ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೊಲೀಸರ ಪ್ರತಿಕ್ರಿಯೆ?

ನಟಿ ದೀಪಿಕಾ ಪಡುಕೋಣೆ ಅವರ ಪತಿ ಹಾಗೂ ಬಾಲಿವುಡ್ ಟಾಪ್ ನಟನಾಗಿರುವ ರಣವೀರ್ ಸಿಂಗ್ ಅವರು ತಮ್ಮ ದುಬಾರಿ ಆಸ್ಟನ್ ಮಾರ್ಟಿನ್ ಕಾರಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಇದೇ ಕಾರನ್ನು ನೀಲಿ ಬಣ್ಣಕ್ಕೆ ಮಾಡಿಫೈಗೊಳಿಸಿ ಕಾಣಿಸಿಕೊಂಡ ನಂತರ, ಟ್ವಿಟರ್ ಬಳಕೆದಾರರು ಅವರ ವಿರುದ್ಧ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾರೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಅವಧಿ ಮೀರಿದ ಇನ್ಸೂರನ್ಸ್‌ನೊಂದಿಗೆ ಕಾರನ್ನು ಬಳಸುತ್ತಿದ್ದಾರೆ ಎಂದು ಬಳಕೆದಾರರು ಆರೋಪಿಸಿದ್ದಾರೆ. ಅನೇಕ ಬಳಕೆದಾರರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ರಣವೀರ್ ಸಿಂಗ್ ಮಾನ್ಯ ವಿಮೆಯಿಲ್ಲದೆ ಕಾರಿನಲ್ಲಿ ಓಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು ದೂರನ್ನು ಟ್ರಾಫಿಕ್ ಪೊಲೀಸರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಇದೀಗ, ರಣವೀರ್ ಸಿಂಗ್ ತಂಡದ ಮೂಲವೊಂದು ವಿಮೆಯ ಪ್ರತಿಯನ್ನು ಹೊರತಂದಿದೆ. ಇಂತಹ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ಮೊದಲು ಸಾಕಷ್ಟು ಸತ್ಯ-ಸತ್ಯತೆಗಳನ್ನು ನೋಡುತ್ತಿಲ್ಲ ಎಂದು TOI (ಟೈಮ್ಸ್ ಆಫ್ ಇಂಡಿಯಾ)ಗೆ ಮೂಲಗಳು ತಿಳಿಸಿವೆ. ವಿಮೆಯನ್ನು ಈಗ ವಾಹನದ ನೋಂದಣಿಗೆ ನೋಂದಾಯಿಸಲಾಗಿದೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಈ ಕುರಿತ ವಿವರಗಳನ್ನು ಆನ್‌ಲೈನ್‌ನಲ್ಲಿ ನೋಡಬಹುದು, ಕೆಲವೊಮ್ಮೆ ಭೌತಿಕ ದಾಖಲೆಗಳು ಇದ್ದರೂ ಆನ್‌ಲೈನ್‌ನಲ್ಲಿ ವಿಮೆ ವಿವರಗಳನ್ನು ಅಪ್‌ಲೋಡ್ ಮಾಡದಿರುವ ಅನೇಕ ನಿದರ್ಶನಗಳಿವೆ. ಹೆಚ್ಚಿನ ಪೊಲೀಸ್ ಚೆಕ್ ಪೋಸ್ಟ್‌ಗಳು ಇನ್ನು ಮುಂದೆ ಭೌತಿಕ ದಾಖಲೆಗಳನ್ನು ಕೇಳುವುದಿಲ್ಲ. ವಿವರಗಳನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಲಾಗುತ್ತದೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಆದರೆ ವಿವರಗಳು ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಲಭ್ಯವಿಲ್ಲದಿದ್ದರೆ, ಭೌತಿಕ ದಾಖಲೆಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇದೀಗ ರಣವೀರ್ ಅವರ ವಿಮೆ ದಾಖಲೆಗಳ ವಿವರಗಳು ಆನ್‌ಲೈನ್‌ನಲ್‌ನಲ್ಲಿ ನವೀಕರಣಗೊಂಡ ಬಳಿಕ ಸದ್ಯ ಟ್ವಿಟರ್‌ನಲ್ಲಿ ಬಳಕೆದಾರರ ಆರೋಪಗಳು ತಣ್ಣಗಾಗಿವೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಬಿಳಿ-ಬಣ್ಣದ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ರಣವೀರ್ ಸಿಂಗ್ ಅವರು ನಿಯಮಿತವಾಗಿ ಬಳಸುವ ಕಾರಾಗಿದೆ. ಮುಂಬೈನ ನಗರ ಮಿತಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಅವರು ಈ ಕಾರಿನಲ್ಲಿ ಗುರುತಿಸಿಕೊಂಡಿದ್ದಾರೆ. ಐಕಾನಿಕ್ ಬ್ರಿಟಿಷ್ ಕಾರು ತಯಾರಕರ ಈ 4-ಬಾಗಿಲಿನ ಐಷಾರಾಮಿ ಸ್ಪೋರ್ಟ್ಸ್ ಕಾರು ಬೃಹತ್ 6.0-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಒಳಗೊಂಡಿದೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

AM29 V12 ಎಂಜಿನ್ ರಾಪೈಡ್ S, 552 Bhp ಮತ್ತು 620 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ZF-ಮೂಲದ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಪಡೆದಿದೆ. ಕೇವಲ 4.2 ಸೆಕೆಂಡುಗಳಲ್ಲಿ 0-100 km/h ವೇಗವನ್ನು ತಲುಪಬಹುದು. ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಗಂಟೆಗೆ 327 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ರಣವೀರ್ ಭಾರತದಲ್ಲಿ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನಟನ ಮಾಲೀಕತ್ವದ ಎಲ್ಲಾ ವಾಹನಗಳು ಬಹುತೇಕ ಐಷಾರಾಮಿಯಾಗಿವೆ. ರಣವೀರ್ ಸಿಂಗ್ ಅವರು ಮರ್ಸಿಡಿಸ್-ಬೆನ್ಝ್‌ನಿಂದ ಇತ್ತೀಚಿನ GLS SUV ಅನ್ನು ಸಹ ಹೊಂದಿದ್ದಾರೆ. GLS 3.0-ಲೀಟರ್ V6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಇದು 255Bhp-620 Nm ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಇದರ ಬೆಲೆಯು 83 ಲಕ್ಷ ರೂ. (ಎಕ್ಸ್‌ ಶೋರೂಂ) ಎನ್ನಲಾಗಿದೆ. ರಣವೀರ್ ಸಿಂಗ್ ಅವರು ಲ್ಯಾಂಬೋರ್ಗಿನಿ ಉರುಸ್ ಪರ್ಲ್ ಆವೃತ್ತಿಯನ್ನು ಸಹ ಖರೀದಿಸಿದ್ದಾರೆ, ಇದರ ಬೆಲೆ 3.15 ಕೋಟಿ ರೂ. (ಎಕ್ಸ್‌ಶೋರೂಂ) ಆಗಿದೆ. ಉರುಸ್‌ನ ಪ್ರಮಾಣಿತ ಮಾದರಿಗೆ ಹೋಲಿಸಿದರೆ ಇದು ಶೇ 20 ರಷ್ಟು ದುಬಾರಿ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ರಣವೀರ್ ತಮ್ಮ ಉರುಸ್‌ಗಾಗಿ ಅರಾನ್ಸಿಯೊ ಬೋರಿಯಾಲಿಸ್ ಶೇಡ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನು ಸಾಮಾನ್ಯವಾಗಿ ಕ್ಯಾಂಡಿ ಆರೆಂಜ್ ಶೇಡ್ ಎಂದು ಕರೆಯಲಾಗುತ್ತದೆ. ಪೀಲ್ ಕ್ಯಾಪ್ಸುಲ್ ಆವೃತ್ತಿಯು ರೆಡ್, ಆರೆಂಜ್ ಮತ್ತು ಲೆಮೆನ್ ಗ್ರೀನ್ ಛಾಯೆಗಳಲ್ಲಿಯೂ ಲಭ್ಯವಿದೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯು ಪ್ರಮಾಣಿತ ಮಾದರಿಗೆ ಹೋಲಿಸಿದರೆ ಕೆಲವು ನವೀಕರಣಗಳನ್ನು ಪಡೆದಿದೆ. ಬಂಪರ್, ಬಾಡಿ ಸ್ಕರ್ಟ್‌ಗಳು, ORVM ಗಳು, ವೀಲ್ ಕ್ಲಾಡಿಂಗ್ ಮತ್ತು ರೂಫ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಫಿನಿಶ್ ಅನ್ನು ಒಳಗೊಂಡಿವೆ. ಕ್ವಾಡ್ ಎಕ್ಸಾಸ್ಟ್ ಟಿಪ್ಸ್ ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಮ್ಯಾಟ್ ಬ್ಲ್ಯಾಕ್ ಅನ್ನು ಬದಲಿಸುವ ಬ್ರಷ್ಡ್ ಸಿಲ್ವರ್ ಡಿಸೈನ್ ಹೊಂದಿದೆ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಪರ್ಲ್ ಕ್ಯಾಪ್ಸುಲ್ ಆವೃತ್ತಿಯು ಬಾಡಿ-ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಬೃಹತ್ 22-ಇಂಚಿನ ವೀಲ್‌ಗಳನ್ನು ಸಹ ಹೊಂದಿದೆ. ಪ್ರಮಾಣಿತ ಆವೃತ್ತಿಯು 21-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ರಣವೀರ್ ಎಸ್‌ಯುವಿಯ ಕ್ಯಾಬಿನ್ ಅನ್ನು ಕಸ್ಟಮೈಸ್ ಮಾಡಿದ್ದಾರೆಯೇ ಎಂದು ನಮಗೆ ಖಚಿತವಿಲ್ಲ.

ಇನ್ಸೂರನ್ಸ್ ಲ್ಯಾಪ್ಸ್ ಆದ್ರೂ ನಿರ್ಭಯವಾಗಿ ಸಂಚರಿಸುತ್ತಿರವ ದೀಪಿಕ ಪಡುಕೋಣೆ ಪತಿ: ಪೋಲಿಸರ ಪ್ರತಿಕ್ರಿಯೆ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ರಣವೀರ್ ಸಿಂಗ್ ಅವರಿಗೆ ಐಷಾರಾಮಿ ಕಾರುಗಳೆಂದರೆ ಬಹಳ ಇಷ್ಟ. ಆದರೆ ಸದ್ಯ ಬಾಯ್‌ಕಾಟ್ ಬಾಲಿವುಡ್ ಎಂಬ ಟ್ರೆಂಡ್ ನಡೆಯುತ್ತಿರುವುದರಿಂದ ಬಾಲಿವುಡ್ ಮಂದಿ ಏನೆ ಮಾಡಿದರೂ ಜನರು ವಿರೋಧಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಣವೀರ್ ಅವರ ಕಾರ್ ನಂಬರ್ ಕುರಿತ ಡೀಟೇಲ್ಸ್ ಕುರಿತು ತಿಳಿದು ನೆಟ್ಟಿಗರು ಸಮಸ್ಯೆ ತಂದೊಡ್ಡಿದ್ದಾರೆ. ಆದರೆ ಈ ವಿಷಯ ಬೆಳಕಿಗೆ ಬಂದಿದ್ದರಿಂದಲೇ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗದಿರುವುದು ತಿಳಿದಿದೆ.

More from DriveSpark

Article Published On: Wednesday, October 19, 2022, 12:49 [IST]
English summary
Deepika Padukone husband who travels fearlessly with expired insurance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+