ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹೀರೋ ಸ್ಪ್ಲೆಂಡರ್, ಕಂಪನಿಯ ಸರಣಿಯಲ್ಲಿ ಹೆಚ್ಚು ಜನಪ್ರಿಯ ಕಮ್ಯೂಟರ್ ಬೈಕ್ ಕಳೆದ ಮೂರು ದಶಕಗಳಿಂದ ಮಾರಾಟದಲ್ಲಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಹೀರೋ ಸ್ಪ್ಲೆಂಡರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನ ಎಕ್ಸ್‌ಟೆಕ್‌ ಮಾದರಿಯು ಅತ್ಯಾಧುನಿಕ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಬೈಕ್ ಹೀರೋ ಮೋಟೋಕಾರ್ಪ್ ಕಂಪನಿಗೆ ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಇದರಿಂದ ಹೋರೋ ಕಂಪನಿಯು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಎಕ್ಸ್‌ಟೆಕ್‌ ಆವೃತ್ತಿಯಲ್ಲಿ ಪರಿಚಯಿಸಿದೆ. ಈ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.72,900 ಆಗಿದೆ. ಈ ಬೈಕ್ ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕಿನ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಆಕರ್ಷಕವಾದ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕಿನ ಟಿವಿಸಿಯಲ್ಲಿ ಈ ಬೈಕಿನಲ್ಲಿರುವ ಫೀಚರ್ಸ್ ಗಳನ್ನು ವಿವರಿಸಿದ್ದಾರೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕ್ ಹೊಸ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಅನ್ನು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಪಡೆದುಕೊಂಡಿದೆ, ಕರೆಗಳು ಮತ್ತು SMS ಅಲರ್ಟ್, ಮೈಲೇಜ್ ಸೂಚಕ, ಎರಡು ಟ್ರಿಪ್ ಮೀಟರ್‌ಗಳು ಮತ್ತು ಕಡಿಮೆ ಇಂಧನ ಎಚ್ಚರಿಕೆಯ ಸೂಚನೆಯನ್ನು ಇದು ನೀಡುತ್ತದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಹೊಸ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಸಹ USB ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ, ಇದು ಸವಾರರು ತಮ್ಮ ಮೊಬೈಲ್‌ಗಳನ್ನು ಪ್ರಯಾಣದಲ್ಲಿರುವಾಗ ಚಾರ್ಜ್ ಮಾಡಬಹುದೆಂದು ಖಚಿತಪಡಿಸುತ್ತದೆ. ಇನ್ನು ಇತರ ಹೊಸ ವೈಶಿಷ್ಟ್ಯಗಳು ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್ಆಫ್ ವೈಶಿಷ್ಟ್ಯದ ಜೊತೆಗೆ ಸೈಡ್-ಸ್ಟ್ಯಾಂಡ್ ಸೂಚಕವನ್ನು ಒಳಗೊಂಡಿವೆ,

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಈ ಪೀಚರ್ ಸೈಡ್ ಸ್ಟ್ಯಾಂಡ್ ಅನ್ನು ನಿಯೋಜಿಸಿದರೆ ಎಂಜಿನ್ ಅನ್ನು ಆಫ್ ಮಾಡುತ್ತದೆ. ಮತ್ತೊಂದು ಹೊಸ ಸುರಕ್ಷತಾ ವೈಶಿಷ್ಟ್ಯವು ಬ್ಯಾಂಕ್ ಆಂಗಲ್ ಸೆನ್ಸರ್ ರೂಪದಲ್ಲಿ ಬರುತ್ತದೆ, ಅದು ಬೀಳುವ ಸಮಯದಲ್ಲಿ ಎಂಜಿನ್ ಅನ್ನು ಆಫ್ ಮಾಡುತ್ತದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಇನ್ನು ವಿನ್ಯಾಸದ ವಿಷಯದಲ್ಲಿ, ಈ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್ ಹೊಸ ಎಲ್ಇಡಿ ಹೈ ಇಂಟೆನ್ಸಿಟಿ ಪೊಸಿಷನ್ ಲ್ಯಾಂಪ್ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಪಡೆಯುತ್ತದೆ ಅದು ಹೊಸ ಎಕ್ಸ್‌ಟೆಕ್ ಮಾದರಿಯನ್ನು ಉಳಿದ ಸ್ಪ್ಲೆಂಡರ್ ಪ್ಲಸ್ ಲೈನ್‌ಅಪ್‌ನಿಂದ ಪ್ರತ್ಯೇಕಿಸುತ್ತದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಈ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕ್ ಸ್ಪಾರ್ಕ್ಲಿಂಗ್ ಬೀಟಾ ಬ್ಲೂ, ಕ್ಯಾನ್ವಾಸ್ ಬ್ಲಾಕ್, ಟೊರ್ನಾಡೋ ಗ್ರೇ ಮತ್ತು ಪರ್ಲ್ ವೈಟ್ ಎಂಬ ನಾಲ್ಕು ಹೊಸ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಈ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕಿನಲ್ಲಿ 97.2 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.9ಬಿಹೆಚ್‍ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದ್ದೆ. ಈ ಎಂಜಿನ್ ಹೀರೋನ I3S ಎಂಜಿನ್-ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ ಮತ್ತು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಹೊಂದಿದೆ ಮತ್ತು ಒರಟು ವಿಷಯವನ್ನು ನೋಡಿಕೊಳ್ಳಲು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಹೊಂದಿದೆ. ಇನ್ನು ಪ್ರಮುಖವಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ, ಈ ಬೈಕ್ ಡಿಸ್ಕ್ ಬ್ರೇಕ್ ಗಳಲ್ಲಿ ಲಭ್ಯವಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಹೀರೋ ಮೋಟೊಕಾರ್ಪ್ 2022ರ ಮೇ ತಿಂಗಳ ಮಾಸಿಕ ಮಾರಾಟದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಒಟ್ಟಾರೆ 4,86,704 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ. 2021ರ ಮೇ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 1,83,044 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಶೇಕಡಾ 165.89 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಕಳೆದ ವರ್ಷದ ಮೇ ತಿಂಗಳಿನಲ್ಲಿ ಕೊರೋನಾದಿಂದ ಮಾರಾಟದ ಮೇಲೆ ಪರಿಣಾಮ ಬೀರಿತು. ಸಾಮಾನ್ಯ ಮಾನ್ಸೂನ್, ಹಿನ್ನೆಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಸಕಾರಾತ್ಮಕ ಪ್ರವೃತ್ತಿ ಮುಂದುವರಿಯುತ್ತದೆ ಎಂದು ಕಂಪನಿ ನಿರೀಕ್ಷಿಸುತ್ತದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್ ಟಿವಿಸಿ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕ್ ಕೈಗೆಟುಕುವ ಬೆಲೆಯನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಅನ್ನು ಬ್ಲೂಟೂತ್ ಕನೆಕ್ಟಿವಿಟಿನಂತಹ ಅತ್ಯಾಧುನಿಕ ಫೀಚರ್ಸ್ ಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Hero splendor xtec bike new features detailed tvc out details
Story first published: Tuesday, June 7, 2022, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X