ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್, ಹೆಚ್ಚು ಮೈಲೇಜ್ ನೀಡುವ ಬೌನ್ಸ್ ಇವಿ ಸ್ಕೂಟರ್ ರಿವ್ಯೂ ವಿಡಿಯೋ
ಬೌನ್ಸ್ ಕಂಪನಿಯು ತನ್ನ ಹೊಸ ಇನ್ಫಿನಿಟಿ ಇ1 ಎಂಬ ಹೊಸ ಇವಿ ಸ್ಕೂಟರ್‌ನೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗವನ್ನು ಅಧಿಕೃತವಾಗಿ ಪ್ರವೇಶಿಸಿದ್ದು, ಬೌನ್ಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಬೌನ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಅನ್ನು ಬ್ಯಾಟರಿ ರಹಿತ ಮತ್ತು ಬ್ಯಾಟರಿ ಸಹಿತ ಮಾರಾಟ ಆರಂಭಿಸಿದ್ದು, ಕಂಪನಿಯು ಬ್ಯಾಟರಿ ವಿನಿಯಮ ಮತ್ತು ಸೇವೆಗಳನ್ನು ಪರಿಚಯಿಸಿಸುವುದರಿಂದ ಹೊಸ ಸ್ಕೂಟರಿನ ಶೇ.40 ನಷ್ಟು ಬೆಲೆ ಕಡಿಮೆ ಮಾಡಲು ಸಹಕಾರಿಯಾಗಿದೆ.
ಹೊಸ ಆಯ್ಕೆಯಿಂದ ಗ್ರಾಹಕರು ಸ್ವಂತಕ್ಕೆ ಬ್ಯಾಟರಿ ಖರೀದಿಸಬಹುದು ಇಲ್ಲವೇ ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ಚಂದಾದಾರಿಕೆ ಆಧಾರದ ಮೇಲೆ ಬ್ಯಾಟರಿ ವಿನಿಯಮ ಮಾಡಿಕೊಳ್ಳಬಹುದಾಗಿದ್ದು, ಸಬ್ಸಡಿ ದರಗಳನ್ನು ಆಧರಿಸಿ ಹೊಸ ಸ್ಕೂಟರ್ ಬೆಲೆ ನಿರ್ಧಾರವಾಗುತ್ತದೆ.
ಬೌನ್ಸ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ 2kWh ಲೀಥಿಯಂ ಅಯಾನ್ ಬ್ಯಾಟರಿ ಅಳಡಿಸಿದ್ದು, ಅತ್ಯುತ್ತಮ ರೈಡಿಂಗ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಹೊಸ ಇವಿ ಸ್ಕೂಟರ್‌ನಲ್ಲಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಮೂಲಕ ಕೇವಲ 8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರತಿ ಗಂಟೆಗೆ ಗರಿಷ್ಠ 65 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡ್ರ್ಯಾಗ್ ಮತ್ತು ರಿವರ್ಸ್ ರೈಡ್ ಮೋಡ್ ನೀಡಲಾಗಿದೆ.
ಜೊತೆಗೆ ಬೌನ್ಸ್ ಕಂಪನಿಯು ಹೊಸ ಸ್ಕೂಟರ್ ಮೇಲೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 45 ಸಾವಿರ ಕಿ.ಮೀ ತನಕ ವಾರಂಟಿ ಘೋಷಣೆ ಮಾಡಿದ್ದು, ಶೋರೂಂಗಳ ಬದಲಾಗಿ ಕಂಪನಿಯು ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸ್ಕೂಟರ್ ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ.
ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ರೆಟ್ರೊ-ಶೈಲಿಯ ಫ್ರಂಟ್ ಫೆಂಡರ್, ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸಿಂಗಲ್ ಪೀಸ್ ಸೀಟ್, 12 ಇಂಚಿನ ಸ್ಪೋರ್ಟಿ ಅಲಾಯ್ ವ್ಹೀಲ್ಸ್, ಪ್ರಮುಖ ಗ್ರ್ಯಾಬ್ ರೈಲ್ ಮತ್ತು ಹರಿತವಾದ ಟೈಲ್ ಲ್ಯಾಂಪ್‌ನಂತಹ ವೈಶಿಷ್ಟ್ಯತೆಗಳೊಂದಿಗೆ ಏರೋಡೈನಾಮಿಕ್ ಪ್ರೊಫೈಲ್ ಹೊಂದಿದೆ.


Click it and Unblock the Notifications








