಾದರಿಯನ್ನು ಸಹ ಹೊಸ ವಿನ್ಯಾಸದಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಬೈಕ್ ಪ್ರಿಯರಲ್ಲಿ ಮತ್ತೊಮ್ಮೆ ಕುತೂಹಲ ಹುಟ್ಟುಹಾಕಿದೆ.

ಸದ್ಯ ಜಾವಾ ಮತ್ತು ಯಜ್ಡಿ ಬೈಕ್‌ಗಳ ಮರು ನಿರ್ಮಾಣ ಮತ್ತು ಮಾರಾಟದ ಹಕ್ಕು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿ ಬಳಿಯಿದ್ದು, ಇದು ಮಹೀಂದ್ರಾ ಅಂಗಸಂಸ್ಥೆಯಾಗಿ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಜಾವಾ, ಜಾವಾ 42 ಮತ್ತು ಪೆರಾಕ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯೇ ಅಭಿವೃದ್ದಿಗೊಳಿಸಿ ನಿರ್ಮಾಣ ಮಾಡುತ್ತಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅಸಲಿಗೆ ಜಾವಾ ಮತ್ತು ಯೆಜ್ಡಿ ಕಂಪನಿಗಳು 90ರ ದಶಕದಲ್ಲೇ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಪಾಲಾಗಿದ್ದು, ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಮಾರಾಟ ಜಾಲವನ್ನು ಹೊಂದಿದೆ.

ಹಲವು ಪ್ರಯತ್ನಗಳ ನಂತರ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಬಿಎಸ್ಎ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಾವಾ ನಂತರ ಯಜ್ಡಿ ಬೈಕ್‌ಗಳನ್ನು ಸಹ ಪ್ರಸ್ತುತ ಮಾರುಕಟ್ಟೆ ಬೇಡಿಕೆ ಅನುಸಾರ ಉತ್ಪಾದನೆ ಪುನಾರಂಭಿಸುವ ಬಗ್ಗೆ ಯೋಜನೆ ರೂಪಿಸಿವೆ.
MOST READ: ಪ್ರತಿ ಚಾರ್ಜ್‌ಗೆ 240ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಎನರ್ಜಿ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಜಾವಾ ಹೊಸ ಕ್ಲಾಸಿಕ್ ಬೈಕ್‌ಗಳು 300ಸಿಸಿ ವಿಭಾಗದಲ್ಲಿ ಸದ್ದು ಮಾಡಲಿದ್ದರೆ ಯಜ್ಡಿ ಹೊಸ ಬೈಕ್ ಮಾದರಿಗಳು 250ಸಿಸಿ, 650 ಸಿಸಿ ಸಾಮರ್ಥ್ಯ ಎಂಜಿನ್‌ನೊಂದಿಗೆ ಮಾರುಕಟ್ಟೆ ಲಗ್ಗೆಯಿಡಲಿದ್ದು, ರೆಟ್ರೋ ಲುಕ್‌ನೊಂದಿಗೆ ಸುಧಾರಿತ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಇದಷ್ಟೇ ಅಲ್ಲದೇ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಕೆಲವು ಪ್ರೀಮಿಯಂ ಬೈಕ್‌ಗಳನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಬಿಎಸ್ಎ 550ಸಿಸಿ, 750ಸಿಸಿ ಬೈಕ್‌ಗಳನ್ನೇ ಭಾರತದಲ್ಲೂ ಮಾರಾಟ ಆರಂಭಿಸುವ ಚಿಂತನೆ ನಡೆಸಿದೆ.
MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಜೊತೆಗೆ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಎಲೆಕ್ಟ್ರಿಕ್ ಕ್ಲಾಸಿಕ್ ಬೈಕ್ ಮಾದರಿಯನ್ನು ಅಭಿವೃದ್ದಿಗೊಳಿಸುವ ಯೋಜನೆಯಿದ್ದು, ಜಾವಾ ಬೈಕಿನಲ್ಲೂ ಕೂಡಾ ಎಲೆಕ್ಟ್ರಿಕ್ ಆವೃತ್ತಿಯನ್ನು ಅಭಿವೃದ್ದಿಗೊಳ್ಳುತ್ತಿರುವುದಾಗಿ ಕ್ಲಾಸಿಕ್ ಲೆಜೆಂಡ್ ಕಂಪನಿಯೇ ಖಚಿತಪಡಿಸಿದೆ.


Click it and Unblock the Notifications








