ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಹೊಸ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಹೆಚ್ಚುವರಿ ಪ್ರೀಮಿಯಂಗಾಗಿ, ಎಕ್ಸ್‌ಟೆಕ್‌ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತ ಸಾಕಷ್ಟು ಉಪಯುಕ್ತ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬ್ರ್ಯಾಂಡ್‌ನ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಪುನರುಚ್ಚರಿಸುವ 5 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಹೀರೋ ಮೋಟೊಕಾರ್ಪ್ ಕಂಪನಿಯು ಇತ್ತೀಚೆಗೆ ತನ್ನ ಆಕ್ರಮಣಕಾರಿ ಮಾರ್ಕೆಟಿಂಗ್ ಕಾರ್ಯತಂತ್ರದ ಭಾಗವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಬೆಲೆ

ಹೊಸ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕಿನ ಡ್ರಮ್ ರೂಪಾಂತರದ ಬೆಲೆಯು ರೂ.74,590 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.78,990 ಆಗಿದೆ. ಇದು ಬೇಸ್ ಪ್ಯಾಶನ್ ಪ್ರೊಗಿಂತ ರೂ. 5,000-6,000 ವರೆಗೆ ದುಬಾರಿಯಾಗಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಫೀಚರ್ಸ್

ಫೀಚರ್ಸ್ ಬಗ್ಗೆ ಹೇಳುವುದಾದರೆ, ಪ್ಯಾಶನ್ ಎಕ್ಸ್‌ಟೆಕ್ ಬೈಕಿನಲ್ಲಿ ಪ್ರೊಜೆಕ್ಟರ್ ಎಲ್‌ಇಡಿ ಹೆಡ್‌ಲ್ಯಾಂಪ್, ರಿಯಲ್-ಟೈಮ್ ಮೈಲೇಜ್ ಇಂಡಿಕೇಟರ್,ಲೋ ಫ್ಯೂಯಲ್ ಇಂಡಿಕೇಟರ್, ಸರ್ವಿಸ್ ರಿಮೈಂಡರ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಇದರೊಂದಿಗೆ ಬ್ಲೂ ಬ್ಯಾಕ್‌ಲಿಟ್ ಇನ್ ಸ್ಟ್ರೂಮೆಂಟ್ ಕ್ಲಸ್ಟರ್ ಫೋನ್ ಬ್ಯಾಟರಿ ಶೇಕಡಾವನ್ನು ಸಹ ತೋರಿಸುತ್ತದೆ. ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ಸಾಂಪ್ರದಾಯಿಕ ಹ್ಯಾಲೊಜೆನ್ ಲ್ಯಾಂಪ್‌ಗಿಂತ 12 ಪ್ರತಿಶತ ಉದ್ದದ ಕಿರಣದೊಂದಿಗೆ ಸೆಗ್ಮೆಂಟ್ ಬ್ರೈಟ್‌ನೆಸ್‌ನಲ್ಲಿ ಅತ್ಯುತ್ತಮವಾಗಿ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಈ ಹೊಸ ಬೈಕ್ ನೀಲಿ ಬ್ಯಾಕ್‌ಲೈಟ್‌ನೊಂದಿಗೆ ಸೆಗ್ಮೆಂಟ್-ಮೊದಲ ಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಕನ್ಸೋಲ್‌ನೊಂದಿಗೆ ಬರುತ್ತದೆ ಬ್ಲೂಟೂತ್ ಸಂಪರ್ಕವನ್ನು ನೀಡುತ್ತದೆ, ಕಾಲರ್ ಹೆಸರಿನೊಂದಿಗೆ ಫೋನ್ ಕಾಲ ಅಲರ್ಟ್, ಮಿಸ್ಡ್ ಕಾಲ್ ಮತ್ತು ಎಸ್‌ಎಂಎಸ್ ಅಲರ್ಟ್ ಜೊತೆಗೆ ಸಂಯೋಜಿತ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್. ಇದು ಫೋನ್ ಬ್ಯಾಟರಿ ಶೇಕಡಾವಾರು, ನೈಜ-ಸಮಯದ ಮೈಲೇಜ್ ಇಂದಿಕೇಟರ್ ಮತ್ತು ಸರ್ವಿಸ್ ಅಲರ್ಟ್ ರಿಮೈಂಡರ್ ಮತ್ತು ಲೋ ಫ್ಯೂಯಲ್ ಅಲರ್ಟ್ ಸಹ ಪ್ರದರ್ಶಿಸುತ್ತದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ವಿನ್ಯಾಸ

ಕಮ್ಯೂಟರ್ ಮೋಟಾರ್‌ಸೈಕಲ್‌ನ ಇತ್ತೀಚಿನ ಪುನರಾವರ್ತನೆಯು ಅದರ ಇಂಧನ ಟ್ಯಾಂಕ್‌ನಲ್ಲಿ ಕ್ರೋಮ್ಡ್ 3D ಬ್ರ್ಯಾಂಡಿಂಗ್ ಮತ್ತು ರಿಮ್ ಟೇಪ್ ಅನ್ನು ಹೊಂದಿದೆ ಅದು ಅದರ ಪ್ರೀಮಿಯಂ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಇದರ ವಿನ್ಯಾಸವು ನೋಡುಗರ ಗಮನ ಸೆಳೆಯುವಂತಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಎಂಜಿನ್

ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಅದೇ 110 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9 ಬಿಹೆಚ್‍ಪಿ ಪವರ್ ಮತ್ತು 9.79 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಉತ್ತಮ ಇಂಧನ ದಕ್ಷತೆಗಾಗಿ ಪೇಟೆಂಟ್ ಪಡೆದ i3S ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಸಹ ನೀಡಲಾಗುತ್ತದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಸಸ್ಪೆಂಕ್ಷನ್ ಸೆಟಪ್

ಹೊಸ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ ಅಬ್ಸಾರ್ಬರ್‌ಗಳನ್ನು ಒಳಗೊಂಡಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಬ್ರೇಕಿಂಗ್ ಸಿಸ್ಟಂ

ಇನ್ನು ಪ್ರಮುಖವಾಗಿ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ ಅನ್ನು ಜೋಡಿಸಲಾಗಿದೆ. ಎರಡೂ ಕೂಡ ಸ್ಟ್ಯಾಂಡರ್ಡ್ ಆಯ್ಕೆಯನ್ನು ಹೊಂದಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಈ ಹೀರೋ ಪ್ಯಾಶನ್ ಕಮ್ಯೂಟರ್ ಬೈಕ್ 18-ಇಂಚಿನ ಅಲಯ್ ವ್ಹೀಲ್ ಮೇಲೆ ಮುಂಭಾಗ ಮತ್ತು ಹಿಂಭಾಗದ ತುದಿಗಳಲ್ಲಿ 80/100 ವಿಭಾಗಗಳ ಟೈರ್‌ಗಳನ್ನು ಹೊಂದಿದೆ. ಮೋಟಾರ್‌ಸೈಕಲ್ ಡೈಮಂಡ್ ಫ್ರೇಮ್‌ನಲ್ಲಿ 1,270 ಎಂಎಂ ವ್ಹೀಲ್‌ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಜುಲೈ 1 ರಿಂದ ರೂ.3 ಸಾವಿರ ವರೆಗೆ ಬೆಲೆಯನ್ನು ಹೆಚ್ಚಿಸಲಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಇನ್ನು ಹೀರೋ ಮೋಟೋಕಾರ್ಪ್ ತನ್ನ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹೀರೋ ಸ್ಪ್ಲೆಂಡರ್, ಕಂಪನಿಯ ಸರಣಿಯಲ್ಲಿ ಹೆಚ್ಚು ಜನಪ್ರಿಯ ಕಮ್ಯೂಟರ್ ಬೈಕ್ ಕಳೆದ ಮೂರು ದಶಕಗಳಿಂದ ಮಾರಾಟದಲ್ಲಿದೆ. ಈ ಹೀರೋ ಸ್ಪ್ಲೆಂಡರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನ ಎಕ್ಸ್‌ಟೆಕ್‌ ಮಾದರಿಯು ಅತ್ಯಾಧುನಿಕ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಬೈಕ್ ಹೀರೋ ಮೋಟೋಕಾರ್ಪ್ ಕಂಪನಿಗೆ ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಇದರಿಂದ ಹೋರೋ ಕಂಪನಿಯು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಎಕ್ಸ್‌ಟೆಕ್‌ ಆವೃತ್ತಿಯಲ್ಲಿ ಪರಿಚಯಿಸಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ವಿಶೇಷತೆಗಳು...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಸ್ಟ್ಯಾಂಡರ್ಡ್ ಮಾದರಿಗಿಂತ ಸಾಕಷ್ಟು ಉಪಯುಕ್ತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಹೊಸ ಬೈಕ್ ಹೆಚ್ಚಾಗಿ ಯುವ ಗ್ರಾಹರನ್ನು ಸೆಳೆಯಬಹುದು.

Most Read Articles

Kannada
English summary
Find here some top highlights of new hero passion xtec details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X