ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಉತ್ತಮ ಹೆಸರು ಮಾಡಿರುವ ಎಥರ್ ಎನರ್ಜಿ, ಇತ್ತೀಚೆಗೆ ಬಿಡುಗಡೆ ಮಾಡಿದ್ದ 450X Gen 3 ಮತ್ತು 450 Plus Gen 3 ಇ-ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೊಸ ಉತ್ಪಾದನಾ ಸ್ಥಾವರದ ನಿರ್ಮಾಣಕ್ಕೆ ಯೋಜಿಸಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಎಥರ್ ಎನರ್ಜಿ ತನ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಈ ವರ್ಷದ ಅಂತ್ಯದ ವೇಳೆಗೆ ವಾರ್ಷಿಕವಾಗಿ ಒಂದರಿಂದ ನಾಲ್ಕು ಲಕ್ಷ ಯೂನಿಟ್‌ಗಳನ್ನು ಉತ್ಪಾದಿಸಲು ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಹೊಸೂರಿನ EV ತಯಾರಕರ ಎರಡನೇ ಉತ್ಪಾದನಾ ಸೌಲಭ್ಯವು ಪ್ರಸ್ತುತ ಇರುವ ಸೌಲಭ್ಯಕ್ಕೆ ಅನುಗುಣವಾಗಿರಲಿದೆ. ಈ ವರ್ಷದ ಕೊನೆಯಲ್ಲಿ ನಿಗದಿಪಡಿಸಲಾದ ಯೂನಿಟ್‌ಗಳನ್ನು ಉತ್ಪಾದಿಸಲು ಇದು ಸಹಕಾರಿಯಾಗಲಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಪ್ರಸ್ತುತ ಹೊಸೂರಿನಲ್ಲಿರುವ ಎಥರ್‌ನ ಮೊದಲ ಉತ್ಪಾದನಾ ಘಟಕವು ವರ್ಷಕ್ಕೆ ಒಂದು ಲಕ್ಷ ಯುನಿಟ್‌ಗಳನ್ನು ಹೊರತರುವ ಸಾಮರ್ಥ್ಯವನ್ನು ಹೊಂದಿದೆ. ಆದಾರೂ ವಾಸ್ತವವಾಗಿ ವ್ಯವಸ್ಥಾಪನ ಮತ್ತು ಪೂರೈಕೆ ಸರಪಳಿ ಅಡ್ಡಿ ಸಮಸ್ಯೆಗಳಿಂದಾಗಿ ಸೌಲಭ್ಯವು ವಾರ್ಷಿಕವಾಗಿ ಸುಮಾರು 10,000 ಘಟಕಗಳನ್ನು ಮಾತ್ರ ಉತ್ಪಾದಿಸುತ್ತಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಇನ್ನು ಎರಡನೇ ಸ್ಥಾವರದ ನಿರ್ಮಾಣದ ನಂತರ ಮೂರನೇ ಸೌಲಭ್ಯವನ್ನು ಸ್ಥಾಪಿಸಲು ಎಥರ್ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಇದರೊಂದಿಗೆ EV ತಯಾರಕರು ತಮ್ಮ ಉತ್ಪಾದನೆಯನ್ನು ವರ್ಷಕ್ಕೆ 14 ಲಕ್ಷ ಯುನಿಟ್‌ಗಳಿಗೆ ಹೆಚ್ಚಿಸಲು ಯೋಜಿಸುತ್ತಿದ್ದಾರೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಸದ್ಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಕಂಪನಿಯು ಹೆಚ್ಚು ಮೈಲೇಜ್ ಪ್ರೇರಿತ 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳನ್ನು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಹೊಸ ಮಾದರಿಗಳು ಹೊಸ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿವೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಹೊಸ ಫೀಚರ್ಸ್‌ಗಳ ಹೊರತಾಗಿಯೂ ಸುಧಾರಿತ ತಂತ್ರಜ್ಞಾನ ಪ್ರೇರಿತ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಈ ಹಿಂದಿನ ಮಾದರಿಯಲ್ಲಿನ ಹಲವು ಫೀಚರ್ಸ್‌ಗಳನ್ನು ಮುಂದುವರಿಸಿದ್ದು, ದೊಡ್ಡ ಬ್ಯಾಟರಿ ಪ್ಯಾಕ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ನವೀಕೃತ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್‌‌ಗಳಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 3.7kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, 6.2kW ಮೋಟಾರ್ ಮೂಲಕ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಇದೀಗ ಹೊಸ ಸ್ಕೂಟರ್‌ಗಳು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 146 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಸುಧಾರಿತ ಬ್ಯಾಟರಿ ಜೋಡಣೆ ನಂತರ ಹೊಸ ಸ್ಕೂಟರ್‌ಗಳ ತೂಕದಲ್ಲಿ ಈ ಮೊದಲಿಗಿಂತಲೂ ಇದೀಗ 4 ಕೆ.ಜಿಯಷ್ಟು ಹೆಚ್ಚಳವಾಗಿದ್ದು, ಪ್ರಮುಖ ನಾಲ್ಕು ರೈಡ್ ಮೋಡ್‌ಗಳೊಂದಿಗೆ ಇಕೋ ಮೋಡ್‌ನಲ್ಲಿ ಕನಿಷ್ಠ 105 ಕಿ.ಮೀ ರಿಯಲ್ ವರ್ಲ್ಡ್ ಮೈಲೇಜ್ ಪಡೆದುಕೊಳ್ಳಬಹುದಾಗಿ ಕಂಪನಿಯು ಭರವಸೆ ನೀಡಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಹೊಸ ಇವಿ ಸ್ಕೂಟರ್ ಮಾದರಿಗಳಲ್ಲಿನ ಕನೆಕ್ಟೆಡ್ ಸೌಲಭ್ಯಗಳನ್ನು ಮತ್ತಷ್ಟು ಸುಧಾರಣೆಗೊಳಿಸಲು ಎಥರ್ ಕಂಪನಿಯು ಹೆಚ್ಚುವರಿ ಸ್ಟೋರೆಜ್ ನೀಡಲು 2 ಜಿಬಿ ರ‍್ಯಾಮ್ ಜೋಡಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಹೊಸ ಮಾದರಿಗಳಲ್ಲಿನ ಹಲವಾರು ಹೊಸ ಫೀಚರ್ಸ್‌ಗಳನ್ನು ಓವರ್-ದ-ಏರ್ ಅಪ್‌ಡೇಟ್ ಮೂಲಕ ಒಂದೊಂದಾಗಿ ಅನ್‌ಲಾಕ್ ಮಾಡಲಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಬುಕಿಂಗ್ ಪ್ರಕ್ರಿಯೆ

ಎಥರ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಗಳಿಗಾಗಿ ಈಗಾಗಲೇ ಅಧಿಕೃತ ಬುಕಿಂಗ್ ಸ್ವಿಕರಿಸುತ್ತಿದ್ದು, ಬುಕಿಂಗ್ ಮಾಡಲಾದ ಗ್ರಾಹಕರಿಗೆ ಈಗಾಗಲೇ ಹಂತ-ಹಂತವಾಗಿ ಟೆಸ್ಟ್ ರೈಡ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎನ್ನಲಾಗಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಟೆಸ್ಟ್ ರೈಡ್ ಪ್ರಕ್ರಿಯೆ ನಂತರ ಖರೀದಿಗಾಗಿ ಒಪ್ಪಿಗೆ ಸೂಚಿಸುವ ಗ್ರಾಹಕರಿಗೆ ಈ ತಿಂಗಳಾಂತ್ಯಕ್ಕೆ ಹೊಸ ಸ್ಕೂಟರ್‌ಗಳು ವಿತರಣೆಗೊಳ್ಳಲಿದ್ದು, ಹೊಸ ಮಾದರಿಗಳ ಮೂಲಕ ಕಂಪನಿಯು ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಸದ್ಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯೊಂದಿಗೆ ಓಲಾ ಎಸ್‍1 ಪ್ರೊ, ಟಿವಿಎಸ್ ಐಕ್ಯೂಬ್ ವಿಸ್ತರಿತ ರೇಂಜ್ ವರ್ಷನ್‌ಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪ್ರೀಮಿಯಂ ಫೀಚರ್ಸ್‌ನೊಂದಿಗೆ ಹೊಸ ಇವಿ ಸ್ಕೂಟರ್‌ಗಳು ಎಥರ್ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ವಿಸ್ತರಿತ ಮೈಲೇಜ್ ಪ್ರೇರಿತ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್‌ ಮಾದರಿಗಳು ಪ್ರಸ್ತುತ ಮಾದರಿಗಿಂತ ರೂ. 4 ಸಾವಿರದಿಂದ ರೂ. 5,500 ರಷ್ಟು ದುಬಾರಿಯಾಗಲಿದ್ದು, ಬೆಲೆ ದುಬಾರಿಯಾದರೂ ಹೊಸ ಮಾದರಿಗಳಲ್ಲಿ ಹಲವಾರು ಹೊಸ ಫೀಚರ್ಸ್ ನೀಡುತ್ತಿರುವುದು ಖರೀದಿ ಮೌಲ್ಯ ಹೆಚ್ಚಿಸಿದೆ.

ಎಥರ್ ಗ್ರಾಹಕರಿಗೆ ಶುಭಸುದ್ದಿ: ನಿರೀಕ್ಷೆಗೂ ಮುಂಚಿತವಾಗಿ ಗ್ರಾಹಕರಿಗೆ ತಲುಪಲಿದೆ ಹೊಸ ಎಥರ್ 450X

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಥರ್ ಕಂಪನಿಗೆ ದಿನದಿಂದ ದಿನಕ್ಕೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಪನಿಯು ಹೊಸ ಉತ್ಪನ್ನಗಳೊಂದಿಗೆ ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ಪ್ರಮುಖ ನಗರಗಳಿಗೆ ವಿಸ್ತರಿಸುವ ಯೋಜನೆಯಲ್ಲಿದೆ. ಜೂನ್ 2022 ರಲ್ಲಿ 3,190 ಯುನಿಟ್‌ಗಳು ಮಾರಾಟವಾಗುವುದರೊಂದಿಗೆ 450X' ಮಾರಾಟದ ಅಂಕಿಅಂಶಗಳಲ್ಲಿ ಉತ್ತಮ ಏರಿಕೆ ಕಂಡಿದೆ. ಕುತೂಹಲಕಾರಿಯಾಗಿ ಹಿಂದಿನ ತಿಂಗಳಲ್ಲಿ ಉತ್ಪಾದಿಸಲಾದ ಎಲ್ಲಾ ಘಟಕಗಳು ಕೂಡ ಮಾರಾಟವಾಗಿವೆ.

More from DriveSpark

Article Published On: Friday, July 29, 2022, 16:27 [IST]
English summary
Good news for Ather customers The new Ether 450X will arrive earlier than expected
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+