ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಬಜಾಜ್ ಆಟೋದ ಬಹುನಿರೀಕ್ಷಿತ 125 ಸಿಸಿ ಬೈಕ್ ಆದ ಬಜಾಜ್ CT125X ಭಾರತದಲ್ಲಿ ಬಿಡುಗಡೆಯಾಗಿದ್ದು, ಕಂಪನಿಯು ಈ ಬೈಕನ್ನು ದೇಶೀಯ ಮಾರುಕಟ್ಟೆಯಲ್ಲಿ ರೂ. 71,354, ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಾಗಿಸಿದೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಈ ಬೆಲೆಯಲ್ಲಿ, ಇದು ದೇಶದಲ್ಲಿ ಮಾರಾಟವಾಗುವ ಅತ್ಯಂತ ಕೈಗೆಟುಕುವ ಬೆಲೆಯ 125 ಸಿಸಿ ಬೈಕ್ ಆಗಿದೆ. ಹೊಸ ಬಜಾಜ್ CT125X ಹಸಿರು ಮತ್ತು ಕಪ್ಪು, ಕೆಂಪು ಮತ್ತು ಕಪ್ಪು, ನೀಲಿ ಮತ್ತು ಕಪ್ಪು ಆಯ್ಕೆಗಳನ್ನೊಳಗೊಂಡ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಬಜಾಜ್ CT125X ನ ವಿನ್ಯಾಸವು CT110X ಅನ್ನು ಹೋಲುತ್ತದೆ. ಇದು ಹ್ಯಾಲೊಜೆನ್ ಬಲ್ಬ್‌ನೊಂದಿಗೆ ರೌಂಡ್ ಹೆಡ್‌ಲೈಟ್ ಘಟಕವನ್ನು ಪಡೆದುಕೊಂಡಿದೆ. ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಹೆಡ್ ಲೈಟ್ ಮೇಲೆ ನೀಡಲಾಗಿದೆ. ಈ ಬೈಕ್ ಸ್ಟ್ಯಾಂಡರ್ಡ್ CT110 ನಂತೆಯೇ ಅದೇ ನೇಕೆಡ್ ವಿನ್ಯಾಸವನ್ನು ಹೊಂದಿದ್ದು ಕನಿಷ್ಠ ಬಾಡಿವರ್ಕ್ ಅನ್ನು ಪಡೆದುಕೊಂಡಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಬೈಕ್‌ಗೆ ಹೆಡ್‌ಲೈಟ್ ಗಾರ್ಡ್, ಎಂಜಿನ್ ಕ್ರ್ಯಾಶ್ ಗಾರ್ಡ್ ಮತ್ತು ಹಿಂಭಾಗದ ಲಗೇಜ್ ರ್ಯಾಕ್ ಇದೆ. ರಬ್ಬರ್‌ನಿಂದ ಮುಚ್ಚಲ್ಪಟ್ಟಿರುವ ಈ ಬೈಕ್‌ನಲ್ಲಿ ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಅನ್ನು ಸ್ಟೈಲಿಷ್ ಆಗಿ ನೀಡಲಾಗಿದೆ. ಬೈಕ್ ಹಿಂಭಾಗದಲ್ಲಿ ಡ್ಯುಯಲ್ ಗ್ಯಾಸ್ ಚಾರ್ಜ್ಡ್ ಸ್ಪ್ರಿಂಗ್ ಲೋಡೆಡ್ ರಿಯರ್ ಸಸ್ಪೆನ್ಷನ್ ಕೂಡ ಹೊಂದಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಇದರ ಬ್ರೇಕಿಂಗ್ ಅನ್ನು ಸುಧಾರಿಸಲು, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡುವುದರ ಜೊತೆಗೆ ಗ್ರಾಹಕರಿಗೆ ಡ್ರಮ್ ಬ್ರೇಕ್ ಅನ್ನು ಆಯ್ಕೆಯಾಗಿ ನೀಡಲಾಗಿದೆ. ಈ ಬೈಕ್‌ ಮುಂಭಾಗದ ಟೈರ್ 80/100 ಮತ್ತು ಹಿಂಭಾಗ 100/90 ಟೈರ್‌ನೊಂದಿಗೆ 17-ಇಂಚಿನ ಸ್ಟೈಲಿಷ್ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಬೈಕಿನ ಹಿಂಬದಿಯ ಟೈರ್ ದಪ್ಪವಾಗಿದ್ದು ರಸ್ತೆಯ ಮೇಲೆ ಹೆಚ್ಚು ಹಿಡಿತವನ್ನು ನೀಡಿ ಬೈಕ್‌ನ ನಿಯಂತ್ರಣವನ್ನು ಹೆಚ್ಚಿಸುತ್ತದೆ. ಎಲ್ಲಾ ಬಜಾಜ್ ಬೈಕ್‌ಗಳಿಗೆ ಇರುವಂತೆ ಇದಕ್ಕೂ DTS-i ಗುರುತನ್ನು ಆಕರ್ಷಣೀಯವಾಗಿ ಬ್ರಾಂಡ್‌ ಅನ್ನು ಗುತಿಸುವಂತೆ ನೀಡಲಾಗಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಎಂಜಿನ್‌ ಬಗ್ಗೆ ಮಾತನಾಡುವುದಾದರೆ, ಬಜಾಜ್ CT125X 125 cc DTS-i, ಏರ್-ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 10 bhp ಪವರ್ ಮತ್ತು 11 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಬಜಾಜ್ CT125X ಈ ವಿಭಾಗದಲ್ಲಿ ಹೀರೋ ಸೂಪರ್ ಸ್ಪ್ಲೆಂಡರ್ ಮತ್ತು ಹೋಂಡಾ ಶೈನ್, ಟಿವಿಎಸ್ ರೈಡರ್, ಬಜಾಜ್ ಪಲ್ಸರ್ 125 ಮತ್ತು ಪಲ್ಸರ್ ಎನ್ಎಸ್ 125 ರೊಂದಿಗೆ ಸ್ಪರ್ಧಿಸಲಿದೆ. ಬಜಾಜ್ ಸಹ 350cc ಮಧ್ಯಮ ತೂಕದ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶಿಸಲು ತಯಾರಿ ನಡೆಸುತ್ತಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಮಾಹಿತಿಯ ಪ್ರಕಾರ, ಬಜಾಜ್ ಈ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ ನೀಡಲು ಟ್ರಯಂಫ್ ಪಾಲುದಾರಿಕೆಯಲ್ಲಿ ಹೊಸ ಮೋಟಾರ್‌ಸೈಕಲ್ ಅನ್ನು ತರಲು ತಯಾರಿ ನಡೆಸುತ್ತಿದೆ. ಮೋಟಾರ್‌ಸೈಕಲ್ ಪ್ರಸ್ತುತ ಅದರ ಅಭಿವೃದ್ಧಿ ಹಂತದಲ್ಲಿದೆ, ಇದನ್ನು ಇತ್ತೀಚೆಗೆ ಯುಕೆಯಲ್ಲಿ ಬೇಹುಗಾರಿಕೆ ಪರೀಕ್ಷೆ ನಡೆಸಲಾಗಿದೆ. ಮಾದರಿ ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ವರದಿಗಳ ಪ್ರಕಾರ, ಈ ಮೋಟಾರ್‌ಸೈಕಲ್ ಅನ್ನು ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಈ ವರ್ಷದ ಹಬ್ಬದ ಸಮಯದಲ್ಲಿ ಕಂಪನಿಯು ಹೊಸ ಬೈಕ್ ಅನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ ಬಜಾಜ್ ಟ್ರಯಂಫ್‌ನೊಂದಿಗೆ ಎರಡು ಮಾದರಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಂದಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಈ ಚಿತ್ರಗಳ ಆಧಾರಾದ ಮೇಲೆ ಟ್ರಯಂಫ್ ಮೋಟಾರ್‌ಸೈಕಲ್‌ಗಳಲ್ಲಿ ಕಂಡುಬರುವ ವಿಶೇಷ ವಿನ್ಯಾಸದ ಮಾದರಿಯಲ್ಲಿ ಈ ಮೋಟಾರ್‌ಸೈಕಲ್ ಅನ್ನು ಕಾಣಬಹುದು.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಲಭ್ಯವಾದ ಮಾಹಿತಿಯ ಪ್ರಕಾರ, ಮುಂಬರುವ ಬಜಾಜ್ ಮತ್ತು ಟ್ರಯಂಫ್ ಮೋಟಾರ್‌ಸೈಕಲ್‌ಗಳನ್ನು ಭಾರತದಲ್ಲಿನ ಬಜಾಜ್‌ನ ದ್ವಿಚಕ್ರ ವಾಹನ ಘಟಕದಲ್ಲಿ ತಯಾರಿಸಲಾಗುವುದು ಮತ್ತು ಇಲ್ಲಿಂದ ಇತರ ದೇಶಗಳಿಗೆ ರಫ್ತು ಮಾಡಲಾಗುವುದು. ಬಜಾಜ್-ಟ್ರಯಂಫ್ ಮೋಟಾರ್‌ಸೈಕಲ್ ಸುಮಾರು 2 ಲಕ್ಷ ರೂ. ಎಕ್ಸ್‌ ಶೋರೂಂ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಅತ್ಯಂತ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಬಜಾಜ್ CT125X: ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಆಟೋ ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಹಕರ ವಿಶ್ವಾಸಾರ್ಹ ಕಂಪನಿಯಾಗಿ ಗುರ್ತಿಸಿಕೊಂಡಿದೆ. ಕಂಪನಿ ನೀಡುತ್ತಿರುವ ಹಲವು ಮಾದರಿಗಳು ಎಲ್ಲಾ ವಿಭಾಗಗಳಲ್ಲೂ ಇತರ ಕಂಪನಿಗಳಿಗೆ ಪೈಪೋಟಿ ನೀಡುತ್ತಿವೆ. ಇದೀಗ ಬಿಡುಗಡೆಯಾಗಿರುವ ಬಜಾಜ್ CT125X ಕೂಡ ಅಗ್ಗದ ಬೆಲೆಗೆ ಲಭ್ಯವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆ ಇದೆ.

Most Read Articles

Kannada
English summary
Bajaj CT125X Launched at Very Affordable Price Price Features Info
Story first published: Thursday, August 25, 2022, 18:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X