YouTube

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಸಿಬಿ300ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೋಂಡಾ ಸಿಬಿ300ಆರ್ ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಹೊಸ ಹೋಂಡಾ ಸಿಬಿ300ಆರ್ ಬೈಕ್ ಬೆಲೆಯು ನವದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ.2.77 ಲಕ್ಷವಾಗಿದೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಈ ನಿಯೋ-ರೆಟ್ರೊ ಕೆಫೆ ರೇಸರ್ ಅನ್ನು ಕಳೆದ ತಿಂಗಳು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು, ಈ ಹೊಸ ಹೋಂಡಾ ಸಿಬಿ300ಆರ್ ಬೈಕ್ ಎಲ್ಇಡಿ ಹೆಡ್‌ಲ್ಯಾಂಪ್, ಫ್ಲಾಟ್ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಸ್ಕಲ್ಪ್ಟೆಡ್ ಇಂಧನ ಟ್ಯಾಂಕ್, ಸ್ಪ್ಲಿಟ್-ಸೀಟ್ ಸೆಟಪ್, ಸ್ಟಬ್ಬಿ ಎಕ್ಸಾಸ್ಟ್ ಮತ್ತು ನಯವಾದ ಎಲ್‌ಇಡಿ ಟೈಲ್‌ಲೈಟ್ ಅನ್ನು ಪಡೆಯುತ್ತದೆ. ರೇಡಿಯೇಟರ್ ಕೌಲ್ ಈಗ ಸಿಲ್ವರ್ ಬದಲಿಗೆ ಬ್ಲ್ಯಾಕ್ ಬಣ್ಣವಾಗಿದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಇದು ಹಳೆಯ ಮಾದರಿಯಿಂದ ಹೊಸ ಮಾದರಿಯನ್ನು ಪ್ರತ್ಯೇಕಿಸುತ್ತದೆ. ಈ ಬೈಕ್ ಬೈಕ್ ಎಕ್ಸ್‌ಪೋಸ್ಡ್ ಫ್ರೇಮ್ ಅನ್ನು ಹೊಂದಿದೆ. ಈ ಹೊಸ ಹೋಂಡಾ ಸಿಬಿ300ಆರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಗೋಲ್ಡನ್-ಫಿನಿಶ್ಡ್ USD ಫೋರ್ಕ್‌ಗಳು ಮತ್ತು ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಇದು ಅತ್ಯಂತ ಸ್ಪೋರ್ಟಿಯಾಗಿ ಕಾಣುತ್ತದೆ. ಎಕ್ಸಾಸ್ಟ್ ಸ್ಪೋರ್ಟ್ಸ್ ಕ್ರೋಮ್ ಅಂಶಗಳು ದೃಶ್ಯ ಆಕರ್ಷಣೆಯನ್ನು ಇನ್ನಷ್ಟು ಸುಧಾರಿಸುತ್ತದೆ. ಬೈಕ್ LCD ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ (ನೀಲಿ ಬ್ಯಾಕ್‌ಲೈಟಿಂಗ್‌ನೊಂದಿಗೆ), LED ಟರ್ನ್ ಇಂಡಿಕೇಟರ್‌ಗಳು ಮತ್ತು USB ಚಾರ್ಜಿಂಗ್ ಪೋರ್ಟ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಇದರಲ್ಲಿ ಲಭ್ಯವಿಲ್ಲ. ಅಲಾಯ್ ವ್ಹೀಲ್ ಗಳನ್ನು ಬೈಕ್‌ನಲ್ಲಿ ನೀಡಲಾಗುತ್ತದೆ, ಎರಡೂ ತುದಿಗಳಲ್ಲಿ 17-ಇಂಚಿನ, ಮುಂಭಾಗದಲ್ಲಿ 110/70 ಟೈರ್ ಮತ್ತು ಹಿಂಭಾಗದಲ್ಲಿ 150/60 ಟೈರ್ (ಎರಡೂ ಟ್ಯೂಬ್‌ಲೆಸ್) ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 296 ಎಂಎಂ ಮುಂಭಾಗ ಮತ್ತು 220 ಎಂಎಂ ಹಿಂಭಾಗ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಹೊಸ ಹೋಂಡಾ ಸಿಬಿ300ಆರ್ ಬೈಕಿನಲ್ಲಿ 286 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ 31.14 ಬಿಹೆಚ್‍ಪಿ ಪವರ್ ಮತ್ತು 27.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಹೊಂದಿಕೆಯಾಗುತ್ತದೆ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಜೋಡಿಸಲಾಗಿದೆ,

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು ಮತ್ತು CEO ಆದ ಶ್ರೀ ಅತ್ಸುಶಿ ಒಗಾಟಾ ಅವರು ಮಾತನಾಡಿ, ನಮ್ಮ ಗ್ರಾಹಕರ ವಿಶ್ವಾಸ ಮತ್ತು ಹೋಂಡಾ ಅವರ ಬದ್ಧತೆಯನ್ನು ಮತ್ತಷ್ಟು ಮರುಪಡೆಯಲು ಹೋಂಡಾ ಸಿಬಿ300ಆರ್ ಅಂತಿಮವಾಗಿ ಬಂದಿದೆ. ಅದರ ಪರಿಚಯದಿಂದ, ಇದು ಎಂಜಿನಿಯರಿಂಗ್‌ನ ಉನ್ನತ ಗುಣಮಟ್ಟವನ್ನು ಹೊಂದಿದೆ. ವಿಶಿಷ್ಟ ವೈಶಿಷ್ಟ್ಯಗಳು ಮತ್ತು ಡೈನಾಮಿಕ್ ರಸ್ತೆ ಉಪಸ್ಥಿತಿಯೊಂದಿಗೆ, ಗ್ರಾಹಕರು ಹೊಸ ಸಿಬಿ300ಆರ್ ನೊಂದಿಗೆ ಸಂತೋಷಪಡುತ್ತಾರೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು,

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಇನ್ನು ಹೋಂಡಾ (Honda) ತನ್ನ ಜನಪ್ರಿಯ ಸುಪ್ರಾ ಜಿಟಿಆರ್ 150 ಸ್ಕೂಟರ್‌ನ ವಾರ್ಷಿಕ ನವೀಕರಿಸಿದ ಆವೃತ್ತಿಯನ್ನು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದನ್ನು ವಿಯೆಟ್ನಾಂ ಮಾರುಕಟ್ಟೆಯಲ್ಲಿ ವಿನ್ನರ್ ಎಕ್ಸ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

2022ರ ಹೋಂಡಾ ಸುಪ್ರಾ ಜಿಟಿಆರ್ 150 ಸ್ಕೂಟರ್ ಹೊಸ ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ. ಆದರೆ ಉಳಿದಂತೆ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾಗದೆ ಉಳಿದಿವೆ. ವಾರ್ಷಿಕವಾಗಿ ನವೀಕರಿಸಲಾದ ಹೋಂಡಾ ಸುಪ್ರಾ ಜಿಟಿಆರ್ 150 ಈಗ ಹೊಸ ಮತ್ತು ಸ್ಪೋರ್ಟಿಯರ್-ಕಾಣುವ ಮುಂಭಾಗದ ವಿನ್ಯಾಸದೊಂದಿಗೆ ಬರುತ್ತದೆ. ಮುಂಭಾಗ ಟ್ವಿನ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಸ್ಪೋರ್ಟ್‌ಬೈಕ್‌ನಿಂದ ಪಡೆಯಲಾಗಿದೆ ಎಂದು ತೋರುತ್ತದೆ ಮತ್ತು ಅದರ ಡೈನಾಮಿಕ್ ರೈಡಿಂಗ್ ನಿಲುವನ್ನು ಬೆಂಬಲಿಸಲು ದೊಡ್ಡ ವ್ಹೀಲ್ ಗಳನ್ನು ಒಳಗೊಂಡಿದೆ

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಈ ಹೊಸ ಹೋಂಡಾ ಸುಪ್ರಾ ಜಿಟಿಆರ್ 150 ಸ್ಕೂಟರ್ ಮಾದರಿಯ ಕೆಲವು ಪ್ರಮುಖ ವೈಶಿಷ್ಟ್ಯಗಳ ಮುಖ್ಯಾಂಶಗಳು ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಮತ್ತು ನೀಲಿ ಬ್ಯಾಕ್ಲಿಟ್ ಸಂಪೂರ್ಣ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿವೆ. ಈ ಹೊಸ ಸ್ಕೂಟರ್‌ನ ಹೃದಯಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 150ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Honda CB300R ಬೈಕ್ ಬಿಡುಗಡೆ

ಹೊಸ ಹೋಂಡಾ ಸಿಬಿ300ಆರ್ ಬೈಕ್ ಮ್ಯಾಟ್ ಸ್ಟೀಲ್ ಬ್ಲಾಕ್ ಮತ್ತು ಪರ್ಲ್ ಸ್ಪಾರ್ಟನ್ ರೆಡ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಇದು ಬ್ರ್ಯಾಂಡ್‌ನ ಬಿಗ್‌ವಿಂಗ್ ಡೀಲರ್‌ಶಿಪ್‌ಗಳ ಮೂಲಕ ಹೋಂಡಾ ಸಿಬಿ350 ಹೈನಸ್ ಮತ್ತು ಇತರರೊಂದಿಗೆ ಲಭ್ಯವಿರುತ್ತದೆ. ಹೊಸ ಹೋಂಡಾ ಸಿಬಿ300ಆರ್ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಡ್ಯೂಕ್, ಬಿಎಂಡಬ್ಲ್ಯು ಜಿ310 ಆರ್ ಮತ್ತು ಬಜಾಜ್ ಡೊಮಿನಾರ್ 400 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ,

Most Read Articles

Kannada
English summary
2022 honda cb300r launched in india price features new updates details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X