ಇವಿ ಸ್ಕೂಟರ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ತಲುಪಿದ ಆಂಪಿಯರ್
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಆರಂಭಿಸಿ ಸುಮಾರು 13 ವರ್ಷಗಳ ಅನುಭವ ಹೊಂದಿರುವ ಆಂಪಿಯೆರ್ ಎಲೆಕ್ಟ್ರಿಕ್ ಕಂಪನಿಯು ಸುಧೀರ್ಘ ಅವಧಿಯ ಪ್ರಯಾಣದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ತನ್ನ ವಾಹನ ಮಾರಾಟದಲ್ಲಿ ಹಲವು ಹೊಸ ದಾಖಲೆಗೆ ಕಾರಣವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 190 ನಗರಗಳಲ್ಲಿ ತನ್ನ ಮಾರಾಟ ಜಾಲ ಹೊಂದಿರುವ ಆಂಪಿಯೆರ್ ಕಂಪನಿಯು ಬರೋಬ್ಬರಿ 300 ಮಾರಾಟ ಮಳಿಗೆಗಳ ಮೂಲಕ ಗ್ರಾಹಕರ ತಲುಪಲು ಯಶಸ್ವಿಯಾಗಿರುವ ಕಂಪನಿಯು ಇದುವರೆಗೆ 50 ಸಾವಿರ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಹೊಸ ಗುರಿಸಾಧನೆಗೆ ಪಾತ್ರವಾಗಿದೆ. ಕಳೆದ 13 ವರ್ಷಗಳಲ್ಲಿ ಮೊದಲ ಬಾರಿಗೆ ಕಳೆದ ಎರಡು ವರ್ಷಗಳಿಂದ ಪೆಟ್ರೋಲ್ ವಾಹನಗಳ ಅಬ್ಬರದ ನಡುವೆಯು ಪರಿಸರ ಸ್ನೇಹಿ ವಾಹನಗಳ ಮಾರಾಟದಲ್ಲಿ ಬದ್ದತೆ ಪ್ರದರ್ಶಿಸುವ ಮೂಲಕ ಹೊಸ ಸಾಧನೆಯತ್ತ ಮುನ್ನುಗ್ಗುತ್ತಿದೆ.

ಆಂಪಿಯರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ವೆರಿಯೆಂಟ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್‌ಗಳಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಸೌಲಭ್ಯ, ಹೆಚ್ಚಿನ ಮಟ್ಟದ ಲೋಡಿಂಗ್ ಸಾಮಾರ್ಥ್ಯವನ್ನು ನೀಡಲಾಗಿದ್ದು, ಹೊಸ ವೆರಿಯೆಂಟ್‌ಗಳನ್ನು ರಿಯೋ, ವಿ48, ಮ್ಯಾಗ್ನಸ್ 60, ಜೀಲ್, ಮ್ಯಾಗ್ನಸ್ ಇಎಕ್ಸ್ ಮಾದರಿಗಳಲ್ಲಿ ಪರಿಚಯಿಸಲಾಗಿದೆ.

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಎಲೆಕ್ಟ್ರಿಕ್ ವಾಹನಗಳ ಮಾದರಿಗಳಿಗೆ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಹರಿದುಬರುತ್ತಿದೆ.

ಆಂಪಿಯರ್ ಕಂಪನಿಯು ಸಹ ಇವಿ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇತ್ತೀಚೆಗೆ ಗ್ರಾಹಕರ ಬೇಡಿಕೆಯೆಂತೆ ಮತ್ತೊಂದು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯನ್ನು ಆಧರಿಸಿ ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಮೈಲೇಜ್ ರೇಂಜ್ ಹೊಂದಿರುವ ಮ್ಯಾಗ್ನಸ್ ಇಎಕ್ಸ್(Magnus EX) ಮಾದರಿಯನ್ನು ಬಿಡುಗಡೆ ಮಾಡಿದೆ.

ಹೊಸ ಮ್ಯಾಗ್ನಸ್ ಇಎಕ್ಸ್ ಮಾದರಿಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 68,999 ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಆಂಪಿಯರ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಇವಿ ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿದೆ.

ಆಂಪಿಯರ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ದೀರ್ಘ ಶ್ರೇಣಿಯ ಜೊತೆಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 121 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.

ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ 1200-ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದು ಇವಿ ಸ್ಕೂಟರ್ ಆರಂಭಿಕ ಮಾದರಿಗಳ ವಿಭಾಗದಲ್ಲಿರುವ ಅತ್ಯಧಿಕ ರೇಟಿಂಗ್ ಹೊಂದಿರುವ ಆವೃತ್ತಿಯಾಗಿದೆ.

ಮ್ಯಾಗ್ನಸ್ ಇಎಕ್ಸ್ ಇ-ಸ್ಕೂಟರ್‌ನಲ್ಲಿ ಡಿಟ್ಯಾಚೇಬಲ್, ಹಗುರವಾದ ಮತ್ತು ಪೋರ್ಟಬಲ್ ಸುಧಾರಿತ ಲೀಥಿಯಂ ಬ್ಯಾಟರಿ ಜೋಡಿಸಿರುವುದರಿಂದ ಸ್ಕೂಟರ್ ಮಾಲೀಕರು ಪ್ಲಗ್-ಆನ್-ದಿ-ವಾಲ್ ಚಾರ್ಜ್ ಪಾಯಿಂಟ್‌ನಲ್ಲಿ ಯಾವುದೇ 5-amp ಸಾಕೆಟ್ ಮೂಲಕ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಹೊಸ ಇವಿ ಸ್ಕೂಟರ್‌ನಲ್ಲಿ ಡಿಟ್ಯಾಚೇಬಲ್ ಬ್ಯಾಟರಿ ಸೆಟಪ್ ಸೇರಿಸಿರುವುದರಿಂದ ಮನೆ, ಕಚೇರಿ, ಕಾಫಿ ಶಾಪ್ ಅಥವಾ ಯಾವುದೇ ಕಡೆಗಳಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಈ ಸ್ಕೂಟರ್‌ನಲ್ಲಿ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ಸ್ಕೂಟರ್ ಮಾಲೀಕರು ತಮ್ಮ ಆದ್ಯತೆಗೆ ಅನುಗುಣವಾಗಿ ಇಕೋ ಮೋಡ್ ಮತ್ತು ಪವರ್ ಮೋಡ್‌ನಲ್ಲಿ ರೈಡ್ ಮಾಡಬಹುದಾಗಿದ್ದು, ಇಕೋ ಮೋಡ್‌ನಲ್ಲಿ ಸ್ಕೂಟರ್ ಮೈಲೇಜ್ ಗರಿಷ್ಠ ಪ್ರಮಾಣದಲ್ಲಿ ಹಿಂದಿರುಗಲಿದೆ.

ಪವರ್ ಮೋಡ್ ಮೂಲಕ ಉತ್ತಮ ವೇಗ ಪಡೆದುಕೊಳ್ಳಬಹುದಾಗಿದ್ದು, ಸೊನ್ನೆಯಿಂದ 40 ಕಿ.ಮೀ ಸ್ಪೀಡ್‌ನಲ್ಲಿ ಚಲಿಸಲು 10 ಸೇಕೆಂಡು ತೆಗೆದುಕೊಳ್ಳುತ್ತದೆ. ಹಾಗೆಯೇ ಸ್ಕೂಟರ್ ಚಾಲನೆ ಅನುಕೂಲಕರವಾಗಿ ಹೊಸ ವಿನ್ಯಾಸದ ವಿಶಾಲವಾದ ಆಸನಗಳನ್ನು ನೀಡಲಾಗಿದ್ದು, 450 ಎಂಎಂ ಲೆಗ್‌ರೂಮ್ ಸ್ಪೇಸ್ ಸಿಗುತ್ತದೆ.

ವಿಸ್ತರಿತ ಲೆಗ್‌ರೂಮ್ ಸ್ಪೇಸ್ ನೀಡಿರುವುದರಿಂದ ಎತ್ತರವಿರುವವರು ಕೂಡಾ ಈ ಸ್ಕೂಟರ್ ಅನ್ನು ಸುಲಭವಾಗಿ ರೈಡ್ ಮಾಡಬಹುದಾಗಿದ್ದು, ಎಲ್ಇಡಿ ಹೆಡ್‌ಲೈಟ್, ಕೀ ಲೆಸ್ ಎಂಟ್ರಿ, ವೆಹಿಕಲ್ ಫೈಂಡರ್, ಆಂಟಿಥೆಫ್ಟ್ ಅಲಾರಂ ಸೌಲಭ್ಯಗಳು ಸ್ಕೂಟರ್ ಚಾಲನೆಯನ್ನು ಮತ್ತಷ್ಟು ಸರಳಗೊಳಿಸುತ್ತವೆ.

ಹಾಗೆಯೇ ಹೊಸ ಸ್ಕೂಟರ್ ಮಾದರಿಯು ಮೆಟಾಲಿಕ್ ರೆಡ್, ಗ್ರ್ಯಾಫೈಟ್ ಬ್ಲ್ಯಾಕ್ ಮತ್ತು ಗ್ಯಾಲಕ್ಟಿಕ್ ಗ್ರೇ ಎಂಬ ಮೂರು ಬಣ್ಣದ ಆಯ್ಕೆಯನ್ನು ಹೊಂದಿದ್ದು, ಹೊಸ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ.


Click it and Unblock the Notifications








