ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಕಂಪನಿಗಳು

ಕಳೆದ ನಾಲ್ಕು ತಿಂಗಳಲ್ಲಿ ದೇಶದ ವಿವಿಧೆಡೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಲವು ಪ್ರಕರಣಗಳು ದಾಖಲಾಗಿದ್ದು, ಕೆಲವೆಡೆ ಬ್ಯಾಟರಿ ಸ್ಪೋಟಗೊಂಡು ಮಾಲೀಕರು ಜೀವ ಕಳೆದುಕೊಂಡಿದ್ದರು. ಈ ಬಗ್ಗೆ ಮಂಗಳವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಬೆಂಕಿ ಘಟನೆಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು ವಿವರಿಸಿದರು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ದೇಶದ ಹಲವೆಡೆ ಸತತವಾಗಿ ಎಲೆಕ್ಟ್ರಿಕ್ ವಾಹನಗಳ ಬೆಂಕಿ ಅವಘಡಗಳು ಕಾಣಿಸಿಕೊಂಡಿದ್ದವು. ಇದರಿಂದ ಎಚ್ಚೆತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವಿ ವಾಹನ ತಯಾರಿಕಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಬ್ಯಾಟರಿ ಸ್ಪೋಟಗಳಿಗೆ ಕಾರಣ ತಿಳಿಸಲು ಆದೇಶಿಸಲಾಗಿತ್ತು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಇದಾದ ಬಳಿಕ ಹಲವು ವಾಹನ ತಯಾರಕರು ಸಂಭವನೀಯ ಅನಾಹುತಕ್ಕೂ ಮುನ್ನ ತಮ್ಮ ಇವಿ ಮಾದರಿಗಳನ್ನು ಗ್ರಾಹಕರಿಂದ ಹಿಂಪಡೆದು ಪ್ರಮಾಣಿತ ಬ್ಯಾಟರಿ ಅಳವಡಿಕೆಗೆ ಮುಂದಾಗಿದ್ದರು. ನಂತರ ಎಲೆಕ್ಟ್ರಿಕ್ ವಾಹನಗಳ ಬೆಂಕಿ ಅವಘಡಗಳು ಬಹುತೇಕ ಕಡಿಮೆಯಾಗಿವೆ ಎಂದು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಕಳೆದ ಏಪ್ರಿಲ್‌ನಲ್ಲಿ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು 6,600 ಕ್ಕೂ ಹೆಚ್ಚು ವಾಹನಗಳನ್ನು ಹಿಂಪಡೆದಿದ್ದಾರೆ. ಮೊದಲಿಗೆ ಮಾರ್ಚ್‌ನಲ್ಲಿ ತಮಿಳುನಾಡು ಹಾಗೂ ಏಪ್ರಿಲ್‌ನಲ್ಲಿ ಆಂಧ್ರಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಅವಘಡಗಳು ವರದಿಯಾಗಿದ್ದವು ಎಂದು ಸಚಿವರು ಹೇಳಿದರು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಈ ಎಲ್ಲಾ ಪ್ರಕರಣಗಳಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯು (MoRTH) ಸಂಬಂಧಪಟ್ಟ ವಾಹನ ತಯಾರಕರ ಮುಖ್ಯ ಕಾರ್ಯನಿರ್ವಾಹಕರಿಗೆ ನೋಟಿಸ್ ಕಳುಹಿಸಿದೆ. ಒಟ್ಟು 6,656 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಕರು ಹಿಂಪಡೆದಿದ್ದಾರೆ ಎಂದು ಗುರ್ಜರ್ ಹೇಳಿದರು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಓಕಿನಾವಾ ಏಪ್ರಿಲ್ 16 ರಂದು 3,215 ಯೂನಿಟ್ ವಾಹನಗಳನ್ನು ಹಿಂಪಡೆದಿದೆ, ಏಪ್ರಿಲ್ 21 ರಂದು ಪ್ಯೂರ್ ಇವಿ 2,000 ಯುನಿಟ್ ವಾಹನಗಳನ್ನು ಮತ್ತು ಓಲಾ ಎಲೆಕ್ಟ್ರಿಕ್ ಏಪ್ರಿಲ್ 23 ರಂದು 1,441 ಯೂನಿಟ್ ವಾಹನಗಳನ್ನು ಹಿಂಪಡೆದಿದೆ. ಇದಾದ ಬಳಿಕವು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದರು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ವಾಹನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಇವಿಗಳ ಮಾರಾಟದಲ್ಲಿ ಯಾವುದೇ ಕುಸಿತವಾಗಿಲ್ಲ. ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮೋಟಾರು ವಾಹನಗಳ ನಿಯಮ, 1989 ರ ನಿಯಮ 126 ರಲ್ಲಿ ನಿರ್ದಿಷ್ಟಪಡಿಸಿದಂತೆ, EVಗಳ ಘಟಕಗಳ ಪರೀಕ್ಷೆಯನ್ನು ಸಂಬಂಧಿತ ಮಾನದಂಡಗಳ ಪ್ರಕಾರ ಮಾಡಲಾಗುತ್ತದೆ.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಲಭ್ಯವಿರುವ ಅಗ್ನಿ ಅವಘಡಗಳ ಮಾಹಿತಿಯ ಆಧಾರದ ಮೇಲೆ ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನು ಏಕೆ ಅನ್ವಯಿಸಬಾರದು ಎಂಬ ಕಾರಣಗಳನ್ನು ವಿವರಿಸಲು ಸಂಬಂಧಿಸಿದ ದ್ವಿಚಕ್ರ ವಾಹನ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರ ಸಿಇಒ ಮತ್ತು ಎಂಡಿಗಳಿಗೆ ಮೋಆರ್‌ಟಿಎಚ್ ಶೋಕಾಸ್ ನೋಟಿಸ್ ನೀಡಿದೆ ಎಂದು ಸಚಿವರು ಹೇಳಿದರು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಏಪ್ರಿಲ್ 21 ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು EV ತಯಾರಿಕೆಯ ಸಮಸ್ಯೆಗಳನ್ನು ಪರಿಶೀಲಿಸಲು ಪರಿಣಿತ ಸಮಿತಿಯನ್ನು ರಚಿಸಿದ್ದಾರೆ, ವಿಶೇಷವಾಗಿ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದವರು ಮತ್ತು EV ತಯಾರಕರಿಗೆ ಮುಂಬರುವ ಮಾರ್ಗಸೂಚಿಗಳಿಗೆ ಸೇರಿಸಲು ಶಿಫಾರಸುಗಳನ್ನು ಮಾಡಿದ್ದಾರೆ.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಇದಕ್ಕಾಗಿ ಡಿಆರ್‌ಡಿಒ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಬೆಂಗಳೂರು ಮತ್ತು ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯ (ಎನ್‌ಎಸ್‌ಟಿಎಲ್) ವಿಶಾಖಪಟ್ಟಣದಿಂದ ಸ್ವತಂತ್ರ ತಜ್ಞರೊಂದಿಗೆ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಭಾರೀ ಕೈಗಾರಿಕೆಗಳ ಇಲಾಖೆಯು ಜುಲೈ 14 ರವರೆಗೆ ಭಾರತದಲ್ಲಿ ಒಟ್ಟು 13.3 ಲಕ್ಷ (13,34,385) ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಿವೆ, ಅದರಲ್ಲಿ ಉತ್ತರ ಪ್ರದೇಶವು 3,37,180 (25.2%) ಇವಿಗಳನ್ನು ಹೊಂದಿದ್ದರೆ, ದೆಹಲಿಯು 1,56,393 ಇವಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಕರ್ನಾಟಕ 1,20,532 ವಾಹನಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಚಾರ್ಜಿಂಗ್ ಸ್ಟೇಷನ್‌ಗಳಿಗೆ ಸಂಬಂಧಿಸಿದಂತೆ, FAME-I (ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ) ಯೋಜನೆಯಡಿಯಲ್ಲಿ, ಭಾರೀ ಕೈಗಾರಿಕೆಗಳ ಸಚಿವಾಲಯವು 520 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ 479 ಅನ್ನು ಜುಲೈ 1 ರಿಂದ ಸ್ಥಾಪಿಸಲಾಗಿದ್ದು, ಉಳಿದ 81 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಬೇಕಿದೆ.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ದೆಹಲಿ-ಚಂಡೀಗಢ, ಮುಂಬೈ-ಪುಣೆ, ದೆಹಲಿ-ಜೈಪುರ-ಆಗ್ರಾ ಮತ್ತು ಜೈಪುರ-ದೆಹಲಿಯಂತಹ ನಾಲ್ಕು ಹೆದ್ದಾರಿಗಳಲ್ಲಿ ಸ್ಥಾಪಿಸಲಾಗಿದೆ. FAME-II ಅಡಿಯಲ್ಲಿ, ಸಚಿವಾಲಯವು 25 ರಾಜ್ಯಗಳು/UTಗಳಲ್ಲಿ 68 ನಗರಗಳಲ್ಲಿ 2,877 EV ಸ್ಟೇಷನ್‌ಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಜುಲೈ 1 ರಿಂದ ಕೇವಲ 50 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಬೆಂಕಿ ಅವಘಡ: ಗ್ರಾಹಕರ ಹಿತಕ್ಕಾಗಿ ಏಪ್ರಿಲ್‌ನಲ್ಲಿ 6,600 ಇವಿ ಸ್ಕೂಟರ್‌ಗಳನ್ನು ಹಿಂಪಡೆದಿದ್ದ 3 ಬ್ರ್ಯಾಂಡ್‌ಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೀರ್ಘಕಾಲಿಕ ಪ್ರಯಾಣದ ನಂತರ ಬ್ಯಾಟರಿ ವಿಭಾಗದಲ್ಲಿ ಹೆಚ್ಚಿನ ಮಟ್ಟದ ಶಾಖ ಉತ್ಪತ್ತಿಯಾಗಲಿದ್ದು, ಇದರಿಂದ ಬ್ಯಾಟರಿಗಳಲ್ಲಿನ ಶೆಲ್‌ಗಳಲ್ಲಿ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಪತ್ತೆಹಚ್ಚಿರುವ ವಾಹನ ತಯಾರಕರು ಇದೀಗ ಪ್ರಮಾಣಿತ ಬ್ಯಾಟರಿಗಳ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನು ಇತ್ತೀಚೆಗೆ ಬೆಂಕಿ ಅವಘಡಗಳು ಸಹ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಇವಿ ವಾಹನಗಳ ಉತ್ತಮ ಬೆಳವಣಿಗೆಯನ್ನು ಕಾಣಬಹುದು.

Most Read Articles

Kannada
English summary
Fire disaster 3 companies recall 6600 EV scooters from customers in April
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X