Just In
- 15 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 18 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 1 hr ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Sports
ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Movies
ಹೊಸ ಬಿಗ್ಬಾಸ್ಗೆ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಇಷ್ಟೋಂದಾ?
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ದ್ವಿಚಕ್ರ ವಾಹನಗಳ ಭವಿಷ್ಯದ ಸುರಕ್ಷತಾ ತಂತ್ರಜ್ಞಾನಗಳನ್ನು ಪ್ರದರ್ಶಿಸಿದ ಕಾಂಟಿನೆಂಟಲ್ ಇಂಡಿಯಾ
ವಿಶ್ವಾದ್ಯಂತ ಸಾರಿಗೆ ಸೌಲಭ್ಯವು ಹೆಚ್ಚಳವಾದಂತೆ ಅಪಘಾತ ಸಂಖ್ಯೆ ಕೂಡಾ ಹೆಚ್ಚಳವಾಗಿವೆ. ಹೀಗಾಗಿ ವಾಹನ ಅಪಘಾತಗಳನ್ನು ತಗ್ಗಿಸಲು ಹೊಸ ವಾಹನ ಮಾದರಿಗಳಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹಲವಾರು ಹೊಸ ಬದಲಾವಣೆಯೊಂದಿಗೆ ಪ್ರಮುಖ ತಂತ್ರಜ್ಞಾನ ಸೌಲಭ್ಯಗಳನ್ನು ಪರಿಚಯಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ದ್ವಿಚಕ್ರ ವಾಹನಗಳನ್ನು ಪ್ರಪಂಚದಾದ್ಯಂತ ಅತ್ಯಂತ ಅಪಾಯಕಾರಿ ಸಾರಿಗೆ ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಚಾಲಕನ ಸುರಕ್ಷತೆಗೆ ಕಾರಿನಲ್ಲಿರುವಂತಹ ರಕ್ಷಣಾತ್ಮಕ ವೈಶಿಷ್ಟ್ಯತೆಗಳು ಇಲ್ಲದಿರುವುದರಿಂದ ಅಪಘಾತಗಳ ಸಂದರ್ಭದಲ್ಲಿ ಸವಾರರು ಹೆಚ್ಚು ಗಾಯಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ದ್ವಿಚಕ್ರ ವಸವಾರಿಯನ್ನು ಮತ್ತಷ್ಟು ಸುರಕ್ಷಿತವಾಗಿಸುತ್ತ ಪ್ರಮುಖ ಆಟೋಮೊಬೈಲ್ ಉತ್ಪಾದನಾ ಕಂಪನಿಗಳು ಹಲವಾರು ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಹೊಸ ವಾಹನಗಳನ್ನು ಅಭಿವೃದ್ದಿಪಡಿಸುತ್ತಿವೆ.

ದ್ವಿಚಕ್ರ ವಾಹನಗಳಲ್ಲಿ ಸವಾರರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲು ಹಲವು ಹೊಸ ತಂತ್ರಜ್ಞಾನ ಸೌಲಭ್ಯಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಅಪಘಾತಗಳಲ್ಲಿ ಆಗಬಹುದಾದ ಭೀಕರತೆ ತಪ್ಪಿಸಲು ಇತ್ತೀಚೆಗೆ ಪ್ರಮುಖ ಟೈರ್ ತಯಾರಕ ಕಂಪನಿ ಕಾಂಟಿನೆಂಟಲ್ ಕಂಪನಿಯು ಬೈಕ್ ಅಪಘಾತಗಳನ್ನು ತಡೆಗಟ್ಟಲು ತನ್ನ ಹೊಸ ತಂತ್ರಜ್ಞಾನ ಸೌಲಭ್ಯವನ್ನು ಭಾರತದಲ್ಲಿ ಪ್ರದರ್ಶನಗೊಳಿಸಿತು.

ಹೊಸೂರಿನ ತನೇಜಾ ಏರೋಸ್ಪೇಸ್ ಟ್ರ್ಯಾಕ್‌ನಲ್ಲಿ ನಡೆದ ಭವಿಷ್ಯದ ದ್ವಿಚಕ್ರ ವಾಹನಗಳ ತಂತ್ರಜ್ಞಾನ ಪ್ರದರ್ಶನದಲ್ಲಿ ಡ್ರೈವ್‌ಸ್ಪಾರ್ಕ್ ತಂಡವು ಸಹ ಕಾಂಟಿನೆಂಟಲ್‌ನ ಹೊಸ ತಂತ್ರಜ್ಞಾನ ಮತ್ತು ಉಪಕರಣಗಳ ಕಾರ್ಯಕ್ಷಮತೆ ಕುರಿತಂತೆ ಪರೀಕ್ಷೆ ನಡೆಸಿತು.

ಸದ್ಯ ಕಾಂಟಿನೆಂಟಲ್ ಎಜಿ ಗ್ರೂಪ್‌ನ ಭಾರತೀಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಕಾಂಟಿನೆಂಟಲ್ ಇಂಡಿಯಾ ತನ್ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಪ್ರಪಂಚದಾದ್ಯಂತ ವಿವಿಧ ವಾಹನಗಳಿಗೆ ಪೂರೈಸುತ್ತಿದ್ದು, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣವನ್ನು ಸುರಕ್ಷಿತವಾಗಿಸಲು ಕಂಪನಿಯು ಹೊಸ ತಂತ್ರಜ್ಞಾನವೊಂದನ್ನು ಸಿದ್ದಪಡಿಸಿದೆ.

ವಾಹನ ಸುರಕ್ಷತೆ ಈಗಾಗಲೇ ಹಲವು ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿರುವ ಕಾಂಟಿನೆಂಟಲ್ ಕಂಪನಿಯು ಇದೀಗ ದ್ವಿಚಕ್ರ ವಾಹನ ಅಪಘಾತಗಳಲ್ಲಿನ ಪ್ರಯಾಣಿಕರ ಸುರಕ್ಷತೆಗಾಗಿ ಪರಿಣಾಮಕಾರಿಯಾದ ಸೌಲಭ್ಯವೊಂದನ್ನು ಅಭಿವೃದ್ದಿಪಡಿಸಿದೆ.

ಇದೇ ನಮ್ಮ ತಂಡವು ಕಾಂಟೆನೆಂಟಲ್ ಕಂಪನಿಯ ಕೆಲವು ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿದ್ದು, ಕಾಂಟಿನೆಂಟಲ್ ಇಂಡಿಯಾ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವ ಎಲೆಕ್ಟ್ರಾನಿಕ್ಸ್ ಮತ್ತು ದ್ವಿಚಕ್ರ ವಾಹನಗಳ ಉಪಕರಣಗಳ ಶ್ರೇಣಿಯನ್ನು ಸಹ ಪ್ರದರ್ಶಿಸಿತು.

ವಾಹನಗಳ ಉಪಕರಣಗಳ ಶ್ರೇಣಿ ಪ್ರದರ್ಶನದಲ್ಲಿ ಸಿಂಕ್ರೊ ಫೋರ್ಸ್ ಕಾರ್ಬನ್ ಬೆಲ್ಟ್, ಸಿಂಕ್ರೊಚೈನ್ ಕಾರ್ಬನ್ ಬೆಲ್ಟ್, ಜೆನೆರಿಕ್ ವೆಹಿಕಲ್ ಕಂಟ್ರೋಲ್ ಯುನಿಟ್, ಟಿಎಫ್‌ಟಿ ಡಿಸ್ಪ್ಲೇ ಪರಿಹಾರಗಳು, ಡಯಾಗ್ನೋಸ್ಟಿಕ್ ಪರಿಹಾರಗಳು, ಹೈಬ್ರಿಡ್ ಡಿಸ್ಪ್ಲೇ ಪರಿಹಾರಗಳು, ಪರಿಹಾರವಾಗಿ ಕೀ, ಇಂಜಿನ್ ಸ್ಪೀಡ್ ಸೆನ್ಸಾರ್, ವೀಲ್ ಸ್ಪೀಡ್ ಸೆನ್ಸಾರ್ ಇತ್ಯಾದಿ ಉಪಕಣಗಳು ಅಲ್ಲಿ ಪ್ರದರ್ಶನಗೊಂಡವು.

ಹಾಗೆಯೇ ಕಾಂಟಿನೆಂಟಲ್ ಕಂಪನಿಯು ತನ್ನ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಂ, ಟೆಲಿಮ್ಯಾಟಿಕ್ಸ್ ಕಂಟ್ರೋಲ್ ಯುನಿಟ್, ಡಿಜಿಟಲ್ ಸರ್ವಿಸ್ ಪ್ಲಾಟ್‌ಫಾರ್ಮ್, ಡಿಫ್ಲೇಶನ್ ಡಿಟೆಕ್ಷನ್ ಸಿಸ್ಟಂ ಪ್ರದರ್ಶನಗೊಳಿಸಿದ್ದು ಇದೇ ವೇಳೆ ಈ ದ್ವಿಚಕ್ರ ವಾಹನ ತಂತ್ರಜ್ಞಾನಗಳಲ್ಲಿ ಬಳಸಲಾದ ಮಾಡ್ಯೂಲ್‌ಗಳು ಮತ್ತು ಹಾರ್ಡ್‌ವೇರ್ ಘಟಕಗಳನ್ನು ಸಹ ಬಹಿರಂಗಪಡಿಸಿಲಾಯ್ತು.

ಹೊಸ ಸುರಕ್ಷಾ ಫೀರ್ಚಸ್ ಹೊಂದಿರುವ ಮಾದರಿಯಲ್ಲಿ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಪ್ಟಿಮೈಸ್ಡ್ ಕರ್ವ್ ಬ್ರೇಕಿಂಗ್, ಲೇನ್ ಚೇಂಜ್ ಅಸಿಸ್ಟ್ ಮತ್ತು ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್ (ARAS) ಗಳನ್ನು ಒಳಗೊಂಡಿದ್ದು, ಹಾರ್ಡ್‌ವೇರ್ ಅನ್ನು ನೋಡಿದ ನಂತರವೇ ಟ್ರ್ಯಾಕ್‌ನಲ್ಲಿಯೂ ಪರೀಕ್ಷೆ ನೆಡಸಾಯ್ತು. ಅದರ ಅನುಭವವನ್ನು ನಾವಿಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆವೆ.

ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್
ಹೊಸ ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸಾಮಾನ್ಯ ಲಕ್ಷಣಗಳಾಗಿವೆ. ಆದಾಗ್ಯೂ, ಕಾಂಟಿನೆಂಟಲ್ ಇಂಡಿಯಾ ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದು, ನಾವು ಪರೀಕ್ಷಿಸಿದ ಎಬಿಎಸ್ ಘಟಕವು ಸಮಗ್ರ ಎಳೆತ ನಿಯಂತ್ರಣ ಘಟಕದೊಂದಿಗೆ ಬರುತ್ತದೆ.

ಅಷ್ಟೇ ಅಲ್ಲ ಹೊಸ ಸುರಕ್ಷಾ ಫೀಚರ್ಸ್ ಹೊಂದಿರುವ 500ಸಿಸಿ ಸ್ಕೂಟರ್‌ನಲ್ಲಿ ಅತ್ಯಾಧುನಿಕ ಕಾರ್ನರಿಂಗ್ ಎಬಿಎಸ್ ಫೀಚರ್ಸ್ ಕೂಡಾ ನೀಡಲಾಗಿದ್ದು, ಸಾಮಾನ್ಯ ದ್ವಿಚಕ್ರವಾಹನಗಳ ಎಬಿಎಸ್‌ಗಿಂತಲೂ ಹೊಸ ಎಬಿಎಸ್‌ನ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ನಾವು ಕಂಡುಕೊಂಡೆವು.

ಇದರೊಂದಿಗೆ ಹೊಸ ಸ್ಕೂಟರ್ ಮೂಲಕ ಸ್ಲಿಪರಿ ವೆಟ್ ಟೆಸ್ಟ್ ಟ್ರ್ಯಾಕ್‌ನಲ್ಲೂ ನಾವು ಎಬಿಎಸ್ ಮತ್ತು ಎಳೆತ ನಿಯಂತ್ರಣ ವ್ಯವಸ್ಥೆಯನ್ನು ಸಹ ಪರೀಕ್ಷಿಸಿದೆವು. ಇದರಲ್ಲೂ ಹೊಸ ತಂತ್ರಜ್ಞಾನದ ಕಾರ್ಯಕ್ಷಮತೆ ಉತ್ತಮವಾಗಿದ್ದು, ಸ್ಕೂಟರ್ ರಸ್ತೆಯಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳದೆ ನಿಖರ ಗುರಿತಲುಪುವಲ್ಲಿ ಯಶಸ್ವಿಯಾಯಿತು.

ಈ ನಡುವೆ ಸ್ಕೂಟರ್‌ನಲ್ಲಿದ್ದ ಎಬಿಎಸ್ ಆಫ್ ಮಾಡಿ ಒದ್ದೆಯಾದ ಟ್ರ್ಯಾಕ್‌ನಲ್ಲಿ ಮತ್ತೆ ಓಡಿಸಿದ ತಕ್ಷಣ ಅದು ಜಾರಿ ಬೀಳಲು ಪ್ರಾರಂಭಿಸಿತು. ತಕ್ಷಣವೇ ಕಾಂಟಿನೆಂಟಲ್‌ನ ಹೊಸ ಎಬಿಎಸ್ ಸ್ವಿಚ್ ಮಾಡುವ ಮೂಲಕ ಎಳೆತ ನಿಯಂತ್ರಣ ವ್ಯವಸ್ಥೆಯು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ.

ಕಾರ್ನಿಂಗ್ ಎಬಿಎಸ್ ಪರೀಕ್ಷೆಯಲ್ಲಿ ನಮ್ಮ ತಂಡವು ಪರೀಕ್ಷಿಸಿದ ಮುಂದಿನ ತಂತ್ರಜ್ಞಾನವೆಂದರೆ ಕಂಪನಿಯ ಹೊಸ ಕಾರ್ನಿಂಗ್ ಎಬಿಎಸ್ ಸಿಸ್ಟಂ. ಇದು ಈ ವ್ಯವಸ್ಥೆಯನ್ನು ಪರೀಕ್ಷಿಸಲು, ನಾವು ಜನಪ್ರಿಯ ಸ್ಪೋರ್ಟ್ಸ್ ಬೈಕ್ ಅನ್ನು ಆಯ್ಕೆ ಮಾಡಿ ಅಪಘಾತಗಳನ್ನು ತಪ್ಪಿಸಲು ಮೋಟಾರ್‌ಸೈಕಲ್‌ನ ಎರಡೂ ಬದಿಗಳಲ್ಲಿ ರಿಗ್‌ಗಳನ್ನು ಅಳವಡಿಸಿದ್ದೆವು. ಈ ವೇಳೆ ಕಾರ್ನರಿಂಗ್ ಪರೀಕ್ಷೆಯ ಸಮಯದಲ್ಲಿ ನಾವು ಮೋಟಾರ್‌ಸೈಕಲ್‌ನ ವೇಗವನ್ನು 60-70 ಕಿಮೀ / ಗಂ ವೇಗದಲ್ಲಿ ಪರೀಕ್ಷಿಸಿದೆವು.

ಅಡ್ವಾನ್ಸ್ ರೈಡರ್ ಅಸಿಸ್ಟೆನ್ಸ್ ಸಿಸ್ಟಂ
ಕೆಲವು ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಅಡ್ವಾನ್ಸ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್ (ARAS) ಸೂಕ್ತವಾಗಿ ಗಮನಕ್ಕೆ ಬಂದಿರುತ್ತದೆ. ಈ ತಂತ್ರಜ್ಞಾನದಲ್ಲಿ ರೇಡಾರ್ ಅನ್ನು ಬಳಸಲಾಗಿದ್ದು, ಇದು ಸಿಗ್ನಲ್‌ಗಳ ಸಹಾಯದಿಂದ ವಾಹನದ ಮುಂಭಾಗ ಮತ್ತು ಹಿಂಭಾಗದಿಂದ ಬರುವ ವಾಹನಗಳ ಸ್ಥಾನದ ಬಗ್ಗೆ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

ಜೊತೆಗೆ ನಮಗೆ ನೀಡಲಾಗಿದ್ದ ಟೆಸ್ಟಿಂಗ್ ಬೈಕ್‌ಗೆ ಕೆಂಪು ಎಲ್‌ಇಡಿ ಸ್ಟ್ರಿಪ್ ಲೈಟ್ ಹೊಂದಿದ್ದು, ಅದು ರಸ್ತೆಯ ಕುರುಡು ಚುಕ್ಕೆಯನ್ನು ಸೂಚಿಸಲು ಎಚ್ಚರಿಕೆಯ ಬೆಳಕಿನಂತೆ ಕಾರ್ಯನಿರ್ವಹಿಸುತ್ತದೆ. ಇದು ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್ ಈ ಪರೀಕ್ಷೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.

ನಿಧಾನವಾಗಿ ಚಲಿಸುತ್ತಿದ್ದ ಕಾರಿನ ಮುಂದೆ ಬೈಕ್ ಬಂದ ಕೂಡಲೇ ಎಲ್‌ಇಡಿ ಲೈಟ್ ಮಿನುಗುವುದನ್ನು ನಾವು ಕಂಡುಕೊಂಡುಕೊಂಡೆವು. ಈ ತಂತ್ರವು ಮುಂಭಾಗದ ಕಾರು ನಿಧಾನವಾಗಿ ಹೋಗುತ್ತಿದೆ ಎಂದು ಹೇಳುತ್ತದೆ ಆದ್ದರಿಂದ ಬೈಕರ್ ವೇಗವನ್ನು ಕಡಿಮೆ ಮಾಡಬೇಕಿದ್ದು, ಇದಕ್ಕೆ ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್ ಎನ್ನಲಾಗುತ್ತದೆ.

ಈ ಮೂಲಕ ಪ್ರಪಂಚದಾದ್ಯಂತ ಆಟೋಮೋಟಿವ್ ಮತ್ತು ಆಟೋಮೋಟಿವ್ ತಂತ್ರಜ್ಞಾನ ಕಂಪನಿಗಳ ಹೊಸ ಆವಿಷ್ಕಾರಗಳು ವಾಹನಗಳನ್ನು ಹೆಚ್ಚುವರಿಯಾಗಿ ಸುರಕ್ಷಿತವಾಗಿಸಲು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿವೆ. ಹಾಗೆಯೇ ಕಾರುಗಳು ಈಗ ಮೊದಲಿಗಿಂತಲೂ ಹಲವು ಪಟ್ಟು ಹೆಚ್ಚು ಸುರಕ್ಷಿತವಾಗಿದ್ದರೂ, ಮೋಟಾರ್‌ಸೈಕಲ್‌ಗಳು ಇನ್ನೂ ಕಡಿಮೆ ಸುರಕ್ಷಿತವಾಗಿದೆ. ಹೀಗಾಗಿ ಈಗ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಮೂಲಕ ದ್ವಿಚಕ್ರ ವಾಹನಗಳನ್ನೂ ಮತ್ತಷ್ಟು ಸುರಕ್ಷಿತವಾಗಿ ತಯಾರಿಸಲಾಗುತ್ತಿದೆ. ಭವಿಷ್ಯದಲ್ಲಿ, ಮೋಟರ್‌ಸೈಕಲ್‌ಗಳನ್ನು ಸುರಕ್ಷಿತವಾಗಿಸುವ ಹಲವು ತಂತ್ರಜ್ಞಾನಗಳನ್ನು ಮುಂದಿನ ದಿನಗಳಲ್ಲಿ ನಾವು ನೋಡಬಹುದಾಗಿದೆ.