ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಅತ್ಯುತ್ತಮ ಬೈಕ್‌ಗಳು

ಭಾರತದಲ್ಲಿ ಆಗಸ್ಟ್ ಬಂತೆಂದರೆ ಸಾಕು ಸಾಲು ಹಬ್ಬಗಳು ಆರಂಭವಾಗುತ್ತವೆ. ವಿಶೇಷ ರಿಯಾಯಿತಿ ಹಾಗೂ ಆಫರ್‌ಗಳಿಗಾಗಿ ಕಾದು ಕುಳಿತಿರುವ ಜನರು ಶೋರೂಂನತ್ತ ಮುಗಿ ಬೀಳುತ್ತಾರೆ. ನೀವು ಸಹ ಹಬ್ಬಗಳಲ್ಲಿ ಹೊಸ ಬೈಕ್ ಖರೀದಿಸಲು ಯೋಜಿಸುತ್ತಿದ್ದರೆ ಹಾಗೂ ನಿಮ್ಮ ಬಜೆಟ್ 1 ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕೆಲವು ವಿಶೇಷ ಬೈಕ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

1. TVS ರೈಡರ್ 125

ಟಿವಿಎಸ್ ರೈಡರ್ 125 ಈ ಪಟ್ಟಿಯಲ್ಲಿರುವ ಅತ್ಯಂತ ಸ್ಟೈಲಿಷ್ ಬೈಕ್ ಆಗಿದ್ದು, ರೂ. 85,173 - ರೂ. 92,689 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ ಹಲವು ಹೊಸ ವೈಶಿಷ್ಟ್ಯಗಳಿಂದ ಕೂಡಿದೆ. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಡಿಸ್ಕ್ ಬ್ರೇಕ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳಂತಹ ವೈಶಿಷ್ಟ್ಯಗಳು ಈ ಬೈಕ್‌ನಲ್ಲಿ ಲಭ್ಯವಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಟಿವಿಎಸ್ ರೈಡರ್ ಮೊನೊಶಾಕ್ ಸಸ್ಪೆನ್ಷನ್ ಪಡೆದ ಮೊದಲ 125 ಸಿಸಿ ಬೈಕ್ ಕೂಡ ಆಗಿದೆ. ಟಿವಿಎಸ್ ರೈಡರ್ 124.8 ಸಿಸಿ 4-ಸ್ಟ್ರೋಕ್, ಫ್ಯೂಯಲ್ ಇಂಜೆಕ್ಟೆಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 7500 rpm ನಲ್ಲಿ 8.37 bhp ಪವರ್ ಮತ್ತು 6000 rpm ನಲ್ಲಿ 11.2 Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು. 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬೈಕ್‌ನಲ್ಲಿ ಕಿಕ್ / ಸೆಲ್ಫ್ ಸ್ಟಾರ್ಟ್ ಆಯ್ಕೆಯನ್ನು ನೀಡಲಾಗಿದೆ. ಬೈಕು ಮುಂಭಾಗ ಮತ್ತು ಹಿಂಭಾಗದಲ್ಲಿ 17-ಇಂಚಿನ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

2. ಬಜಾಜ್ ಪಲ್ಸರ್ 125

ಬಜಾಜ್ ಪಲ್ಸರ್ 125 ಪಲ್ಸರ್ ಶ್ರೇಣಿಯ ಅತ್ಯಂತ ಅಗ್ಗದ ಬೈಕ್ ಆಗಿದೆ. ಇದು ವೇರಿಯಂಟ್‌ ಆಧಾರದ ಮೇಲೆ ರೂ. 81,389 - ರೂ. 90,003 (ಎಕ್ಸ್ ಶೋ ರೂಂ) ನಡುವೆ ಬೆಲೆಯನ್ನು ಹೊಂದಿದೆ. ಪಲ್ಸರ್ ಕುಟುಂಬದ ಇತರ ಬೈಕ್‌ಗಳ ಡಿಸೈನ್‌ನಂತೆಯೇ ಈ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಪಲ್ಸರ್ 125, 124.38 ಸಿಸಿ ಏರ್-ಕೂಲ್ಡ್ ಫ್ಯೂಲ್ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 11.08 ಬಿಎಚ್‌ಪಿ ಪವರ್ ಮತ್ತು 11 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಕಂಪನಿಯು ಇದನ್ನು ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳೊಂದಿಗೆ ಸ್ಪ್ಲಿಟ್ ಸೀಟ್ ಮತ್ತು ಸಿಂಗಲ್ ಪೀಸ್ ಸೀಟ್‌ನಲ್ಲಿ ನೀಡುತ್ತದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಬಜಾಜ್ ಪಲ್ಸರ್ 125 ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಉತ್ತಮ ಬ್ರೇಕ್ ಕಾರ್ಯಕ್ಷಮತೆಗಾಗಿ ಕಾಂಬಿ ಬ್ರೇಕ್ ಸಿಸ್ಟಮ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

3. ಹೀರೋ ಗ್ಲಾಮರ್ 125 Xtec

ಹೀರೋ ಗ್ಲಾಮರ್ ಭಾರತೀಯ ಗ್ರಾಹಕರಲ್ಲಿ ಜನಪ್ರಿಯ ಬೈಕ್ ಆಗಿದೆ. ಇದು ನಯವಾದ ಎಂಜಿನ್ ಮತ್ತು ಉತ್ತಮ ಮೈಲೇಜ್‌ಗೆ ಹೆಸರುವಾಸಿಯಾಗಿದೆ. ಗ್ಲಾಮರ್ 125 Xtec ಅನ್ನು LED ಹೆಡ್‌ಲೈಟ್, ಸಂಪೂರ್ಣ ಡಿಜಿಟಲ್ ಡಿಸ್ಪ್ಲೇ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಪರಿಚಯಿಸಲಾಗಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಕಂಪನಿಯು ಇದನ್ನು ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಗ್ಲಾಮರ್ 125 Xtec ಡ್ರಮ್ ರೂಪಾಂತರದ ಬೆಲೆ ರೂ. 84,220 ಇದ್ದರೇ ಡಿಸ್ಕ್ ರೂಪಾಂತರದ ಬೆಲೆ ರೂ. 88,820 ಇದ್ದು, ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಧಾರದ ಮೇಲೆ ಅನ್ವಯಿಸುತ್ತವೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಹೀರೋ ಗ್ಲಾಮರ್ 125 Xtec ನಲ್ಲಿ 125cc ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಬಳಸಲಾಗಿದೆ. ಈ ಎಂಜಿನ್ 10.7 bhp ಪವರ್ ಮತ್ತು 10.6 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸುಗಮ ಸಂಚಾರಕ್ಕಾಗಿ ಬೈಕ್‌ನಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಹೀರೋ ಗ್ಲಾಮರ್ ಎಕ್ಸ್‌ಟೆಕ್ ಟೆಕ್ನೋ ಬ್ಲ್ಯಾಕ್, ಗ್ರೇ ಬ್ಲೂ ಮತ್ತು ಗ್ರೇ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

4. ಹೋಂಡಾ SP 125

ಹೋಂಡಾ SP 125 ಕಂಪನಿಯ ಹೆಚ್ಚು ಮಾರಾಟವಾಗುವ 125cc ಬೈಕ್ ಆಗಿದೆ. ಇದರ ಮೈಲೇಜ್ ಮತ್ತು ಕಾರ್ಯಕ್ಷಮತೆ ಜೊತೆಗೆ ಇದರ ಅಗ್ಗದ ಬೆಲೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದೆ. ಈ ಬೈಕ್ ರೂ. 82,486 - ರೂ 86,486 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ ಬೈಕ್ ಎರಡು ರೂಪಾಂತರಗಳಲ್ಲಿ ಬರುತ್ತದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಎಲ್ಇಡಿ ಹೆಡ್ಲೈಟ್ ಮತ್ತು ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಡ್ರಮ್ ಮತ್ತು ಡಿಸ್ಕ್ ಆಯ್ಕೆಯನ್ನು ನೀಡಲಾಗಿದೆ. ರಿಫೈನ್ಡ್ ಎಂಜಿನ್, ಸೈಲೆಂಟ್ ಸ್ಟಾರ್ಟ್ ಟೆಕ್ನಾಲಜಿ, ಫ್ಯುಯೆಲ್ ಇಂಜೆಕ್ಷನ್, ಕಾಂಬಿ ಬ್ರೇಕ್ ಸಿಸ್ಟಮ್ (CBS) ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೋಂಡಾ SP 125 ನ ಹೊಸ ಮಾದರಿಗಳಲ್ಲಿ ನೀಡಲಾಗುತ್ತಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಬೈಕ್ 124 cc, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ BS-VI ಎಂಜಿನ್‌ನಿಂದ ಚಾಲಿತವಾಗಿದ್ದು, 10 bhp ಗರಿಷ್ಠ ಪವರ್ ಮತ್ತು 11 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇದರ ಎರಡೂ ರೂಪಾಂತರಗಳು 18-ಇಂಚಿನ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆಯುತ್ತವೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

5. ಹೀರೋ ಸೂಪರ್ ಸ್ಪ್ಲೆಂಡರ್

ಹೀರೋ ಸೂಪರ್ ಸ್ಪ್ಲೆಂಡರ್ ಹೀರೋ ಮೋಟೋಕಾರ್ಪ್‌ನ ಹೆಚ್ಚು ಮಾರಾಟವಾಗುವ ಬೈಕ್ ಮಾದರಿಗಳಲ್ಲಿ ಒಂದಾಗಿದೆ. ಈ ಬೈಕ್ ರೂ 77,500 - ರೂ 81,630 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ನಿಯಮಿತ ರೂಪಾಂತರದ ಜೊತೆಗೆ ವಿಶೇಷ ಬ್ಲಾಕ್ ಅಕ್ಸೆಂಟ್‌ಗಳಲ್ಲಿಯೂ ಸಹ ನೀಡುತ್ತದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಸೂಪರ್ ಸ್ಪ್ಲೆಂಡರ್ ಅನ್ನು ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಬೈಕ್ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜರ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು 130 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.

ಹಬ್ಬದ ಸೀಸನ್‌ನಲ್ಲಿ ಕೇವಲ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5 ಬೈಕ್‌ಗಳು

ಹೀರೋ ಸೂಪರ್ ಸ್ಪ್ಲೆಂಡರ್ BS-VI 124.7cc, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 7,500 rpm ನಲ್ಲಿ 10.7 bhp ಮತ್ತು 6,000 rpm ನಲ್ಲಿ 10.6 Nm ಪೀಕ್ ಟಾರ್ಕ್ ಅನ್ನು ಹೊರಹಾಕಬಲ್ಲದು. ಸುರಕ್ಷತೆಯನ್ನು ಹೆಚ್ಚಿಸಿ, ಕಂಪನಿಯು ಬೈಕ್‌ನ ಎಲ್ಲಾ ರೂಪಾಂತರಗಳಲ್ಲಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಅನ್ನು ನೀಡಿದೆ.

Most Read Articles

Kannada
English summary
5 Best Bikes Available For Festive Season Just Under Rs 1 Lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X