ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಭಾರತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲ್ವಿಚಾರಣೆಗಾಗಿ ಓಲಾ ಎಲೆಕ್ಟ್ರಿಕ್ ಇಂದು ಯೊಂಗ್ಸಾಂಗ್ ಕಿಮ್ ಅವರನ್ನು ಗ್ಲೋಬಲ್ ಸೇಲ್ಸ್ ಹಾಗೂ ಡಿಸ್ಟ್ರಿಬ್ಯೂಷನ್ ಮುಖ್ಯಸ್ಥರನ್ನಾಗಿ ನೇಮಿಸಿದೆ. ಯೊಂಗ್ಸಾಂಗ್ ಕಿಮ್‌ ಹ್ಯುಂಡೈ ಮೋಟಾರ್ ಹಾಗೂ ಕಿಯಾ ಕಂಪನಿಗಳಲ್ಲಿ 35 ವರ್ಷ ವಿಶ್ವದಾದ್ಯಂತ ಕೆಲಸ ಮಾಡಿದ್ದಾರೆ.

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಅವರು ಭಾರತ, ಉತ್ತರ ಅಮೆರಿಕಾ, ಯುರೋಪ್, ಬ್ರಿಟನ್, ಮಧ್ಯಪ್ರಾಚ್ಯ, ಆಫ್ರಿಕಾ, ಏಷ್ಯಾ, ಏಷ್ಯಾ ಪೆಸಿಫಿಕ್'ನಲ್ಲಿ ಕೆಲವು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವದಾದ್ಯಂತ ಜಾಗತಿಕ ವಾಹನ ಮಾರಾಟ ಅನುಭವವನ್ನು ಹೊಂದಿರುವ ಅವರು ಓಲಾ ಎಲೆಕ್ಟ್ರಿಕ್'ನಲ್ಲಿ ದೇಶಿಯ ಹಾಗೂ ಅಂತರರಾಷ್ಟ್ರೀಯ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ.

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಓಲಾ ಕಂಪನಿಯು ಭಾರತ, ಯುರೋಪ್, ಬ್ರಿಟನ್, ಲ್ಯಾಟಿನ್ ಅಮೆರಿಕಾ, ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ, ನ್ಯೂಜಿಲೆಂಡ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಈ ಬಗ್ಗೆ ಮಾತನಾಡಿರುವ ಯೊಂಗ್ಸಾಂಗ್ ಕಿಮ್, ಓಲಾ ಎಲೆಕ್ಟ್ರಿಕ್'ನ ತಂಡವನ್ನು ಸೇರಲು ನಾನು ಉತ್ಸುಕನಾಗಿದ್ದೇನೆ. ನಮ್ಮ ಎಲೆಕ್ಟ್ರಿಕ್ ವಾಹನಗಳನ್ನು ವಿಶ್ವಾದ್ಯಂತ ಆರಂಭಿಸಲು ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುತ್ತೇನೆ.

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಮಾರಾಟ, ವಿತರಣೆ ಹಾಗೂ ಸೇವೆಯಲ್ಲಿನ ಅವರ ಅನುಭವವು ನಮ್ಮ ಜಾಗತಿಕ ವಿಸ್ತರಣೆಗೆ ಸಹಾಯ ಮಾಡಲಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಜನಪ್ರಿಯಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಕಂಪನಿಯು ಕೆಲ ದಿನಗಳ ಹಿಂದೆ ಈ ಸ್ಕೂಟರಿನ ಅಧಿಕೃತ ಚಿತ್ರಗಳನ್ನು ಬಿಡುಗಡೆಗೊಳಿಸಿತ್ತು.

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲು ಕಂಪನಿಯು ಉತ್ಪಾದನಾ ಘಟಕವನ್ನು ಸಹ ಆರಂಭಿಸಿದೆ. ಈ ಸ್ಕೂಟರ್ ಅಟಾರ್ಗೊದಂತೆ ಕಾಣುತ್ತದೆ. ಆದರೆ ಈ ಸ್ಕೂಟರಿಗೆ ವಿಭಿನ್ನ ನೋಟವನ್ನು ನೀಡಲು ಹಲವಾರು ಬದಲಾವಣೆಗಳನ್ನು ಮಾಡಲಾಗುವುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಈ ಎಲೆಕ್ಟ್ರಿಕ್ ಸ್ಕೂಟರ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಹೊಂದಿದೆ. ಜೊತೆಗೆ ಎತ್ತರದ ರೈಡರ್ ಸೀಟ್ ಹಾಗೂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಇದರ ಹೊರತಾಗಿ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಗ್ಗೆ ಹೆಚ್ಚು ಮಾಹಿತಿಯನ್ನು ನೀಡಿಲ್ಲ.

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವ ಅಳವಡಿಸಿರುವ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 240 ಕಿ.ಮೀಗಳವರೆಗೆ ಚಲಿಸಲಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವಬ್ಯಾಟರಿಯು 2-3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಓಲಾ ಎಲೆಕ್ಟ್ರಿಕ್ ಸಾರಥ್ಯ ವಹಿಸಿದ ಯೊಂಗ್ಸಾಂಗ್ ಕಿಮ್

ಈ ಸ್ಕೂಟರಿನಲ್ಲಿ 50 ಲೀಟರ್ ಸ್ಟೋರೇಜ್ ಸ್ಪೇಸ್ ನೀಡಲಾಗುತ್ತದೆ. ಈ ಸ್ಕೂಟರ್ ಕೇವಲ 3.9 ಸೆಕೆಂಡುಗಳಲ್ಲಿ 0 - 45 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಸ್ಕೂಟರಿನಲ್ಲಿರುವ ಕಲರ್ ಡಿಸ್ ಪ್ಲೇಯನ್ನು ನ್ಯಾವಿಗೇಷನ್, ಆ್ಯಪ್ ಹಾಗೂ ಮ್ಯೂಸಿಕ್ ಕೇಳಲು ಬಳಸಲಾಗುತ್ತದೆ.

Most Read Articles

Kannada
English summary
Yongsung Kim becomes Ola electric global sales and distribution head. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X