ಎಕ್ಸ್‌ಪಲ್ಸ್ 200 2V ಬೈಕಿನ ಹೆಸರನ್ನು ವೆಬ್‌ಸೈಟ್‌ನಿಂದ ಕೈಬಿಟ್ಟ ಹೀರೋ ಮೋಟೋಕಾರ್ಪ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ ಎಕ್ಸ್‌ಪಲ್ಸ್ 200 2V (Hero Xpulse 200) ಹೆಸರನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಈ ಹೀರೋ ಎಕ್ಸ್‌ಪಲ್ಸ್ 200 2V ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತವಾಗಬಹುದು ಎಂಬ ವದಂತಿಗಳಿವೆ.

ಈ ಹೀರೋ ಎಕ್ಸ್‌ಪಲ್ಸ್ 200 2V ಬೈಕ್ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಹೀರೋ ಎಕ್ಸ್‌ಪಲ್ಸ್ 200 2V ಬೆಲೆಯು 1.27 ಲಕ್ಷ ರೂಪಾಯಿಗಳಾಗಿದ್ದು, ಇದು 200 4V ಗಿಂತ 10,000 ರೂಪಾಯಿ ಹೆಚ್ಚು ಕೈಗೆಟುಕುವ ಬೆಲೆಯ 1.37 ಲಕ್ಷ ರೂಪಾಯಿ ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೀರೋ ಎಕ್ಸ್‌ಪಲ್ಸ್ 200 ಭಾರತದಲ್ಲಿ ಮಾರಾಟದಲ್ಲಿರುವ ಅತ್ಯಂತ ಕೈಗೆಟುಕುವ ಅಡ್ವೆಂಚರ್ ಟೂರಿಂಗ್ ಬೈಕ್ ಆಗಿದೆ. ಅದಕ್ಕಾಗಿಯೇ ಇದು ಯುವ ಉತ್ಸಾಹಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಎಕ್ಸ್‌ಪಲ್ಸ್ 200 2V ಬೈಕಿನ ಹೆಸರನ್ನು ವೆಬ್‌ಸೈಟ್‌ನಿಂದ ಕೈಬಿಟ್ಟ ಹೀರೋ ಮೋಟೋಕಾರ್ಪ್

ಈ ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ 199 ಸಿಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 18.8 ಬಿಹೆಚ್‌ಪಿ ಪವರ್ ಮತ್ತು 17.35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಈ ಬೈಕಿನಲ್ಲಿ ಏರ್/ಆಯಿಲ್-ಕೂಲಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಹಿಂದಿನ ಮಾದರಿಗಿಂತ ತೂಕ ಹೆಚ್ಚಾಗಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 ಬೈಕ್ 157 ಕೆಜೆ ತೂಕವನ್ನು ಹೊಂದಿದೆ.

ಇನ್ನು ಈ ಈ ಹೀರೋ ಎಕ್ಸ್‌ಪಲ್ಸ್ 200 ಬೈಕಿನಲ್ಲಿ ಎಕ್ಸಾಸ್ಟ್ ಪೈಪಿನ ಸ್ಥಾನವನ್ನು ಬದಲಾಯಿಸಲಾಗಿದೆ. ಈ ಬೈಕಿನ ಎಂಜಿನ್ ಬೆಲ್ಲಿ-ಪ್ಯಾನ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಬಿಎಸ್-6 ಎಕ್ಸ್‌ಪಲ್ಸ್ ಮೊದಲಿನಂತೆಯೇ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಲಾಂಗ್-ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಕ್ಸ್‌ಪಲ್ಸ್ 200 ಬೈಕಿನಲ್ಲಿ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಟೈಲ್‌ಲೈಟ್, ಬ್ಲೂಟೂತ್ ಕನೆಕ್ಟ್ ಆಗಿರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಎಕ್ಸ್‌ಪಲ್ಸ್ 200 ಬೈಕ್ ವೈಟ್, ಮ್ಯಾಟ್ ಗ್ರೀನ್, ಮ್ಯಾಟ್ ಗ್ರೇ, ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಇನ್ನು ಹೀರೋ ಮೋಟೋಕಾರ್ಪ್ ಕಂಪನಿಯು ಕಳೆದ ವರ್ಷ ಫೆಬ್ರವರಿಯಲ್ಲಿ ಹೀರೋ ಕನೆಕ್ಟ್ ಎಂಬ ತನ್ನ ಕನೆಕ್ಟಿವಿಟಿ ಫೀಚರ್ ಅನ್ನು ಪರಿಚಯಿಸಿತ್ತು. ಹೀರೋ ಕನೆಕ್ಟಿವಿಟಿ ಫೀಚರ್ಸ್ ದ್ವಿಚಕ್ರ ವಾಹನಗಳ ಮಾರಾಟವನ್ನು ಹೆಚ್ಚಿಸಲು ನೆರವಾಗಿದೆ. ಕನೆಕ್ಟಿವಿಟಿ ಫೀಚರ್ ಆಯ್ದ ನಗರಗಳಲ್ಲಿನ ಡೀಲರ್‌ಶಿಪ್‌ಗಳಲ್ಲಿ ಇದು ಲಭ್ಯವಿತ್ತು. ಇದೇ ರೀತಿ ಹೀರೋ ಕನೆಕ್ಟ್ ಹಲವಾರು ಕನೆಕ್ಟಿವಿಟಿ ಫೀಚರ್ಸ್ ಗಳನ್ನು ನೀಡುತ್ತದೆ. ಅದರಂತೆ ಎಕ್ಸ್‌ಪಲ್ಸ್ 200 ಬೈಕಿಗೆ ಟಾಪ್ಲ್ ಅಲರ್ಟ್ ಫೀಚರ್ ಅನ್ನು ನೀಡಲಾಗಿದೆ.

ಇದು ಬೈಕ್ ಉರುಳಿದಲ್ಲಿ ಆಟೋಮ್ಯಾಟಿಕ್ ಅಪ್ಲಿಕೇಶನ್ ನೋಟಿಫಿಕೇಶನ್ ಕಳುಹಿಸಿ ಮತ್ತು ಎಸ್‌ಎಂಎಸ್ ಅನ್ನು ತುರ್ತು ಸಂಪರ್ಕಗಳಿಗೆ ಕಳುಹಿಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಟಿಫಿಕೇಶನ್ ಅನ್ನು ಕಳುಹಿಸಲಾಗುತ್ತದೆ. ವಾಹನ ಉರುಳಿಬಿದ್ದಾಗ ಬಳಕೆದಾರರು ತಮಗೆ ನೋಟಿಫಿಕೇಶನ್ ಗಾಗಿ ತುರ್ತು ಸಂಪರ್ಕಗಳನ್ನು ಆಯ್ಕೆ ಮಾಡಬಹುದು. ಅಪಘಾತದ ಸಂದರ್ಭದಲ್ಲಿ ಸಕಾಲಿಕ ವೈದ್ಯಕೀಯ ಸಹಾಯವು ನಿರ್ಣಾಯಕವಾಗಿರುವುದರಿಂದ ಈ ಫೀಚರ್ ಜೀವ ರಕ್ಷಕವಾಗಬಹುದು. ವಾಹನ ಉರುಳಿ ಬಿದ್ದಾಗ ನೋಟಿಫಿಕೇಶನ್ ಸ್ವೀಕರಿಸಿದ ನಂತರ, ತುರ್ತು ಸಂಪರ್ಕಗಳು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಬಹುದು .

ಹೀರೋ ಮೋಟೋಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 ಬೈಕಿನ 4ವಿ ರೂಪಾಂತರವನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ, ಈ ಹೀರೋ ಎಕ್ಸ್‌ಪಲ್ಸ್ 200 4ವಿ ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ. ಈ ಹೊಸ ಬೈಕ್ ಕೈಗೆಟುಕುವ ಬೆಲೆಯನ್ನು ಹೊಂದಿದೆ. ಇನ್ನು ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಮೇಲಿನ ವಿಭಾಗದಲ್ಲಿ ಗಣನೀಯವಾಗಿ ಹೆಚ್ಚಿನ ಬೆಲೆಯನ್ನು ಹೊಂದಿರುವುದರಿಂದ ಇದು ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ.

ಹೀರೋ ಎಕ್ಸ್‌ಪಲ್ಸ್ 200 ಕಡಿಮೆ ತೂಕ ಮತ್ತು ವೇಗದ ಆಫ್-ರೋಡ್ ಸಾಮರ್ಥ್ಯದೊಂದಿಗೆ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ. ಹೀರೋ ಮೋಟೋಕಾರ್ಪ್ ಎಕ್ಸ್‌ಪಲ್ಸ್ 200 ಅನ್ನು ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡಲು ನವೀಕರಿಸಿದೆ, ಜೊತೆಗೆ ಎಕ್ಸ್‌ಪಲ್ಸ್ 200 4ವ್ಯಾಲ್ಸ್ ಹೊಸ ಮನವಿಯೊಂದಿಗೆ ಪರಿಚಯಿಸಲು ಸಣ್ಣ ನವೀಕರಣಗಳನ್ನು ನಡೆಸಿದೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಅಲ್ಲದೇ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಕ್ಸ್‌ಪಲ್ಸ್ 200 4ವಿ ಬೈಕ್ ಭಾರತದ ಹೆಚ್ಚಿನ ಆಫ್-ರೋಡ್ ಪ್ರೇಮಿಗಳನ್ನು ಈ ಬೈಕ್ ಸೆಳಯುತ್ತಿದೆ.

Article Published On: Thursday, December 15, 2022, 13:53 [IST]
English summary
Hero motocorp removed xpulse 200 2v in india website details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+