Just In
Don't Miss!
- Movies
Prakruti K Prasad:'ಬೆಟ್ಟದ ಹೂ'ನಲ್ಲಿ ಮಾಲಿನಿ ಧರಿಸಿದ್ದ ಸೀರೆಗಳು ಹರಾಜು.. ಬೇಕಿದ್ರೆ ಹೀಗೆ ಸಂಪರ್ಕಿಸಿ!
- News
ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದ 6 ದ್ವಿಚಕ್ರ ವಾಹನಗಳು...
ಭಾರತದಲ್ಲಿ ದಸರಾ ಮತ್ತು ದೀಪಾವಳಿ ಹಬ್ಬಗಳೆರಡೂ ಒಂದೇ ತಿಂಗಳಲ್ಲಿ ಬಂದಿರುವುದರಿಂದ ಆಟೋ ಮೊಬೈಲ್ ಕಂಪನಿಗಳಿಗೆ ಸಾಕಷ್ಟು ಕೂಡಿ ಬಂದಿದೆ. ಈ ಹಬ್ಬಗಳ ಪ್ರಯುಕ್ತ ಹಲವರು ಹೊಸ ವಾಹನಗಳನ್ನು ಖರೀದಿಸಲು ಆಸಕ್ತಿ ತೋರುವುದರಿಂದ ವಾಹನ ತಯಾರಕರು ಕೂಡ ಹೊಸ ವಾಹನಗಳನ್ನು ಬಿಡುಗಡೆ ಮಾಡಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಬೈಕ್‌ಗಳು ಯಾವುವು? ಅವುಗಳ ಬೆಲೆಗಳು ಎಷ್ಟು? ಸೇರಿದಂತೆ ಇತರ ವಿವರಗಳ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Ola S1 ಏರ್:
ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ 'ಎಸ್1 ಏರ್' ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಬೆಲೆ ರೂ. 84,999 ಇದ್ದು, ಖರೀದಿಸಲು ಬಯಸುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ. 999 ಪಾವತಿಸುವ ಮೂಲಕ ಬುಕ್ ಮಾಡಬಹುದು. ಏಪ್ರಿಲ್ 2023 ರಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ.

Ola 'S1 Air' ಸಂಪೂರ್ಣ ಚಾರ್ಜ್‌ನಲ್ಲಿ 'Eco Mode' ನಲ್ಲಿ ಗರಿಷ್ಠ 101 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 2.5 kW ಬ್ಯಾಟರಿ ಪ್ಯಾಕ್ ಮತ್ತು 4.5 kW ಹಬ್-ಮೌಂಟೆಡ್ ಮೋಟಾರ್ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್ ವರೆಗೆ ಇರುತ್ತದೆ. ಹೋಮ್ ಚಾರ್ಜರ್ ಮೂಲಕ ಶೇ 100 ಚಾರ್ಜ್ ಮಾಡಲು 4:30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಹೀರೋ ವಿಡಾ:
ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್, ಅಕ್ಟೋಬರ್ 2022 ರಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ 'ಹೀರೋ ವಿಡಾ' ಅನ್ನು ಬಿಡುಗಡೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 'V1 Pro' ಮತ್ತು 'V1 Plus' ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಅವುಗಳ ಬೆಲೆ ಕ್ರಮವಾಗಿ ರೂ. 1.59 ಲಕ್ಷ (ಎಕ್ಸ್ ಶೋ ರೂಂ) ಮತ್ತು ರೂ. 1.45 ಲಕ್ಷ (ಎಕ್ಸ್ ಶೋ ರೂಂ)ವಿದೆ. ಹೀರೋ ವಿಡಾ ಸ್ಕೂಟರ್‌ಗಳು ತೆಗೆಯಬಹುದಾದ ಬ್ಯಾಟರಿಯೊಂದಿಗೆ ಬರುತ್ತವೆ. Vida V1 Plus 143 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಹಾಗೆಯೇ Vida V1 Pro 165 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 80 ಕಿ.ಮೀ ಆಗಿದೆ.

ಕೀವೇ SR125:
ಹಂಗೇರಿಯ ಬೈಕ್ ತಯಾರಕ ಕಂಪನಿ 'ಕೀವೇ' ಭಾರತೀಯ ಮಾರುಕಟ್ಟೆಯಲ್ಲಿ 'ಕೀವೇ ಎಸ್‌ಆರ್125' ಅನ್ನು ಬಿಡುಗಡೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಹೊಸ ಬೈಕ್ ಬೆಲೆ ರೂ. 1,19,000 (ಎಕ್ಸ್ ಶೋ ರೂಂ - ಭಾರತ)ಇದೆ. ಈ ಬೈಕ್ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಕೀವೇ ಎಸ್‌ಆರ್125 ಬೈಕ್ ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್, 125 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 9.7 ಎಚ್‌ಪಿ ಮತ್ತು 8.2 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನ ಒಟ್ಟು ತೂಕ 120 ಕೆ.ಜಿ ವರೆಗೆ ಇರುತ್ತದೆ.

ಟಿವಿಎಸ್ ರೈಡರ್ ಸ್ಮಾರ್ಟ್ ಕನೆಕ್ಟ್:
ದೀಪಾವಳಿ ಹಬ್ಬದ ಸಂದರ್ಭದಲ್ಲಿ, TVS ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೈಡರ್ 125 ಬೈಕ್‌ನ ಉನ್ನತ ರೂಪಾಂತರವನ್ನು ಬಿಡುಗಡೆ ಮಾಡಿದೆ. ಈ ಬೈಕ್ ಬೆಲೆ ರೂ. 99,990 (ಎಕ್ಸ್ ಶೋ ರೂಂ, ದೆಹಲಿ). ಇದು SmartXconnect ಸಂಪರ್ಕ ತಂತ್ರಜ್ಞಾನವನ್ನು ಹೊಂದಿದೆ.

ಇದು ಬೈಕ್ ಅನ್ನು ಮೊಬೈಲ್‌ಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವಾಯಿಸ್ ಕಮಾಂಡ್, ಕಾಲ್ ಅಲರ್ಟ್, ಮೆಸೇಜ್ ನೋಟಿಫಿಕೇಷನ್ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಇದು 124.8 cc ಸಿಂಗಲ್ ಸಿಲಿಂಡರ್, SOHC ಎಂಜಿನ್ ಅನ್ನು ಪಡೆಯುತ್ತದೆ.

ಈ ಎಂಜಿನ್ 7,500 rpm ನಲ್ಲಿ 11.4 bhp ಪವರ್ ಮತ್ತು 6,000 rpm ನಲ್ಲಿ 11.2 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು 5 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. 5.9 ಸೆಕೆಂಡ್‌ಗಳಲ್ಲಿ ಗಂಟೆಗೆ 60 ಕಿ.ಮೀ ವೇಗವನ್ನು ತಲುಪಬಲ್ಲದು.

ಮೋಟೋ ಮೊರಿನಿ:
ಅಕ್ಟೋಬರ್ 2022 ರಲ್ಲಿ, 'ಮೋಟೋ ಮೊರಿನಿ' ಯಿಂದ ನಾಲ್ಕು ಬೈಕ್‌ಗಳನ್ನು ಬಿಡುಗಡೆ ಮಾಡಲಾಯಿತು. ಇವುಗಳ ಬೆಲೆಗಳು ರೂ. 6.89 ಲಕ್ಷದಿಂದ ರೂ. 7.40 ಲಕ್ಷದ ವರೆಗೆ ಇದೆ. ಆದರೆ ಇದು ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ತುಂಬಾ ಅಪ್ಡೇಟ್ ಆಗಿದ್ದು ಸವಾರರಿಗೆ ತುಂಬಾ ಸೂಕ್ತವಾಗಿದೆ. ಕಾರ್ಯಕ್ಷಮತೆಯನ್ನು ಒದಗಿಸುವಲ್ಲಿಯೂ ಅತ್ಯುತ್ತಮವಾಗಿವೆ.

ಡುಕಾಟಿ ಮಲ್ಟಿಸ್ಟ್ರಾಡಾ ಪೈಕ್ಸ್ ಪೀಕ್:
ಪ್ರಮುಖ ಬೈಕ್ ತಯಾರಿಕಾ ಸಂಸ್ಥೆ 'ಡುಕಾಟಿ' ಕಳೆದ ತಿಂಗಳು 'ಮಲ್ಟಿಸ್ಟ್ರಾಡಾ ವಿ4 ಪೈಕ್ಸ್ ಪೀಕ್' ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬೈಕಿನ ಬೆಲೆ ರೂ. 31.48 ಲಕ್ಷ (ಎಕ್ಸ್ ಶೋ ರೂಂ, ದೆಹಲಿ)ವಿದೆ. ಈ ಬೈಕ್ ಖರೀದಿಸಲು ಬಯಸುವ ಗ್ರಾಹಕರು ಕಂಪನಿಯ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು. ವಿತರಣೆಗಳು ನವೆಂಬರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಪೈಕ್ಸ್ ಪೀಕ್ ಬೈಕ್ 1,158 ಸಿಸಿ ಲಿಕ್ವಿಡ್ ಕೂಲ್ಡ್ 90 ಡಿಗ್ರಿ ವಿ4 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 10,500 rpm ನಲ್ಲಿ 170 hp ಪವರ್ ಮತ್ತು 8,750 rpm ನಲ್ಲಿ 125 Nm ಟಾರ್ಕ್ ಅನ್ನು ನೀಡುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.