ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2022ರ ಫೆಬ್ರವರಿ ತಿಂಗಳ ಮಾಸಿಕ ಮಾರಾಟದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಒಟ್ಟಾರೆ 3,58,254 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 5,05,467 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಹೀರೋ ಮೊಟೊಕಾರ್ಪ್ ಕಳೆದ ತಿಂಗಳು 19,800 ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಮಾರಾಟವಾಗಿದ್ದ 41,744 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 52.56 ರಷ್ಟು ಕುಸಿತ ಕಂಡಿದೆ. ಇನ್ನು ದೇಶೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಕಂಪನಿಯು ಫೆಬ್ರವರಿ 2022 ರಲ್ಲಿ 3,31,462 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಒಂದು ವರ್ಷದ ಹಿಂದೆ ಮಾರಾಟವಾದ 4,84,433 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 31.57 ರಷ್ಟು ಕುಸಿತವನ್ನು ದಾಖಲಿಸಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ರಫ್ತಿನ ವಿಭಾಗದಲ್ಲಿ ಕಳೆದ ತಿಂಗಳು ಹೀರೋ ಮೊಟೊಕಾರ್ಪ್ ಕಂಪನಿಯು 26,792 ಯುನಿಟ್‌ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ 21,034 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.27.34 ರಷ್ಟು ಏರಿಕೆಯಾಗಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಕಂಪನಿಯು ತನ್ನ ಹೇಳಿಕೆಯಲ್ಲಿ, ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಕುಸಿತದೊಂದಿಗೆ ಮತ್ತು ಆರ್ಥಿಕತೆಯು ಲಾಕ್‌ಡೌನ್ ನಿರ್ಬಂಧಗಳನ್ನು ಸರಾಗಗೊಳಿಸುವ ಮತ್ತು ಫೈನಾನ್ಸ್ ವರ್ಷದಲ್ಲಿ ಘೋಷಿಸಲಾದ ಕ್ರಮಗಳಂತಹ ಹಲವಾರು ಸಕಾರಾತ್ಮಕ ಸೂಚಕಗಳೊಂದಿಗೆ ಕ್ರಮೇಣ ತೆರೆದುಕೊಳ್ಳುತ್ತಿದೆ" 23 ಯೂನಿಯನ್ ಬಜೆಟ್, ಮುಂಬರುವ ತಿಂಗಳುಗಳಲ್ಲಿ ಮಾರಾಟದಲ್ಲಿ ತ್ವರಿತ ಪುನರುಜ್ಜೀವನವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಮಾರ್ಚ್ 8 ರಂದು ಆಚರಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಮುಖ ವಾಹನ ಕಂಪನಿಗಳು ಮಹಿಳಾ ಗ್ರಾಹಕರನ್ನು ಆಕರ್ಷಿಸಲು ಹಲವಾರು ವಿಶೇಷ ಕೊಡುಗೆಗಳನ್ನು ಘೋಷಿಸಿದ್ದರು. ಅದರಂತೆ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಹೀರೊ ಮೋಟೋಕಾರ್ಪ್ ಕೂಡ ಮಹಿಳಾ ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ಕೊಡುಗೆಗಳನ್ನು ನೀಡಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಮಹಿಳಾ ಗ್ರಾಹಕರನ್ನು ಆಕರ್ಷಿಸಲು ಕಂಪನಿಯು ವಿಶೇಷ ಬೋನಸ್ ಕೊಡುಗೆಯನ್ನು ಘೋಷಿಸಿದೆ. ರೂ.10,000 ಹಾಗೂ ರೂ.6,000 ಮೌಲ್ಯದ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ಘೋಷಿಸಿದೆ. ಈ ಆಫರ್ ಅನ್ನು ಸ್ಕೂಟರ್‌ಗಳಿಗೆ ಮಾತ್ರ ನೀಡಲಾಗಿದ್ದು, ಮಹಿಳಾ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ಎಲ್ಲಾ ಸ್ಕೂಟರ್ ಮಾದರಿಗಳಿಗೆ ರೂ.4,000 ನಗದು ಬೋನಸ್ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಇದಲ್ಲದೆ, ವಿನಿಮಯ ಮತ್ತು ಕನಿಷ್ಠ ಬೋನಸ್ ಆಗಿ ಡೆಸ್ಟಿನಿ 125 ಸ್ಕೂಟರ್‌ಗೆ ರೂ.2,000 ವರೆಗೆ ನೀಡಲಾಗುವುದು ಎಂದು ಹೀರೊ ಮೋಟೋಕಾರ್ಪ್ ಘೋಷಿಸಿದೆ. ಈ ಆಫರ್ ಅನ್ನು ಮಾರ್ಚ್ 11ರ ವರೆಗೆ ಮಾತ್ರ ಪಡೆಯಬಹುದಾಗಿದೆ. ಮಹಿಳೆಯರ ಹೆಸರಿನಲ್ಲಿ ತೆಗೆದುಕೊಂಡರೆ ಮಾತ್ರ ಈ ಆಫರ್ ಪಡೆಯಬಹುದು.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಇದರ ಭಾಗವಾಗಿ ಹೀರೋ ಮೋಟೋಕಾರ್ಪ್ ಬಹು ಮಾದರಿ ದ್ವಿಚಕ್ರ ವಾಹನಗಳನ್ನು ಮಾರಾಟಕ್ಕೆ ನೀಡುತ್ತಿದೆ. ಇದು ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳಂತಹ ದ್ವಿಚಕ್ರ ವಾಹನ ವಿಭಾಗದಲ್ಲಿ ಹೆಚ್ಚಿನ ಆಯ್ಕೆಗಳನ್ನು ಸಹ ನೀಡುತ್ತಿದೆ. ಅದರಂತೆ, ಹೀರೊ ಬ್ಲಷರ್, ಮ್ಯಾಸ್ಟ್ರೋ ಎಡ್ಜ್‌ 110, ಡೆಸ್ಟಿನಿ 125 ಮತ್ತು ಮ್ಯಾಸ್ಟ್ರೋ ಎಡ್ಜ್‌125 ನಂತಹ ಸ್ಕೂಟರ್ ಮಾದರಿಗಳಿಗೆ ಈ ಆಫರ್‌ ನೀಡಲಾಗಿದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್, 50 ಹೀರೋ ಸ್ಕೂಟರ್‌ಗಳು ಮತ್ತು 500 ಹೆಲ್ಮೆಟ್‌ಗಳನ್ನು ನಾಗ್ಪುರ ಪೊಲೀಸ್ ಕಮಿಷನರೇಟ್ (NMC) ಮತ್ತು ಅಗ್ನಿಶಾಮಕ ಇಲಾಖೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಸ್ತಾಂತರಿಸಿದೆ. ಈ ಹೀರೋ ಸ್ಕೂಟರ್‌ಗಳು ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಮತ್ತು ವೇಗವಾಗಿ ಸೇವೆಗಳನ್ನು ಒದಗಿಸಲು ಸಹಾಯವಾಗುತ್ತದೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಇದರಿಂದಾಗಿ ನಾಗಪುರದ ನಾಗರಿಕರಿಗೆ - ವಿಶೇಷವಾಗಿ ಮಹಿಳೆಯರಿಗೆ ಉತ್ತಮ ಭದ್ರತೆಯನ್ನು ಒದಗಿಸಲು ಸಹಾಯ ಮಾಡುತ್ತವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರ ಸಮ್ಮುಖದಲ್ಲಿ ಹೀರೋ ಮೋಟೋಕಾರ್ಪ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಕ್ರಮ್ ಕಸ್ಬೇಕರ್ ಅವರು ಪೊಲೀಸ್ ಕಮಿಷನರೇಟ್ ಮತ್ತು ಅಗ್ನಿಶಾಮಕ ಇಲಾಖೆಗೆ ಸ್ಕೂಟರ್ ಗಳನ್ನು ಹಸ್ತಾಂತರಿಸಿದರು. ಹೀರೋ ಸ್ಕೂಟರ್‌ಗಳು ಸೈರನ್‌ಗಳು, ಧ್ವನಿವರ್ಧಕಗಳು ಮತ್ತು ಇತರ ಅಗತ್ಯ ಪೊಲೀಸ್ ಪರಿಕರಗಳನ್ನು ಹೊಂದಿದ್ದು, ನಗರದಲ್ಲಿನ ಅಧಿಕಾರಿಗಳಿಗೆ ತಮ್ಮ ಗಸ್ತು ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರ ನೀಡುತ್ತವೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಇನ್ನು ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಬ್ರ್ಯಾಂಡ್ ವಿಡಾ ತೆರೆದಿದೆ. ಹೊಸ ವಿಡಾ ಬ್ರಾಂಡ್ ಕುರಿತಾಗಿ ಹೀರೋ ಮೋಟೊಕಾರ್ಪ್ ಕಂಪನಿಯ ಅಧ್ಯಕ್ಷರೇ ಮಾಹಿತಿ ಹಂಚಿಕೊಂಡಿದ್ದಾರೆ. ಹೀರೋ ಮೋಟೊಕಾರ್ಪ್ ಕಂಪನಿಯ ಅಧ್ಯಕ್ಷ ಡಾ. ಪವನ್ ಮುಂಜಾಲ್ ಅವರು ಬ್ರ್ಯಾಂಡ್‌ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆ ವಿಡಾ ಬ್ರಾಂಡ್ ಲೋಗೋವನ್ನು ಬಹಿರಂಗಪಡಿಸಿದೆ. ಶೀಘ್ರದಲ್ಲೇ ಹೊಸ ಬ್ರಾಂಡ್ ಅಡಿ ಅಭಿವೃದ್ದಿಗೊಳ್ಳುತ್ತಿರುವ ಇವಿ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸುವ ಸುಳಿವು ನೀಡಿದ್ದಾರೆ.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಇನ್ನು ಎಲೆಕ್ಟ್ರಿಕ್ ವಾಹನಗಳಿಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯ ಅಡಿ ಪ್ರತ್ಯೇಕ ಇವಿ ಬ್ರಾಂಡ್ ಅಭಿವೃದ್ದಿಗೊಳಿಸಲಾಗುತ್ತಿದ್ದು, ವಿಡಾ ಬ್ರಾಂಡ್ ಅಡಿ ಕಂಪನಿಯು ಪ್ರಮುಖ ಇವಿ ದ್ವಿಚಕ್ರವಾಹನಗಳನ್ನು ಹೊರತರಲಿದೆ. 2022ರ ಜುಲೈ 1 ರಂದು ವಿಡಾ ಬ್ರ್ಯಾಂಡ್ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಹೊಸ ಬ್ರಾಂಡ್ ಬಿಡುಗಡೆಯ ಹೊರತಾಗಿ ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ 100 ಮಿಲಿಯನ್ ಡಾಲರ್ ಜಾಗತಿಕ ಸುಸ್ಥಿರತೆ ನಿಧಿ ಘೋಷಿಸಿದರು.

ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಹೀರೋ ಮೋಟೊಕಾರ್ಪ್

ಹೀರೋ ಮೊದಲ ಇವಿ ಸ್ಕೂಟರ್ ಸಹಭಾಗೀತ್ವ ಕಂಪನಿಯಾಗಿರುವ ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ವಿವಾ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲೂ ಹೊಸ ವಾಹನ ಬಿಡುಗಡೆಗಾಗಿ ನೋಂದಣಿ ಕೂಡಾ ಮಾಡಲಾಗಿದೆ. ಈ ಹೊಸ ಮಾದರಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

Most Read Articles

Kannada
English summary
Hero motocorp february 2022 sales drop by 29 12 percent details
Story first published: Thursday, March 10, 2022, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X