ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಹೆಚ್ಚುತ್ತಿರುವ ಇಂಧನ ದರ ಮತ್ತು ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಇವಿ ವಾಹನಗಳ ಬಳಕೆ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿರುವುದು ಇವಿ ವಾಹನ ಉತ್ಪಾದನೆ ಮತ್ತು ಮರಾಟದಲ್ಲಿ ಭಾರೀ ಬೆಳವಣಿಗೆ ಕಂಡುಬರುತ್ತಿದೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಸಬ್ಸಡಿ ಪ್ರೋತ್ಸಾಹ ಯೋಜನೆಗಳಿಂದ ಹಲವಾರು ಸ್ಟಾರ್ಟ್ ಕಂಪನಿಗಳು ಇವಿ ವಾಹನ ಉದ್ಯಮಕ್ಕೆ ಪ್ರವೇಶಿಸುತ್ತಿವೆ.

ದೆಹಲಿ ಮೂಲದ ಜೈಪ್ ಸ್ಮಾರ್ಟ್ ಇವಿ ಕಂಪನಿಯು ಸಹ ಹೊಸ ಇವಿ ಸ್ಕೂಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ಜೈಪ್ ಕಂಪನಿಯು ಇವಿ ವಾಹನ ಉದ್ಯಮ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆಯಾಗಿದೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಜೈಪ್ ಕಂಪನಿಯ ಸೀರಿಸ್ ಎ ಬಂಡವಾಳ ಹೂಡಿಕೆಯಲ್ಲಿ ವಿವಿಧ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಭವಿಷ್ಯದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿರುವ ಇವಿ ವಾಹನ ಮಾದರಿಗಳಿಗಾಗಿ ಸುಮಾರು ರೂ. 52 ಕೋಟಿಯಷ್ಟು ಹೂಡಿಕೆಯಾಗಿದೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಜೈಪ್ ಕಂಪನಿಯು ಈಗಾಗಲೇ ಸುಮಾರು ರೂ. 42 ಕೋಟಿ ಬಂಡವಾಳ ಹೂಡಿಕೆ ಹೊಂದಿದ್ದು, ಇದೀಗ ಹೊಸದಾಗಿ ಎ ಸೀರಿಸ್‌ನಲ್ಲಿ ಸುಮಾರು ರೂ.52 ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸಿದೆ. ಈ ಮೂಲಕ ಜೈಪ್ ಕಂಪನಿಯ ಮೇಲೆ ಇದುವರೆಗೆ ಸುಮಾರು ರೂ.94 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಂಪನಿಯು ತನ್ನ ಉದ್ಯಮ ವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಹೊರತರುವ ಸಿದ್ದತೆಯಲ್ಲಿದೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಇ-ಕಾಮರ್ಸ್ ಕಂಪನಿಗಳ ಸರಕಗಳನ್ನು ಗ್ರಾಹಕರಿಗೆ ತಲುಪಿಸಲು ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಕಂಪನಿಯು ಕೊನೆಯ ಹಂತದ ಮೈಲಿ ತನಕ ಸೇವೆಗಳನ್ನು ನೀಡಲಿದ್ದು, ಹೊಸ ಬಂಡವಾಳ ಹೂಡಿಕೆಯು ಉದ್ಯಮ ವಿಸ್ತರಣೆಗೆ ಸಾಕಷ್ಟು ಸಹಕಾರಿಯಾಗಲಿದೆ. ಜೈಪ್ ಕಂಪನಿಯು ಹೊಸ ಸ್ಕೂಟರ್ ಮಾದರಿಗಳನ್ನು ವಿಶೇಷವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, 2017 ರಲ್ಲಿ ಆರಂಭವಾದ ಜೈಪ್ ಕಂಪನಿಯನ್ನು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್‌ವಾಲ್ ಎಂಬುವವರು ಸ್ಥಾಪನೆ ಮಾಡಿದರು.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಆರಂಭದಲ್ಲಿ ಕಡಿಮೆ ಬಂಡವಾಳದೊಂದಿಗೆ ಆರಂಭವಾದ ಜೈಪ್ ಕಂಪನಿಯು ಇದೀಗ ಸುಮಾರು ರೂ. 94 ಕೋಟಿಯಷ್ಟು ಬಂಡವಾಳ ಪಡೆದುಕೊಂಡ ಹೊಸ ಇವಿ ಸ್ಕೂಟರ್ ಉದ್ಯಮ ಕಂಪನಿಯಾಗಿ ಹೊರಹೊಮ್ಮಿದ್ದು, ಎ ಸೀರಿಸ್‌ನಲ್ಲಿ ಮಾರ್ಕ್ಯೂ ಇಕ್ವಿಟಿ, ನಾನಾವತಿ ಫ್ಯಾಮಿಲಿ ಆಫೀಸ್, ವಿ ಫೌಂಡರ್ ಸರ್ಕಲ್, ರಿಸೋ ಕ್ಯಾಪಿಟಲ್, ಧೋಲಾಕಿಯಾ ವೆಂಚರ್ಸ್, ಐಎಎನ್ ಫಂಡ್, ವೇರ್‌ಹೌಸ್ ನೌ ಸಂಸ್ಥೆಯ ತರುಣ್ ಸರಾಫ್, ಎಡಬ್ಲ್ಯುಎಲ್ ಲಾಜಿಸ್ಟಿಕ್ಸ್‌ನ ರಾಹುಲ್ ಖೇರಾ ಮತ್ತು ಉದ್ಯಮಿಗಳಾದ ಅರ್ಜುನ್ ಸೇಠ್ ಮತ್ತು ಮಾರ್ಕ್ ಜೋಸೆಫ್ ಜೈಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಇನ್ನು ಬ್ಯುಸಿನೆಸ್ ಟು ಬ್ಯುಸಿನೆಸ್ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಪೆಟ್ರೋಲ್ ಸ್ಕೂಟರ್‌ಗಳ ನಿರ್ವಹಣಾ ವೆಚ್ಚವು ಕಳೆದ ಕೆಲ ತಿಂಗಳಿನಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಉದ್ಯಮ ವ್ಯವಹಾರಗಳಿಗೆ ಪೂರಕವಾಗಿ ಜೈಪ್ ಕಂಪನಿಯು ಹೊಸ ವಾಣಿಜ್ಯ ಬಳಕೆಯ ಇವಿ ಸ್ಕೂಟರ್ ಒಂದನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಜೈಪ್ ಕಂಪನಿಯು ವಿವಿಧ ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗೂಡ್ಸ್ ಡೆಲಿವರಿಗಾಗಿ ಸಂಪೂರ್ಣವಾಗಿ ಎಲೆಕ್ಟಿಕ್ ವಾಹನಗಳನ್ನು ಮಾತ್ರ ಬಳಕೆ ಮಾಡುತ್ತಿದೆ. ಆರಂಭದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದ ಜೈಪ್ ಕಂಪನಿಯು ಇದೀಗ ತನ್ನದೆ ಆದ ವಾಹನ ಉತ್ಪಾದನಾ ವಿಭಾಗವನ್ನು ತೆರೆದಿದ್ದು, ಡೆಲಿವರಿ ಉದ್ದೇಶಗಳು ಮತ್ತು ಬೇಡಿಕೆ ಅನುಸಾರವಾಗಿ ಹೊಸ ಇವಿ ಸ್ಕೂಟರ್ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಜೈಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸಂಪೂರ್ಣವಾಗಿ ವಾಣಿಜ್ಯ ಬಳಕೆಯ ಸ್ಕೂಟರ್ ಮಾದರಿಯಾಗಿದ್ದು, ಕೆಟರಿಂಗ್, ಸಿಲಿಂಡರ್ ಸಾಗಾಟ, ಇ-ಕಾರ್ಮಸ್ ಗೂಡ್ಸ್ ಸೇರಿದಂತೆ ವಿವಿಧ ಮಾದರಿಯ ಸಣ್ಣ ಪ್ರಮಾಣದ ಸರಕು ಸಾಗಾಣಿಕೆ ಅನುಕೂಲಕವಾಗಿದೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

40 ಎಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಗರಿಷ್ಠ 250 ಕೆ.ಜಿ ಲೋಡಿಂಗ್ ಸಾಮರ್ಥ್ಯ ಹೊಂದಿದೆ.ಜೊತೆಗೆ ಹೊಸ ಸ್ಕೂಟರಿನಲ್ಲಿ ಕಂಪನಿಯು ಹೆಚ್ಚುವರಿ ಬ್ಯಾಟರಿ ಪ್ಯಾಕ್ ನೀಡಿದ್ದು, ಒಂದು ಬ್ಯಾಟರಿ ಕಾರ್ಯನಿರ್ವಹಣೆಯಲ್ಲಿರುವಾಗ ಮತ್ತೊಂದು ಬ್ಯಾಟರಿಯನ್ನು ಪ್ಯಾಕ್ ಬ್ಯಾಕ್ಅಪ್ ಆಗಿ ಬಳಕೆ ಮಾಡಬಹುದಾಗಿದೆ.

ಇವಿ ವಾಹನ ಪೂರೈಕೆ ಸಂಸ್ಥೆ Zypp Electric ಕಂಪನಿಯ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ

ಮೆಟಲ್ ಬಾಡಿ ಪ್ಯಾನೆಲ್ ಹೊಂದಿರುವ ಹೊಸ ಇವಿ ಸ್ಕೂಟರ್‌ನಲ್ಲಿ ಆರ್ಟಿಫಿಷಲ್ ಟೆಕ್ನಾಲಜಿ ಮತ್ತು ವೆಹಿಕಲ್ ಟ್ರ್ಯಾಕ್ ಸೌಲಭ್ಯಕ್ಕಾಗಿ ಡಿಜಿಟಲ್ ಪ್ಯಾನೆಲ್ ಜೋಡಿಸಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಲಗೇಜ್ ರಾಕ್ ಜೋಡಣೆ ಆಧಾರದ ಮೇಲೆ ಸ್ಕೂಟರ್ ಬೆಲೆಯು ಆರಂಭಿಕವಾಗಿ ರೂ.59 ಸಾವಿರ ನಿಗದಿಪಡಿಸಲಾಗಿದೆ.

Article Published On: Tuesday, September 28, 2021, 18:55 [IST]
English summary
Zypp electric raises 7 million dollars in series a funding to ev space
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+