ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಭಾರತದಲ್ಲಿ ಇಂಧನ ಚಾಲಿತ ವಾಹನಗಳಿಗೆ ಎಲೆಕ್ಟ್ರಿಕ್ ವಾಹನಗಳ ಪೈಪೋಟಿಯು ನಿಧಾನವಾಗಿ ಹೆಚ್ಚಾಗುತ್ತಿದೆ. ಇತ್ತೀಚಿನ ತಿಂಗಳುಗಳ ಎಲೆಕ್ಟ್ರಿಕ್ ವಾಹನಗಳ ಮಾರಾಟವೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅಲ್ಲದೇ ಪೆಟ್ರೋಲ್, ಡೀಸಲ್ ಬೆಲೆಗಳು ಏರಿಕೆಯಾಗುತ್ತಿರುವ ಕಾರಣ ಇವಿಗಳ ಪ್ರಾಬಲ್ಯ ಹೆಚ್ಚಾಗತೊಡಗಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ನಿರ್ವಹಣಾ ವೆಚ್ಚ ಹಾಗೂ ಪೆಟ್ರೋಲ್ ಅವಶ್ಯಕತೆ ಇಲ್ಲದಿರುವ ಕಾರಣ ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳು ಸಾರ್ವಜನಿಕರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಆದರೆ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೂ ಉತ್ತಮ ಬೇಡಿಕೆಯಿದೆ ಎಂದು ಹೇಳುವುದು ಕಷ್ಟ. ಕೆಲ ಆಯ್ದ ಕಂಪನಿಗಳ ಸ್ಕೂಟರ್‌ಗಳು ಮಾತ್ರ ಜನಪ್ರಿಯವಾಗಿವೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಅವುಗಳಲ್ಲಿ ಟಿವಿಎಸ್, ಬಜಾಜ್, ಎಥರ್ ಎನರ್ಜಿ ಮತ್ತು ಓಲಾ ಎಲೆಕ್ಟ್ರಿಕ್‌ನಂತಹ ಪ್ರಮುಖ ಕಂಪನಿಗಳ ಜೊತೆಗೆ, ಕೆಲವು ಸಣ್ಣ ಕಂಪನಿಗಳು ಸ್ಪರ್ಧಿಸುತ್ತಿವೆ. ಈ ಬ್ರಾಂಡ್‌ಗಳು ಸದ್ಯ ಭಾರತದಲ್ಲಿ ಮುನ್ನಲೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳಾಗಿವೆ. ಉತ್ತಮ ಮೈಲೇಜ್, ಕಡಿಮೆ ಚಾರ್ಜಿಂಗ್ ಸಮಯ ಹೊಂದಿರುವುದು ಇವುಗಳ ವೈಶಿಷ್ಟ್ಯವಾಗಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಈ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ಎಥರ್ ಎನರ್ಜಿ ಹೊಸ ದಾಖಲೆ ನಿರ್ಮಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 250 ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿತರಿಸಿ ದಾಖಲೆ ನಿರ್ಮಿಸಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಅಕ್ಟೋಬರ್ 23ರ ದೀಪಾವಳಿ ಸಂದರ್ಭದಲ್ಲಿ ಈ ದಾಖಲೆ ಮಾಡಲಾಗಿದೆ. ಈ ಹಿಂದೆ ಎಥರ್ ಎನರ್ಜಿ 450X Gen3 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿತು. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯನ್ನು ವಿವಿಧ ನವೀಕರಣಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಸದ್ಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಕಂಪನಿಯು ಹೆಚ್ಚು ಮೈಲೇಜ್ ಪ್ರೇರಿತ 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳನ್ನು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಹೊಸ ಮಾದರಿಗಳು ಹೊಸ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿವೆ. ಇನ್ನು ಡಿಸೈನ್ ಎಂದಿನಂತೆ ಸ್ಟೈಲಿಷ್ ಆಗಿ ಹಳೆಯ ಮಾದರಿಯನ್ನೇ ಮುಂದುವರೆಸಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಹೊಸ ಫೀಚರ್ಸ್‌ಗಳ ಹೊರತಾಗಿಯೂ ಸುಧಾರಿತ ತಂತ್ರಜ್ಞಾನ ಪ್ರೇರಿತ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಈ ಹಿಂದಿನ ಮಾದರಿಯಲ್ಲಿನ ಹಲವು ಫೀಚರ್ಸ್‌ಗಳನ್ನು ಮುಂದುವರಿಸಿದ್ದು, ದೊಡ್ಡ ಬ್ಯಾಟರಿ ಪ್ಯಾಕ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ನವೀಕೃತ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್‌‌ಗಳಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 3.7kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, 6.2kW ಮೋಟಾರ್ ಮೂಲಕ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಇದೀಗ ಹೊಸ ಸ್ಕೂಟರ್‌ಗಳು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 146 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಸುಧಾರಿತ ಬ್ಯಾಟರಿ ಜೋಡಣೆ ನಂತರ ಹೊಸ ಸ್ಕೂಟರ್‌ಗಳ ತೂಕದಲ್ಲಿ ಈ ಮೊದಲಿಗಿಂತಲೂ ಇದೀಗ 4 ಕೆ.ಜಿಯಷ್ಟು ಹೆಚ್ಚಳವಾಗಿದ್ದು, ಪ್ರಮುಖ ನಾಲ್ಕು ರೈಡ್ ಮೋಡ್‌ಗಳೊಂದಿಗೆ ಇಕೋ ಮೋಡ್‌ನಲ್ಲಿ ಕನಿಷ್ಠ 105 ಕಿ.ಮೀ ರಿಯಲ್ ವರ್ಲ್ಡ್ ಮೈಲೇಜ್ ಪಡೆದುಕೊಳ್ಳಬಹುದಾಗಿ ಕಂಪನಿಯು ಭರವಸೆ ನೀಡಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಹೊಸ ಇವಿ ಸ್ಕೂಟರ್ ಮಾದರಿಗಳಲ್ಲಿನ ಕನೆಕ್ಟೆಡ್ ಸೌಲಭ್ಯಗಳನ್ನು ಮತ್ತಷ್ಟು ಸುಧಾರಣೆಗೊಳಿಸಲು ಎಥರ್ ಕಂಪನಿಯು ಹೆಚ್ಚುವರಿ ಸ್ಟೋರೆಜ್ ನೀಡಲು 2 ಜಿಬಿ ರ‍್ಯಾಮ್ ಜೋಡಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಹೊಸ ಮಾದರಿಗಳಲ್ಲಿನ ಹಲವಾರು ಹೊಸ ಫೀಚರ್ಸ್‌ಗಳನ್ನು ಓವರ್-ದ-ಏರ್ ಅಪ್‌ಡೇಟ್ ಮೂಲಕ ಒಂದೊಂದಾಗಿ ಅನ್‌ಲಾಕ್ ಮಾಡಲಿದೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 3.3 ಸೆಕೆಂಡುಗಳಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗವನ್ನು ತಲುಪಬಲ್ಲದು. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು ಗಂಟೆಗೆ 90 ಕಿಲೋಮೀಟರ್ ಎಂದು ಹೇಳಲಾಗಿದೆ. ಅಲ್ಲದೇ ಬಿಡುಗಡೆಯಾದಾಗಿನಿಂದಲೂ ಈ ವರೆಗೂ ಕಂಪನಿಯ ಸ್ಕೂಟರ್‌ಗಳ ಯಾವುದೇ ಸಮಸ್ಯೆ ವರದಿಯಾಗಿಲ್ಲ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಉತ್ತಮ ಗ್ರಾಹಕರ ಬೆಂಬಲದಿಂದಾಗಿ, ಮುಂದಿನ ದಿನಗಳಲ್ಲಿ ಎಥರ್ ಎನರ್ಜಿ ಇನ್ನೂ ಅನೇಕ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ. ಓಲಾ ಎಲೆಕ್ಟ್ರಿಕ್ ಎಥರ್ ಎನರ್ಜಿಯ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಂದಾಗಿದೆ. ಸದ್ಯ ಎರಡೂ ಕಂಪನಿಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಸೆಣಸಾಡುತ್ತಿವೆ.

ಬೆಂಗಳೂರು ಗ್ರಾಹಕರಿಗೆ ದೀಪಾವಳಿ ಸಂಭ್ರಮ ಹೆಚ್ಚಿಸಿದ ಎಥರ್...ಒಂದೇ ದಿನ 250 ಸ್ಕೂಟರ್‌ಗಳ ವಿತರಣೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಥರ್ ಎನರ್ಜಿ ಇದೀಗ ಡೆಲಿವರಿ ಮಾಡಲಾದ ಹೊಸ ಸ್ಕೂಟರ್ ಅಪ್‌ಡೇಟೆಡ್ ವರ್ಷನ್ ಆಗಿದ್ದು, ವಿವಿಧ ವೈಶಿಷ್ಟ್ಯಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಂದೇ ದಿನದಲ್ಲಿ 250 ಗ್ರಾಹಕರಿಗೆ ತಲುಪಿಸಿದೆ. ಜನರಲ್ಲೂ ಕಂಪನಿಯ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಎಥರ್ ಎನರ್ಜಿ ಪ್ರಸ್ತುತ ಭಾರತೀಯ ಗ್ರಾಹಕರಲ್ಲಿ ಅತ್ಯಂತ ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾಗಿ ಹೊರಹೊಮ್ಮಿದೆ.

More from DriveSpark

Article Published On: Tuesday, October 25, 2022, 13:11 [IST]
English summary
Ather increased diwali celebrations for bangalore customers delivery of 250 scooters in one day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+