Just In
- 59 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- News
ಆಗಸ್ಟ್ 17ರಂದು ಭಾರತದ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಸೆಕೆಂಡ್ ಹ್ಯಾಂಡ್ ಬೈಕ್‌ಗಳ ಮೌಲ್ಯಮಾಪನಕ್ಕಾಗಿ 'ವೀಲ್ಸ್ ಆಫ್ ಟ್ರಸ್ಟ್' ಪರಿಚಯಿಸಿದ ಹೀರೋ ಮೋಟೊಕಾರ್ಪ್
ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಹೀರೋ ಮೋಟೋಕಾರ್ಪ್ ಇದೀಗ ಬಳಸಿದ ದ್ವಿಚಕ್ರ ವಾಹನ ವಿಭಾಗಕ್ಕೂ ಲಗ್ಗೆಯಿಟ್ಟಿದ್ದು, ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರಾಟ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಹೊಸ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಿದೆ.

ದ್ವಿಚಕ್ರ ವಾಹನಗಳ ಮರುಮಾರಾಟ ವಿಭಾಗವನ್ನು ಬಲಪಡಿಸಲು ಕಂಪನಿಯು ವೀಲ್ಸ್ ಆಫ್ ಟ್ರಸ್ಟ್ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಿದ್ದು, ಇದು ಇದೀಗ ಡಿಜಿಟಲ್ ಮತ್ತು ಆನ್-ಗ್ರೌಂಡ್ ಸೌಲಭ್ಯದೊಂದಿಗೆ ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ.

ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಕೇವಲ 30 ಸೆಕೆಂಡುಗಳಲ್ಲಿ ಬಳಸಿದ ದ್ವಿಚಕ್ರ ವಾಹನದ ಮೌಲ್ಯವನ್ನು ತಿಳಿಯಬಹುದಾಗಿದ್ದು, ಅತ್ಯುತ್ತಮ ಮರುಮಾರಾಟ ಮೌಲ್ಯವನ್ನು ಒದಗಿಸುವ ಮೂಲಕ ಅಸ್ತಿತ್ವದಲ್ಲಿರುವ ತನ್ನ ಹೊಸ ದ್ವಿಚಕ್ರ ವಾಹನಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ತನ್ನ ಏಕ-ನಿಲುಗಡೆ ಪರಿಹಾರವನ್ನು ಒದಗಿಸುತ್ತಿದೆ.

ವೀಲ್ಸ್ ಆಫ್ ಟ್ರಸ್ಟ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಯಾವುದೇ ಬ್ರ್ಯಾಂಡ್‌ನ ಅಸ್ತಿತ್ವದಲ್ಲಿರುವ ದ್ವಿಚಕ್ರ ವಾಹನಗಳನ್ನು ಹೀರೋ ಮೋಟೊಕಾರ್ಪ್ ಕಂಪನಿಯ ಯಾವುದೇ ಹೊಸ ಮಾದರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಸಂಭಾವ್ಯ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಮೂಲಕ ವೀಲ್ಸ್ ಆಫ್ ಟ್ರಸ್ಟ್ ಪ್ಲ್ಯಾಟ್‌ಫಾರ್ಮ್‌ನಲ್ಲಿ DIY (ಡು-ಇಟ್-ಯುವರ್‌ಸೆಲ್ಫ್) ಮೌಲ್ಯಮಾಪನದ ಮೂಲಕ ಹಳೆಯ ದ್ವಿಚಕ್ರ ವಾಹನದ ಮೌಲ್ಯ ಮಾಪನವನ್ನು ತಿಳಿಯಬಹುದಾಗಿದ್ದು, ಇದು ವೇಗದ ಮತ್ತು ಪಾರದರ್ಶಕ ಸೂಚಕ ಮರುಮಾರಾಟ ಮೌಲ್ಯವನ್ನು ನೀಡುತ್ತದೆ.

ಹೀರೋ ಮೋಟೋಕಾರ್ಪ್‌ನ ದ್ವಿಚಕ್ರ ವಾಹನ ಮರು-ಮಾರಾಟ ವೇದಿಕೆಯಾದ ವೀಲ್ಸ್ ಆಫ್ ಟ್ರಸ್ಟ್ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ವಿಶ್ವಾಸರ್ಹವಾದ ಸೇವೆ ಒದಗಿಸಿದ್ದು, ಇದೀಗ ಕಂಪನಿಯು 900ಕ್ಕೂ ಹೆಚ್ಚು ವಿಶ್ವಾಸಾರ್ಹ ಚಾನಲ್ ಪಾಲುದಾರರೊಂದಿಗೆ ಆನ್-ಗ್ರೌಂಡ್ ಸೌಲಭ್ಯ ಪರಿಚಯಿಸಿದೆ.

ವೃತ್ತಿಪರ ತಂಡವನ್ನು ಒಳಗೊಂಡಿರುವ ಪಾಲುದಾರರ ಚಾನೆಲ್ ಸಿಬ್ಬಂದಿಗಳು ಹಲವಾರು ತಾಂತ್ರಿಕ ಅಂಶಗಳೊಂದಿಗೆ ಪರಿಶೀಲಿಸಿದ ನಂತರ ಮೌಲ್ಯವನ್ನು ನಿರ್ಧರಿಸಲಿದ್ದು, ಈ ವೇಳೆ ದ್ವಿಚಕ್ರ ವಾಹನದ ಉತ್ತಮ ಮರುಮಾರಾಟ ಮೌಲ್ಯವನ್ನು ನಿರ್ಧರಿಸುವುದರ ಜೊತೆಗೆ ವಿನಿಯಮ ಪ್ರಕ್ರಿಯೆಗಳಿಗೆ ಅವಕಾಶ ಮಾಡಿಕೊಡುತ್ತಾರೆ.

ಹಳೆಯ ದ್ವಿಚಕ್ರ ವಾಹನಗಳ ಮಾಲೀಕರಿಗೆ ತೊಂದರೆ-ಮುಕ್ತ ಅಪ್‌ಗ್ರೇಡ್ ಮಾಡಲು ಹೊಸ ಪ್ಲ್ಯಾಟ್‌ಫಾರ್ಮ್ ಅತ್ಯುತ್ತಮ ಆಯ್ಕೆಯಾಗುವ ಭರವಸೆ ವ್ಯಕ್ತಪಡಿಸಿರುವ ಹೀರೋ ಮೋಟೋಕಾರ್ಪ್‌ನ ಮುಖ್ಯ ಉದ್ಯಮ ಅಭಿವೃದ್ದಿ ಅಧಿಕಾರಿ ರಂಜೀವ್‌ಜಿತ್ ಸಿಂಗ್, ಮುಂಬರುವ ದಿನಗಳಲ್ಲಿ ಹೊಸ ಪ್ಲ್ಯಾಟ್‌ಫಾರ್ಮ್ ಹೊಸ ಸಂಚಲನ ಮೂಡಿಸುವ ನೀರಿಕ್ಷೆ ವ್ಯಕ್ತಪಡಿಸಿದ್ದಾರೆ.

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಇತ್ತೀಚೆಗೆ ತನ್ನ ಜನಪ್ರಿಯ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ಸೀಮಿತ ಸಂಖ್ಯೆಯ ರ‍್ಯಾಲಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.52 ಲಕ್ಷ ಬೆಲೆ ಹೊಂದಿದೆ.

ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಸ್ಟ್ಯಾಂಡರ್ಡ್ ಎಕ್ಸ್‌ಪಲ್ಸ್ 200 4ವಿ ಮಾದರಿಗಿಂತಲೂ ವಿಭಿನ್ನವಾದ ಸಸ್ಷೆಂಷನ್ ಸೆಟ್ಅಪ್ ಹೊಂದಿದ್ದು, ಡಾಕರ್ ರ‍್ಯಾಲಿಗಾಗಿ ಬಳಕೆ ಮಾಡುವ ರ‍್ಯಾಲಿ ಎಡಿಷನ್ ಪ್ರೇರಣೆಯೊಂದಿಗೆ ಹೊಸ 200 4ವಿ ರ‍್ಯಾಲಿ ಎಡಿಷನ್ ಪರಿಚಯಿಸಲಾಗಿದೆ.

ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್‌ನಲ್ಲಿ 250 ಎಂಎಂ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಕಾರ್ಟ್‌ರಿಡ್ಜ್ ಫ್ರಂಟ್ ಟ್ರಾವೆಲ್ ಸಸ್ಷೆಂಷನ್‌ನೊಂದಿಗೆ ಹತ್ತು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ 220 ಎಂಎಂ ರಿಯರ್ ಸಸ್ಷೆಂಷನ್ ನೀಡಲಾಗಿದೆ.

ಹೀರೊ ಮೋಟೊಕಾರ್ಪ್ ಕಂಪನಿಯು ಹೊಸ ಬೈಕಿನಲ್ಲಿ 270 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಿದ್ದು, ಅದರ ಆಸನವು ನೆಲದಿಂದ 885 ಎಂಎಂ ಎತ್ತರದಲ್ಲಿದೆ. ಹಾಗೆಯೇ ರ‍್ಯಾಲಿ ಆವೃತ್ತಿಯ ಟ್ರಯಲ್ ಅನ್ನು 116 ಎಂಎಂಗೆ ವಿಸ್ತರಿಸಲಾಗಿದ್ದು, ವೀಲ್ಹ್‌ಬೇಸ್ 1,426 ಎಂಎಂ ಉದ್ದಳತೆ ಹೊಂದಿದೆ, ಇದು ಸ್ಟ್ಯಾಂಡರ್ಡ್ ಎಕ್ಸ್‌ಪಲ್ಸ್ 200 4ವಿ ಮಾದರಿಗಿಂತ 16ಎಂಎಂಗಿಂತಲೂ ಹೆಚ್ಚಾಗಿದ್ದು, ಹೊಸ ಮಾದರಿಯು 160 ಕಿ.ಮೀ ತೂಕ ಹೊಂದಿದೆ.

ಹಾಗೆಯೇ ಹೊಸ ಬೈಕ್ ಸವಾರಿಯನ್ನು ಮತ್ತಷ್ಟು ಸುಲಭವಾಗಿಸಲು ರ‍್ಯಾಲಿ ಎಡಿಷನ್ ಆವೃತ್ತಿಯಲ್ಲಿ ಕಂಪನಿಯು 21-ಇಂಚಿನ (ಮುಂಭಾಗ)ದ ಮತ್ತು 18-ಇಂಚಿನ (ಹಿಂಭಾಗದ) ಸ್ಪೋಕ್ಡ್ ವೀಲ್ಹ್‌ಗಳನ್ನು ಜೋಡಣೆ ಮಾಡಿದೆ.

ಹೊಸ ಬೈಕಿನಲ್ಲಿರುವ ಹೊಸ ಮಾದರಿಯ ಟೈರ್‌ಗಳು ಡ್ಯುಯಲ್-ಪರ್ಪಸ್ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಬೈಕ್ ಅನ್ನು ವಿಶೇಷವಾಗಿ ರ‍್ಯಾಲಿ ಮಾದರಿಯಾಗಿ ಗುರುತಿಸಲು ರ‍್ಯಾಲಿ ಕೋಡ್ ಗ್ರಾಫಿಕ್ಸ್ ಮತ್ತು ಹೀರೋ ಮೋಟಾರ್‌ಸ್ಪೋರ್ಟ್ಸ್ ವಿಭಾಗದ ಜನಪ್ರಿಯ ರೈಡರ್ ಸಿ ಎಸ್ ಸಂತೋಷ್ ಅವರ ಆಟೋಗ್ರಾಫ್ ಅನ್ನು ಸಹ ಒಳಗೊಂಡಿದೆ.

ಹೊಸ ಮಾದರಿಯು ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿರುವಂತೆಯೇ 199.6 ಸಿಸಿ, ಆಯಿಲ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಇದು 8,500 ಆರ್‌ಪಿಎಂನಲ್ಲಿ 18.9 ಬಿಎಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 17.35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.