ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಭಾರತದಲ್ಲಿ ಅಡ್ವೆಂಚರ್ ಬೈಕ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಹಲವಾರು ದ್ವಿಚಕ್ರ ವಾಹನ ಕಂಪನಿಗಳು ಭಾರತದಲ್ಲಿ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದೆ. ಇದರ ನಡುವೆ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ X-ADV ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜಿಸುತ್ತಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಇದಕ್ಕಾಗಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು X-ADV ಸ್ಕೂಟರ್ ಗಾಗಿ ಟ್ರೇಡ್‌ಮಾರ್ಕ್ ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಲ್ಲಿಸಲಾಯಿತು ಮತ್ತು ಅದನ್ನು ಈಗ ಅನುಮೋದಿಸಲಾಗಿದೆ. ಮೊದಲ ನೋಟದಲ್ಲಿ, ಹೋಂಡಾ X-ADV ಅನ್ನು ಮ್ಯಾಕ್ಸಿ-ಸ್ಕೂಟರ್ ಎಂದು ಸುಲಭವಾಗಿ ತಪ್ಪಾಗಿ ಗ್ರಹಿಸಬಹುದು. ಆದರೆ X-ADV ಅದರ ವ್ಯಾಪ್ತಿ ಮತ್ತು ಉದ್ದೇಶದ ವಿಷಯದಲ್ಲಿ ಸಾಕಷ್ಟು ವಿಭಿನ್ನವಾಗಿದೆ. ನಗರದ ರಸ್ತೆಗಳು ಮತ್ತು ಆಫ್-ರೋಡ್ ಟ್ರೇಲ್‌ಗಳನ್ನು ಸಲೀಸಾಗಿ ನಿಭಾಯಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಅಡ್ವೆಂಚರ್ ಸ್ಕೂಟರ್ ಮುಂಭಾಗ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಇನ್ನು 2021ರ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಮುಂಭಾಗ ಫಾಸಿಕ ಪ್ಯಾನೆಲ್ ಅನ್ನು ಹೆಚ್ಚು ಅಗ್ರೇಸಿವ್ ಆಗಿ ಕಾಣುವಂತೆ ನವೀಕರಿಸಲಾಗಿದೆ. ಟೈಲ್ ವಿಭಾಗದ ವಿನ್ಯಾಸವನ್ನು ಕೂಡ ನವೀಕರಿಸಲಾಗಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಈ ಹೊಸ ಅಡ್ವೆಂಚರ್ ಸ್ಕೂಟರ್ ಒಟ್ಟಾರೆ ನೋಟ ಮತ್ತು ಭಾವನೆಯನ್ನು ಸುಧಾರಿಸುವುದು ಗೋಲ್ಡನ್ ಬಣ್ಣದ USD ಫೋರ್ಕ್‌ಗಳು. ಗೋಲ್ಡನ್ ಶೇಡ್ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳ ವಿಭಾಗವನ್ನು ಸಹ ಹೈಲೈಟ್ ಮಾಡುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಈ ಸ್ಕೂಟರ್ ಅನ್ನು ಬ್ಲ್ಯಾಕ್ ಮೆಟಾಲಿಕ್, ಪರ್ಲ್ ಡೀಪ್ ಮಡ್ ಗ್ರೇ, ಗ್ರ್ಯಾಂಡ್ ಪ್ರಿಕ್ಸ್ ರೆಡ್ ಮತ್ತು ಹಾರ್ವೆಸ್ಟ್ ಬೀಜ್ ಸೇರಿದಂತೆ ರೋಮಾಂಚಕ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಇನ್ನು ಈ ಹೊಸ ಹೋಂಡಾ ಅಡ್ವೆಂಚರ್ ಸ್ಕೂಟರ್ ಒಟ್ಟಾರೆ ಸವಾರಿ ಅನುಭವಕ್ಕಾಗಿ, 5-ಇಂಚಿನ TFT ಡಿಸ್ ಪ್ಲೇಯನ್ನು ಹೊಂದಿದೆ. ಹೋಂಡಾ ಸ್ಮಾರ್ಟ್ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಮ್ ಮೂಲಕ ಹಲವಾರು ಕನಕ್ಟಿವಿಟಿ ಫೀಚರ್ಸ್ ಗಳನ್ನು ಪ್ರವೇಶಿಸಬಹುದು. ಇದು ಪ್ರಸ್ತುತ Android ಮಾತ್ರ ಸಂಪೂರ್ಟ್ ಮಾತ್ರ ಬೆಂಬಲಿಸುತ್ತದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಡಿಸ್ ಪ್ಲೇ ಮೇಲೆ ಪ್ರದರ್ಶಿಸಲಾದ ಮಾಹಿತಿಯನ್ನು ಬಳಕೆದಾರರ ಅಗತ್ಯತೆಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ಕಸ್ಟಮೈಸ್ ಮಾಡಬಹುದು. ಸವಾರಿ ಸೌಕರ್ಯದ ಹೊರತಾಗಿ, ಭಾಗ ಸ್ಕೂಟರ್ ಆಗಿರುವ ಪ್ರಯೋಜನಗಳು ಅಂಡರ್ ಸೀಟ್ ಸ್ಟೋರೇಂಜ್ ಅನ್ನು ಹೊಂದಿದೆ, ಇದು 21-ಲೀಟರ್ ಸ್ಥಳಾವಕಾಶ ಲಭ್ಯವಿದೆ,

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಇನ್ನು ಸ್ಕೂಟರ್ ಅಡ್ವೆಂಚರ್ ಶೈಲಿಯ ಹೆಲ್ಮೆಟ್ ಅನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಸ್ಟೋರೇಂಜ್ ಸ್ಥಳದ ಒಳಗೆ, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳಿಗೆ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಇದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಈ ಹೋಂಡಾ ಸ್ಕೂಟರ್ ಅಡ್ವೆಂಚರ್ ಸ್ಕೂಟರ್ ನಲ್ಲಿ 745ಸಿಸಿ c, ಲಿಕ್ವಿಡ್ ಕೂಲ್ಡ್, 8-ವಾಲ್ವ್, SOHC ಪ್ಯಾರಲಲ್ ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,750 ಆರ್‌ಪಿಎಂನಲ್ಲಿ 58 ಬಿಹೆಚ್‍ಪಿ ಪವರ್ ಮತ್ತು 4,750 ಆರ್‌ಪಿಎಂನಲ್ಲಿ 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಈ ಹೊಸ ಸ್ಕೂಟರ್ ರೈಡ್ ಮೋಡ್‌ಗಳು ಮತ್ತು ಥ್ರೊಟಲ್ ಬೈ ವೈರ್ ಕಂಟ್ರೋಲ್‌ಗಳೊಂದಿಗೆ ವಿವಿಧ ಭೂಪ್ರದೇಶಗಳು ಮತ್ತು ಪರಿಸರಗಳಿಗೆ ಹೊಂದಿಕೊಳ್ಳುತ್ತದೆ. ಸ್ಟ್ಯಾಂಡರ್ಡ್, ಸ್ಪೋರ್ಟ್, ರೈನ್ ಮತ್ತು ಗ್ರಾವೆಲ್ ಅನ್ನು ಮೊದಲೇ ಕಾನ್ಫಿಗರ್ ಮಾಡಲಾದ ರೈಡ್ ಮೋಡ್‌ಗಳು. ಐದನೇ ರೈಡ್ ಮೋಡ್ 'ಬಳಕೆದಾರ' ಸಂಪೂರ್ಣವಾಗಿ ಕಸ್ಟಮೈಸ್ ಗೊಳಿಸಬಹುದಾಗಿದೆ ಮತ್ತು ಇದು ಮುಂದುವರಿದ ಬಳಕೆದಾರರಿಗೆ ಮೀಸಲಾಗಿದೆ. ಎಡ ಹ್ಯಾಂಡಲ್‌ಬಾರ್ ಸ್ವಿಚ್‌ಗಳು ಮತ್ತು TFT ಡಿಸ್ ಪ್ಲೇಯಿಂದ ರೈಡ್ ಮೋಡ್‌ಗಳನ್ನು ಆಯ್ಕೆ ಮಾಡಬಹುದು.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಈ ಹೊಸ ಹೋಂಡಾ X-ADV ಸ್ಕೂಟರ್ ಟ್ಯೂಬ್ಯುಲರ್ ಸ್ಟೀಲ್ ಡೈಮಂಡ್-ಸ್ಟೈಲ್ ಫ್ರೇಮ್ ಅನ್ನು ಬಳಸುತ್ತದೆ, ಇನ್ನು ಈ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ , USD ಫ್ರಂಟ್ ಫೋರ್ಕ್ಸ್ ಮತ್ತು ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 296 ಎಂಎಂ ಮತ್ತು 240 ಎಂಎಂ ಡಿಸ್ಕ್‌ಗಳನ್ನು ಒಳಗೊಂಡಿದೆ. ಈ ಸ್ಕೂಟರ್ ನಲ್ಲಿ 17-ಇಂಚಿನ ಮುಂಭಾಗ ಮತ್ತು 15-ಇಂಚಿನ ಹಿಂಭಾಗದ ಸ್ಟೀಲ್ ಸ್ಪೋಕ್ ವ್ಹೀಲ್ ಗಳನ್ನು ಹೊಂದಿದ್ದು, ಬ್ಲಾಕ್-ಪ್ಯಾಟರ್ನ್ ಟೈರ್‌ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಇದರೊಂದಿಗೆ ಹೋಂಡಾ ಕಂಪನಿಗೆ ಸಂಬಂಧಿಸಿದ ಸುದ್ದಿ, ಹೋಂಡಾ ಹೊಸ ಎಂಟ್ರಿ ಲೆವೆಲ್ ಮಟ್ಟದ ನವೀಕರಿಸಿದ ಸ್ಕೂಟರ್‌ಗಳನ್ನು ತನ್ನ ತಾಯಿನಾಡು ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಂಟ್ರಿ ಲೆವೆಲ್ ಸ್ಕೂಟರ್‌ಗಳು ಜಿಯೋರ್ನೊ ಮತ್ತು ಡಂಕ್ ಆಗಿವೆ. ಹೊಸ ಹೋಂಡಾ ಸ್ಕೂಟರ್‌ಗಳು ದೈನಂದಿನ ಪ್ರಯಾಣಿಕ್ಕೆ ಗ್ರಾಹಕರಿಗೆ ಸರಳವಾದ ಸವಾರಿ ಅನುಭವವನ್ನು ನೀಡುತ್ತವೆ. ಹೊಸ ಹೋಂಡಾ 50ಸಿಸಿ ಸ್ಕೂಟರ್‌ಗಳು ಒಂದೇ ರೀತಿಯ ಆಂತರಿಕತೆಯನ್ನು ಪಡೆಯುತ್ತವೆ ಆದರೆ ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ,

ಭಾರತದಲ್ಲಿ ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗಾಗಿ ಟ್ರೇಡ್‌‌ಮಾರ್ಕ್ ದಾಖಲಿಸಿದ Honda

ಯುಕೆಯಲ್ಲಿ ಹೊಸ ಹೋಂಡಾ X-ADV ಸ್ಕೂಟರ್ £10,949 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇನ್ನು ಭಾರತದಲ್ಲಿ ಪ್ರೀಮಿಯಂ ಹೋಂಡಾ X-ADV ಸ್ಕೂಟರ್ ಬಿಡುಗಡೆ ಮಾಡಿದರೆ ಅಗ್ಗವಾಗುವುದಿಲ್ಲ. ಭಾರತದಲ್ಲಿ ಈ ಸ್ಕೂಟರ್ ದುಬಾರಿ ಬೆಲೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2022 honda x adv premium scooter trademarked in india details
Story first published: Tuesday, January 18, 2022, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X