ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಒರಟು ಭೂಪ್ರದೇಶ ಹಾಗೂ ಕಠಿಣ ರಸ್ತೆಗಳಿಗಾಗಿಯೇ ಪ್ರತ್ಯೇಕವಾಗಿ ನಿರ್ಮಿಸುವ ಕೆಲ ಬೈಸಿಕಲ್ ಕಂಪನಿಗಳಲ್ಲಿ ಫೈರ್‌ಫಾಕ್ಸ್‌ ಕೂಡಾ ಒಂದು. ಇದೀಗ ಫೈರ್‌ಫಾಕ್ಸ್‌ ತನ್ನ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅದರ ವಿಶೇಷತೆಗಳು ಮತ್ತು ಆರಂಭಿಕ ಬೆಲೆಯ ವಿವರ ಇಲ್ಲಿದೆ. ಫೈರ್‌ಫಾಕ್ಸ್‌ ಹೊಸ ಶ್ರೇಣಿಯ ಬೈಸಿಕಲ್‌ಗಳನ್ನು ಕಂಪನಿಯು ವಿಶೇಷವಾಗಿ ಬೈಕ್ ಮಾದರಿಗಳೆಂದು ಕರೆಯುತ್ತದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಫೈರ್‌ಫಾಕ್ಸ್ ತನ್ನ ಪೈರೇಟ್ 3.0 ಮತ್ತು ಪೈರೇಟ್ 4.0 ಗ್ರಾವೆಲ್ ಶ್ರೇಣಿಯ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಫೈರ್‌ಫಾಕ್ಸ್ ಪ್ರಕಾರ, ಈ ಬೈಕ್‌ಗಳನ್ನು ಒರಟು ಭೂಪ್ರದೇಶ ಹಾಗೂ ಅನ್ವೇಷಣಾ ಸ್ಥಳಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಬೈಕ್‌ಗಳನ್ನು ಮಾದರಿಗಳು ಅರಾಮದಾಯಕ ಸವಾರರಿಗೆ ಪೂರಕವಾದ ಫೀಚರ್ಸ್ ನೊಂದಿಗೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಹೊಸ ಗ್ರಾವೆಲ್ ಶ್ರೇಣಿಯ ಬೈಕ್‌ಗಳಲ್ಲಿ ಪ್ರಮುಖವಾಗಿ ಡಿಸ್ಕ್ ಬ್ರೇಕ್‌ಗಳು, ವಿಶಾಲವಾದ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಅತ್ಯುತ್ತಮ ಗ್ರಿಪ್, ಔಟ್-ಫ್ರಂಟ್ ಸ್ಟೀರಿಂಗ್ ಜ್ಯಾಮಿಟ್ರಿಯನ್ನು ಸುಧಾರಿಸಲಾಗಿದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಈ ವೈಶಿಷ್ಟ್ಯಗಳ ಪೈಕಿ, ಔಟ್-ಫ್ರಂಟ್ ಸ್ಟೀರಿಂಗ್ ಜ್ಯಾಮಿಟ್ರಿಯು ರೈಡರ್‌ಗೆ ದೀರ್ಘಾವಧಿಯ ಪ್ರಯಾಣದ ಸಮಯದಲ್ಲಿ ಸೌಕರ್ಯವನ್ನು ನೀಡುತ್ತದೆ. ಜೊತೆಗೆ ದೈಹಿಕ ಶ್ರಮ ನೀಡದೆ ಹೆಚ್ಚಿನ ಏರೋಡೈನಾಮಿಕ್ ಮತ್ತು ವೇಗವನ್ನು ಪಡೆದು ಸವಾರನಿಗೆ ಬೇಕಾದ ಫಾರ್ವರ್ಡ್ ಸ್ಟಾನ್ಸ್‌ ನೀಡುತ್ತದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಒಂದು ಮಾತಲ್ಲಿ ಹೇಳಬೇಕಾದರೆ ಫೈರ್‌ಫಾಕ್ಸ್‌ ಗ್ರಾವೆಲ್ ಬೈಕ್‌ಗಳನ್ನು ಓಡಿಸುವಾಗ ವೇಗ ಮತ್ತು ಚುರುಕುತನದ ನಡುವೆ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ. ಈ ಹೊಸ ಬೈಕ್‌ನ ವಿಶಾಲವಾದ ಟೈರುಗಳು ಸಡಿಲವಾದ ಮತ್ತು ಕಡಿಮೆ ಎಳೆತದ ರಸ್ತೆ, ಜಲ್ಲಿ ರಸ್ತೆ, ಕಚ್ಚಾ ರಸ್ತೆಗಳಲ್ಲಿ ಟ್ರಯಲ್ ರನ್‌ಮಾಡುವಾಗ ಉತ್ತಮ ಎಳೆತ ಮತ್ತು ಹೆಚ್ಚು ಸ್ಥಿರತೆಯನ್ನು ಒದಗಿಸುತ್ತದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಸವಾರರಿಗೆ ಹೆಚ್ಚಿನ ಫ್ಲೆಕ್ಸಿಬಿಲಿಟಿ ನೀಡಲು, ಹೊಸ ಫೈರ್‌ಫಾಕ್ಸ್‌ ಗ್ರಾವೆಲ್ ಬೈಕ್‌ಗಳಲ್ಲಿ ಬಳಕೆದಾರರಿಗಾಗಿ 42c ವರೆಗಿನ ಟೈರ್‌ಗಳನ್ನು ಅಳವಡಿಸಲು ಹೆಚ್ಚಿನ ಕ್ಲಿಯರೆನ್ಸ್‌ ನೀಡಲಾಗಿದೆ. ಇದು ಬಹುತೇಕ ಎಲ್ಲಾ ಪರಿಸ್ಥಿತಿಗಳಲ್ಲಿ ಸವಾರರಿಗೆ ಹೆಚ್ಚಿನ ಎಳೆತ ಮತ್ತು ಸ್ಥಿರತೆಯನ್ನು ನೀಡುತ್ತದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಇವುಗಳ ಜೊತೆಗೆ, ಫೈರ್‌ಫಾಕ್ಸ್ ಗ್ರಾವೆಲ್ ಬೈಕ್‌ಗಳು ಕಡಿಮೆ ಪ್ರೊಫೈಲ್ ನಾಬ್‌ಗಳೊಂದಿಗೆ ವಿಶಿಷ್ಟವಾದ ಟೈರ್ ಟ್ರೆಡ್ ವಿನ್ಯಾಸದೊಂದಿಗೆ ಬಿಡಲಾಗಿದೆ. ಇದರ ವಿಶೇಷತೆ ಎಂದರೆ ರೋಲಿಂಗ್ ಪ್ರತಿರೋಧವನ್ನು ಕಡಿಮೆ ಮಾಡಿ ನಾಬ್ ಅಂಚುಗಳು ಸವಾರನಿಗೆ ಬೇಕಾದ ಹಿಡಿತ ಮತ್ತು ಬ್ರೇಕಿಂಗ್ ನಿಯಂತ್ರಣವನ್ನು ಒದಗಿಸುತ್ತದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಗ್ರಾವೆಲ್ ಬೈಕ್‌ಗಳು ಚೈನ್ ಸೆಟ್ ಕ್ಯಾಸೆಟ್‌ 50/34 ಜೊತೆಗೆ 11-32 ವೈಡ್ ವ್ಯಾಪ್ತಿಯನ್ನು ಹೊಂದವೆ. ಇದು ನಗರ ಪ್ರದೇಶಗಳಲ್ಲಿ ಓಡಿಸುವ ವೇಳೆ ಪ್ರಾಯೋಗಿಕ ಗೇರಿಂಗ್ ಆಯ್ಕೆಗೆ ಸಹಕಾರಿಯಾಗಿದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಒರಟು ರಸ್ತೆಗಳಿಂದ ಹಿಡಿದು ಬೀಟ್ ಟ್ರ್ಯಾಕ್‌ಗಳವರೆಗಿನ ವಿವಿಧ ಟ್ರೈಯಲ್‌ಗಳಲ್ಲಿ ವೇಗ, ದಕ್ಷತೆ ಮತ್ತು ಸೌಕರ್ಯವನ್ನು ಬಯಸುವ ಸಾಹಸಿ ಯುವಕರಿಗೆ ಈ ಬೈಕ್‌ಗಳು ಸೂಕ್ತವೆನ್ನಬಹುದು. ಇನ್ನು ಗ್ರಾಹಕರಿಗಾಗಿ ಫೈರ್‌ಫಾಕ್ಸ್ ಗ್ರಾವೆಲ್ ಬೈಕ್ ನಲ್ಲಿ ನೇರ ಹ್ಯಾಂಡಲ್‌ಬಾರ್ ಮತ್ತು ಡ್ರಾಪ್ ಹ್ಯಾಂಡಲ್‌ಬಾರ್ ಎಂಬ ಎರಡು ಆಯ್ಕೆಯಿದ್ದು ತಮಗಿಷ್ಟವಾದದನ್ನು ಆಯ್ಕೆ ಮಾಡಿಕೊಳ್ಳಬಹುದು.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಫೈರ್‌ಫಾಕ್ಸ್ ಹೊಸ ಶ್ರೇಣಿಯ ಈ ಗ್ರ್ಯಾವೆಲ್ ಬೈಕ್‌ಗಳು ಸ್ಟ್ಯಾಂಡರ್ಡ್ ರೋಡ್ ಬೈಕ್‌ಗಿಂತ ಹೆಚ್ಚು ಬಾಳಿಕೆ ಮತ್ತು ಮೌಂಟೇನ್ ಬೈಕ್‌ಗಿಂತ ವೇಗದ ಕಾರ್ಯಕ್ಷಮತೆ ಒದಗಿಸಬಲ್ಲವು ಎಂದು ಕಂಪನಿ ತಿಳಿಸಿದೆ. ಹೊಸದಾಗಿ ಬಿಡುಗಡೆಯಾದ ಫೈರ್‌ಫಾಕ್ಸ್ ಗ್ರಾವೆಲ್ ಬೈಕ್ ಶ್ರೇಣಿಯ ಬೆಲೆ ರೂ. 37 ಸಾವಿರದಿಂದ ಪ್ರಾರಂಭವಾಗುತ್ತದೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

'ಈ ಬೈಕ್‌ಗಳನ್ನು ಮಾರುಕಟ್ಟೆಗೆ ತರಲು ನಾವು ಥ್ರಿಲ್ ಆಗಿದ್ದೇವೆ. ಗ್ರ್ಯಾವೆಲ್ ಬೈಕ್‌ಗಳ ಬಿಡುಗಡೆಯೊಂದಿಗೆ, ಪ್ರೀಮಿಯಂ ಬೈಕಿಂಗ್ ವಿಭಾಗದಲ್ಲಿ ಕಂಪನಿಯನ್ನು ಮತ್ತಷ್ಟು ಬಲಪಡಿಸುವ ಗುರಿಯಿದೆ. ಪರ್ವತಗಳಿಂದ ಹಿಡಿದು ಟಾರ್ಮ್ಯಾಕ್‌ವರೆಗೆ ಅನ್ವೇಷಿಸುವ ಮನಸ್ಥಿತಿಯಿರುವ ಗ್ರಾಹಕರಿಗೆ ಈ ಬೈಕ್‌ಗಳು ಸೂಕ್ತವಾಗಿವೆ. ನಮ್ಮ ಹೊಸ ಶ್ರೇಣಿಯೊಂದಿಗೆ ಗ್ರಾಹಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದ್ದೆವೆ ಎಂದು ಫೈರ್‌ಫಾಕ್ಸ್ ಕಂಪನಿಯ ಸಿಇಒ ಶ್ರೀರಾಮ್ ಸುಂದ್ರೇಶನ್ ತಿಳಿಸಿದ್ದಾರೆ.

ಅತ್ಯುತ್ತಮ ವಿನ್ಯಾಸದ ಫೈರ್‌ಫಾಕ್ಸ್‌ ಗ್ರಾವೆಲ್ ಶ್ರೇಣಿಯ ಬೈಸಿಕಲ್ ಬಿಡುಗಡೆ

ಪ್ರಸ್ತುತ ಫೈರ್‌ಫಾಕ್ಸ್ ಬೈಕ್‌ಗಳನ್ನು ಪ್ರೀಮಿಯಂ ಬೈಸಿಕಲ್ ವಿಭಾಗ ಹಾಗೂ ಕಂಪನಿಯ ವ್ಯವಹಾರ ಮಾದರಿ D2C (ನೇರ-ಗ್ರಾಹಕರಿಗೆ) ಸಂಯೊಜನೆಯಲ್ಲಿ ದೇಶಾದ್ಯಂತ ಆಫ್‌ಲೈನ್ ನೆಟ್‌ವರ್ಕ್ ಮೂಲಕ ಒದಗಿಸಲಾಗುತ್ತಿದೆ. ಅಂದರೆ ಪ್ರತಿ ಆನ್‌ಲೈನ್ ಖರೀದಿಯನ್ನು ಕಸ್ಟಮೈಸ್ ಮಾಡಿದ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ERP) ಸಿಸ್ಟಮ್ ಮೂಲಕ ಆಫ್‌ಲೈನ್‌ನಲ್ಲಿ ಡೀಲರ್‌ಗೆ ಮ್ಯಾಪ್ ಮಾಡಲಾಗುತ್ತದೆ.

ಫೈರ್‌ಫಾಕ್ಸ್ ಗ್ರ್ಯಾವೆಲ್ ಶ್ರೇಣಿಯ ಬೈಕ್ ರೂ. 37,900 ಆರಂಭಿಕ ಬೆಲೆಯಾಗಿದ್ದು, ಇದು ಇತರೆ ಬೈಸಿಕಲ್‌ ಗಿಂತಲೂ ಹೆಚ್ಚಿನ ಪರ್ಫಾಮೆನ್ಸ್‌ ನೀಡಲಿದೆ. ಒರಟಾದ ಭೂಪ್ರದೇಶಗಳನ್ನು ನಿಭಾಯಿಸಲು ಮತ್ತು ಸುಗಮ ಟ್ರ್ಯಾಕ್‌ಗಳಲ್ಲಿ ಉತ್ತಮ ಸವಾರಿ ಮಾಡಲು ವಿನ್ಯಾಸಗೊಳಿಸಲಾಗಿದೆ.

Article Published On: Thursday, February 24, 2022, 21:04 [IST]
English summary
Firefox gravel range launched in india prices start from rs 37 900 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+